Kerala HC Slams Temple Board : ಇದು ದೇಗುಲದ ಹಬ್ಬವೋ ? ಕಾಲೇಜಿನ ಹಬ್ಬವೋ ? – ಕೇರಳ ಹೈಕೋರ್ಟ್

  • ಕೇರಳದಲ್ಲಿ ದೇವಸ್ಥಾನದ ನಿಧಿಯಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದ ಪ್ರಕರಣ

  • ಕೇರಳ ಉಚ್ಚ ನ್ಯಾಯಾಲಯದಿಂದ ದೇವಸ್ಥಾನ ಆಡಳಿತ ಮಂಡಳಿಗೆ ತಪರಾಕಿ !

ಕೇರಳ ಉಚ್ಚ ನ್ಯಾಯಾಲಯದಿಂದ ದೇವಸ್ಥಾನ ಆಡಳಿತ ಮಂಡಳಿಗೆ ತಪರಾಕಿ !

ತಿರುವನಂತಪುರಂ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ಕೋಲ್ಲಮದಲ್ಲಿನ ಶ್ರೀ ಕಡ್ಡಕಲ್ ದೇವಿ ದೇವಸ್ಥಾನದ ಆಡಳಿತ ಮಂಡಳಿಗೆ ತಪರಾಕಿ ನೀಡಿದೆ ಮತ್ತು ಮಾರ್ಚ್ ೧೦ ರಂದು ದೇವಸ್ಥಾನದ ಸ್ಥಳದಲ್ಲಿ ನಡೆದಿರುವ ಸಂಗೀತದ ಕಾರ್ಯಕ್ರಮದ ಬಗ್ಗೆ ಸ್ಪಷ್ಟೀಕರಣ ಕೇಳಿದೆ. ನ್ಯಾಯಾಲಯವು, ‘ನೀವು ವೇದಿಕೆಯಲ್ಲಿ ಯಾವ ರೀತಿಯ ಅಲಂಕಾರ ಮಾಡಿದ್ದೀರಿ? ಇದು ಕಾಲೇಜಿನ ಉತ್ಸವ ಆಗಿದೆಯೇ ? ಅದನ್ನು ನಡೆಸಲು ನೀವು ಭಕ್ತರಿಂದ ಹಣ ಪಡೆದಿದ್ದೀರಾ ? ಇದು ದೇವಸ್ಥಾನದ ಉತ್ಸವವಾಗಿದೆ. ದೇವಸ್ಥಾನದಲ್ಲಿ ಚಲನಚಿತ್ರ ಗೀತೆಗಳು ಅಲ್ಲಾ, ಅಲ್ಲಿ ಭಕ್ತಿಗೀತೆ ಹಾಕಬೇಕಾಗಿತ್ತು, ಈ ಪದಗಳಲ್ಲಿ ನ್ಯಾಯಾಲಯವು ಮಂಡಳಿಗೆ ತಪರಾಕಿ ನೀಡಿದೆ. ಈ ಉತ್ಸವದ ಸಮಯದಲ್ಲಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಅದರ ‘ಡೆಮಾಕ್ರಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ’ ಈ ವಿದ್ಯಾರ್ಥಿ ಸಂಘಟನೆಯ ಧ್ವಜಗಳು ಕೂಡ ಹಾಕಲಾಗಿದ್ದವು. ಇದರೊಂದಿಗೆ ಸಾಮ್ಯವಾದಿ ರಾಜಕೀಯ ಗುಂಪುಗಳ ಜೊತೆಗೆ ಸಂಬಂಧಿತ ಕ್ರಾಂತಿಕಾರಿ ಹಾಡುಗಳು ಹಾಕಲಾಗಿದ್ದವು.

ಕೇರಳದ ಉಚ್ಚ ನ್ಯಾಯಾಲಯವು ದೇವಸ್ಥಾನ ಮಂಡಳಿಗೆ ಎಚ್ಚರಿಕೆ ನೀಡುತ್ತಾ, ‘ಮಂಡಳದ ವತಿಯಿಂದ ವ್ಯವಸ್ಥಾಪನೆ ಮಾಡಿರುವ ಯಾವುದೇ ದೇವಸ್ಥಾನದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು, ಎಂದು ಎಚ್ಚರಿಕೆ ನೀಡಿದೆ. ಅದೇ ಸಮಯದಲ್ಲಿ, ದೇವಸ್ಥಾನ ಮಂಡಳಿಯು, ‘ದೇವಸ್ಥಾನ ಸಲಹಾಕಾರ ಸಮಿತಿಯು ಅವರಿಗೆ ತಿಳಿಸದೆ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು’, ಎಂದು ಹೇಳಿದೆ. ಆದರೂ ತ್ರಿವೇಂದ್ರಮ್ ದೇವಸ್ವಮ ಮಂಡಳದ ಈ ಯುಕ್ತಿವಾದಕ್ಕೆ ನ್ಯಾಯಾಲಯ ಒಪ್ಪಲಿಲ್ಲ. ನ್ಯಾಯವಾದಿ ವಿಷ್ಣು ಸುನಿಲ ಇವರ ಅರ್ಜಿ ನ್ಯಾಯಾಲಯವು ಸ್ವೀಕರಿಸಿ ಶ್ರೀ ಕಡಕ್ಕಲ್ ದೇವಿ ದೇವಸ್ಥಾನ ಸಲಹೆಗಾರ ಸಮಿತಿ ಮತ್ತು ಇತರ ಪ್ರತಿವಾದಿಗಳಿಂದ ಇದರ ಕುರಿತು ಉತ್ತರ ಕೇಳಿದೆ.

ದೇವಸ್ಥಾನ ನಿಧಿಯ ದುರುಪಯೋಗ ತಡೆಯಬಹುದಾಗಿತ್ತು !

ಉಚ್ಚ ನ್ಯಾಯಾಲಯವು, ಮಂಡಳದಿಂದ ತಾಳಿರುವ ನಿಲುವಿನಿಂದ ನಾವು ಪ್ರಾರ್ಥಮಿಕವಾಗಿ ಪ್ರಭಾವಿತವಾಗಿಲ್ಲ. ವಿಡಿಯೋದಲ್ಲಿ, ಎಲ್ಇಡಿ ಸ್ಕ್ರೀನ್ ಮತ್ತು ಫ್ಲಾಶ್ ಲೈಟ್ಸಸನಿಂದ ತುಂಬಿರುವ ವೇದಿಕೆಯಲ್ಲಿ ವಿವಿಧ ವ್ಯವಸ್ಥೆಗಾಗಿ ಹೆಚ್ಚು ಹಣ ಖರ್ಚು ಮಾಡಲಾಗಿದೆ. ದೇವಸ್ಥಾನದ ನಿಧಿಯ ಈ ರೀತಿಯ ದುರುಪಯೋಗವಾಗುವುದನ್ನು ತಡೆಯಬಹುದಾಗಿತ್ತು. ಯಾವುದೇ ಸಂಘಟನೆಗೆ ಅಥವಾ ಭಕ್ತರ ಗುಂಪಿಗೆ ದೇವಸ್ಥಾನದಲ್ಲಿ ಉತ್ಸವ ಆಯೋಜಿಸುವುದಕ್ಕಾಗಿ ಭಕ್ತರಿಂದ ಅಥವಾ ಜನರಿಂದ ಹಣ ಸಂಗ್ರಹಿಸಲು ಅನುಮತಿ ನೀಡಲಾಗುವುದಿಲ್ಲ. ನಿಧಿಯ ಯಾವುದೇ ಸಂಗ್ರಹ ಮಂಡಳಿಯ ಅನುಮತಿಯಿಂದಲೇ ಆಗಬೇಕು. ಸಂಗ್ರಹಿಸಿರುವ ಎಲ್ಲಾ ಹಣದ ಸರಕಾರದಿಂದ ಲೇಖಾ ಪರೀಕ್ಷಣೆ ಮಾಡಲಾಗುವುದು. ಕಳೆದ ನಿರ್ಣಯದಲ್ಲಿ ದೇವಸ್ಥಾನ ಸಮಿತಿಯಿಂದ ಸಂಗ್ರಹಿಸಿರುವ ದೇವಸ್ಥಾನ ನಿಧಿಯ ಸಂರಕ್ಷಣೆಗಾಗಿ ಮಾರ್ಗದರ್ಶಕ ಅಂಶಗಳು ಪ್ರಸಾರ ಮಾಡಲಾಗಿದೆ. ತ್ರಾವಣಕೊರ್ ದೇವಸ್ವಂ ಬೋರ್ಡ್‌ನ ನ್ಯಾಯವಾದಿ ನ್ಯಾಯಾಲಯಕ್ಕೆ, ಮುಖ್ಯ ದಕ್ಷತೆ ಮತ್ತು ಸುರಕ್ಷಾ ಅಧಿಕಾರಿ (ಪೊಲೀಸ ಅಧಿಕಾರಿ) ಇವರಿಗೆ ಘಟನೆಯ ವಿಚಾರಣೆ ನಡೆಸಲು ಮತ್ತು ವರದಿ ಪ್ರಸ್ತುತಪಡಿಸಲು ಹೇಳಿದ್ದಾರೆ. ದೇವಸ್ಥಾನ ಸಲಹಾಕಾರ ಸಮಿತಿಗೆ ‘ಕಾರಣ ನೀಡಿ’ ನೋಟಿಸ್ ಕೂಡ ವಿಧಿಸಲಾಗಿದೆ.

ಜಾತ್ಯತೀತ ತತ್ವಗಳ ಉಲ್ಲಂಘನೆ ! – ಅರ್ಜಿದಾರರು

ಅರ್ಜಿದಾರರ ನ್ಯಾಯವಾದಿ ವಿಷ್ಣು ಸುನಿಲ್ ಇವರು, ಗಾಯಕಿ ಅಲೋಶಿ ಆಡಮ್ ಇವರಿಗೆ ಉತ್ಸವದಲ್ಲಿ ಸಂಗೀತ ಪ್ರಸ್ತುತಪಡಿಸುವುದಕ್ಕಾಗಿ ಆಮಂತ್ರಿಸಲಾಗಿತ್ತು. ಇದು ಕಾನೂನ ಬಾಹಿರವಾಗಿದೆ. ಆದ್ದರಿಂದ ಭಕ್ತರ ಭಾವನೆಗೆ ನೋವು ಉಂಟಾಗಿದೆ. ಈ ಪ್ರಸ್ತುತಿಕರಣ ಎಂದಿಗೂ ದೇವಸ್ಥಾನ ಉತ್ಸವದ ಭಾಗವಾಗಿರಲಿಲ್ಲ. ಇದು ಸಂವಿಧಾನದ ಮೂಲಭೂತ ರಚನೆಯ ಭಾಗ ಆಗಿರುವ ಜಾತ್ಯತೀತ ತತ್ವದ ಉಲ್ಲಂಘನೆ ಆಗಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಹಿಂದೂಗಳ ದೇವಸ್ಥಾನದ ಸರಕಾರಿಕರಣ ಆಗಿರುವುದರ ದುಷ್ಪರಿಣಾಮ !
  • ಎಂದಾದರೂ ಮಸೀದಿ ಅಥವಾ ಚರ್ಚ್ ಗಳಲ್ಲಿ ಈ ರೀತಿ ಘಟಿಸುತ್ತದೆಯೇ ?