ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನವು ಸಾರ್ವಜನಿಕವಾಗಿ ಭಾರತದೊಂದಿಗೆ ಕಹಿಯಾಗಿದೆ ಎಂದು ತೋರಿಸುತ್ತಿದೆ; ಆದರೆ ರಹಸ್ಯವಾಗಿ ಭಾರತದಿಂದ ಸಕ್ಕರೆ ಖರೀದಿಸುತ್ತಿದೆ ಎಂದು ಪಾಕಿಸ್ತಾನಿ ಪತ್ರಕರ್ತ ನುಸ್ರತ್ ಜಾವೇದ್ ಮಾಹಿತಿ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಪಾಡ್‌ಕಾಸ್ಟರ್ (ಸಂದರ್ಶನಕಾರ) ಲೆಕ್ಸ್ ಫ್ರೀಡ್‌ಮನ್‌ಗೆ ನೀಡಿದ ಸಂದರ್ಶನದ ಬಗ್ಗೆ ಪಾಕಿಸ್ತಾನದಲ್ಲಿ ನುಸ್ರತ್ ಜಾವೇದ್ ಅವರನ್ನು ಪ್ರಶ್ನಿಸಲಾಯಿತು. ಆಗ ಅವರು ಈ ಮಾಹಿತಿ ನೀಡಿದರು.
ನುಸ್ರತ್ ಜಾವೇದ್ ಮಾತು ಮುಂದುವರೆಸಿ, ನಾನು ನರೇಂದ್ರ ಮೋದಿ ಅವರ ಮಾತನ್ನು ಕೇಳಿದ್ದೇನೆ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆಯನ್ನು ಸಹ ನೋಡಿದ್ದೇನೆ. ನಾವು ಮತ್ತೆ ಕಾಶ್ಮೀರದ ಬಗ್ಗೆ ಮಾತನಾಡಿದ್ದೇವೆ, ಇದನ್ನು ಕಳೆದ ಕೆಲವು ವರ್ಷಗಳಲ್ಲಿ ವ್ಯಾಪಾರದ ವಿಷಯದಲ್ಲಿಯೂ ಮಾತನಾಡುತ್ತಿದ್ದೇವೆ. ‘ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೂ ಭಾರತದೊಂದಿಗೆ ವ್ಯಾಪಾರ ಮಾಡುವುದಿಲ್ಲ’ ಎಂದು ಪಾಕಿಸ್ತಾನ ಸರಕಾರ ನಿರಂತರವಾಗಿ ಹೇಳಿದೆ. ಆದಾಗ್ಯೂ, ಇಂದಿಗೂ ಪಾಕಿಸ್ತಾನವು ಭಾರತದಿಂದಲೇ ಸಕ್ಕರೆ ಖರೀದಿಸುತ್ತಿದೆ, ಇದು ವಾಸ್ತವ. ಈ ಸತ್ಯವನ್ನು ಶಹಬಾಜ್ ಷರೀಫ್ ಸರಕಾರವು ಪಾಕಿಸ್ತಾನದ ಸಂಸತ್ತಿನಲ್ಲಿ ಅಧಿಕೃತವಾಗಿ ಹೇಳಿದೆ. ಮಾರ್ಚ್ 2024 ರಿಂದ ಜನವರಿ 2025 ರವರೆಗೆ ಪಾಕಿಸ್ತಾನವು ಇತರ ದೇಶಗಳಿಂದ 3 ಸಾವಿರ 140 ಮೆಟ್ರಿಕ್ ಟನ್ ಸಕ್ಕರೆಯನ್ನು ಖರೀದಿಸಿದೆ ಎಂದು ಪಾಕಿಸ್ತಾನದ ಸಂಸತ್ತಿನಲ್ಲಿ ಹೇಳಲಾಗಿದೆ. ಇದರ ಬೆಲೆ 30 ಲಕ್ಷ ಅಮೆರಿಕನ್ ಡಾಲರ್. ಪಾಕಿಸ್ತಾನವು ಮಲೇಷ್ಯಾ, ಜರ್ಮನಿ, ಥೈಲ್ಯಾಂಡ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಭಾರತ ಸೇರಿದಂತೆ ಹಲವು ದೇಶಗಳಿಂದ ಸಕ್ಕರೆ ಖರೀದಿಸಿದೆ. ಈ ಪಟ್ಟಿಯಲ್ಲಿ ಭಾರತ 9 ನೇ ಸ್ಥಾನದಲ್ಲಿದೆ. ಪಾಕಿಸ್ತಾನವು ಭಾರತದಿಂದ 50 ಸಾವಿರ ಮೆಟ್ರಿಕ್ ಟನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ 444 ಮೆಟ್ರಿಕ್ ಟನ್ ಸಕ್ಕರೆ ಖರೀದಿಸಿದೆ.
ಪಾಕ್ ಸರಕಾರ ಜನರನ್ನು ಕತ್ತಲೆಯಲ್ಲಿ ಇಡುತ್ತಿರುವುದು ಏಕೆ? – ಪತ್ರಕರ್ತ ಜಾವೇದ್
ಜಾವೇದ್ ಮಾತನಾಡುತ್ತಾ, ಸರಕಾರ ನಮ್ಮನ್ನು ಕತ್ತಲೆಯಲ್ಲಿ ಇಡುತ್ತಿರುವುದು ಏಕೆ? ‘ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೂ ನಾವು ಒಪ್ಪುವುದಿಲ್ಲ’ ಎಂಬ ಚರ್ಚೆ ಏಕೆ ನಡೆಯುತ್ತಿದೆ? ಎಲ್ಲಾ ಉದ್ವಿಗ್ನತೆಗಳಿದ್ದರೂ ಚೀನಾ ಮತ್ತು ಭಾರತವು ಪರಸ್ಪರ ವ್ಯಾಪಾರ ಮಾಡುತ್ತಿದ್ದರೆ, ಪಾಕಿಸ್ತಾನ ಮತ್ತು ಭಾರತ ಏಕೆ ಮಾಡಲು ಸಾಧ್ಯವಿಲ್ಲ? (ಪಾಕಿಸ್ತಾನವು ವ್ಯಾಪಾರ ಮಾಡಲು ಎಷ್ಟೇ ಪ್ರಯತ್ನಿಸಿದರೂ, ಭಾರತವು ಅದನ್ನು ನಿರಾಕರಿಸಬೇಕು! ಜಿಹಾದಿ ಭಯೋತ್ಪಾದನೆ ಮತ್ತು ವ್ಯಾಪಾರ ಎರಡನ್ನೂ ಒಟ್ಟಿಗೆ ಮಾಡಲು ಸಾಧ್ಯವಿಲ್ಲ! – ಸಂಪಾದಕರು)
ಸಂಪಾದಕೀಯ ನಿಲುವುಭಾರತವು ಪಾಕಿಸ್ತಾನಕ್ಕೆ ರಹಸ್ಯವಾಗಿ ಸಕ್ಕರೆ ಪೂರೈಸುತ್ತಿದೆ ಎಂದು ಇದರಿಂದ ತಿಳಿದುಬರುತ್ತದೆ! ಮೂಲತಃ ‘ಪಾಕಿಸ್ತಾನ ಭಾರತದಿಂದ ಸಕ್ಕರೆ ಏಕೆ ಖರೀದಿಸುತ್ತಿದೆ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಭಾರತವು ಪಾಕಿಸ್ತಾನವನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕಿದ್ದರೂ ಈ ಗಾಂಧಿಗಿರಿ ಏಕೆ ಮಾಡಲಾಗುತ್ತಿದೆ? |