
‘ಪ.ಪೂ. ಡಾಕ್ಟರರು ಕೆಲವು ವಿಷಯಗಳ ಕುರಿತು ಬರೆಯಲು ಹೇಳಿದ್ದರು. ಅದಕ್ಕಾಗಿ ಅವರು ನನಗೆ ಬಹಳ ಪ್ರೋತ್ಸಾಹ ನೀಡಿದರು; ಆದರೂ ನಾನು ಅದನ್ನು ಬರೆಯುತ್ತಿರಲಿಲ್ಲ. ಕಳೆದೆರಡು ಸಂಚಿಕೆಗಳಲ್ಲಿ ನಾವು ಈ ಬಗೆಗಿನ ಲೇಖನವನ್ನು ನೋಡಿದೆವು. ಅನಂತರ ಅವರು ನನ್ನ ಒಂದು ತಪ್ಪಿಗಾಗಿ ಹೇಳಿದ ಪ್ರಾಯಶ್ಚಿತ್ತ ಮತ್ತು ನಾನು ನಿರಂತರ ಕ್ಷಮೆ ಯಾಚನೆ ಮಾಡಿದ ನಂತರ ಅವರಲ್ಲಾದ ಬದಲಾವಣೆಯನ್ನು ಈ ವಾರದ ಉಳಿದ ಭಾಗದಲ್ಲಿ ನೀಡುತ್ತಿದ್ದೇನೆ. ಇದರಿಂದ ‘ಶರಣಾಗತಿಯ ಅಸ್ತ್ರದಿಂದ ದೇವರನ್ನೂ ಗೆಲ್ಲಬಹುದು’, ಎಂದು ಗಮನಕ್ಕೆ ಬರುತ್ತದೆ.
(ಭಾಗ ೩)
ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/138093.html |
೧೬. ಯಾವಾಗಲೂ ಸಾಧಕರ ವಿಚಾರ ಮಾಡುವ ಪ.ಪೂ. ಡಾ. ಆಠವಲೆ !
೧೬ ಅ. ಒಂದು ರಾತ್ರಿ ಆಧ್ಯಾತ್ಮಿಕ ತೊಂದರೆ ಯಾಗುತ್ತಿರುವ ಸಾಧಕಿಗೆ ಪರಿಹಾರ ಕೇಳಲು ನಾನು ಪ.ಪೂ. ಡಾಕ್ಟರರಿಗೆ ದೂರವಾಣಿ ಕರೆ ಮಾಡುವುದು : ‘ಕಾಲಕಾಲಕ್ಕೆ ಬರವಣಿಗೆ ಮಾಡದ ಕಾರಣ ನಾನು ಪ.ಪೂ. ಡಾಕ್ಟರರಿಗೆ ಮನಸ್ಸಿನಲ್ಲಿಯೇ ಕ್ಷಮೆ ಯಾಚನೆ ಮಾಡುತ್ತಿದ್ದೆನು. ಆಗ ನನಗೆ ಕ್ಷಮೆಯಾಚಿಸುವ ವಿಷಯದಲ್ಲಿ ಪ.ಪೂ ಡಾಕ್ಟರರೊಂದಿಗಿನ ಒಂದು ಪ್ರಸಂಗದ ನೆನಪಾಯಿತು. ಪ್ರಸಂಗ ಬಹಳ ಹಳೆಯದಾಗಿದೆ. ನಾನು ಸೇವೆಯನ್ನು ಪೂರ್ತಿ ಮುಗಿಸಿ ಹೋಗುವಾಗ ‘ಯಾವ ಸೇವೆ ಆಯಿತು ? ಸೇವೆಯಲ್ಲಿ ಯಾವ ಸಂದೇಹ ಗಳಿವೆ ಮತ್ತು ನಾಳೆ ಏನೆಲ್ಲ ಮಾಡಬೇಕು ?’, ಈ ರೀತಿ ನಾವು ಮಾತನಾಡುತ್ತಿದ್ದೆವು; ಆದರೆ ಆ ದಿನ ಪ.ಪೂ. ಡಾಕ್ಟರರು ಸತ್ಸಂಗದ ಧ್ವನಿಚಿತ್ರಮುದ್ರಿಕೆಯನ್ನು (ವಿಡಿಯೋ) ನೋಡುತ್ತಿದ್ದರು.
ಆದುದರಿಂದ ನಮ್ಮ ಸೇವೆಯ ಬಗ್ಗೆ ಮಾತನಾಡಲು ಆಗಲಿಲ್ಲ. ನಾನು ಸೇವೆಯ ಜಾಗಕ್ಕೆ ಬಂದಾಗ ಓರ್ವ ಸಾಧಕಿಯು ಅವಳಿಗಾಗುವ ಆಧ್ಯಾತ್ಮಿಕ ತೊಂದರೆಯ ಬಗ್ಗೆ ಪ.ಪೂ ಡಾಕ್ಟರರಿಗೆ ಪರಿಹಾರ ಕೇಳಲು ಹೇಳಿದಳು. ನಾನು ಅವರಿಗೆ ದೂರವಾಣಿ ಕರೆ ಮಾಡಬೇಕೆಂದು ಯೋಚಿಸಿದೆನು; ಆದರೆ ಅವರ ಕೋಣೆಗೆ ದೂರವಾಣಿ ಕರೆ ಮಾಡಿದರೆ, ಅವರಿಗೆ ದೂರವಾಣಿ ಉಪಕರಣದ ವರೆಗೆ ನಡೆಯಬೇಕಾಗುವುದು. (ಅವರ ಪ್ರಾಣಶಕ್ತಿಯು ಬಹಳ ಕಡಿಮೆ ಇದ್ದುದರಿಂದ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗುವಾಗಲೂ ಅವರ ಸಮತೋಲನ ಹೋಗುತ್ತಿತ್ತು.) ಆದುದರಿಂದ ಅವರು ನಡೆಯುವುದು ಬೇಡವೆಂದು ನಾನು ಕೋಣೆಯ ಹೊರಗಿರುವ ಕ್ರಮಾಂಕಕ್ಕೆ ದೂರವಾಣಿ ಕರೆ ಮಾಡಿದೆನು ಮತ್ತು ಅಲ್ಲಿ ಸೇವೆಯನ್ನು ಮಾಡುವ ಸಾಧಕನಿಗೆ ದೂರವಾಣಿ(ಫೋನ್) ತೆಗೆದುಕೊಂಡು ಕೊಡಲು ಹೇಳಿದೆ.
೧೬. ಆ. ಪ.ಪೂ. ಡಾಕ್ಟರರು ಅವರ ಕೋಣೆಗೆ ದೂರವಾಣಿ ಕರೆ ಮಾಡದ ಬಗ್ಗೆ ಕೇಳಿದಾಗ ಅವರಲ್ಲಿ ಅಪರಾಧಿ ಭಾವದಿಂದ ಕ್ಷಮೆ ಯಾಚಿಸುವುದು ಮತ್ತು ಅದರಿಂದ ಹಿಂದಿನ ಕೆಲವೇ ಕ್ಷಣಗಳ ಅವರ ಅಸಮಾಧಾನದ ಧ್ವನಿ ಮಾಯವಾಗಿ ಅವರು ಆನಂದದಿಂದ ಮಾತನಾಡುವುದು : ಆ ಸಾಧಕನು ಪ.ಪೂ. ಡಾಕ್ಟರರಿಗೆ ದೂರವಾಣಿಯನ್ನು ಕೊಡಲು ಹೋದನು. ಆಗ ಅವರು ಅದನ್ನು ಕೈಯಲ್ಲಿ ಸಹ ತೆಗೆದುಕೊಳ್ಳಲಿಲ್ಲ ಮತ್ತು ಅವರು, ”ಪೂನಮ್ ದೂರವಾಣಿ ಕರೆಯನ್ನು ಹೊರಗೆ ಏಕೆ ಮಾಡಿದಳು ? ಅವಳಿಗೆ ದೂರವಾಣಿ ಕರೆಯನ್ನು ಕೋಣೆಯಲ್ಲಿ ಮಾಡಲು ಹೇಳು”, ಎಂದು ಹೇಳಿದರು. ನನ್ನ ದೂರವಾಣಿ ಕರೆಯಲ್ಲಿದ್ದುದರಿಂದ ನನಗೆ ಅವರ ಮಾತುಗಳು ಕೇಳಿಸಿದವು. ಆಗ ನನ್ನ ಮನಸ್ಸಿನಲ್ಲಿ ಕೇವಲ, ‘ಅವರಿಗೆ ಈ ವಿಷಯ ಇಷ್ಟವಾಗಲಿಲ್ಲ, ಅಂದರೆ ನಾನು ಮಾಡಿದ್ದು ಯೋಗ್ಯವಾಗಿಲ್ಲ, ನನ್ನದು ತಪ್ಪಾಗಿದೆ’, ಎಂಬ ವಿಚಾರವೇ ಇತ್ತು. ಆದುದರಿಂದ ನಾನು ಮನಸ್ಸಿನಲ್ಲಿ ಅವರಿಗೆ ಕ್ಷಮೆ ಯಾಚನೆ ಮಾಡುತ್ತಲೇ ಅವರ ಕೋಣೆಗೆ ದೂರವಾಣಿ ಕರೆ ಮಾಡಿದೆ. ದೂರವಾಣಿ ಕರೆಯನ್ನು ಎತ್ತಿದಾಗ ಅವರು ನನಗೆ ಮೊದಲ ಪ್ರಶ್ನೆ ಕೇಳಿದರು, ”ನೀನು ದೂರವಾಣಿ ಕರೆಯನ್ನು ಕೋಣೆಗೆ ಏಕೆ ಮಾಡಲಿಲ್ಲ ?” ಆಗ ಅಪರಾಧಿಭಾವದಿಂದ ನಾನು ಅವರಿಗೆ, ”ಪರಮ ಪೂಜ್ಯ, ನನ್ನದು ತಪ್ಪಾಯಿತು. ನನ್ನನ್ನು ಕ್ಷಮಿಸಿ”, ಎಂದು ಹೇಳಿದೆನು. ಆಗ ಅವರು ಕೆಲವು ಕ್ಷಣ ಏನೂ ಮಾತನಾಡಲಿಲ್ಲ ಮತ್ತು ನಂತರ ಅವರು ನನಗೆ ಸೇವೆಯ ಬಗ್ಗೆ ಕೇಳತೊಡಗಿದರು. ಆ ಸಮಯದಲ್ಲಿ ಪ್ರತಿದಿನ ಯಾವ ರೀತಿ ಬಹಳ ಆನಂದದಿಂದ ಮಾತನಾಡುತ್ತಿದ್ದರೋ ಆ ರೀತಿ ಮಾತನಾಡುತ್ತಿದ್ದರು. ಕೆಲವು ಕ್ಷಣಗಳ ಹಿಂದೆ ಇರುವ ಅವರ ಅಸಮಾಧಾನದ ಸ್ವರ ಅವರ ನಂತರದ ಮಾತುಗಳಲ್ಲಿ ಎಲ್ಲಿಯೂ ಇರಲಿಲ್ಲ. ಸೇವೆಯ ಬಗ್ಗೆ ಮಾತನಾಡಿದ ನಂತರ ಅವರು ದೂರವಾಣಿ ಕರೆ ಮಾಡಿದ ಬಗ್ಗೆ ಕೇಳಿದರು ಮತ್ತು ಆ ಸಾಧಕಿಗೆ ನಾಮಜಪಾದಿ ಉಪಾಯಗಳನ್ನು ಹೇಳಿದರು.

೧೬ ಇ. ಸಾಧಕಿಯಿಂದ ಆದ ತಪ್ಪನ್ನು ಹೇಳಲು ಸದ್ಗುರು ಮುಕುಲ ಗಾಡಗೀಳ ಕಾಕಾ ಇವರನ್ನು ನಿಲ್ಲಿಸಿಕೊಳ್ಳುವುದು ಮತ್ತು ಆ ಸಮಯದಲ್ಲಿ ಪ.ಪೂ. ಡಾಕ್ಟರರ ಮುಖದಲ್ಲಿ ಆನಂದ ಮತ್ತು ನಗು ಇರುವುದು : ಮರುದಿನ ನಾನು ಸೇವೆಯ ನಿಮಿತ್ತ ಹೋದೆನು. ಆಗ ಪ.ಪೂ. ಡಾಕ್ಟರರು ಗಣಕಯಂತ್ರದಲ್ಲಿ ಕಡತವನ್ನು ಓದುತ್ತಿದ್ದರು. ಆ ಸಮಯದಲ್ಲಿ ಪೂ. ಗಾಡಗೀಳ ಕಾಕಾ ಇವರೂ (ಈಗಿನ ಸದ್ಗುರು ಮುಕುಲ ಗಾಡಗೀಳ) ಅಲ್ಲಿನ ಗಣಕಯಂತ್ರದಲ್ಲಿ ಸೇವೆಯನ್ನು ಮಾಡುತ್ತಿದ್ದರು. ಅವರು ನಿಖರವಾಗಿ ಅದೇ ಸಮಯಕ್ಕೆ ಎಲ್ಲಿಯೋ ಹೋಗುತ್ತಿದ್ದರು. ಅಷ್ಟರಲ್ಲಿಯೇ ಪ.ಪೂ. ಡಾಕ್ಟರರಿಗೆ ನಾನು ಅಲ್ಲಿಗೆ ಬಂದಿರುವುದು ತಿಳಿದಾಗ ಅವರು ಪೂ. ಗಾಡಗೀಳಕಾಕಾ ಇವರನ್ನು ಕೂಗಿ ಕರೆದರು ಮತ್ತು ಅವರು, ”ಗಾಡಗೀಳ, ಇವಳೇನು ಮಾಡಿದಳೆಂದು ನಿಮಗೆ ತಿಳಿಯಿತೇ, ?” ಎಂದು ಕೇಳಿದರು. ಪ.ಪೂ ಡಾಕ್ಟರರು ನನ್ನ ಬಗ್ಗೆ ಮಾತನಾಡುತ್ತಿದ್ದರು ಮತ್ತು ಅವರು ಪೂ. ಕಾಕಾ ಇವರನ್ನು ಕರೆಯಿಸಿಕೊಂಡಿದ್ದರು; ಆದುದರಿಂದ ನಾವಿಬ್ಬರೂ ಹೋಗಿ ಅವರ ಮುಂದೆ ನಿಂತೆವು. ‘ಪ.ಪೂ. ಡಾಕ್ಟರರು ಹಿಂದಿನ ದಿನದ ದೂರವಾಣಿಯ ಬಗ್ಗೆ ಹೇಳಲಿದ್ದಾರೆ’, ಎಂದು ನನ್ನ ಗಮನಕ್ಕೆ ಬಂದಿತು. ಆಗ ನನ್ನ ಮನಸ್ಸಿನಲ್ಲಿ, ಅವರಿಗೆ ನನ್ನಿಂದಾದ ಕೃತಿ ಅಷ್ಟು ಇಷ್ಟವಾಗಲಿಲ್ಲವೆಂದು, ಅವರು ಮರುದಿನವೂ ಆ ಬಗ್ಗೆಯೇ ಮಾತನಾಡುತ್ತಿದ್ದಾರೆ, ಎಂಬ ವಿಚಾರ ಬಂದಿತು. ನನಗೆ ಆ ಬಗ್ಗೆ ಕೆಟ್ಟದೆನಿಸಿ ನಾನು ಮನಸ್ಸಿನಲ್ಲಿ ಮತ್ತೇ ಅವರಲ್ಲಿ ಕ್ಷಮಾಯಾಚನೆಯನ್ನು ಆರಂಭಿಸಿದೆನು ಮತ್ತು ಅವರ ಮುಂದೆ ತಲೆ ಬಾಗಿಸಿ ನಿಂತಿದ್ದೆನು. ಇತರ ಯಾರಿಗೂ ಏನೂ ಗೊತ್ತಿಲ್ಲದ ಕಾರಣ ಎಲ್ಲರೂ ನನ್ನ ಕಡೆಗೆ ಮತ್ತು ಪ.ಪೂ. ಡಾಕ್ಟರರ ಕಡೆಗೆ ನೋಡುತ್ತಿದ್ದರು. ಪ.ಪೂ. ಡಾಕ್ಟರರು ಒಮ್ಮೆಲೆ ಆನಂದದಿಂದ ಪೂ. ಗಾಡಗೀಳ ಕಾಕಾರಿಗೆ, ”ನಿನ್ನೆ ಪೂನಮ್‌ನಿಂದ ಒಂದು ತಪ್ಪಾಯಿತು. ಆಗ ನನಗೆ ಅನಿಸಿತು, ‘ಸಾಮಾನ್ಯವಾಗಿ ಅವಳ ಮೇಲೆ ಕೋಪಗೊಳ್ಳಲು ಯಾವುದೇ ಕಾರಣ ಇರುವುದಿಲ್ಲ.
ಈಗ ಈ ತಪ್ಪಿನ ನಿಮಿತ್ತ ಅವಳ ಮೇಲೆ ಬಹಳಷ್ಟು ಸಿಟ್ಟು ಮಾಡೋಣ’ ಎಂಬ ವಿಚಾರ ಮಾಡಿ ನಾನು ಅವಳಿಗೆ, ”ನೀನು ಹೀಗೇಕೆ ಮಾಡಿದೆ ? ಎಂದು ಕೇಳಿದೆ ಹಾಗಾದರೆ ಅವಳೇನು ಮಾಡಿರಬಹುದು ?”,ಎಂದರು. ಇಷ್ಟು ಹೇಳಿ ಅವರು ನನ್ನತ್ತ ನೋಡತೊಡಗಿದರು. ಹಾಗಾಗಿ ಪೂ. ಕಾಕಾ ಇವರು ನನಗೆ, ”ನೀನೇನು ಮಾಡಿದೆ ?” ಎಂದು ಕೇಳಿದರು. ನಾನು ತಲೆ ಎತ್ತಿ ನಿಧಾನವಾಗಿ ಪ.ಪೂ. ಡಾಕ್ಟರರ ಕಡೆಗೆ ನೋಡಿದರೆ, ಅವರ ಮುಖದ ಮೇಲೆ ಆನಂದ ಮತ್ತು ನಗು ಇತ್ತು. ಅದನ್ನು ನೋಡಿ ‘ಅವರು ಸಿಟ್ಟಿಗೆದ್ದಿದ್ದಾರೆ ಅಥವಾ ಅಸಮಾಧಾನಗೊಂಡಿದ್ದಾರೆ’, ಎಂದು ಅನಿಸುತ್ತಿರಲಿಲ್ಲ. ಆದುದರಿಂದ ‘ಏನು ನಡೆಯುತ್ತಿದೆ ಮತ್ತು ಪ.ಪೂ ಡಾಕ್ಟರರಿಗೆ ಏನು ಹೇಳಬೇಕು ? ಎಂದು ನನಗೂ ತಿಳಿಯುತ್ತಿರಲಿಲ್ಲ ‘, ಆದರೆ ಅವರು ಇಷ್ಟನ್ನೇ ಹೇಳಿ ಎಲ್ಲರ ಕುತೂಹಲವನ್ನು ಹೆಚ್ಚಿಸಿದ್ದರು.
೧೬ ಈ. ಸಾಧಕಿಯು ತನ್ನಿಂದಾದ ತಪ್ಪಿಗಾಗಿ ಸತತ ಶರಣಾಗತಭಾವ ದಿಂದ ಕ್ಷಮೆ ಯಾಚನೆಯನ್ನು ಮಾಡುವುದು : ನಾನು ಮಾತ್ರ ಕ್ಷಮೆ ಯಾಚನೆಯನ್ನು ಮಾಡುತ್ತಲೇ ಇದ್ದೆನು; ಏಕೆಂದರೆ ಸಾಮಾನ್ಯವಾಗಿ ಪ.ಪೂ. ಡಾಕ್ಟರರು ಎಂದಿಗೂ ಯಾವುದಾದರೊಂದು ತಪ್ಪಿಗಾಗಿ ಹಿಂದಿನ ದಿನದ ಪ್ರಸಂಗವನ್ನು ತೆಗೆದು ಅಥವಾ ಮೊದಲ ಪ್ರಸಂಗವನ್ನು ಪುನಃ ಪುನಃ ಹೇಳುವುದಿಲ್ಲ. ಅವರು ಯಾವಾಗಲೂ ವರ್ತಮಾನದಲ್ಲಿ ಇರುವುದರಿಂದ ಮತ್ತು ಅವರು ಕೇವಲ ಎಲ್ಲರನ್ನು ಪ್ರೀತಿಸುವುದರಿಂದ ಅವರ ಗಮನಕ್ಕೆ ಬಂದ ತಪ್ಪನ್ನು ಸಂಬಂಧಿತರಿಗೆ ಹೇಳಿದರೆ, ಅವರು ಪುನಃ ತಮ್ಮ ಎಂದಿನ ಮೂಲ ಸ್ವಭಾವಕ್ಕನುಸಾರ ಅಂದರೆ ಬಹಳ ಪ್ರೀತಿಯಿಂದ ಮತ್ತು ‘ಏನೂ ಆಗಿಯೇ ಇಲ್ಲ ಎಂಬಂತೆ’, ವರ್ತಿಸುತ್ತಿರುತ್ತಾರೆ. ಆಗ, ‘ಕೆಲವು ಕ್ಷಣಗಳ ಹಿಂದೆ ಬಹಳ ಕೋಪಗೊಂಡರು ಇವರೇನಾ ?’ ಎಂಬ ಪ್ರಶ್ನೆ ಯಾರಿಗಾದರೂ ಮೂಡಬಹುದಿತ್ತು. ನಾನು ಅವರನ್ನು ಯಾವಾಗಲೂ ಇದೇ ರೀತಿ ನೋಡಿದುದರಿಂದ ಈ ಸಮಯದಲ್ಲಿ ನನಗೆ, ‘ದೇವರೇ, ನಾನು ನಿಮ್ಮನ್ನು ಇಷ್ಟು ನೋಯಿಸಿದೆನೇ ? ನಿಮಗೆ ಅದು ಸ್ವಲ್ಪವೂ ಇಷ್ಟವಾಗಲಿಲ್ಲವೆಂದು, ನೀವು ಇಂದೂ ಆ ಬಗ್ಗೆ ಹೇಳುತ್ತಿದ್ದೀರಾ ? ನಿಮಗೆ ಇಷ್ಟವಾಗದ ರೀತಿಯಲ್ಲಿ ನಡೆದುಕೊಂಡೆ, ನಿಮಗೆ ತೊಂದರೆ ನೀಡಿದೆ ಮತ್ತು ನೀವು ಇಂದು ಸಹ ಕೋಪಗೊಳ್ಳಲು ತೊಂದರೆ ನೀಡುತ್ತಿರುವೆ, ಅದಕ್ಕಾಗಿ ನನ್ನನ್ನು ಕ್ಷಮಿಸಿ,’ ಎಂದು ಅನಿಸುತ್ತಿತ್ತು. ಈ ರೀತಿ ಬಹಳಷ್ಟು ವಿಚಾರಗಳು ನನ್ನ ಮನಸ್ಸಿನಲ್ಲಿ ನಡೆದಿದ್ದವು.
೧೭. ‘ಮಾಡಿದ ತಪ್ಪನ್ನು ಶರಣಾಗತಿಯಿಂದ ಸ್ವೀಕರಿಸುವುದು, ಅಂದರೆ ‘ಶರಣಾಗತಿಯ ಅಸ್ತ್ರದಿಂದ ದೇವರನ್ನು ಗೆಲ್ಲುವುದು’, ಎಂದು ಪ.ಪೂ ಡಾಕ್ಟರರು ಹೇಳುವುದು
ಪ.ಪೂ ಡಾಕ್ಟರರು ಎಲ್ಲರ ಕುತೂಹಲವನ್ನು ಶಾಂತಗೊಳಿಸಿ ಮಾತನಾಡತೊಡಗಿದರು, ”ಪೂನಮ್, ನೀನೇಕೆ ಹೀಗೆ ಮಾಡಿದೆ ? ಎಂದು ನಾನು ಅವಳಿಗೆ ಕೇಳಿದೆ. ಆಗ ಅವಳು, ”ತಪ್ಪಾಯಿತು ಡಾಕ್ಟರ್ (ಪರಮ ಪೂಜ್ಯ). ಕ್ಷಮಿಸಿ”, ಎಂದು ಹೇಳಿದಳು. ಅನಂತರ ನನಗೆ ಮುಂದೆ ಏನೂ ಮಾತನಾಡಲು ಆಗಲಿಲ್ಲ. ನಾನು ‘ಈಗ ನಾನು ಅವಳ ಮೇಲೆ ಬಹಳ ಕೋಪಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದೆನು; ಆದರೆ ಅವಳು ಶರಣಾಗತಿಯ ಉತ್ತಮ ಅಸ್ತ್ರವನ್ನು ಬಳಸಿದಳಲ್ಲ ! ಅದರ ಮುಂದೆ ನನಗೆ ಏನೂ ಮಾತನಾಡಲೂ ಸಾಧ್ಯವಾಗಲೇ ಇಲ್ಲ’, ಎಂದು ಹೇಳಿದರು. ಆಗ ಪೂ. ಗಾಡಗೀಳ ಕಾಕಾ ಇವರು, ”ಹೌದು. ಶರಣಾಗತಿಯ ಅಸ್ತ್ರದಿಂದಲೇ ದೇವರನ್ನು ಗೆಲ್ಲಲು ಬರುತ್ತದೆ ಮತ್ತು ಇವರು ಅದೇ ಅಸ್ತ್ರವನ್ನು ಬಳಸಿದರು ಮತ್ತು ದೇವರನ್ನು ಗೆದ್ದರು”, ಎಂದು ಹೇಳಿದರು. ಆಗ ಪ.ಪೂ. ಡಾಕ್ಟರರೂ ಒಮ್ಮೆಲೆ ಪ್ರಸನ್ನರಾಗಿ, ”ಹೌದು. ಸರಿ ಇದೆ. ಶರಣಾಗತಿಯ ಅಸ್ತ್ರದಿಂದಲೇ ದೇವರನ್ನು ಗೆಲ್ಲಲು ಸಾಧ್ಯ ಮತ್ತು ಅವಳು ಗೆದ್ದಳಲ್ಲವೇ !”, ಎಂದು ಹೇಳಿದರು.
೧೮. ಈ ಪ್ರಸಂಗದಲ್ಲಿ ನಡೆದ ಸಾಧಕಿಯ ಚಿಂತನೆ ಆಗ ನನಗೆ ನಿನ್ನೆ ರಾತ್ರಿ ನಡೆದ ಘಟನಾಕ್ರಮದ ನೆನಪಾಯಿತು.
‘ಬಾಹ್ಯದಲ್ಲಿ ನೋಡಿದರೆ, ನನ್ನ ಉದ್ದೇಶ ‘ಅವರಿಗೆ ತೊಂದರೆಯಾಗ ಬಾರದು’, ಎಂದಿತ್ತು. ‘ಅವರು ದೇವರಿದ್ದಾರಲ್ಲವೇ’, ಆದುದರಿಂದ ಅವರ ಬಗ್ಗೆ ಇರುವ ಕಾಳಜಿಯಿಂದಾಗಿಯೇ ನಾನು ಆ ರೀತಿ ಮಾಡಿದೆ. ಅದು ಅವರಿಗೆ ತಿಳಿದಿಲ್ಲ, ಎಂದೇನಿಲ್ಲ; ಆದರೆ ನನ್ನ ಮನಸ್ಸಿನಲ್ಲಿ ಆ ಸಮಯದಲ್ಲಿ ಇಂತಹ ಅಥವಾ ಇತರ ಯಾವುದೇ ಸ್ಪಷ್ಟೀಕರಣದ ವಿಚಾರ ಬರಲಿಲ್ಲ. ನನಗೆ ಆ ಸಮಯದಲ್ಲಿ ‘ಪ.ಪೂ. ಡಾಕ್ಟರರಿಗೆ ಇಷ್ಟವಾಗಿಲ್ಲ ಎಂದರೆ ಅದು ಸರಿ ಇಲ್ಲ. ಹಾಗಾದರೆ ಅದು ಏನೇ ಆಗಿರಲಿ ಅಥವಾ ಅದರ ಹಿಂದಿನ ಉದ್ದೇಶ ಏನೇ ಆಗಿರಲಿ. ಅವರಿಗೆ ಇಷ್ಟವಾಗಿಲ್ಲ, ಎಂದರೆ ನಾನು ಶೇ. ೧೦೦ ರಷ್ಟು ತಪ್ಪಿದ್ದೇನೆ’, ಎಂದು ಅನಿಸಿತ್ತು. ಆದುದರಿಂದ ನಾನು ಮನಃಪೂರ್ವಕ ಕ್ಷಮೆ ಯಾಚನೆ ಮಾಡುತ್ತಿದ್ದೆ. ಆಗ ‘ದೂರವಾಣಿ ಯಲ್ಲಿ ಮಾತನಾಡುವಾಗ ಪ.ಪೂ. ಡಾಕ್ಟರರ ಆರಂಭದ ಸ್ವರ ಇಷ್ಟು ಅಸಮಾಧಾನದ್ದಾಗಿದ್ದರೂ ನಾನು ಕ್ಷಮೆ ಕೇಳಿದ ನಂತರ ಅದು ಕೆಲವೇ ಕ್ಷಣಗಳಲ್ಲಿ ಹೇಗೆ ಶಾಂತವಾಗುತ್ತದೆ ? ನಂತರ ಅವರು ಒಮ್ಮೆಲೆ ಏನೂ ಆಗದ ರೀತಿಯಲ್ಲಿ ಆನಂದದಿಂದ ಹೇಗೆ ಮಾತನಾಡತೊಡಗಿದರು ?’, ಎಂದು ನನ್ನ ಗಮನಕ್ಕೆ ಬಂದಿತು. ಅವರ ಮೇಲಿನ (ಶರಣಾಗತಿಯ ಅಸ್ತ್ರವನ್ನು ಬಳಸುವ) ಹೇಳಿಕೆಯ ನಂತರ ನನಗೆ ಹಿಂದಿನ ದಿನದ ಈ ಪ್ರಸಂಗವು ಅರ್ಥವಾಯಿತು.
ಇದೆಲ್ಲವನ್ನು ಕೇಳಿ ನನ್ನ ಜೀವದಲ್ಲಿ ಜೀವ ಬಂದಿತು. ‘ದೇವರಿಗೆ ನನ್ನಿಂದ ತೊಂದರೆಯಾಗಲಿಲ್ಲ, ಆದರೆ ಅವರಿಗೆ ಸಂತೋಷವಾಗಿದೆ’, ಈ ವಿಚಾರದಿಂದ ನನ್ನ ಕಣ್ಣುಗಳಲ್ಲಿ ಆನಂದದಿಂದ ಮತ್ತು ಕೃತಜ್ಞತೆಯಿಂದ ಕಣ್ಣೀರು ಬಂದವು ಮತ್ತು ನನ್ನಿಂದ ‘ದೇವರೇ, ನಿಮಗೆ ಇಷ್ಟವಾಗುವಂತಹ ಪ್ರಯತ್ನಗಳನ್ನೇ ನೀವು ನನ್ನಿಂದ ಯಾವಾಗಲೂ ಮಾಡಿಸಿಕೊಳ್ಳಿ’, ಎಂಬ ಪ್ರಾರ್ಥನೆಯಾಗುತ್ತಿತ್ತು. ನಾನು ಬರವಣಿಗೆ ಮಾಡದ ತಪ್ಪುಗಳಿಗಾಗಿ ಕ್ಷಮೆ ಯಾಚಿಸುವಾಗ ನನಗೆ ಈ ಪ್ರಸಂಗ ನೆನಪಾಯಿತು. ಆ ಸಮಯದಲ್ಲಿ ನನಗೆ ಪ.ಪೂ. ಭಕ್ತರಾಜ ಮಹಾರಾಜರು ಭಜನೆಯ ನಂತರ ಹೇಳುತ್ತಿದ್ದ ಒಂದು ಪ್ರಾರ್ಥನೆ ನೆನಪಾಯಿತು. ಅದರ ಅರ್ಥ ಸ್ವಲ್ಪದರಲ್ಲಿ ಹೀಗಿದೆ, ‘ಹೇ ಪ್ರಭೋ, ನಾನು ಬಹಳ ಪಾಪಿ ಇದ್ದೇನೆ. ಹೆಜ್ಜೆಹೆಜ್ಜೆಗೂ ನಾನು ತಪ್ಪು ಮಾಡುತ್ತೇನೆ; ಆದರೂ ನೀನು ನನ್ನನ್ನು ಕ್ಷಮಿಸುವೆ, ಈ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ.’
ಈ ಸಾಲು ನೆನಪಾಯಿತು ಮತ್ತು ನನಗೆ ಪ.ಪೂ ಡಾಕ್ಟರ್ ಮತ್ತು ಎಲ್ಲ ಸಾಧಕರ ಚರಣಗಳಲ್ಲಿ ಕ್ಷಮೆ ಯಾಚನೆ ಮಾಡಲು ಧೈರ್ಯ ಬಂದಿತು. ‘ಪಶ್ಚಾತ್ತಾಪದ ಒಂದು ಕಣ್ಣೀರಿನ ಹನಿ ಎಲ್ಲ ಪಾಪಗಳನ್ನು ತೊಳೆದುಹಾಕುತ್ತದೆ’, ಎಂದು ಹೇಳುತ್ತಾರೆ. ಪ.ಪೂ. ಡಾಕ್ಟರ್, ನಾನು ಈ ಕಡತವನ್ನು ಪಶ್ಚಾತ್ತಾಪ, ಶರಣಾಗತಿ ಮತ್ತು ಕ್ಷಮೆ ಯಾಚನೆ ಈ ಭಾವಗಳಿಂದ ಬೆರಳಚ್ಚು ಮಾಡಿದ್ದೇನೆ; ಏಕೆಂದರೆ ಪ್ರಾರಬ್ಧವು ಎಷ್ಟೇ ತೀವ್ರವಾಗಿದ್ದರೂ, ಜಗತ್ತಿನಲ್ಲಿ ಯಾರೇ ಕೋಪಗೊಂಡರೂ, ಸಾಕ್ಷಾತ್ ದೇವತೆಗಳು ಕೋಪಗೊಂಡರೂ, ಗುರುಗಳು ಕಾಪಾಡುವರು; ಆದರೆ ಗುರುಗಳೇ ಕೋಪಗೊಂಡರೆ, ಮೂರು ಲೋಕಗಳಲ್ಲಿ ಯಾರೂ ಕಾಪಾಡಲು ಸಾಧ್ಯವಿಲ್ಲ.
‘ಪ.ಪೂ. ಡಾಕ್ಟರ್, ನನ್ನಿಂದಾದ ತಪ್ಪುಗಳಿಗಾಗಿ ನಾನು ಕಿವಿ ಹಿಡಿದು ನಿಮ್ಮ ಚರಣಗಳಲ್ಲಿ ನತಮಸ್ತಕಳಾಗಿ ಶರಣಾಗಿ ಕ್ಷಮೆ ಯಾಚಿಸುತ್ತೇನೆ. ನಾನು ಈಗ ‘ನಿಯಮಿತವಾಗಿ ಬರೆಯುವುದು’, ಈ ಕೃತಿಯ ಸ್ತರದ ಪ್ರಯತ್ನ ಮಾಡುತ್ತೇನೆ. ಆದುದರಿಂದ ಪ.ಪೂ. ಡಾಕ್ಟರ್, ನೀವು ನನ್ನನ್ನು ಕ್ಷಮಿಸುವಿರಲ್ಲವೇ ?’
– ಸುಶ್ರೀ (ಕು.) ಪೂನಮ್ ಸಾಳುಂಖೆ (ವರ್ಷ ೨೦೨೪ ರಲ್ಲಿನ ಆಧ್ಯಾತ್ಮಿಕ ಮಟ್ಟ ಶೇ. ೬೧), ಸನಾತನ ಆಶ್ರಮ, ರಾಮನಾಥಿ, ಗೋವಾ. (ಮುಕ್ತಾಯ)
ಕಾಲಕಾಲಕ್ಕೆ ಲೇಖನಗಳನ್ನು ಬರೆದು ಅದನ್ನು ಜವಾಬ್ದಾರ ಸಾಧಕರಿಗೆ ಒಪ್ಪಿಸಿ ಗುರುದೇವರ ಮನಸ್ಸನ್ನು ಗೆಲ್ಲೋಣ !‘ಒಬ್ಬರಿಂದ ಬರವಣಿಗೆ ಮಾಡಿಸಿಕೊಳ್ಳುವ ವಿಷಯದಲ್ಲಿ ಪ.ಪೂ. ಡಾಕ್ಟರರ ಜಿಗುಟುತನ ಮತ್ತು ಪ್ರೀತಿಯ ಬಗ್ಗೆ ನಾನು ಇಲ್ಲಿ ಬರೆದ ಪ್ರಸಂಗಗಳು ಪ್ರಾತಿನಿಧಿಕ ಸ್ವರೂಪದ್ದಾಗಿವೆ. ‘ಪ.ಪೂ. ಡಾಕ್ಟರರು ಬರೆಯಲು ಹೇಳುವುದು’, ಇದು ಕೇವಲ ನನಗಾಗಿ ಅಲ್ಲ, ಆದರೆ ಸನಾತನದ ಪ್ರತಿಯೊಬ್ಬ ಸಾಧಕರಿಗೆ ಇದೆ ಮತ್ತು ಅದಕ್ಕಾಗಿ ಪ್ರೋತ್ಸಾಹ ನೀಡುವವರೂ ಅವರೇ ಆಗಿದ್ದಾರೆ. ಅವರಿಂದಾಗಿ ಇಂದು ಸುಮಾರು ಪ್ರತಿಯೊಬ್ಬ ಸಾಧಕನಿಗೆ ತನಗೆ ಬಂದ ಅನುಭೂತಿ, ತೊಂದರೆ, ಕಲಿಯಲು ಸಿಕ್ಕಿದ ಅಂಶಗಳು, ಹೊಳೆದ ಕವಿತೆ, ರಾಷ್ಟ್ರ-ಧರ್ಮದ ಬಗೆಗಿನ ಅಥವಾ ವಿವಿಧ ವಿಷಯಗಳ ಮೇಲೆ ಆಧರಿಸಿದ ಲೇಖನಗಳು, ಸಮಾಜದಲ್ಲಿ ಅಥವಾ ನಮ್ಮ ಸುತ್ತಮುತ್ತ ಘಟಿಸುವ ಘಟನೆಗಳ ಬಗ್ಗೆ ನಮ್ಮ ಅಭಿಪ್ರಾಯ, ಸೂಕ್ಷ್ಮದಿಂದ ಜ್ಞಾನವನ್ನು ಪ್ರಾಪ್ತ ಮಾಡಿಕೊಂಡು ಆ ಬಗ್ಗೆ ಬರೆದ ಲೇಖನ, ಇವು ಮತ್ತು ಇತರ ಎಲ್ಲ ಪ್ರಕಾರದ ಬರವಣಿಗೆ ಮಾಡುವ ಅಭ್ಯಾಸವಾಗಿದೆ. ಇದಕ್ಕಾಗಿ ಸಾಧಕರಿಗೆ ಅವರೇ ಪ್ರೋತ್ಸಾಹ ನೀಡಿದರು ಮತ್ತು ಅವರು ಇಂದಿಗೂ ನೀಡುತ್ತಿದ್ದಾರೆ ಹಾಗೂ ಅವರೇ ಬರೆಯಿಸಿಕೊಳ್ಳುತ್ತಿದ್ದಾರೆ. ಅವರ ಜಿಗುಟುತನ ಎಷ್ಟಿರುತ್ತದೆಯೆಂದರೆ, ಅವರು ಕೇವಲ ಹೇಳಿ ಸುಮ್ಮನಿರುವುದಿಲ್ಲ, ಆದರೆ ಸ್ವತಃ ಬೆಂಬತ್ತುವಿಕೆ ಮಾಡುತ್ತಾರೆ. ‘ಇಂಥವರಿಗೆ ಕೇಳು, ಅವರಿಗೆ ಈ ಲೇಖನವನ್ನು ತಯಾರಿಸಲು ಹೇಳಿದ್ದೆನು, ಅದನ್ನು ಅವರು ಮಾಡಿದ್ದಾರಾ ?’, ಹಾಗೆಯೇ ಯಾವುದಾದರೊಂದು ಲೇಖನ ಇಷ್ಟವಾದರೆ ಸಂಬಂಧಿತ ಸಾಧಕರಿಗೆ ಪ್ರಸಾದ ನೀಡಲು ಹೇಳುತ್ತಾರೆ. ಪ್ರಸಾದ ನೀಡುವಾಗ ಆ ಸಾಧಕನ ಇಷ್ಟಾ-ನಿಷ್ಟಗಳನ್ನು ಕೇಳಿ ‘ಅವನಿಗೆ ಸಿಹಿ ಇಷ್ಟವೋ ಅಥವಾ ಖಾರ ?’ ಎಂದು ತಿಳಿದುಕೊಂಡು ಅದಕ್ಕನುಸಾರ ಅವನಿಗೆ ಪ್ರಸಾದ ನೀಡಲು ಹೇಳುತ್ತಾರೆ. ಕೆಲವೊಮ್ಮೆ ಲೇಖನ ವೈಶಿಷ್ಟ್ಯಪೂರ್ಣ ಇದ್ದೇ ಇರುತ್ತದೆ, ಎಂದೇನಿಲ್ಲ; ಆದರೆ ಆ ಸಾಧಕನು ಮೊದಲ ಬಾರಿಗೆ ಪ್ರಯತ್ನಿಸಿದ್ದರೆ ಅಥವಾ ಆ ಲೇಖನವನ್ನು ಬರೆಯುವಾಗಿನ ಅವನ ಭಾವ ಚೆನ್ನಾಗಿದ್ದರೆ, ಹಾಗೆಯೇ ಯಾರಾದರೊಬ್ಬರು ಬಹಳ ಮನಃಪೂರ್ವಕ ಬರೆದಿದ್ದರೆ, ಅವರಿಗೆ ಪ್ರಸಾದ ಸಿಗುತ್ತದೆ ಎಂಬುದು ನಿಶ್ಚಿತ. ಹೀಗಿದ್ದರೂ ‘ಅವರು ಸ್ಥೂಲದಲ್ಲಿ ಪ್ರಸಾದ ನೀಡಿದರೆ ಮಾತ್ರ ಅವರಿಗೆ ಲೇಖನ ಇಷ್ಟವಾಗುತ್ತದೆ’, ಎಂದಿರುವುದಿಲ್ಲ. ‘ಯಾರಾದರೊಬ್ಬರು ಲೇಖನ ಬರೆದರು’, ಇದೇ ಮೂಲತಃ ಅವರಿಗೆ ಬಹಳ ಇಷ್ಟವಾಗುತ್ತದೆ. ಆದುದರಿಂದ ‘ನಮ್ಮ ಗುರುಗಳಿಗೆ ಇಷ್ಟವಾಗುವ ಕೃತಿ ನಮ್ಮಿಂದಾಯಿತು’, ಇದಕ್ಕಿಂತಲೂ ಬೇರೆಯ ಅಮೂಲ್ಯವಾದ ಪ್ರಸಾದ ಪ್ರತಿಯೊಬ್ಬ ಸಾಧಕನಿಗೆ ಬೇರೆ ಏನಿರಬಹುದು ? ಆದುದರಿಂದ ನಾನು ಮಾಡಿದ ತಪ್ಪನ್ನು ಬೇರೆ ಯಾರೂ ಮಾಡಬೇಡಿ. ‘ನನ್ನ ಪ್ರಸಂಗದಿಂದ ಎಲ್ಲರೂ ಕಲಿತು ಆಯಾ ಸಮಯದಲ್ಲಿ ಬರೆದು ಜವಾಬ್ದಾರ ಸಾಧಕರಿಗೆ ಒಪ್ಪಿಸೋಣ ಮತ್ತು ನಮ್ಮ ಗುರುದೇವರಿಗೆ ಆನಂದ ನೀಡೋಣ’, ಇದೇ ಎಲ್ಲರ ಚರಣಗಳಲ್ಲಿ ನನ್ನ ಸವಿನಯ ಪ್ರಾರ್ಥನೆಯಾಗಿದೆ. ನನ್ನ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ, ಹಾಗೆಯೇ ಇತರ ನನಗೆ ಗೊತ್ತಿಲ್ಲದ ಅನೇಕ ಅಡೆತಡೆಗಳನ್ನು ನಿವಾರಿಸಿ ಮತ್ತು ಅತ್ಯಂತ ಜಿಗುಟುತನದಿಂದ ನನ್ನ ಬೆಂಬತ್ತುವಿಕೆ ಮಾಡಿ ನನ್ನಿಂದ ಈ ಬರವಣಿಗೆಯನ್ನು ಮಾಡಿಸಿಕೊಂಡಿದ್ದಕ್ಕಾಗಿ ಪ.ಪೂ. ಡಾಕ್ಟರ್, ನಿಮ್ಮ ಸುಕೋಮಲ ಚರಣಗಳಲ್ಲಿ ಕೋಟಿಶಃ ಕೃತಜ್ಞತೆಗಳು !’ – ಸುಶ್ರೀ (ಕು.) ಪುನಮ್ ಸಾಳುಂಖೆ |