ತೆಲ ಅವಿವ (ಇಸ್ರೇಲ್) – ಕದನ ವಿರಾಮದ ನಂತರ ಇಸ್ರೇಲ್ ಮಾರ್ಚ್ ೧೮ ರ ಬೆಳಿಗ್ಗೆ ಗಾಝಾದ ಮೇಲೆ ಪುನಃ ದಾಳಿ ನಡೆಸಿದೆ. ಇಸ್ರೇಲಿನ ವಾಯು ದಾಳಿಯಲ್ಲಿ ಸುಮಾರು ೨೩೫ ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯವು ತಿಳಿಸಿದೆ. ಇದು ಗಾಝಾದಲ್ಲಿ ಇಲ್ಲಿಯವರೆಗೆ ನಡೆದಿರುವ ದಾಳಿಗಳಲ್ಲಿ ಎಲ್ಲಕ್ಕಿಂತ ದೊಡ್ಡ ದಾಳಿಯಾಗಿದೆ. ‘ಕದನವಿರಾಮವನ್ನು ಹೆಚ್ಚಿಸುವುದರ ಚರ್ಚೆಯಲ್ಲಿ ಯಾವುದೇ ಮಹತ್ವಪೂರ್ಣ ಪ್ರಗತಿಯಾಗದಿರುವುದರಿಂದ ದಾಳಿಗೆ ಆದೇಶ ನೀಡಲಾಗಿತ್ತು ಎಂದು ಪ್ರಧಾನಮಂತ್ರಿ ಬೆಂಜಾಮಿನ ನೇತಾನ್ಯಾಹೂರವರು ತಿಳಿಸಿದರು. ಈ ದಾಳಿಯ ಬಗ್ಗೆ ಭಯೋತ್ಪಾದಕ ಸಂಘಟನೆಯಾದ ಹಮಾಸ ಎಚ್ಚರಿಕೆ ನೀಡುತ್ತ, ‘ಗಾಝಾದಲ್ಲಿ ಇಸ್ರೇಲಿನಿಂದ ನಡೆದ ನೂತನ ದಾಳಿಯು ಕದನವಿರಾಮದ ಉಲ್ಲಂಘನೆಯಾಗಿದ್ದು ಇದರಿಂದ ಒತ್ತೆಯಾಳುಗಳ ಜೀವಕ್ಕೆ ಅಪಾಯವಾಗಬಹುದು’ ಎಂದು ಹೇಳಿದೆ. ಹಮಾಸನ ಬಳಿ ಇಂದಿಗೂ ಇಸ್ರೇಲಿನ ೨೪ ಜೀವಂತ ಒತ್ತೆಯಾಳುಗಳಿದ್ದಾರೆ.
ಇಸ್ರೇಲ ಬುರೇಜಿ ಪರಿಸರದಲ್ಲಿನ ನಿರಾಶ್ರಿತರ ಟೆಂಟುಗಳ ಮೇಲೆ ದಾಳಿ ನಡೆಸಿದೆ. ನಿರಾಶ್ರಿತ ಪ್ಯಾಲೆಸ್ಟೀನಿಯರು ಆಶ್ರಯ ಪಡೆದಿದ್ದ ಶಾಲೆಯನ್ನೂ ಗುರಿಯಾಗಿಸಲಾಗಿದೆ. ಈ ದಾಳಿಯ ಮೊದಲು ಇಸ್ರೇಲ ಗಾಝಾಗೆ ಆಹಾರ, ಔಷಧಿ, ಇಂಧನ ಮುಂತಾದವುಗಳ ಪೂರೈಕೆಯನ್ನೂ ನಿಲ್ಲಿಸಿತ್ತು. ಇದರಿಂದ ಗಾಝಾದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿರಿಯಾ ಮತ್ತು ಲೆಬೆನಾನ ಮೇಲೆಯೂ ಆಕ್ರಮಣ !
ಇಸ್ರೇಲ ಲೆಬೆನಾನ ಮತ್ತು ಸಿರಿಯ ದೇಶಗಳಲ್ಲಿ ವಾಯು ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುಮಾರು ೧೦ ಜನರು ಸಾವನ್ನಪ್ಪಿರುವ ಸಮಾಚಾರವಿದೆ.
ದಾಳಿಯ ಮೊದಲು ಅಮೇರಿಕಾದೊಂದಿಗೆ ಚರ್ಚೆ ನಡೆಸಿದ್ದ ಇಸ್ರೇಲ !
ಅಮೇರಿಕಾದ ವೈಟ್ ಹೌಸನ ಪ್ರಸಾರಮಾಧ್ಯಮದ ಸಚಿವೆಯಾದ ಕ್ಯಾರೋಲಿನ ಲೇವಿಟರವರು, `ಗಾಝಾದ ಮೇಲಿನ ದಾಳಿಯ ಕುರಿತು ಇಸ್ರೇಲ್ ಟ್ರಂಪ ಸರಕಾರದೊಂದಿಗೆ ಚರ್ಚೆ ನಡೆಸಿತ್ತು. ರಾಷ್ಟ್ರಾಧ್ಯಕ್ಷ ಟ್ರಂಪರವರು ಸ್ಪಷ್ಟಪಡಿಸಿರುವಂತೆ ಅಮೇರಿಕಾ ಮತ್ತು ಇಸ್ರೇಲಿನ ಮೇಲೆ ಭಯದ ವಾತಾವರಣ ನಿರ್ಮಾಣ ಮಾಡುವುದರ ಬೆಲೆಯನ್ನು ಹಮಾಸ, ಹುತಿ, ಮತ್ತು ಇರಾನ ತೆರಬೇಕಾಗುವುದು. ಎಲ್ಲವೂ ನಾಶವಾಗುವುದು, ಎಂದು ಹೇಳಿದರು.