2019 ರಲ್ಲಿ ಓರ್ವ ವಿದ್ಯಾರ್ಥಿಯ ಹತ್ಯೆ ಪ್ರಕರಣ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಹೈಕೋರ್ಟ್ ಒಂದು ವಿಶ್ವವಿದ್ಯಾಲಯದ 20 ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸುವ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಇದರೊಂದಿಗೆ ಇತರ 5 ವಿದ್ಯಾರ್ಥಿಗಳ ಜೀವಾವಧಿ ಶಿಕ್ಷೆಯನ್ನೂ ಎತ್ತಿಹಿಡಿದಿದೆ.
2019 ರಲ್ಲಿ ಸರಕಾರದ ವಿರುದ್ಧ ಟೀಕೆ ಮಾಡುವ ಫೇಸ್‌ಬುಕ್ ಪೋಸ್ಟ್‌ನಿಂದಾಗಿ ಅಬ್ರಾರ್ ಫಹಾದ್ ಎಂಬ ವಿದ್ಯಾರ್ಥಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಕೆಳ ನ್ಯಾಯಾಲಯವು ಆರೋಪಿ ವಿದ್ಯಾರ್ಥಿಗಳಿಗೆ ಈ ಶಿಕ್ಷೆಯನ್ನು ವಿಧಿಸಿತ್ತು. ಎಲ್ಲಾ ಆರೋಪಿಗಳು ಬಾಂಗ್ಲಾದೇಶ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದರು. ಅವರು ಈಗ ವಿಸರ್ಜಿಸಲ್ಪಟ್ಟ ‘ಬಾಂಗ್ಲಾದೇಶ ಛಾತ್ರ ಲೀಗ್’ ಸಂಘಟನೆಗೆ ಸಂಬಂಧಿಸಿದ್ದರು. ಈ ಸಂಘಟನೆಯು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾಗಿತ್ತು. ಮೃತ ವಿದ್ಯಾರ್ಥಿಯ ತಂದೆ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ನಾವು ಇದರಿಂದ ತೃಪ್ತರಾಗಿದ್ದೇವೆ; ಆದರೆ ಈ ನಿರ್ಧಾರವನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.