ಶ್ರಾವಸ್ತಿ (ಉತ್ತರ ಪ್ರದೇಶ) ದಲ್ಲಿ ವಿದ್ಯಾರ್ಥಿನಿಯರ ಅತ್ಯಾಚಾರ ಮಾಡಿದ ಮುಖ್ಯೋಪಾಧ್ಯಾಯ ಬಂಧನ

ಶ್ರಾವಸ್ತಿ (ಉತ್ತರ ಪ್ರದೇಶ) – ಇಲ್ಲಿನ ಸಿರ್ಸಿಯಾ ಪ್ರದೇಶದ ಉನ್ನತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪ್ರಭಾಕರ್ ಶ್ರೀವಾಸ್ತವ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅವರೊಂದಿಗೆ ಅಶ್ಲೀಲವಾಗಿ ವರ್ತಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಶ್ರೀವಾಸ್ತವನನ್ನು ಬಂಧಿಸಿದ್ದು, ಜಿಲ್ಲಾ ಶಿಕ್ಷಣ ಇಲಾಖೆ ತಕ್ಷಣವೇ ಆತನನ್ನು ಅಮಾನತುಗೊಳಿಸಿದೆ.

ಶ್ರೀವಾಸ್ತವನ ಈ ಕೃತ್ಯದಿಂದ ಹಲವು ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು. ಭಯದಿಂದ ಅವರು ಈ ವಿಷಯಗಳನ್ನು ಸಹಿಸಿಕೊಳ್ಳುತ್ತಿದ್ದರು. ಶ್ರೀವಾಸ್ತವನ ಕೃತ್ಯ ಸಹಿಸಲಾಗದೆ ಶಾಲೆಯ 2 ವಿದ್ಯಾರ್ಥಿನಿಯರು ಧೈರ್ಯದಿಂದ ಇದರ ವಿರುದ್ಧ ಧ್ವನಿ ಎತ್ತಿದರು. ಆಗ ಇತರ ಶಿಕ್ಷಕರು, ಪೋಷಕರು ಮುಂತಾದವರು ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತರು. ಆಕ್ರೋಶಗೊಂಡ ಪೋಷಕರು ಜೋಖ್ವಾ ಪೊಲೀಸರಿಗೆ ಲಿಖಿತ ದೂರು ನೀಡಿದ ನಂತರ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹವರಿಗೆ ಸರಕಾರ ತ್ವರಿತ ಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ನೀಡಲು ಪ್ರಯತ್ನಿಸಿದರೆ ಇಂತಹ ಕೃತ್ಯಗಳನ್ನು ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ!