ಮುಜಫ್ಫರಪುರ (ಬಿಹಾರ) ಇಲ್ಲಿನ ರೈಲು ನಿಲ್ದಾಣದ ಬಳಿ ಇರುವ ಪ್ರಾಚೀನ ದೇವಸ್ಥಾನವನ್ನು ತೆರವುಗೊಳಿಸಿದ್ದನ್ನು ವಿರೋಧಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

ಮುಜಫ್ಫರಪುರ (ಬಿಹಾರ) – ಇಲ್ಲಿನ ಮುಜಫ್ಫರಪುರ ರೈಲು ನಿಲ್ದಾಣದ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಇಲ್ಲಿದ್ದ ದೇವಸ್ಥಾನವನ್ನು ಬೇರೆಡೆ ಭೂಮಿ ನೀಡಿ ತೆರವುಗೊಳಿಸಲಾಗಿದೆ. ಈ ಸಂದರ್ಭದಲ್ಲಿ, ರೇಲ್ವೆ ಮಾರ್ಗದ ಬಳಿ ಇರುವ ಮಸೀದಿಯನ್ನು ತೆರವುಗೊಳಿಸದಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ರೈಲು ನಿಲ್ದಾಣದ ಬಳಿ ಪ್ರತಿಭಟನೆ ಆರಂಭಿಸಿವೆ. ಪರಿಸ್ಥಿತಿಯನ್ನು ಪರಿಗಣಿಸಿ, ಜಿಲ್ಲಾಡಳಿತವು ನಿಲ್ದಾಣ ಪ್ರದೇಶದಲ್ಲಿ ದೊಡ್ಡ ಪೊಲೀಸ್ ಪಡೆಯನ್ನು ನಿಯೋಜಿಸಿದೆ.
ವಿಶ್ವ ಹಿಂದೂ ಪರಿಷತ್ತು ರೈಲ್ವೆ ಸಚಿವ ಶ್ರೀ. ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ಒಂದು ಮನವಿಯನ್ನು ಸಲ್ಲಿಸಿದೆ. ವಿಶ್ವ ಹಿಂದೂ ಪರಿಷತ್ತಿನ ನಾಯಕ ಅವಿನಾಶ ಝಾ ಅವರ ಪ್ರಕಾರ, ರೈಲ್ವೆ ಆಡಳಿತ ಯಾವುದೇ ಸೂಚನೆ ನೀಡದೆ ಮಾರ್ಚ್ 10 ರ ರಾತ್ರಿ ದೇವಸ್ಥಾನವನ್ನು ಕೆಡವಿತು. ದೇವಸ್ಥಾನದಲ್ಲಿ ಪ್ರಾಚೀನ ಅಷ್ಟಧಾತುವಿನ ಮೂರ್ತಿಗಳಿದ್ದವು, ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ನಮ್ಮ ಪ್ರಮುಖ ಬೇಡಿಕೆಯೆಂದರೆ ದೇವಸ್ಥಾನವನ್ನು ಅದೇ ಸ್ಥಳದಲ್ಲಿ ಪುನಃ ಸ್ಥಾಪಿಸಬೇಕು ಮತ್ತು ಎಲ್ಲಾ ಮೂರ್ತಿಗಳನ್ನು ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾಪಿಸಬೇಕು, ಎಂದು ಹೇಳಿದರು.
ಸಂಪಾದಕೀಯ ನಿಲುವುಯಾವುದೇ ಸರಕಾರಕ್ಕೂ ಮಸೀದಿಯನ್ನು ತೆರವುಗೊಳಿಸುವ ಧೈರ್ಯವಿಲ್ಲ, ಆದ್ದರಿಂದ ಅದು ಅನಧಿಕೃತವಾಗಿದ್ದರೂ ಸಹ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ! |