ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರರಿಗೆ ನೀಡುತ್ತಿರುವ ಕಿರುಕುಳ ಕಳವಳಕಾರಿ ವಿಷಯ ! – ತುಳಸಿ ಗ್ಯಾಬರ್ಡ, ಅಮೆರಿಕಾದ ‘ರಾಷ್ಟ್ರೀಯ ಗುಪ್ತಚರ’ದ ಸಂಚಾಲಕಿ

ಭಾರತದ ಪ್ರವಾಸದಲ್ಲಿರುವ ಅಮೆರಿಕಾದ ‘ರಾಷ್ಟ್ರೀಯ ಗುಪ್ತಚರ’ದ ಸಂಚಾಲಕಿ ತುಳಸಿ ಗ್ಯಾಬರ್ಡ್ ಇವರ ಹೇಳಿಕೆ

ತುಳಸಿ ಗ್ಯಾಬರ್ಡ

ನವ ದೆಹಲಿ – ಇಸ್ಲಾಮಿ ಭಯೋತ್ಪಾದನೆ ಜಗತ್ತಿಗಾಗಿ ಆತಂಕದ ಒಂದು ಪ್ರಮುಖ ಕಾರಣವಾಗಿದೆ. ಬಾಂಗ್ಲಾದೇಶದಲ್ಲಿನ ಹಿಂದುಗಳು, ಬೌದ್ಧರು, ಕ್ರೈಸ್ತರು ಮತ್ತು ಇತರ ಜನರಿಗೆ ಬಹಳಷ್ಟು ಸಮಯದಿಂದ ಕಿರುಕುಳ, ಹತ್ಯೆಯ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಅಮೇರಿಕಾಗು ಕೂಡ ಇದು ಆತಂಕದ ವಿಷಯವಾಗಿದೆ. ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಸರಕಾರ ಈ ವಿಷಯದ ಕುರಿತು ಸತತವಾಗಿ ಚರ್ಚಿಸುತ್ತಿದೆ, ಎಂದು ಅಮೆರಿಕಾದ ರಾಷ್ಟ್ರೀಯ ಗುಪ್ತಚರದ ಸಂಚಾಲಕಿ ತುಳಸಿ ಗ್ಯಾಬರ್ಡ್ ಇವರು ಭಾರತದ ಒಂದು ವಾರ್ತಾವಾಹಿನಿ ಜೊತೆಗೆ ಮಾತನಾಡುವಾಗ ಮಾಹಿತಿ ನೀಡಿದರು.

ಭಾರತದಲ್ಲಿ ಜಗತ್ತಿನ ಉನ್ನತ ಗುಪ್ತಚರ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ. ಅದಕ್ಕಾಗಿ ತುಳಸಿ ಗ್ಯಾಬರ್ಡ್ ಇವರು ಭಾರತಕ್ಕೆ ಬಂದಿದ್ದಾರೆ. ಈ ಸಭೆಯ ಅಧ್ಯಕ್ಷ ಸ್ಥಾನ ಭಾರತದ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ದೊಬಾಲ್ ಇವರು ಅಲಂಕರಿಸಿದ್ದಾರೆ. ಈ ಸಭೆಯಲ್ಲಿ ಭಯೋತ್ಪಾದನೆ ಮತ್ತು ಉದಯೋನ್ಮುಖ ತಂತ್ರಜ್ಞಾನ ಇದರಿಂದ ನಿರ್ಮಾಣವಾಗಿರುವ ಅಪಾಯದ ಜೊತೆಗೆ ವಿವಿಧ ಸುರಕ್ಷಾ ಸವಾಲುಗಳನ್ನು ಎದುರಿಸುವುದಕ್ಕೆ ಸಹಕಾರ ಹೆಚ್ಚಿಸುವ ಕುರಿತು ಚರ್ಚೆ ನಡೆಯಿತು.