ಹಿಂದೂದ್ವೇಷಿ ಝಾಕಿರ್ ನಾಯಿಕನಿಂದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ ಷರೀಫ ಅವರ ಭೇಟಿ!

ಇಸ್ಲಾಮಾಬಾದ (ಪಾಕಿಸ್ತಾನ) – ಹಿಂದೂದ್ವೇಷಿ ಇಸ್ಲಾಮಿ ಧರ್ಮೋಪದೇಶಕ ಝಾಕಿರ್ ನಾಯಿಕ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಮಗಳು ಮತ್ತು ಪಂಜಾಬ್ ಮುಖ್ಯಮಂತ್ರಿ ಮರಿಯಮ್ ನವಾಜ್ ಅವರನ್ನು ರಾಯ್ವಿಂಡ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂದು ವರದಿಯಾಗಿದೆ. ಕಳೆದ ವಾರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮಹಮ್ಮದ್ ಹಫೀಜ್ ಕೂಡ ಜಾಕಿರ್ ನಾಯಿಕ ಅವನನ್ನು ಭೇಟಿ ಮಾಡಿದ್ದರು. ಹಿಂದೂದ್ವೇಷಿ ಝಾಕಿರ್ ನಾಯಿಕ ಅವನ ಈ ಭೇಟಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪಾಕಿಸ್ತಾನದ ಕ್ರಿಕೆಟಿಗ ಮಹಮ್ಮದ್ ಹಫೀಜ್ ಮೇಲೆ ಟೀಕೆ!

ಪಾಕಿಸ್ತಾನದ ಕ್ರಿಕೆಟಿಗ ಮಹಮ್ಮದ್ ಹಫೀಜ್ ಝಾಕಿರ್ ನಾಯಿಕ ಅವನೊಂದಿಗಿನ ಭೇಟಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ‘ಜಾಕಿರ್ ನಾಯಿಕ ಅವರೊಂದಿಗಿನ ಆನಂದದಾಯಕ ಭೇಟಿ’ ಎಂದು ಬರೆದಿದ್ದಾರೆ. ಮಹಮ್ಮದ್ ಹಫೀಜ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, ‘ಭಾರತೀಯ ಕ್ರಿಕೆಟ್ ತಂಡ ಮತ್ತು ಭಾರತ ಸರಕಾರ ಪಾಕಿಸ್ತಾನಕ್ಕೆ ಬರಲು ಬಯಸದಿರಲು ಇದೇ ಕಾರಣ’ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ನೀವು ಭಯೋತ್ಪಾದಕನನ್ನು ಸ್ವಾಗತಿಸಿದಾಗ ಭಾರತ ಪಾಕಿಸ್ತಾನದಲ್ಲಿ ಆಡುತ್ತದೆಯೇ?’ ಎಂದು ಬರೆದಿದ್ದಾರೆ.

ಝಾಕಿರ್ ನಾಯಿಕ ಭಾರತಕ್ಕೆ ಬೇಕಾಗಿದ್ದಾನೆ. ಆತನ ಮೇಲೆ ಹಣದ ಹಗರಣ (ಮನಿ ಲಾಂಡರಿಂಗ್), ಕಟ್ಟರವಾದವನ್ನು ಪ್ರೋತ್ಸಾಹಿಸುವುದು, ಹಿಂದೂ ದೇವರುಗಳನ್ನು ಅತ್ಯಂತ ಕೆಳಮಟ್ಟಕ್ಕೆ ಅವಮಾನಿಸುವುದು ಮುಂತಾದ ಅತ್ಯಂತ ಗಂಭೀರ ಆರೋಪಗಳಿವೆ. ಅವನ ವಿಷಕಾರಿ ಜಿಹಾದಿ ಪ್ರಚಾರದಿಂದ ಪ್ರೇರಿತರಾಗಿ ಅನೇಕರು ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ್ದಾರೆ. ಜಾಕಿರ್ ನಾಯಿಕ ಕಳೆದ ವರ್ಷ ಅಕ್ಟೋಬರ್ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವನನ್ನು ಭೇಟಿ ಮಾಡಿದ್ದನು.

ಸಂಪಾದಕೀಯ ನಿಲುವು

‘ಹಿಂದೂದ್ವೇಷ’ ಆಧಾರವಾಗಿರುವ ಪಾಕಿಸ್ತಾನದಲ್ಲಿ ಝಾಕಿರ್ ನಾಯಿಕನಂತಹ ಭಯೋತ್ಪಾದಕನ ಸ್ವಾಗತವಾಗುವುದರಲ್ಲಿ ಆಶ್ಚರ್ಯವೇನಿದೆ?