ಮಹಾರಾಷ್ಟ್ರದಲ್ಲಿ ಔರಂಗಜೇಬನ ಗೋರಿಯ ವೈಭವೀಕರಣ ಆಗಲು ಬಿಡುವುದಿಲ್ಲ ! – ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್

  • ಭಿವಂಡಿಯಲ್ಲಿ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮಂದಿರ (ಶಕ್ತಿಪೀಠ) ಪರಿಸರ’ದ ಲೋಕಾರ್ಪಣೆ

  • ಛತ್ರಪತಿ ಶಿವಾಜಿ ಮಹಾರಾಜರ ಮಂದಿರ ಇದು ರಾಷ್ಟ್ರ ಮಂದಿರ ಇರುವುದೆಂಬ ಹೇಳಿಕೆ

ಭೀವಂಡಿ (ಠಾಣೆ ಜಿಲ್ಲೆ) – ಏನೇ ಆದರು ಮಹಾರಾಷ್ಟ್ರದಲ್ಲಿನ ಔರಂಗಜೇಬನ ಗೋರಿಯ ವೈಭವೀಕರಣ ಮತ್ತು ಸ್ತುತಿ ಆಗಲು ಬಿಡುವುದಿಲ್ಲ. ಹಾಗೆ ಯಾರಾದರೂ ಮಾಡುವ ಪ್ರಯತ್ನ ಮಾಡಿದರೆ ಆ ಪ್ರಯತ್ನ ಅಲ್ಲಿಯೇ ಹೊಸಕಿ ಹಾಕುವ ಕೆಲಸ ಮಾಡುವೆವು, ಎಂದು ಮಾತು ಕೊಡುತ್ತೇನೆ, ಹೀಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇವರು ಮಾರ್ಚ್ ೧೭ ರಂದು ಹೇಳಿದರು. ಭೀಮಂಡಿಯಲ್ಲಿ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮಂದಿರ (ಶಕ್ತಿಪೀಠ) ಪರಿಸರ’ದ ಲೋಕಾರ್ಪಣೆಯ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಮಾಜಿ ಕೇಂದ್ರ ರಾಜ್ಯ ಸಚಿವ ಕಪಿಲ್ ಪಾಟಿಲ್, ಶಾಸಕ ಕಿಸಾನ್ ಕಥೋರೆ ಸಹಿತ ಇತರ ಗಣ್ಯರು ಉಪಸ್ಥಿತರಿದ್ದರು. ಈ ದೇವಸ್ಥಾನದ ಪರಿಸರಕ್ಕೆ ತೀರ್ಥ ಸ್ಥಳದ ಸ್ಥಾನಮಾನ ನೀಡಲಾಗುವುದೆಂದು ಕೂಡ ಮುಖ್ಯಮಂತ್ರಿಗಳು ಹೇಳಿದರು.