೧. ಎಲ್ಲವೂ ಭಗವಂತನ ಇಚ್ಛೆಯಂತೆ ನಡೆಯುವುದರಿಂದ ‘ಮಗನು ಸಾಧನೆ ಮಾಡಬೇಕು’, ಎಂಬ ಸ್ವೇಚ್ಛೆಯೂ ಬೇಡ !
ಸಾಧಕ : ಮೊದಲು ಸಾಧನೆಯನ್ನು ಮಾಡುತ್ತಿದ್ದÀ ನನ್ನ ಮಗನು ಈಗ ಸಾಧನೆಯನ್ನು ಮಾಡುವುದಿಲ್ಲ. ಅವನಿಗೆ ಆಶ್ರಮಕ್ಕೆ ಬರಲು ಮನಸ್ಸಿಲ್ಲ. ಇದರಿಂದ ನನ್ನ ಮನಸ್ಸಿಗೆ ನೋವಾಗುತ್ತದೆ. ತಾವು ನನಗೆ ಈ ತೊಂದರೆಯನ್ನು ಸಹಿಸಲು ಶಕ್ತಿ ನೀಡಬೇಕು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ಪ್ರತಿಯೊಬ್ಬರ ಪ್ರಾರಬ್ಧ ಮತ್ತು ತಳಮಳ ಎಷ್ಟಿದೆ’, ಎಂಬುದರ ಮೇಲೆ ಅವರ ಸಾಧನೆ ಅವಲಂಬಿಸಿರುತ್ತದೆ. ‘ನನಗೆ ತೊಂದರೆ ಸಹಿಸಲು ಶಕ್ತಿ ನೀಡಿ’, ಎಂಬ ವಿಚಾರ ಮಾಡಬಾರದು; ಏಕೆಂದರೆ ಇದೂ ಸ್ವೇಚ್ಛೆಯಾಗಿದೆ. ಸ್ವೇಚ್ಛೆ ಬೇಡ. ಎಲ್ಲವೂ ಈಶ್ವರೇಚ್ಛೆಯಿಂದ ಆಗುತ್ತದೆ. ಸ್ವೇಚ್ಛೆಯಿಂದ ನಡೆದುಕೊಂಡು ನಮ್ಮ ಶಕ್ತಿಯನ್ನು ಖರ್ಚು ಮಾಡುವುದು ಬೇಡ. ಅದರ ಬದಲು ಸ್ವತಃದ ಸಾಧನೆಯನ್ನು ಮತ್ತು ಶಕ್ತಿಯನ್ನು ಹೆಚ್ಚಿಸಬೇಕು !
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಅಂತರ್ಮನಸ್ಸಿನ ಸಾಧನೆಯನ್ನು ಹೇಗೆ ಹೆಚ್ಚಿಸಬೇಕು ?’, ಈ ಬಗ್ಗೆ ಹೇಳುವುದು
ಸಾಧಕ : ಅಂತರ್ಮನದ ಸಾಧನೆಯನ್ನು ಹೇಗೆ ಹೆಚ್ಚಿಸಬೇಕು ?
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ಸೇವೆಯ ಅಖಂಡ ವಿಚಾರ ಮಾಡುವುದು ಮತ್ತು ಸೇವೆಯ ವಿಚಾರ ಇಲ್ಲದಿರುವಾಗ ನಾಮಜಪ ಮಾಡುವುದು’, ಹೀಗೆ ಮಾಡುವುದರಿಂದ ಅಂತರ್ಮನದ ಸಾಧನೆ ಮುಂದುವರಿಯುತ್ತದೆ.
೩.’ಸಾಧನೆ ಮಾಡಿ ಈಶ್ವರನನ್ನು ಪ್ರಸನ್ನಗೊಳಿಸುವುದು’, ಇದು ವ್ಯಷ್ಟಿ ಸಾಧನೆಯ ಬುನಾದಿಯಾಗಿರುವುದರಿಂದ ಸಾಧಕರೇ, ವ್ಯಷ್ಟಿ ಸಾಧನೆಯನ್ನು ನಿರ್ಲಕ್ಷಿಸಬೇಡಿ !
ಸಾಧಕ : ನಾನು ಸಮಷ್ಟಿ ಸೇವೆಯನ್ನು ಮಾಡುತ್ತೇನೆ; ಆದರೆ ವ್ಯಷ್ಟಿ ಸಾಧನೆಯನ್ನು ಮಾಡುವುದಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ವ್ಯಷ್ಟಿ ಸಾಧನೆಗಿಂತ ಸಮಷ್ಟಿ ಸಾಧನೆಯು ಮಹತ್ವದ್ದಾಗಿದೆ; ಆದರೆ ಸಮಷ್ಟಿ ಸಾಧನೆ ಚೆನ್ನಾಗಿ ಆಗಲು ವ್ಯಷ್ಟಿ ಸಾಧನೆ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ‘ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ’ ಮಾಡಲು ಪ್ರಾಧಾನ್ಯತೆ ನೀಡಬೇಕು. ವ್ಯಷ್ಟಿ ಸಾಧನೆಯ ಮಹತ್ವವನ್ನು ಮನಸ್ಸಿನಲ್ಲಿ ಬಿಂಬಿಸಲು ಸ್ವಯಂಸೂಚನೆಯನ್ನು ಕೊಡಬೇಕು. ಸ್ವಯಂಸೂಚನೆಯನ್ನು ಕೊಡುವುದರಿಂದ ಅಂತರ್ಮನಸ್ಸಿಗೆ ವ್ಯಷ್ಟಿ ಸಾಧನೆಯ ಮಹತ್ವ ಮನವರಿಕೆ ಯಾಗುತ್ತದೆ. ಸಂತರು ವ್ಯಷ್ಟಿ ಸಾಧನೆಯನ್ನು ಮಾಡಿಯೇ ಸಾಧನೆಯಲ್ಲಿ ಮುಂದೆ ಹೋಗಿದ್ದಾರೆ. ‘ಸಾಧನೆಯನ್ನು ಮಾಡಿ ಈಶ್ವರನನ್ನು ಪ್ರಸನ್ನಗೊಳಿಸುವುದು’, ಇದು ವ್ಯಷ್ಟಿ ಸಾಧನೆಯ ಬುನಾದಿಯಾಗಿದೆ. ವ್ಯಷ್ಟಿ ಸಾಧನೆಯನ್ನು ದುರ್ಲಕ್ಷಿಸಿದರೆ ಅದಕ್ಕೆ ನಮಗೆ ನಾವೇ ಶಿಕ್ಷೆಯನ್ನು ತೆಗೆದುಕೊಳ್ಳಬೇಕು. ‘ಸಮಷ್ಟಿ ಸಾಧನೆಯನ್ನು ಮಾಡುತ್ತೇವೆ; ಆದರೆ ಪ್ರಗತಿಯಾಗಲಿಲ್ಲ’, ಹೀಗಾಗಬಾರದು.
– ಶ್ರೀ. ಪ್ರಣವ ಅರುಣ ಮಣೇರಿಕರ (ಆಧ್ಯಾತ್ಮಿಕ ಮಟ್ಟ ಶೇ. ೬೬, ವಯಸ್ಸು ೪೪ ವರ್ಷಗಳು), ಮಥುರಾ ಸೇವಾಕೇಂದ್ರ, ಮಥುರಾ. (೧೪.೯.೨೦೨೪)