

ಮಂಗಳೂರಿನಲ್ಲಿರುವ ಸನಾತನದ ೧೩೧ ನೇ ಸಂತ ಪೂಜ್ಯ (ಸೌ.) ಶಶಿಕಲಾ ಕಿಣಿ (ವಯಸ್ಸು ೭೮ ವರ್ಷ) ಇವರ ಪತಿ ಶ್ರೀ. ವಿಠಲ ಕಿಣಿ (ವಯಸ್ಸು ೭೯ ವರ್ಷ) ಇವರು ನವಂಬರ ೨ ರಂದು ೬೨% ಆಧ್ಯಾತ್ಮಿಕ ಮಟ್ಟ ತಲುಪಿದರೆಂದು ಪೂಜ್ಯ ರಮಾನಂದ ಗೌಡ ಇವರು ಘೋಷಿಸಿದರು. ಸನಾತನದ ಧರ್ಮಪ್ರಸಾರ ಸೇವಕಿ ಸೌ. ಮಂಜುಳಾ ರಮಾನಂದ ಗೌಡ ಇವರಿಗೆ ಗಮನಕ್ಕೆ ಬಂದ ಅವರ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.
೧. ಪತ್ನಿಗೆ ಸಹಾಯ ಮಾಡುವುದು: ಮಾಮರವರ ಪತ್ನಿ ಪೂಜ್ಯ (ಸೌ.) ಶಶಿಕಲಾ ಕಿಣಿ (ವಯಸ್ಸು ೭೮ ವರ್ಷ) ಅವರಿಗೆ ಆರೋಗ್ಯದ ಸಮಸ್ಯೆ ಹಾಗೂ ವಯೋ ಸಹಜ ಕೆಲವು ಅಡಚಣೆಗಳಿಂದ ಮನೆಕೆಲಸ ಮಾಡಲು ಕಷ್ಟ ಆಗುತ್ತಿದೆ. ಮಾಮರವರು ಅವರಿಗೆ ಸಹಾಯ ಮಾಡುತ್ತಾರೆ.
೨. ಪ್ರೇಮಭಾವ
ಮಾಮಾರವರ ಮನೆಗೆ ಹೋದಾಗ ಅವರು ಸಾಧಕರಿಗಾಗಿ ತಿಂಡಿಯನ್ನು ನೀಡುತ್ತಾರೆ ಹಾಗೂ ಸಾಧಕರಿಗಾಗಿ ಮತ್ತು ಸೇವಾಕೇಂದ್ರದಲ್ಲಿರುವ ಸಾಧಕರಿಗಾಗಿ ಮನೆಯಲ್ಲಿ ಹಬ್ಬದಂದು ತಯಾರಿಸಿದ ತಿಂಡಿಗಳನ್ನು ಸಹ ಕಳಿಸುತ್ತಾರೆ
೩. ಬಾಲ್ಯದಿಂದ ಮಾಡಿದ ಸಾಧನೆ
ಮಾಮನವರ ಜನ್ಮವು ಮುಲ್ಕಿಯ ವೆಂಕಟರಮಣ ದೇವಸ್ಥಾನದ ವ್ಯಾಪ್ತಿಯಲ್ಲಿನ ಅಜ್ಜಿ ಮನೆಯಲ್ಲಿ ಆಗಿತ್ತು. ಅಲ್ಲಿ ಸತತ ನರಸಿಂಹ ದೇವರದ್ದೇ ಸ್ಮರಣೆ ಮಾಡುತ್ತಿದ್ದರು. ಎಷ್ಟೇ ಕಷ್ಟದ ಪರಿಸ್ಥಿತಿ ಇದ್ದರೂ ನರಸಿಂಹ ದೇವರು ಜೊತೆಗಿದ್ದಾರೆ ಎಂಬ ಶ್ರದ್ಧೆ ಅವರಲ್ಲಿದೆ. ಅವರಿಗೆ ಸುಮಾರು ೧೮-೧೯ ವಯಸ್ಸಿನ ತನಕ ನಿರಂತರ ಪ್ರಾಣಾಯಾಮದ ಜೊತೆಗೆ ಗಣಪತಿ ಜಪ ಮಾಡುತ್ತಿದ್ದರು. ನಂತರ ಲಲಿತಸಹಸ್ರನಾಮವನ್ನು ೪೦ ವರ್ಷಗಳ ಕಾಲ ಓದುತ್ತಿದ್ದರು. ಈಗ ನಾಮಜಪಿಸುತ್ತಾರೆ.
೪. ಮಾನಸಪೂಜೆಯ ಮೂಲಕ ಸ್ತೋತ್ರ ಪಠಣ
ಮಾಮರವರು ಪ್ರತೀದಿನ ತ್ರೀಶಾಸ್ತೀ ದೇವಿ ಸ್ತ್ರೋತ್ರ ಓದುತ್ತಾರೆ. ಅದನ್ನು ಮಾನಸಪೂಜೆ ರೂಪದಲ್ಲಿ ಮಾಡುತ್ತಾರೆ. ಒಂದೊಂದು ಬೀಜಮಂತ್ರ ಹೇಳುವಾಗ ತಿರುಪತಿ ವೆಂಕಟ್ರಮಣ, ಕಾಠ್ಮಂಡು ಶಿವಮಂದಿರ, ಹಾಗೆಯೇ ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಜೇಶ್ವರ, ಹೀಗೆ ಎಲ್ಲಾ ದೇವಸ್ಥಾನಗಳ ಮಾನಸ ದರ್ಶನ ಮಾಡುತ್ತಾರೆ. ನಂತರ ರಾಮ, ಕೃಷ್ಣ, ಮಾರುತಿ, ಗಣಪತಿ, ಮುಲ್ಕಿ ಶ್ರೀ ನರಸಿಂಹ ಸ್ವಾಮಿ, ನವದುರ್ಗೆಯರು, ಕುಲದೇವರನ್ನು ಆಹ್ವಾನಿಸಿ ಅವರಿಗೆ ಶಕ್ತಿಪೀಠದ ತೀರ್ಥದಿಂದ ಅಭಿಷೇಕ. ಗಂಗಾಭಿಷೇಕ ಮಾಡಿ. ದೇವತೆಗಳಿಗೆ ನೈವೇದ್ಯ ಅರ್ಪಿಸಿ ಆನಂದ ಪಡೆಯುತ್ತಾರೆ.
೫. ಸಂತರ ಬಗ್ಗೆ ಭಾವ
ಒಮ್ಮೆ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಂತರು) ಅಣ್ಣನವರು ಅವರನ್ನು ಭೇಟಿ ಮಾಡಲು ಬರುತ್ತೇನೆ ಎಂದು ಹೇಳಿದ್ದರು. ಆ ದಿನ ಮಾಮನವರು ಸಂತರು ಬರುತ್ತಾರೆಂದು ಕಾದು ಕುಳಿತಿದ್ದರು. ಸಂತರ ಜೊತೆ ಮಾತಾಡುತ್ತಾ ಸಂತತ್ವ ಎಂದರೆ ತುಂಬಾ ದೊಡ್ಡ ಹಂತ. ನೀವು ಅದನ್ನು ಪ್ರಾಪ್ತ ಮಾಡಿಕೊಂಡಿರಿ ಅಣ್ಣ ಅಂತ ಹೇಳಿ ಕೈಮುಗಿದರು. ಆಗ ಅವರಿಗೆ ಭಾವಜಾಗೃತಿ ಆಯಿತು.
– ಸೌ. ಮಂಜುಳಾ ಗೌಡ. ಮಂಗಳೂರು, ಕರ್ನಾಟಕ ೭.೫.೨೦೨೪
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು