೧. ಹಿಂದೂಗಳ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಸ್ವಾಮಿ ದಯಾನಂದ ಸರಸ್ವತಿ ಇವರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

‘ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ಮತ್ತು ಆಂಧ್ರಪ್ರದೇಶ ಈ ರಾಜ್ಯಗಳಲ್ಲಿ ಹಿಂದೂಗಳ ೧ ಲಕ್ಷಕ್ಕಿಂತಲೂ ಹೆಚ್ಚು ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿವೆ. ಅವು ಗಳನ್ನು ತಕ್ಷಣ ಮುಕ್ತಗೊಳಿಸ ಬೇಕೆಂದು ದಿ. ಸ್ವಾಮಿ ದಯಾನಂದ ಸರಸ್ವತಿ ಇವರು (ಅವರು ೨೦೧೫ ರಲ್ಲಿ ದೇಹತ್ಯಾಗ ಮಾಡಿದರು) ೨೦೧೨ ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ಸಲ್ಲಿಸಿದ್ದರು. ‘ಈ ವಿಷಯಕ್ಕೆ ಉಚ್ಚ ನ್ಯಾಯಾಲಯಗಳು ಯೋಗ್ಯ ರೀತಿಯಲ್ಲಿ ನಿರ್ಣಯ ನೀಡಬಹುದು’, ಆದ್ದರಿಂದ ಇವೆಲ್ಲ ಪ್ರಕರಣಗಳನ್ನು ಈ ಮೇಲಿನ ರಾಜ್ಯಗಳ ಉಚ್ಚ ನ್ಯಾಯಾಲಯಗಳಿಗೆ ವರ್ಗಾಯಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಆದೇಶ ನೀಡಿ ದಿ.ಸ್ವಾಮೀಜಿಯವರ ಖಟ್ಲೆಗೆ ನಿರ್ಣಯ ನೀಡಿತು.

೨. ಕೇವಲ ಪ್ರಕರಣಗಳನ್ನು ಉಚ್ಚ ನ್ಯಾಯಾಲಯಗಳಿಗೆ ವರ್ಗಾವಣೆ ಮಾಡಬೇಕು ಎಂದು ಹೇಳಲು ಸರ್ವೋಚ್ಚ ನ್ಯಾಯಾಲಯ ೧೩ ವರ್ಷಗಳಷ್ಟು ಕಾಲಹರಣ ಮಾಡಿರುವುದು ಯೋಗ್ಯವಾಗಿದೆಯೇ ?
ಏಕೆಂದರೆ, ೪ ವಿವಿಧ ರಾಜ್ಯಗಳು ವಿವಿಧ ಪ್ರಕಾರದ ಕಾನೂನುಗಳನ್ನು ಮಾಡಿ ಅಲ್ಲಿನ ದೇವಸ್ಥಾನಗಳನ್ನು ಸರಕಾರಗಳು ವಶಪಡಿಸಿಕೊಂಡಿವೆ. ಸರ್ವೋಚ್ಚ ನ್ಯಾಯಾಲಯದ ನಿರ್ಣಯವು ಭಾರತದಾದ್ಯಂತದ ಪ್ರತಿಯೊಂದು ರಾಜ್ಯ ಸರಕಾರ, ಸ್ಥಳೀಯ ಸ್ವರಾಜ್ಯ ಸಂಸ್ಥೆಗಳು ಮತ್ತು ಎಲ್ಲ ಭಾರತೀಯ ನಾಗರಿಕರಿಗೆ ಅನ್ವಯವಾಗು ತ್ತದೆ. ಇದರಲ್ಲಿ ಸ್ವಾಮೀಜಿಯವರಿಗೆ ಆಗುವ ಅಡಚಣೆಯನ್ನು ಸರ್ವೋಚ್ಚ ನ್ಯಾಯಾಲಯ ಅರ್ಥ ಮಾಡಿಕೊಂಡಿಲ್ಲ, ಎಂಬುದನ್ನು ದುಃಖದಿಂದ ಹೇಳಬೇಕಾಗುತ್ತದೆ. ವಿವಿಧ ೪ ಉಚ್ಚ ನ್ಯಾಯಾಲಯ ಗಳಲ್ಲಿ ಅರ್ಜಿಯನ್ನು ದಾಖಲಿಸಬೇಕಾಗುತ್ತದೆ ಹಾಗೂ ಅವುಗಳಲ್ಲಿ ಭಿನ್ನ ಭಿನ್ನ ಪ್ರಕಾರದ ನಿರ್ಣಯಗಳು ಬಂದಾಗ ಪುನಃ ಸರ್ವೋಚ್ಚ ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ, ಪ್ರಕರಣಗಳನ್ನು ಪುನಃ ಉಚ್ಚ ನ್ಯಾಯಾಲಯಗಳಲ್ಲಿ ದಾಖಲಿಸಲು ಹೇಳುವುದಾದರೆ ಅದಕ್ಕೆ ೧೩ ವರ್ಷಗಳಷ್ಟು ಸಮಯ ಏಕೆ ಬೇಕಾಯಿತು ?, ಎನ್ನುವ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸಬಹುದು.
೩. ಸರ್ವೋಚ್ಚ ನ್ಯಾಯಾಲಯದಲ್ಲಿ ಹಿಂದೂಗಳ ಭಾವನೆಗೆ ಬೆಲೆಯಿಲ್ಲವೆ ?
ರಾಜ್ಯ ಸರಕಾರದ ದೇಣಿಗೆ ಕಾನೂನು ಸಂವಿಧಾನಾತ್ಮಕವಾಗಿಲ್ಲ ಹಾಗೂ ದೇವಸ್ಥಾನಗಳ ವ್ಯವಸ್ಥಾಪನೆಯಲ್ಲಿ ರಾಜ್ಯಗಳ ಅತೀ ಹೆಚ್ಚು ಹಸ್ತಕ್ಷೇಪವಿದೆ. ಮೇಲಿನ ಈ ಕಾನೂನುಗಳನ್ನು ಅನ್ಯಾಯಕರ ಹಾಗೂ ಭೇದಭಾವದಿಂದ ಮಾಡಲಾಗಿದೆ. ಆದ್ದರಿಂದ ಈ ಕಾನೂನುಗಳಿಗೆ ಸವಾಲೊಡ್ಡುವುದು ಯೋಗ್ಯವಾಗಿತ್ತು. ಈ ಹಿಂದೆ ಸರ್ವೋಚ್ಚ ನ್ಯಾಯಾಲಯ ಅನೇಕ ಖಟ್ಲೆಗಳನ್ನು ನೇರವಾಗಿ ಸ್ವೀಕರಿಸಿದೆ. ತೀರಾ ದ್ವೇಷಯುಕ್ತ ಹೇಳಿಕೆಗಳ, ಉತ್ತರಪ್ರದೇಶದ ಅಖ್ಲಾಕನ ಕಾಲ್ಪನಿಕ ಸಾವು (ಹಿಂಸಾತ್ಮಕ ಗುಂಪುಗಳಿಂದ ಮಾಡಿದ), ಮತಾಂಧರು ಸರಕಾರದ ಭೂಮಿಯ ಮೇಲೆ ಮಾಡಿರುವ ಅತಿಕ್ರಮಣವನ್ನು ತೆರವುಗೊಳಿಸುವ ಪ್ರಕರಣಗಳು ಇಂತಹ ವಿವಿಧ ವಿಷಯಗಳ ಖಟ್ಲೆಗಳನ್ನು ನೇರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಆಲಿಸಲಾಗಿದೆ. ಹಾಗಾದರೆ ಹಿಂದೂ ಭಕ್ತರ ಭಾವನೆಯ ಹೊಣೆ ಸರ್ವೋಚ್ಚ ನ್ಯಾಯಾಲಯದ್ದಲ್ಲವೆ ? ‘ಕೇವಲ ನ್ಯಾಯ ನೀಡಿದರೆ ಸಾಲದು, ಆ ನ್ಯಾಯವು ನ್ಯಾಯ ನೀಡಿದ ಹಾಗಿರಬೇಕು’, ಎಂಬ ಹೇಳಿಕೆಯಂತೆ ಸ್ವಾಮೀಜಿಯವರು ದಾಖಲಿಸಿದ ಅರ್ಜಿಯನ್ನು ನೋಡುವ ಅವಶ್ಯಕತೆಯಿತ್ತು.
೪. ಅರ್ಜಿದಾರರ ಪ್ರಾಮಾಣಿಕ ಪಾತ್ರ
ಅರ್ಜಿದಾರರ ನ್ಯಾಯವಾದಿಗಳು ಯುಕ್ತಿವಾದವನ್ನು ಮಾಡಿದರು, ದೇಶ ಅಥವಾ ರಾಜ್ಯ ಸ್ತರದಲ್ಲಿನ ಸಂಪೂರ್ಣ ಅರ್ಥವ್ಯವಸ್ಥೆಯು ದೇವಸ್ಥಾನಗಳಿಗೆ ಸಂಬಂಧಿಸಿರುತ್ತದೆ. ಇತ್ತೀಚಿನ ಉದಾಹರಣೆಯೆಂದರೆ, ಪ್ರಯಾಗರಾಜದಲ್ಲಿನ ಮಹಾಕುಂಭಮೇಳದಿಂದ ಉತ್ತರಪ್ರದೇಶ ಸರಕಾರಕ್ಕೆ ಸುಮಾರು ೩ ಲಕ್ಷ ಕೋಟಿ ರೂಪಾಯಿಗಳ ಉತ್ಪನ್ನ ಸಿಕ್ಕಿತು. ‘ವ್ಯವಸ್ಥಾಪನೆಯಲ್ಲಿ ಅವ್ಯವಹಾರವಾಗುತ್ತದೆ ಎಂದು ಸೋಗು ಹಾಕುತ್ತಾ ಹಿಂದೂಗಳ ದೇವಸ್ಥಾನಗಳನ್ನು ಸರಕಾರ ಶಾಶ್ವತವಾಗಿ ವಶದಲ್ಲಿಟ್ಟುಕೊಳ್ಳುವ ಹಾಗಿಲ್ಲ. ಸ್ವಲ್ಪ ಅವಧಿಯ ನಂತರ ಅವುಗಳನ್ನು ಭಕ್ತರಿಗೆ ಹಿಂತಿರುಗಿಸಬೇಕಾಗುತ್ತದೆ’, ಎಂದು ತಮಿಳುನಾಡಿನ ಚಿದಂಬರಮ್ ದೇವಸ್ಥಾನ ಅಥವಾ ನಟರಾಜ ದೇವಸ್ಥಾನದ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಯುಕ್ತಿವಾದದ ಸಮಯದಲ್ಲಿ ಕೇಂದ್ರ ಸರಕಾರದ ಹೆಚ್ಚುವರಿ ಮುಖ್ಯ ಕಾನೂನು ಸಲಹೆಗಾರ ತುಷಾರ ಮೆಹತಾ ಹೇಳಿದರು, ”ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿರಬಾರದು. ಆಡಳಿತದಲ್ಲಿ ಧರ್ಮದ ಸಂಬಂಧವಿಲ್ಲ ವೆಂದಾದರೆ, ಆಡಳಿತಕ್ಕೂ ಧರ್ಮದಲ್ಲಿ ಏನೂ ಸಂಬಂಧವಿರಬಾರದು. ಆದ್ದರಿಂದ ದೇವಸ್ಥಾನಗಳು ಸರಕಾರದ ಅಂಗಗಳಲ್ಲ. ದೇವಸ್ಥಾನಗಳ ನಿಧಿ ಅಧಾರ್ಮಿಕ ಕಾರ್ಯಕ್ಕಾಗಿ ಉಪಯೋಗಿಸಲಾಗುತ್ತಿದೆ, ಎಂದು ಅರ್ಜಿದಾರರು ಹೇಳುವುದು ಯೋಗ್ಯವಾಗಿದೆ.’’ ಈ ಅರ್ಜಿಯನ್ನು ತಮಿಳುನಾಡು, ತೆಲಂಗಾಣ, ಪಾಂಡಿಚೇರಿ ಮತ್ತು ಆಂಧ್ರಪ್ರದೇಶ ಈ ರಾಜ್ಯಗಳು ದೊಡ್ಡ ಪ್ರಮಾಣದಲ್ಲಿ ವಿರೋಧಿಸಿದವು. ಅವರು, ಕೆಲವು ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಸರಕಾರ ೧೦೦ ಕೋಟಿ ರೂಪಾಯಿ ಗಳಷ್ಟು ಖರ್ಚು ಮಾಡಿದೆ. ಹೀಗಿರುವಾಗ ದೇವಸ್ಥಾನಗಳನ್ನು ಪುನಃ ಭಕ್ತರಿಗೆ ಒಪ್ಪಿಸುವುದು ಅಯೋಗ್ಯವೆನಿಸುತ್ತದೆ. ಅರ್ಜಿದಾರರ ನ್ಯಾಯವಾದಿಗಳು ಹೇಳಿರುವುದೇನೆಂದರೆ, ದೇವಸ್ಥಾನಗಳಿಂದ ಸಿಗುವ ಅರ್ಪಣೆ, ಚಿನ್ನ-ಬೆಳ್ಳಿ ಇನ್ನಿತರ ಬೆಲೆ ಬಾಳುವ ಆಭರಣ ಗಳನ್ನು ಸರಕಾರ ಕರಗಿಸಿದೆ, ಅದೇ ರೀತಿ ದೇವಸ್ಥಾನಗಳಿಂದ ಬರುವ ಹಣವನ್ನು ಅಧಾರ್ಮಿಕ ಕಾರ್ಯಕ್ಕಾಗಿ ಉಪಯೋಗಿಸ ಲಾಗುತ್ತಿದೆ. ಆಗ ಸರ್ವೋಚ್ಚ ನ್ಯಾಯಾಲಯ ಕೆಲವೇ ದಶಕಗಳ ಹಿಂದೆ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಧಾರ್ಮಿಕ ವ್ಯವಸ್ಥೆಯು ದೇವಸ್ಥಾನಗಳ ಆಧಾರದಲ್ಲಿಯೆ ನಡೆಯುತ್ತಿತ್ತು, ಎಂದು ಒಪ್ಪಿಕೊಂಡಿತು. ಆದ್ದರಿಂದ ಈ ವಿಷಯವನ್ನು ಪರಿಶೀಲಿಸಲು ಉಚ್ಚ ನ್ಯಾಯಾಲಯಗಳು ಸಕ್ಷಮವಾಗಿವೆ. ಇಂದು ಕೂಡ ದೇವಸ್ಥಾನಗಳು ಮಹತ್ವದ ಪಾತ್ರವನ್ನು ವಹಿಸುತ್ತಿವೆ, ಎಂದು ಕೂಡ ಸರ್ವೋಚ್ಚ ನ್ಯಾಯಾಲಯ ಹೇಳಿತು.
೫. ಹಿಂದೂಗಳಿಗೆ ನ್ಯಾಯ ಸಿಗಬೇಕಾದರೆ, ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಆವಶ್ಯಕ !
ಈಗ ಪುನಃ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿನ ಅರ್ಜಿಗಳ ಮುಂದೂಡುವಿಕೆಯನ್ನು ಹಿಂದೂಗಳು ಸಹಿಸಿಕೊಳ್ಳಬೇಕಾಗು ವುದು. ‘ದೇವಸ್ಥಾನಗಳನ್ನು ಸರಕಾರ ನಿಯಂತ್ರಿಸಬಾರದು’, ಎಂದು ಕೇಂದ್ರ ಸರಕಾರದ ದೊಡ್ಡ ಹುದ್ದೆಯಲ್ಲಿರುವ ಸರಕಾರಿ ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳುತ್ತಾರೆ. ಆದ್ದರಿಂದ ಅವರ ವಿಚಾರವನ್ನು ಯೋಗ್ಯವೆಂದು ತಿಳಿದು ಯಾವ ರಾಜ್ಯಗಳಲ್ಲಿ ಭಾಜಪದ ಆಡಳಿತ ಅಥವಾ ಮಿತ್ರಪಕ್ಷಗಳೊಂದಿಗೆ ಅಧಿಕಾರದಲ್ಲಿದೆಯೊ, ಅಲ್ಲಿನ ದೇವಸ್ಥಾನಗಳನ್ನು ತಕ್ಷಣ ಭಕ್ತರ ವಶಕ್ಕೊಪ್ಪಿಸುವ ಅವಶ್ಯಕತೆಯಿದೆ. ಆದರೆ ಸದ್ಯ ಪರಿಸ್ಥಿತಿಯಂತೂ ಹಾಗೆ ಕಾಣಿಸುವುದಿಲ್ಲ. ಆದ್ದರಿಂದ ಹಿಂದೂಗಳ ಪ್ರತಿಯೊಂದು ನ್ಯಾಯಾಂಗ ಬೇಡಿಕೆಗಾಗಿ ಪ್ರಖರ ಹಿಂದೂ ಸಂಘಟನೆ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆ ಅನಿವಾರ್ಯವಾಗಿದೆ.’ (೧೧.೪.೨೦೨೫)
ಶ್ರೀಕೃಷ್ಣಾರ್ಪಣಮಸ್ತು |
– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !