
ಒಮ್ಮೆ ರಾಜ ವಿಶ್ವಾಮಿತ್ರನು ಮಹರ್ಷಿ ವಸಿಷ್ಠರ ಆಶ್ರಮಕ್ಕೆ ಭೇಟಿ ನೀಡಿದಾಗ, ಅಲ್ಲಿನ ದಿವ್ಯ ಹಸುವಾದ ಕಾಮಧೇನು (ಶಬಲೆ) ತನ್ನ ಸೈನ್ಯಕ್ಕೆ ಅದ್ಭುತ ಆತಿಥ್ಯ ನೀಡಿದ್ದನ್ನು ಕಂಡು ಅದನ್ನು ತನಗೆ ಕೊಡುವಂತೆ ಹಠ ಹಿಡಿದನು. ವಸಿಷ್ಠರು ನಿರಾಕರಿಸಿದಾಗ, ವಿಶ್ವಾಮಿತ್ರನು ಬಲವಂತವಾಗಿ ಶಬಲೆಯನ್ನು ಕರೆದೊಯ್ಯಲು ಯತ್ನಿಸಿದನು. ಇದರಿಂದ ಕೋಪಗೊಂಡ ಕಾಮಧೇನುವು ತನ್ನ ಶಕ್ತಿಯಿಂದ ಸೈನಿಕರನ್ನು ಸೃಷ್ಟಿಸಿ ವಿಶ್ವಾಮಿತ್ರನ ಇಡೀ ಸೈನ್ಯ ಮತ್ತು ನೂರು ಜನ ಪುತ್ರರನ್ನು ನಾಶಪಡಿಸಿತು. ಇದರಿಂದ ಅಹಂಕಾರ ಮುರಿದುಬಿದ್ದ ವಿಶ್ವಾಮಿತ್ರನು, ಕ್ಷಾತ್ರಬಲಕ್ಕಿಂತ ತಪೋಬಲವೇ ಶ್ರೇಷ್ಠವೆಂದು ಅರಿತು ಶಿವನಿಂದ ದಿವ್ಯಅಸ್ತ್ರಗಳನ್ನು ಪಡೆದು ಮತ್ತೆ ವಸಿಷ್ಠರ ಮೇಲೆ ಯುದ್ಧ ಸಾರಿದನು. ಆದರೆ ವಸಿಷ್ಠರ ಬ್ರಹ್ಮದಂಡದ ಮುಂದೆ ಅವನ ಎಲ್ಲಾ ಅಸ್ತ್ರಗಳು ವಿಫಲವಾಗಿ ಸೋಲೊಪ್ಪಿಕೊಂಡನು.
ತದನಂತರ ವಿಶ್ವಾಮಿತ್ರನು ಅಹಂಕಾರ, ಕಾಮ, ಮೋಹ ಮತ್ತು ಕ್ರೋಧಗಳನ್ನು ಗೆಲ್ಲಲು ಸಾವಿರಾರು ವರ್ಷಗಳ ಕಾಲ ಹಂತ-ಹಂತವಾಗಿ ಅತಿ ಕಠಿಣವಾದ ಘೋರ ತಪಸ್ಸನ್ನು ಆಚರಿಸಿದನು. ಮೇನಕೆ ಮತ್ತು ರಂಭೆಯರಿಂದ ತಪೋಭಂಗವಾದರೂ ಧೃತಿಗೆಡದೆ, ಆಹಾರ-ನೀರನ್ನು ತ್ಯಜಿಸಿ ಅತ್ಯುನ್ನತ ಸಾಧನೆ ಮಾಡಿದನು. ಅವನ ಈ ಅಪ್ರತಿಮ ತಪಸ್ಸಿಗೆ ಮೆಚ್ಚಿದ ದೇವತೆಗಳು ಅವನಿಗೆ ಬ್ರಹ್ಮರ್ಷಿ ಪದವಿಯನ್ನು ನೀಡಿದರು. ಕೊನೆಗೆ ವಿಶ್ವಾಮಿತ್ರನು ಸಂಪೂರ್ಣವಾಗಿ ಬದಲಾಗಿ ವಸಿಷ್ಠರ ಆಶ್ರಮಕ್ಕೆ ಬಂದು ಅವರ ಪಾದಗಳಿಗೆ ಶರಣಾದಾಗ, ಮಹರ್ಷಿ ವಸಿಷ್ಠರು ಪ್ರೀತಿಯಿಂದ ಅವನನ್ನು ಅಪ್ಪಿಕೊಂಡು ಬ್ರಹ್ಮರ್ಷಿ ಎಂದು ಮನ್ನಣೆ ನೀಡಿದರು. (ಸಂದರ್ಭ: ಭಕ್ತಿಸತ್ಸಂಗ ಕ್ರ. ೨೯೩, ಸನಾತನ ಸಂಸ್ಥೆ)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !