ಸಪ್ತರ್ಷಿಗಳ ನಕ್ಷತ್ರಪುಂಜ !

ಸಪ್ತರ್ಷಿಗಳು ಸೃಷ್ಟಿಯ ಪ್ರತಿಯೊಂದು ಜೀವದ ಪ್ರತಿಯೊಂದು ಕ್ಷಣದ ಸಾಕ್ಷಿದಾರ ರಾಗಿದ್ದಾರೆ. ‘ಪರಮೇಶ್ವರನು ಯಾವ ನಿಯಮಗಳನ್ನು ಹಾಕಿ ಕೊಟ್ಟದ್ದಾನೆ, ಅವುಗಳನ್ನು ಮನುಷ್ಯನು ಪಾಲಿಸುತ್ತಾನೋ ಇಲ್ಲವೋ ? ಎಂಬುದನ್ನು ನೋಡುವವರು ಸಪ್ತರ್ಷಿಗಳೇ ಆಗಿದ್ದಾರೆ, ಒಂದು ದೃಷ್ಟಿಯಲ್ಲಿ ಅವರು ಸಾಕ್ಷಾತ್ ಭಗವಂತನ ಕಣ್ಣುಗಳೇ ಆಗಿದ್ದಾರೆ ! ಭಗವಂತನು ಧ್ರುವ ಬಾಲಕನಂತೆ ಸಪ್ತರ್ಷಿಗಳಿಗೂ ನಕ್ಷತ್ರಪುಂಜದಲ್ಲಿ ಸ್ಥಾನ ನೀಡಿದ್ದಾನೆ. ಆದ್ದರಿಂದ ರಾತ್ರಿಯ ಸಮಯದಲ್ಲಿ ನಮಗೆ ಸಪ್ತರ್ಷಿಗಳ ದರ್ಶನ ಸಿಗುತ್ತದೆ. ರಾತ್ರಿ ನಮಗೆ ೭ ನಕ್ಷತ್ರಗಳ ಒಂದು ಸಮೂಹವೂ ಕಾಣಿಸುತ್ತದೆ. ಇದರ ಆಕಾರವು ಆಕಾಶದಲ್ಲಿ ಗಾಳಿಪಟ ಹಾರುತ್ತಿರುವಂತೆ ಕಾಣಿಸುತ್ತದೆ. ಈ ನಕ್ಷತ್ರಪುಂಜಕ್ಕೆ ‘ಸಪ್ತರ್ಷಿ ತಾರಾಸಮೂಹ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಅತ್ಯಂತ ಮುಂಭಾಗದಲ್ಲಿರುವ ಎರಡು ನಕ್ಷತ್ರಗಳನ್ನು ಜೋಡಿಸುವ ಸರಳ ರೇಖೆಯನ್ನು ಉತ್ತರ ದಿಕ್ಕಿನ ಕಡೆಗೆ ಎಳೆದರೆ, ಅದು ಧ್ರುವ ನಕ್ಷತ್ರವನ್ನು ತಲುಪುತ್ತದೆ. ಧ್ರುವ ನಕ್ಷತ್ರವು ಯಾವಾಗಲೂ ಉತ್ತರ ದಿಕ್ಕಿನಲ್ಲಿ ಇರುತ್ತದೆ. ರಾತ್ರಿಯ ಕತ್ತಲಿನಲ್ಲಿ ದಾರಿ ತಪ್ಪಿದ ಪ್ರಯಾಣಿಕನಿಗೆ ನಾವು ಯಾವ ದಿಕ್ಕಿಗೆ ಹೊರಟಿದ್ದೇವೆ ಎಂದು ಪತ್ತೆ ಹಚ್ಚಲು, ಸಪ್ತರ್ಷಿ ತಾರಾಸಮೂಹದಲ್ಲಿನ ಧ್ರುವ ನಕ್ಷತ್ರವು ತೋರಿಸುತ್ತದೆ. ಅದರಿಂದ ನಮಗೆ ಉತ್ತರ ದಿಕ್ಕು ತಕ್ಷಣವೇ ತಿಳಿಯುತ್ತದೆ. ಅಂದರೆ ಇಲ್ಲೂ ಸಪ್ತರ್ಷಿಗಳು ನಿರ್ದೇಶನ ಮಾಡುತ್ತಾರೆ.