
ವೇದಗಳ ನಿಜವಾದ ಅರ್ಥವು ಸಂತರಿಗೆ ಮಾತ್ರ ತಿಳಿದಿದೆ. ಅವರು ಮಾಡಿದ ಉಪಕಾರ ಎಷ್ಟು ಹೇಳಿದರೂ ಸಾಲದು, ಏಕೆಂದರೆ ಅವರು ಆ ಅರ್ಥವನ್ನು ನಮಗೆ ತಿಳಿಸಿದ್ದಾರೆ. ಆದ್ದರಿಂದ ನಾವು ವೇದಗಳನ್ನು ಓದುವ ಅವಶ್ಯಕತೆ ಇಲ್ಲ. ನಾವು ಕೇವಲ ಸಂತರು ಹೇಳಿದಂತೆ ನಡೆದುಕೊಳ್ಳಬೇಕು. ಅದರಲ್ಲಿ ನಮ್ಮದೇ ಆದ ವಿಷಯಗಳನ್ನು ಸೇರಿಸಬಾರದು. ನೀರು ಹೆಪ್ಪುಗಟ್ಟಿ ಮಂಜುಗಡ್ಡೆ ಆದಾಗ, ಅದರ ಒಳಗೂ ಮತ್ತು ಹೊರಗೂ ಕೇವಲ ನೀರು ಇರುವಂತೆಯೇ, ಯಾರು ಒಳಗೂ ಮತ್ತು ಹೊರಗೂ ಭಗವಂತನ ಪ್ರೀತಿಯಿಂದ ತುಂಬಿರುತ್ತಾರೋ, ಅವರನ್ನು ಸಂತರು ಎಂದು ಕರೆಯಲಾಗುತ್ತದೆ. ಇಂತಹ ಸಂತರು ಕೇವಲ ನಾಮಸ್ಮರಣೆಯಿಂದ ಮಾತ್ರ ಸಂಪರ್ಕಕ್ಕೆ ಬರುತ್ತಾರೆ. ಸದ್ಗುರುಗಳ ಆಜ್ಞೆಯನ್ನು ಪಾಲಿಸುತ್ತಾ ಸಾಧಕನಿಗೆ ನಾಮದ ಆಸಕ್ತಿ ಮೂಡುತ್ತದೆ ಮತ್ತು ನಾಮವನ್ನು ಹೊಟ್ಟೆ ತುಂಬುವಷ್ಟೆ ತೆಗೆದುಕೊಂಡರೆ ಅವನ ಆತ್ಮವು ತೃಪ್ತವಾಗುತ್ತದೆ.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜ
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !