
ಭಗವಾನ ಶ್ರೀರಾಮನೇ ಈ ಭಾರತ ಭೂಮಿಯ ಹೃದಯ ! ನಮ್ಮ ಆರಾಧ್ಯ ದೈವದ ಅಯೋಧ್ಯೆಯಲ್ಲಿ, ಅಂದರೆ ಸಾಕ್ಷಾತ್ ಶ್ರೀರಾಮಜನ್ಮಭೂಮಿ ಮಂದಿರದಲ್ಲಿ ಕಾಣಿಕೆಯ ಕಳ್ಳತನ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರಕಾರವು ರಚಿಸಿದ್ದ ವಿಶೇಷ ತನಿಖಾ ದಳವು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಆ ನಂತರ ತಕ್ಷಣವೇ ಮೊಕದ್ದಮೆ ದಾಖಲಿಸಿ, ಅದರಲ್ಲಿ ಉಲ್ಲೇಖಿಸಲಾದ ೮ ಜನರಲ್ಲಿ ೭ ಜನರನ್ನು ದಸ್ತಗಿರಿ ಮಾಡಲಾಗಿದೆ.
ದೇವದ್ರವ್ಯದ (ದೇವರ ಹಣ) ಕಳ್ಳತನದ ಘಟನೆಯಿಂದ ರಾಮಭಕ್ತರು ವ್ಯಥಿತರಾಗಿದ್ದಾರೆ. ತಾವು ಬೆವರು ಸುರಿಸಿ ಶ್ರಮ ಪಟ್ಟುಗಳಿಸಿದ ಹಣವನ್ನು ದೇವರ ಪಾದಕ್ಕೆ ಅರ್ಪಿಸಿದ ನಂತರ ಅದು ಕಳ್ಳತನವಾಯಿತಲ್ಲ ಎಂಬ ಕಾರಣಕ್ಕಾಗಿ ಅವರು ವ್ಯಥಿತರಾಗಿಲ್ಲ, ಆದರೆ ಅದು ಭಗವಂತನ ಹಣವಾಗಿದೆ ಎಂಬ ಕಾರಣಕ್ಕಾಗಿ. ನಾನು ಗಳಿಸಿದ ಹಣವು ಭಗವಂತನ ಕೃಪೆಯಿಂದ ನನಗೆ ದೊರಕಿದೆ ಮತ್ತು ಅದನ್ನೇ ನಾನು ಅವನ ಪಾದಕ್ಕೆ ಅರ್ಪಿಸಿದ್ದೇನೆ. ಅದು ಕಳ್ಳತನವಾಗಬಾರದು ! ಎಷ್ಟೊಂದು ಉದಾತ್ತ ಆಧ್ಯಾತ್ಮಿಕ ವಿಚಾರಸರಣಿ ಇದು! ಭಕ್ತ-ಭಗವಂತನ ನಡುವಿನ ಈ ಭಕ್ತಿಯ ದಾರವನ್ನು ಈ ಹಗರಣದ ಮೂಲಕ ಕತ್ತರಿಸುವ ಪ್ರಯತ್ನ ನಡೆದಿದೆ. ಸ್ಕಂದ ಪುರಾಣದ ಪ್ರಕಾರ ಮಂದಿರದಲ್ಲಿ ಕಳ್ಳತನ ಮಾಡುವುದು, ಅಂದರೆ ದೇವದ್ರವ್ಯವನ್ನು ಕಳ್ಳತನ ಮಾಡುವುದು ಅಕ್ಷಮ್ಯ ಮಹಾಪಾತಕವಾಗಿದೆ. ಮನುಸ್ಮೃತಿಯಲ್ಲಿ ಉಲ್ಲೇಖಿಸಲಾದ ‘ದೇವಸ್ವಂ ಬ್ರಾಹ್ಮಣಸ್ವಂ ವಾ… ಈ ಶ್ಲೋಕದ ಪ್ರಕಾರ ಯಾವ ಪಾಪಿ ಮನುಷ್ಯನು ಲೋಭದಿಂದ ದೇವತೆಗಳ ಅಥವಾ ಬ್ರಾಹ್ಮಣರ ಸಂಪತ್ತನ್ನು ಕಬಳಿಸುತ್ತಾನೋ, ಅವನು ಪರಲೋಕದಲ್ಲಿ ಗಿಡುಗಗಳ ಎಂಜಲು ಅನ್ನವನ್ನು ತಿನ್ನುತ್ತಾನೆ. ಈ ಪಾಪವು ಮಾನವೀಯ ಮತ್ತು ದೈವೀ ಎರಡೂ ಕಾನೂನುಗಳ ಪ್ರಕಾರ ಕಠಿಣ ಶಿಕ್ಷೆಗೆ ಅರ್ಹವಾಗುತ್ತದೆ. ಈ ದೃಷ್ಟಿಯಿಂದ ಉತ್ತರಪ್ರದೇಶ ಸರಕಾರವು ಮುಂದಿನ ಹೆಜ್ಜೆಗಳನ್ನು ಇಡುತ್ತಿದೆ.

ಚಂಪತ್ ರಾಯ್ ಅವರ ರಾಜೀನಾಮೆ
ಮಂದಿರದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅದರ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಿದ್ದ ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ಮೇಲೆಯೂ ಆರೋಪಗಳು ಬರುತ್ತಿವೆ. ಮೂಲತಃ ರಾಯ್ ಅವರು ಈ ಕಳ್ಳತನದ ನೈತಿಕ ಹೊಣೆಗಾರಿಕೆಯನ್ನು ಹೊತ್ತು ಈ ಹೆಜ್ಜೆ ಇಟ್ಟಿದ್ದಾರೆ, ಇದನ್ನು ಗಮನಿಸಿ ! ಎಷ್ಟು ರಾಜಕೀಯ ನಾಯಕರು, ಆಡಳಿತ ಅಧಿಕಾರಿಗಳು, ಸಂಸ್ಥೆಗಳ ಪದಾಧಿಕಾರಿಗಳು ಭ್ರಷ್ಟಾಚಾರದ ಆರೋಪಗಳು ಬಂದ ತಕ್ಷಣ ಪದತ್ಯಾಗ ಮಾಡುತ್ತಾರೆ ? ಕಾಂಗ್ರೆಸ್ ನಾಯಕರು ಅಂತರ್ಮುಖರಾಗಿ ಇದರ ಬಗ್ಗೆ ಯೋಚಿಸುತ್ತಾರೆಯೇ ?
ರಾಯ್ ಅವರು ತಮ್ಮ ಸಂಪೂರ್ಣ ಜೀವನವನ್ನು ಶ್ರೀರಾಮಜನ್ಮಭೂಮಿ ಆಂದೋಲನಕ್ಕಾಗಿ ನಿಸ್ವಾರ್ಥವಾಗಿ ನೀಡಿದ್ದಾರೆ, ಕ್ಷುದ್ರ ಸ್ವಾರ್ಥಕ್ಕಾಗಿ ಅವರು ಎಂದಿಗೂ ಹೀಗೆ ಮಾಡುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಅವರನ್ನು ಬೆಂಬಲಿಸಿದೆ. ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರೂ ಸಹ ಚಂಪತ್ ರಾಯ್ ಅವರು ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದ್ದಾರೆ ಎಂದು ಹೇಳಿದ್ದಾರೆ. ಎಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣನಿಗೆ ಅಗ್ನಿಪರೀಕ್ಷೆ ನೀಡಬೇಕಾಯಿತೋ, ಅದೇ ಕ್ಷಣ ಇಂದು ರಾಮಭಕ್ತರ ಮುಂದೆ ಬಂದು ನಿಂತಂತಾಗಿದೆ. ಇಂತಹ ಸಮಯದಲ್ಲಿ ಹಿಂದೂಗಳೇ, ಭಗವಂತನ ಆರಾಧನೆಯನ್ನು ಹೆಚ್ಚಿಸಿ ಮತ್ತು ಧರ್ಮದ ಮೇಲೆ ಬಂದ ಈ ಸಂಕಟವನ್ನು ದೂರ ಮಾಡಲು ಸಂಘಟಿತರಾಗಿ !
ಸರಕಾರೀಕರಣ ಏತಕ್ಕೆ ?ಶ್ರೀರಾಮಮಂದಿರದಲ್ಲಿ ನಡೆದ ಈ ಹಗರಣ ಮುಂದಿನ ದಿನಗಳಲ್ಲಿ ಮತ್ತೆ ನಡೆಯದಂತೆ ಮಂದಿರವನ್ನು ಸರಕಾರಿಕರಣ ಮಾಡುವ ಪ್ರಯತ್ನಗಳು ಪ್ರಾರಂಭವಾಗಿವೆ. ಮತ್ತೊಂದೆಡೆ ಸಂವಿಧಾನದ ಕಲಂ ೨೯ ಮತ್ತು ೩೦ ಮಸೀದಿಗಳು ಮತ್ತು ಚರ್ಚ್‌ಗಳಿಗೆ ಅಲ್ಪಸಂಖ್ಯಾತ ಸಾಂಸ್ಥಿಕ ಸ್ವಾಯತ್ತತೆಯ ರಕ್ಷಣೆಯನ್ನು ಒದಗಿಸುತ್ತವೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಶ್ರೀರಾಮಮಂದಿರದ ಕಳ್ಳತನಕ್ಕಿಂತ ಅದರ ಸರಕಾರಿಕರಣ ಮಾಡುವುದು ಅತ್ಯಂತ ದೊಡ್ಡ ಆಘಾತವಾಗಿದೆ ಮತ್ತು ಅದನ್ನು ದೂರ ಮಾಡಲು ಈಗ ಇದೇ ಸಂವಿಧಾನದಲ್ಲಿ ರಾಮರಾಜ್ಯದ ಉಲ್ಲೇಖವಾಗುವುದು ಅಗತ್ಯವಾಗಿದೆ, ಇದನ್ನು ಗಮನದಲ್ಲಿಡಿ ! |
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !