
ಮಹರ್ಷಿ ಭರದ್ವಾಜರು ದೇವತೆಗಳ ಗುರುಗಳಾದ ಬೃಹಸ್ಪತಿಯವರ ಪುತ್ರರು ! ವೈದಿಕ ಋಷಿಗಳಲ್ಲಿ ಮಹರ್ಷಿ ಭರದ್ವಾಜರ ಸ್ಥಾನ ಅತ್ಯಂತ ಉನ್ನತವಾದದ್ದು. ಋಗ್ವೇದ, ಹಾಗೂ ಅಥರ್ವವೇದದಲ್ಲಿಯೂ ಮಹರ್ಷಿ ಭರದ್ವಾಜರು ರಚಿಸಿದ ಮಂತ್ರಗಳಿವೆ. ಚರಕ ಸಂಹಿತೆಯ ಪ್ರಕಾರ, ಮಹರ್ಷಿ ಭರದ್ವಾಜರು ಇಂದ್ರನಿಂದ ಆಯುರ್ವೇದ ಮತ್ತು ವ್ಯಾಕರಣದ ಜ್ಞಾನವನ್ನು ಪಡೆದರು. ಬ್ರಹ್ಮದೇವ, ಬೃಹಸ್ಪತಿ ಮತ್ತು ಇಂದ್ರನ ನಂತರದ ನಾಲ್ಕನೇ ವ್ಯಾಕರಣ ಪ್ರವಚನಕಾರರೆಂದರೆ ಮಹರ್ಷಿ ಭರದ್ವಾಜರು. ಮಹರ್ಷಿ ಭೃಗುವು ಅವರಿಗೆ ಧರ್ಮಶಾಸ್ತ್ರದ ಜ್ಞಾನವನ್ನು ನೀಡಿದರು. ಮಹರ್ಷಿ ಭರದ್ವಾಜರು ವ್ಯಾಕರಣ, ಆಯುರ್ವೇದದ ಜೊತೆಗೆ ಧನುರ್ವೇದ, ರಾಜನೀತಿಶಾಸ್ತ್ರ, ಯಂತ್ರಸರ್ವಸ್ವ, ಅರ್ಥಶಾಸ್ತ್ರ, ಪುರಾಣ ಇತ್ಯಾದಿ ವಿಷಯಾಧಾರಿತ ಅನೇಕ ಗ್ರಂಥಗಳನ್ನು ಬರೆದರು. ಅವರು ಶಿಕ್ಷಣತಜ್ಞ, ರಾಜತಂತ್ರ ಮರ್ಮಜ್ಞ, ಅರ್ಥಶಾಸ್ತ್ರಜ್ಞ, ಶಸ್ತ್ರವಿದ್ಯಾ ವಿಶಾರದ, ಆಯುರ್ವೇದ ವಿಶಾರದ, ಕಾಯ್ದೆ ತಜ್ಞ, ಇಂಜಿನಿಯರಿಂಗ್ ಪರಿಣತ ಮತ್ತು ಮಂತ್ರದ್ರಷ್ಟಾರರಾಗಿದ್ದರು.
ಮಹರ್ಷಿ ಭರದ್ವಾಜ ವಿಮಾನಶಾಸ್ತ್ರದ ಪಿತಾಮಹ !
ವಿಮಾನಶಾಸ್ತ್ರದ ಮುಖ್ಯ ಪಿತಾಮಹ ಮಹರ್ಷಿ ಭರದ್ವಾಜರಾಗಿದ್ದಾರೆ. ಮಹರ್ಷಿ ಭರದ್ವಾಜರು ಅದ್ಭುತ ಪ್ರತಿಭಾಸಂಪನ್ನ ವಿಮಾನಶಾಸ್ತ್ರಜ್ಞರಾಗಿದ್ದರು. ರೈಟ್ ಸಹೋದರರು ವಿಮಾನವನ್ನು ಕಂಡುಹಿಡಿದರು ಎಂದು ಹೇಳಲಾಗುತ್ತದೆ; ಆದರೆ ರೈಟ್ ಸಹೋದರರಿಗಿಂತ ೨ ಸಾವಿರದ ೫೦೦ ವರ್ಷಗಳ ಮೊದಲೇ ಭರದ್ವಾಜ ಋಷಿಗಳು ‘ವಿಮಾನಶಾಸ್ತ್ರ ಗ್ರಂಥವನ್ನು ಬರೆದಿದ್ದರು. ಕೇವಲ ಮನುಷ್ಯರನ್ನು ಸಾಗಿಸುವ ವಿಮಾನಗಳಷ್ಟೇ ಅಲ್ಲ ‘ವಿಮಾನಶಾಸ್ತ್ರದಲ್ಲಿ ಬಾಹ್ಯಾಕಾಶ ನೌಕೆ, ಯುದ್ಧ ಮಾಡುವ ವಿಮಾನಗಳು, ವಿಮಾನವನ್ನು ಅದೃಶ್ಯಗೊಳಿಸುವ ಶಾಸ್ತ್ರ ಮುಂತಾದ ಉಲ್ಲೇಖಗಳನ್ನು ಸಹ ವರ್ಣಿಸಲಾಗಿದೆ.
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !