ಶ್ರೀ. ರಾಹುಲ ದಿವಾಣ ಅವರು ಉದ್ಯಮಿ, ‘ಏಂಜೆಲ್ ಇನ್ವೆಸ್ಟರ್’ (ಹೊಸ ಉದ್ಯಮಿಗಳಿಗೆ ನಿಧಿ ಒದಗಿಸುವವರು), ‘ಓಪನ್-ಸೋರ್ಸ್ ಸಾಫ್ಟ್‌ವೇರ್’ನ ಪ್ರಚಾರಕರು, ‘ಸರಯೂ ಫೌಂಡೇಶನ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್’ ಮತ್ತು ‘ಸೃಜನ್ ಟೆಕ್ನಾಲಜೀಸ್’ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ‘ಸರಯೂ ಫೌಂಡೇಶನ್’ ಒಂದು ‘ಎಂಟರ್‌ಪ್ರೈಸ್ ವೆಬ್ ಕಂಟೆಂಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಮತ್ತು ಡೆವಲಪ್‌ಮೆಂಟ್’ ಸಂಸ್ಥೆಯಾಗಿದ್ದು, ನವದೆಹಲಿ, ಗುರ್‌ಗಾಂವ್, ಗೋವಾ, ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಚೇರಿಗಳನ್ನು ಹೊಂದಿದೆ. ‘ಸೃಜನ್ ಟೆಕ್ನಾಲಜೀಸ್’ ‘ಡ್ರುಪಾಲ್’ ಅನ್ನು ಪ್ರಮುಖ ತಂತ್ರಜ್ಞಾನವಾಗಿ ಬಳಸುತ್ತದೆ (ಡ್ರುಪಾಲ್ ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸಲು ಬಳಸುವ ತೆರೆದ ವೇದಿಕೆಯಾಗಿದೆ) ಮತ್ತು ಆನ್‌ಲೈನ್ ವ್ಯವಹಾರಗಳಿಗಾಗಿ ಉತ್ಪನ್ನಗಳನ್ನು ಸಿದ್ಧಪಡಿಸುತ್ತದೆ. ಶ್ರೀ. ದಿವಾಣ ಅವರು ಲೇಖಕರು, ಬ್ಲಾಗರ್ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. 2016 ರಲ್ಲಿ, ಶ್ರೀ. ದಿವಾಣ ‘ಸಂಗಮ್ ಟಾಕ್ಸ್’ ಎಂಬ YouTube ಚಾನೆಲ್ ಅನ್ನು ಪ್ರಾರಂಭಿಸಿದರು. ಅವರು ತಮ್ಮ ಜೀವನವನ್ನು ಭಾರತೀಯ ಸಾಂಸ್ಕೃತಿಕ ಪುನರುಜ್ಜೀವನದ ಕಾರ್ಯಕ್ಕಾಗಿ ಸಮರ್ಪಿಸಿದ್ದಾರೆ. ಶ್ರೀ. ದಿವಾಣ ಅವರ ಕಾರ್ಯದ ಮಾಹಿತಿ ಇಲ್ಲಿ ನೀಡಲಾಗಿದೆ.

ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು
1. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನದ ಕಾರ್ಯದತ್ತ ಹೇಗೆ ತಿರುಗಿದರು?
‘ಹಿಂದುತ್ವವೇ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯತೆಯೇ ಹಿಂದುತ್ವ’ ಎಂಬುದು ಅವರ ಅಭಿಪ್ರಾಯವಾಗಿದೆ. ಅವರಿಗೆ ಹಿಂದುತ್ವ ಮತ್ತು ರಾಷ್ಟ್ರೀಯತೆಯ ನಡುವೆ ಯಾವುದೇ ಭೇದವಿಲ್ಲ. ಎರಡೂ ಒಂದೇ ನಾಣ್ಯದ ಎರಡು ಮುಖಗಳು.
![]() |
![]() |
2012 ರಲ್ಲಿ, ಅವರು ಶ್ರೀ. ಸಂಜೀವ ಸನ್ಯಾಲ್ ಅವರ ‘ದಿ ಇಂಡಿಯನ್ ರಿನಾಯಸನ್ಸ’ ಮತ್ತು ನಂತರ ಶ್ರೀ. ಮೈಕೆಲ್ ಡ್ಯಾನಿನೋ ಅವರ ‘ದಿ ಲಾಸ್ಟ್ ರಿವರ್: ಆನ್ ದಿ ಟ್ರೈಲ್ ಆಫ್ ದಿ ಸರಸ್ವತಿ’ ಪುಸ್ತಕಗಳನ್ನು ಓದಿದರು. ಈ ಪುಸ್ತಕಗಳನ್ನು ಓದಿದ ನಂತರ, ಪ್ರಾಚೀನ ಕಾಲದಲ್ಲಿ ಭಾರತೀಯ ಸಂಸ್ಕೃತಿ ಮತ್ತು ನಿಜವಾದ ಇತಿಹಾಸ ಎಷ್ಟು ಮಹಾನ್ ಎಂದು ಅವರಿಗೆ ಅರಿವಾಯಿತು. ನಂತರ ಅವರು ಹಂಪಿ, ಕಾಂಬೋಡಿಯಾ ಮತ್ತು ಅಂಕೋರ್ ವಾಟ್‌ಗೆ ಭೇಟಿ ನೀಡಿದರು ಮತ್ತು ಹಿಂದೂ ಸಂಸ್ಕೃತಿಯ ವೈಭವವನ್ನು ನಿಜವಾಗಿ ಅನುಭವಿಸಿದರು.
2. ರಾಹುಲ ದಿವಾಣ ಅವರ ಆಧ್ಯಾತ್ಮಿಕ ಪ್ರಯಾಣ
ಶ್ರೀ. ರಾಹುಲ ದಿವಾಣ ಅವರಿಗೆ ಬಾಲ್ಯದಿಂದಲೇ ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಆಸಕ್ತಿಯಿತ್ತು. ಅದಕ್ಕೆ ಧ್ಯಾನ ಮತ್ತು ಆಳವಾದ ಚಿಂತನೆ ಸೇರಿತು. ಅವರು ಅಂತರಾತ್ಮವನ್ನು ಹುಡುಕಲು ಪ್ರತಿ ಉಸಿರು, ಚಲನೆ ಮತ್ತು ಸ್ಥಿರತೆಯ ಕ್ಷಣಗಳೊಂದಿಗೆ ಅನುಸಂಧಾನ ಸಾಧಿಸಿದರು. ಶ್ರೀ. ದಿವಾಣ ಅವರು ವ್ಯಾಪಾರ ಜಗತ್ತಿನಲ್ಲಿ ಸ್ಪೂರ್ತಿದಾಯಕ ವ್ಯಕ್ತಿತ್ವ. ಮಾನಸಿಕ ಆರೋಗ್ಯಕ್ಕಾಗಿ ಧ್ಯಾನವನ್ನು ನಿರ್ಲಕ್ಷಿಸುವ ಕ್ಷೇತ್ರದಲ್ಲಿ, ಅವರು ಆಂತರಿಕ ಆತ್ಮವನ್ನು ಹುಡುಕಲು ವರ್ಷಗಳಿಂದ ಧ್ಯಾನ ಮಾಡುತ್ತಿದ್ದಾರೆ. ಶ್ರೀ. ದಿವಾಣ ಅವರ ಜೀವನದಲ್ಲಿ ಧ್ಯಾನವು ಆಮೂಲಾಗ್ರ ಬದಲಾವಣೆಯನ್ನು ತಂದಿದೆ. ಇದು ಅವರ ಮಾನಸಿಕ ಆರೋಗ್ಯ ಮತ್ತು ವ್ಯವಹಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.

3. ‘ಸರಯೂ ಫೌಂಡೇಶನ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್’ನ ಶೈಕ್ಷಣಿಕ ಕಾರ್ಯ
‘ಸರಯೂ ಫೌಂಡೇಶನ್’ ಶಿಕ್ಷಣ, ಭಾರತೀಯ ಸಂಸ್ಕೃತಿ ಮತ್ತು ಸಮುದಾಯ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಫೌಂಡೇಶನ್ ಶಾಲೆಗಳನ್ನು ನಡೆಸುತ್ತದೆ. ಈ ಶಾಲೆಗಳು ಮಕ್ಕಳಿಗೆ ಗಣಿತ, ಸಂಗೀತ, ಇಂಗ್ಲಿಷ್ ಮತ್ತು ಯೋಗವನ್ನು ಕಲಿಸುತ್ತವೆ. ಒಡಿಶಾದ 2 ಹಳ್ಳಿಗಳಲ್ಲಿ 2 ಶಾಲೆಗಳನ್ನು ಪ್ರಾರಂಭಿಸಲಾಗಿತ್ತು. ದೆಹಲಿಯ ‘ಸ್ಕೂಲ್ ಆಫ್ ಹ್ಯಾಪಿನೆಸ್’ ಶಾಲೆ ಇನ್ನೂ ನಡೆಯುತ್ತಿದೆ. ಇದು ವಂಚಿತ ಪ್ರದೇಶಗಳ 1 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪ್ರಯೋಜನವನ್ನು ನೀಡುತ್ತಿದೆ. ಅನೌಪಚಾರಿಕ ಶಿಕ್ಷಣದ ಮೂಲಕ ಅನೇಕ ಮಕ್ಕಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಅವರು ಪ್ರಯತ್ನಿಸುತ್ತಿದ್ದಾರೆ. ‘ಸರಯೂ ಟ್ರಸ್ಟ್’ ‘ಟಾಯ್ ಬ್ಯಾಂಕ್’ ಅನ್ನು ರಚಿಸಿದೆ. ಇದು ವಿಶೇಷವಾಗಿ ಬಡ ಮಕ್ಕಳಿಗೆ ಆಟಿಕೆಗಳನ್ನು ಒದಗಿಸುತ್ತದೆ. ‘ಸರಯೂ ಟ್ರಸ್ಟ್’ ಸಂಸ್ಕೃತಿ-ಪ್ರಧಾನ ರಾಷ್ಟ್ರದ ಉದಯವನ್ನು ಕಲ್ಪಿಸುತ್ತದೆ, ಅದು ತನ್ನ ಸ್ಥಳೀಯ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ರಕ್ಷಿಸುತ್ತದೆ, ಸಂರಕ್ಷಿಸುತ್ತದೆ ಮತ್ತು ಉತ್ತೇಜಿಸುತ್ತದೆ. ‘ಸರಯೂ ಟ್ರಸ್ಟ್’ ಅರಣ್ಯ ಸಂರಕ್ಷಣೆ, ಜಲ ಸಂರಕ್ಷಣೆ, ಹಾಗೆಯೇ ಭಾರತೀಯ ಸಂಸ್ಕೃತಿ ಮತ್ತು ಚಿಂತನೆಯ ಪುನರುಜ್ಜೀವನ ಕ್ಷೇತ್ರಗಳಲ್ಲಿಯೂ ಸಹ ಭಾಗವಹಿಸುತ್ತದೆ.
|
Demography Shifting in Bharat: The Imminent Threat And Its Solutions | Neeraj Atri | Rahul Dewan | ‘ಜನಸಂಖ್ಯಾಶಾಸ್ತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಅವುಗಳ ಪರಿಹಾರಗಳು’ ಕುರಿತ ಚರ್ಚಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಎಡದಿಂದ ಪ್ರಾ. ನೀರಜ ಅತ್ರಿ ಮತ್ತು ಶ್ರೀ. ರಾಹುಲ ದಿವಾಣ. |
4. ‘ಸಂಗಮ್ ಟಾಕ್ಸ್’ ಮೂಲಕ ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿಯ ಕುರಿತು ಜಾಗೃತಿ
2016 ರಲ್ಲಿ, ಶ್ರೀ. ದಿವಾಣ ‘ಸಂಗಮ್ ಟಾಕ್ಸ್’ ಎಂಬ YouTube ಚಾನೆಲ್ ಅನ್ನು ಪ್ರಾರಂಭಿಸಿದರು. ಇದು ವಿಶೇಷವಾಗಿ ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ ಮತ್ತು ಇತಿಹಾಸದ ಕುರಿತು ಸಂವಾದಗಳನ್ನು ಆಯೋಜಿಸುತ್ತದೆ. ‘ಸಂಗಮ್ ಟಾಕ್ಸ್’ ತನ್ನ ವಕ್ತಾರರಿಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ವೇದಿಕೆಯನ್ನು ಒದಗಿಸುತ್ತದೆ, ಜೊತೆಗೆ ಭಾರತೀಯ ಸಂಸ್ಕೃತಿಯ ದೃಷ್ಟಿಕೋನದಿಂದ ವಿಚಾರಗಳನ್ನು ಮಂಡಿಸುತ್ತದೆ.
| Hinduism Needs to Become Missionary: Large Scale #GharWapsi | Rahul Dewan | #sangamtalks #gharwapsi |
ಈ ಚಾನೆಲ್ ದೇಶದಲ್ಲಿ ರಚಿಸಲಾಗುತ್ತಿರುವ ಸುಳ್ಳು ನಿರೂಪಣೆಗಳನ್ನು ತಳ್ಳಿಹಾಕುವ ಕೆಲಸ ಮಾಡುತ್ತದೆ. ಕಳೆದ ಕೆಲವು ವರ್ಷಗಳಿಂದ ‘ಸಂಗಮ್ ಟಾಕ್ಸ್’ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ, ಇತಿಹಾಸ, ತತ್ವಶಾಸ್ತ್ರ, ಪರಂಪರೆ, ಭಾರತೀಯ ಜ್ಞಾನ ವ್ಯವಸ್ಥೆಗಳು, ವಿಜ್ಞಾನ, ಗಣಿತ, ಅರ್ಥಶಾಸ್ತ್ರ, ಕಲೆ, ಪರಿಸರ ಮತ್ತು ಪ್ರಯಾಣ ಇತ್ಯಾದಿಗಳಿಗೆ ಒಂದು ದೊಡ್ಡ ವೇದಿಕೆಯಾಗಿದೆ.
| क़ुरान की आयतों का विस्तृत विश्लेषण | दारा शिकोह की राहुल दीवान संग वार्ता | #exmuslim #SangamTalks |
ಅವರು ಮೇಲಿನ ವಿಷಯಗಳ ತಜ್ಞರ 1 ಸಾವಿರ 600 ಕ್ಕೂ ಹೆಚ್ಚು ಸಂವಾದಗಳನ್ನು ಆಯೋಜಿಸಿದ್ದಾರೆ. ‘ಸಂಗಮ್ ಟಾಕ್ಸ್’ ಪ್ರಸ್ತುತ 6 ಭಾರತೀಯ ಭಾಷೆಗಳಲ್ಲಿ ನಡೆಯುತ್ತದೆ. ಇದರಲ್ಲಿ ಮುಖ್ಯವಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಹಸ್ತದಿಂದ ರಾಹುಲ ದಿವಾಣ ಅವರಿಗೆ ‘ಸನಾತನ ಧರ್ಮಶ್ರೀ’ ಪ್ರಶಸ್ತಿ ಪ್ರದಾನ!

ಇತ್ತೀಚೆಗೆ ಗೋವಾದ ಫರ್ಮಾಗುಡಿಯಲ್ಲಿ ಮೇ 17 ರಿಂದ 19 ರವರೆಗೆ ಸನಾತನ ಸಂಸ್ಥೆಯ ವತಿಯಿಂದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಆಯೋಜಿಸಲಾಗಿತ್ತು.
🏅Shri. Rahul Dewan (@RahulDewanV2), Founder of @SarayuTrust & curator of @SangamTalks, was conferred the prestigious #Sanatan_Dharmashri Award at Shankhnad Mahotsav 2025 by Sanatan Sanstha.
Through Sangam Talks, he has created a vibrant platform connecting youth with timeless… pic.twitter.com/g5LtkjmtAX
— Sanatan Sanstha (@SanatanSanstha) May 19, 2025
ಈ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಹಸ್ತದಿಂದ ಶ್ರೀ. ರಾಹುಲ ದಿವಾಣ ಅವರಿಗೆ ‘ಸನಾತನ ಧರ್ಮಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
5. 1 ಸಾವಿರ ಕೋಟಿ ರೂಪಾಯಿಗಳ ‘ಹಿಂದೂ ಫಂಡ್’ ಯೋಜನೆ
ಶ್ರೀ. ರಾಹುಲ ದಿವಾಣ ಅವರಿಗೆ ಸದ್ಗುರು ಜಗ್ಗಿ ವಾಸುದೇವ ಅವರು ಆಧ್ಯಾತ್ಮಿಕ ಗುರುಗಳಾಗಿದ್ದಾರೆ. ಅವರು ತಮ್ಮ ಆದಾಯದ ಕೆಲವು ಶೇಕಡಾವನ್ನು ಸದ್ಗುರು ಅವರ ‘ಇಶಾ ಫೌಂಡೇಶನ್’ನ ಧಾರ್ಮಿಕ ಚಟುವಟಿಕೆಗಳಿಗೆ ಅರ್ಪಿಸುತ್ತಾರೆ. ಕಾಲಾನಂತರದಲ್ಲಿ, ಅವರಿಗೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಸಿಕ್ಕಿತು. ಭಾರತದಲ್ಲಿ, ಕೆಲವು ಹಿಂದುತ್ವವಾದಿಗಳು ತಮ್ಮ ಮಟ್ಟದಲ್ಲಿ ಅಥವಾ ಸಂಸ್ಥೆಗಳ ಮೂಲಕ ತಳಮಳದಿಂದ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ. ಅವರ ಚಟುವಟಿಕೆಗಳಿಗಾಗಿ ‘ಸರಯೂ ಫೌಂಡೇಶನ್’ ಮೂಲಕ ಮೂರನೇ ಎರಡು ಭಾಗದಷ್ಟು ಹಣವನ್ನು ನೀಡಲಾಗುತ್ತದೆ. ಹಿಂದೆ ರಾಜಮಹಾರಾಜರು ದೇವಾಲಯಗಳಿಂದ ಗುರುಕುಲಗಳವರೆಗೆ ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ‘ವೈಯಕ್ತಿಕ ಮಟ್ಟದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಸಹಾಯ ಮಾಡಲು ಮಿತಿಗಳಿವೆ. ಆದ್ದರಿಂದ, ಇತರ ಪಂಥೀಯರ ತಮ್ಮ ಅನುಯಾಯಿಗಳಿಗೆ ಆರ್ಥಿಕ ನಿಧಿ ಇರುವಂತೆ, ಹಿಂದೂ ಧರ್ಮದ ಕಾರ್ಯಗಳಿಗೂ ಆರ್ಥಿಕ ನಿಧಿ ಇರಬೇಕು’ ಎಂಬ ಉದ್ದೇಶದಿಂದ ಶ್ರೀ. ದಿವಾಣ ಮತ್ತು ಅವರ ಸಹೋದ್ಯೋಗಿಗಳು 1 ಸಾವಿರ ಕೋಟಿ ರೂಪಾಯಿಗಳ ‘ಹಿಂದೂ ಫಂಡ್’ ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ.
6. ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸಹಭಾಗ

ಗೋವಾದಲ್ಲಿ 2023 ರಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಶ್ರೀ. ರಾಹುಲ ದಿವಾಣ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು, ‘ಹಿಂದೂಗಳು ಸಾಮ್ರಾಜ್ಯಶಾಹಿಗಳಾಗಿ ಅಖಂಡ ಭಾರತವನ್ನು ನಿರ್ಮಿಸುವುದು ಮತ್ತು 2030 ರ ವೇಳೆಗೆ ಕನಿಷ್ಠ 10 ಕೋಟಿ ಹಿಂದೂ ಮಾತಾಂತರಗೊಂಡವರನ್ನು ಸ್ವಧರ್ಮಕ್ಕೆ ಮರಳಿ ತರುವುದು ಗುರಿ ಇಡಬೇಕು, ಹಾಗೆಯೇ ಕ್ರೈಸ್ತ ಮಿಷನರಿಗಳು ಹಿಂದೂಗಳನ್ನು ಮತಾಂತರಿಸುತ್ತಿದ್ದರೆ, ಹಿಂದೂಗಳು ಸಹ ಮತಾಂತರಗೊಂಡ ಹಿಂದೂಗಳನ್ನು ಸ್ವಧರ್ಮಕ್ಕೆ ಮರಳಿ ತರಲು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಬೇಕು’ ಎಂದು ಹೇಳಿದರು.
How to have Hindu Rajya by 2047? | Hindu Rashtra Adhiveshan | Rahul Dewan | #SangamTalks


ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
|| ಶ್ರೀ ರಾಜಮಾತಂಗಿ ಮಹಾಯಾಗ ||
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !