ತಮಿಳುನಾಡಿನ ಕೊಯಮತ್ತೂರಿನ ಶ್ರೀ. ಅರ್ಜುನ ಸಂಪತ ಅವರು ‘ಹಿಂದೂ ಮಕ್ಕಲ ಕಚ್ಚಿ’ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಈ ಸಂಘಟನೆಯ ಮೂಲಕ ಅವರು ಹಿಂದೂ ಧರ್ಮ ರಕ್ಷಣೆಯ ಕಾರ್ಯವನ್ನು ಮಾಡುತ್ತಾರೆ. ಮಾತಾಂತರಗೊಂಡ ಹಿಂದೂಗಳ ಶುದ್ಧೀಕರಣ ಅಭಿಯಾನದಲ್ಲಿ ಅವರು ಸಕ್ರಿಯರಾಗಿದ್ದಾರೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ಕೊಯಮತ್ತೂರಿನಲ್ಲಿ ಅವರು ಆಂದೋಲನ ಮಾಡಿದರು. ಶ್ರೀಲಂಕಾದ ಹಿಂದೂಗಳ ಮಾನವ ಹಕ್ಕುಗಳಿಗಾಗಿಯೂ ಅವರು ಹೋರಾಡುತ್ತಿದ್ದಾರೆ. ಅಮೆರಿಕ, ಕಾಂಬೋಡಿಯಾ, ಸಿಂಗಾಪುರ, ಮಲೇಷ್ಯಾ ಮುಂತಾದ ದೇಶಗಳಲ್ಲಿ ಆಯೋಜಿಸಲಾದ ಹಿಂದೂ ಮಹಾಸಭೆಗಳಲ್ಲಿ ಭಾಗವಹಿಸುವ ಗೌರವವೂ ಅವರಿಗೆ ಲಭಿಸಿದೆ. ತಮಿಳುನಾಡಿನಲ್ಲಿ ಆಧ್ಯಾತ್ಮಿಕ ಆಡಳಿತ ನಿರ್ಮಾಣವಾಗಲು ಅವರು ಸಮರ್ಪಿತ ಪ್ರಯತ್ನ ಮಾಡಿದ್ದಾರೆ. ಅವರ ಈ ಕಾರ್ಯಕ್ಕೆ ನ್ಯೂಯಾರ್ಕ್‌ನಲ್ಲಿ ‘ಸ್ಯಾಫ್ರನ್ ಲೀಡರ್’ (ಕೇಸರಿ ನಾಯಕ) ಎಂಬ ಬಿರುದಿನೊಂದಿಗೆ ‘ಹಿಂದೂರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ೨೦೧೮ ರಲ್ಲಿ ಅವರ ಆಧ್ಯಾತ್ಮಿಕ ಮಟ್ಟ ಶೇಕಡ ೬೧ ಎಂದು ಘೋಷಿಸಲಾಯಿತು. ಶ್ರೀ. ಅರ್ಜುನ ಸಂಪತ ಅವರ ಒಂದು ವೈಶಿಷ್ಟ್ಯವೆಂದರೆ, ಅವರು ಗೋವಾದಲ್ಲಿ ನಡೆಯುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಪ್ರಾರಂಭದಿಂದಲೂ, ಅಂದರೆ ೨೦೧೨ ರಿಂದ ೨೦೨೪ ರವರೆಗೆ ನಿಯಮಿತವಾಗಿ ಭಾಗವಹಿಸಿದ್ದಾರೆ. ಹಿಂದೂ ಸಂಘಟನೆಯನ್ನು ಬಲಪಡಿಸುವುದೆ ಅವರ ನಿರಂತರ ಪ್ರಯತ್ನವಾಗಿರುತ್ತದೆ.

ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು
೧. ಪರಿಚಯ
ಶ್ರೀ. ಅರ್ಜುನ ಸಂಪತ ಅವರು ಏಪ್ರಿಲ್ ೨೦, ೧೯೬೫ ರಂದು ಜನಿಸಿದರು. ಅವರು ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ತಾಲೂಕಿನ ಸಮೀಪದ ಪರಿಯಕವಂದನೂರು ಗ್ರಾಮದಲ್ಲಿ ಬೆಳೆದರು. ಬಾಲ್ಯದಲ್ಲಿ ಅವರು ತಮ್ಮ ತಂದೆಯೊಂದಿಗೆ ಪೆರಿಯಾರ್ (ನಾಸ್ತಿಕ ಮತ್ತು ಹಿಂದೂ ಧರ್ಮ ವಿರೋಧಿ ನಾಯಕ) ಮತ್ತು ಕೆ. ಕಾಮರಾಜ್ ಅವರ ಅನೇಕ ಸಭೆಗಳಿಗೆ ಹೋಗುತ್ತಿದ್ದರು. ಅವರ ತಂದೆ ಪೆರಿಯಾರ್ ಅವರ ಅನುಯಾಯಿಯಾಗಿದ್ದರು. ಅಂತಹ ಕುಟುಂಬದಲ್ಲಿ ಹಿಂದುತ್ವನಿಷ್ಠ ನಾಯಕನೊಬ್ಬ ಬೆಳೆದು ಬಂದಿರುವುದು ಆಶ್ಚರ್ಯಕರವಾಗಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ೧೯೮೨ ರಲ್ಲಿ ಅವರು ೧೨ ನೇ ತರಗತಿಯ ನಂತರ ಶಿಕ್ಷಣವನ್ನು ತೊರೆಯಬೇಕಾಯಿತು. ಅವರು ಖಾಸಗಿ ಸಂಸ್ಥೆಯೊಂದರಲ್ಲಿ ‘ಮಾರಾಟ ಪ್ರತಿನಿಧಿ’ಯಾಗಿ ಕೆಲಸ ಮಾಡಿದರು ಮತ್ತು ನಂತರ ಅವರ ತಂದೆ ನಡೆಸುತ್ತಿದ್ದ ಕ್ಷೌರಿಕ ಅಂಗಡಿಯಲ್ಲಿ ಕೆಲಸ ಮಾಡಿದರು. ಆ ಸಮಯದಲ್ಲಿ ಅವರು ತಮ್ಮ ಗ್ರಾಮದಲ್ಲಿ ‘ಲಿಟಲ್ ಫ್ಲವರ್ ವೆಲ್ಫೇರ್ ಸೆಂಟರ್’ ಅನ್ನು ಪ್ರಾರಂಭಿಸಿದರು, ಅದು ಮಕ್ಕಳಿಗೆ ಶಾಲೆಯ ನಂತರದ ಶಿಕ್ಷಣ, ಆಟಗಳು ಮುಂತಾದ ಬಾಹ್ಯ ಚಟುವಟಿಕೆಗಳಲ್ಲಿ ಸಹಾಯ ಮಾಡುತ್ತಿತ್ತು. ಅವರು ಚರ್ಚಾ ಸ್ಪರ್ಧೆಗಳಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಅರ್ಜುನ ಸಂಪತ ಅವರ ಭಾವ

ವಿರೋಧಿಗಳು ಶ್ರೀ. ಸಂಪತ ಅವರನ್ನು ಕೊಲ್ಲಲು ಅನೇಕ ಬಾರಿ ಪ್ರಯತ್ನಿಸಿದರು. ೨೦೧೬ ರಲ್ಲಿ ಶ್ರೀ. ಸಂಪತ ಅವರ ಕಾರನ್ನು ಸುಟ್ಟು ಹಾಕಲಾಗಿತ್ತು. ಈ ಬಗ್ಗೆ ಶ್ರೀ. ಸಂಪತ ಅವರು ತಮ್ಮ ಅನುಭವವನ್ನು ಹೇಳುವಾಗ, ‘‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ನನಗೆ ಅನೇಕ ಕಷ್ಟದ ಸಂದರ್ಭಗಳಿಂದ ಪಾರಾಗಲು ಸಾಧ್ಯವಾಯಿತು. ಒಮ್ಮೆ ಕೆಲವು ಭಯೋತ್ಪಾದಕರು ನನ್ನ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದರು. ಆ ಸಮಯದಲ್ಲಿ ಕೇವಲ ಸಚ್ಚಿದಾನಂದ ಪರಬ್ರಹ್ಮ ಅವರ ಕೃಪೆಯಿಂದಲೇ ನಮ್ಮ ಪ್ರಾಣ ಉಳಿಯಿತು. ಗುರುದೇವರ ಕೃಪೆ ಮತ್ತು ಆಶೀರ್ವಾದದಿಂದ ನಾನು ಹಿಂದುತ್ವದ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತಿದೆ,’’ಎಂದರು.
೨. ಹಿಂದೂ ಧರ್ಮ ರಕ್ಷಣೆಯ ಕಾರ್ಯದಲ್ಲಿ ಸಹಭಾಗ

೧೯೮೧ ರಲ್ಲಿ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಮೀನಾಕ್ಷಿಪುರಂನಲ್ಲಿ ಸಾವಿರಾರು ದಲಿತ ಹಿಂದೂಗಳು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಆ ಸಮಯದಲ್ಲಿ ಶ್ರೀ. ಸಂಪತ ಅವರಿಗೆ ಕೇವಲ ೧೬ ವರ್ಷದವರಾಗಿದ್ದರು. ಆಗ ಅವರಿಗೆ ಹಿಂದೂ ಅಸ್ಮಿತೆಯ ಕೊರತೆ ಎನಿಸಿತು. ಈ ಘಟನೆಯಿಂದ ಹಿಂದೂ ಧರ್ಮದ ಉದ್ದೇಶಗಳನ್ನು ಪೋಷಿಸಲು ಮತ್ತು ಪ್ರಚಾರ ಮಾಡಲು ಸಮರ್ಪಿತವಾದ ಸಂಘಟನೆಯ ಮಹತ್ವ ಅವರಿಗೆ ಅರಿವಾಯಿತು.
೧೯೮೦ ರ ದಶಕದ ಮಧ್ಯಭಾಗದಿಂದ ೧೯೯೩ ರವರೆಗೆ ಸಂಘ ಪರಿವಾರದ ಸದಸ್ಯರಾಗಿ ಶ್ರೀ. ಸಂಪತ ಅವರು ಅನೇಕ ಅಖಿಲ ಭಾರತೀಯ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅವರು ಶ್ರೀರಾಮಜನ್ಮಭೂಮಿ ಆಂದೋಲನ, ಹಿಂದೂ ದೇವಾಲಯಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತಗೊಳಿಸುವ ಚಳುವಳಿ, ಮಾತಾಂತರಗೊಂಡ ಹಿಂದೂಗಳನ್ನು ಮರಳಿ ಸ್ವಧರ್ಮಕ್ಕೆ ಕರೆತರುವಂತಹ ಅನೇಕ ಚಳುವಳಿಗಳಲ್ಲಿ ಭಾಗವಹಿಸಿದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪಾಶೀರ್ವಾದ

ಕಳೆದ ೧೦ ವರ್ಷಗಳಲ್ಲಿ ಜಿಹಾದಿಗಳಿಂದ ತಮಿಳುನಾಡಿನಲ್ಲಿ ೧೨೭ ಹಿಂದೂ ನಾಯಕರ ಹತ್ಯೆಯಾಗಿದೆ. ಶ್ರೀ. ಅರ್ಜುನ ಸಂಪತ ಅವರು ಜಿಹಾದಿಗಳ ‘ಹಿಟ್‌ಲಿಸ್ಟ್’ನಲ್ಲಿ ಮುಂಚೂಣಿಯಲ್ಲಿದ್ದರೂ ಮತ್ತು ನಿರಂತರವಾಗಿ ಜಿಹಾದಿಗಳಿಂದ ಕೊಲ್ಲುವ ಬೆದರಿಕೆಗಳು ಬರುತ್ತಿದ್ದರೂ, ಏಕಾಂಗಿ ಯೋಧರಂತೆ ತಮಿಳುನಾಡಿನ ಜಿಹಾದಿ, ನಾಸ್ತಿಕ ಮತ್ತು ಮಾತಾಂತರಿಗಳ ವಿರುದ್ಧ ಹೋರಾಡುತ್ತಿದ್ದಾರೆ. ಇಂದು ಹಿಂದೂ ಸಮಾಜಕ್ಕೆ ‘ಹೋರಾಟ’ವೇ ಆಶಾಕಿರಣವಾಗಿದೆ. ಶ್ರೀ. ಅರ್ಜುನ ಸಂಪತ ಅವರು ತಮಿಳುನಾಡಿನಲ್ಲಿ ಹಿಂದೂ ಸಮಾಜಕ್ಕಾಗಿ ವೀರಾವೇಶದಿಂದ ಹೋರಾಟವನ್ನು ಮಾಡುತ್ತಿದ್ದಾರೆ. ಅರ್ಜುನ ಸಂಪತ ಅವರಂತಹ ಹೋರಾಟಗಾರ ವೀರಪುರುಷರು ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೆ, ಎಲ್ಲಾ ರಾಜ್ಯಗಳಲ್ಲಿಯೂ ಜನಿಸಿದರೆ, ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ!
೩. ಹಿಂದೂವಿರೋಧಿ ವಾತಾವರಣವಿರುವ ತಮಿಳುನಾಡಿನಲ್ಲಿ ಧರ್ಮ ರಕ್ಷಣೆಯ ಕಾರ್ಯ

ಅ. ತಮಿಳುನಾಡಿನಲ್ಲಿ ಯಾವಾಗಲೂ ದೇಶ, ಧರ್ಮ ಮತ್ತು ಬ್ರಾಹ್ಮಣ ವಿರೋಧಿ ರಾಜ್ಯ ಸರಕಾರಗಳು ಅಧಿಕಾರದಲ್ಲಿವೆ. ಪ್ರಸ್ತುತ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ದ್ರಮುಕ) ದಂತಹ ದ್ರಾವಿಡ ಪಕ್ಷದ ನಾಯಕರು ಸನಾತನ ಧರ್ಮವನ್ನು ನಾಶಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಅಂತಹ ರಾಜ್ಯದಲ್ಲಿ ಶ್ರೀ. ಅರ್ಜುನ ಸಂಪತ ಅವರು ತಮಿಳುನಾಡಿನ ಹಿಂದುತ್ವನಿಷ್ಠ ವಲಯದಲ್ಲಿ ಮುಂಚೂಣಿಯ ಹೆಸರಾಗಿದ್ದಾರೆ. ಕನ್ಯಾಕುಮಾರಿಯ ಭಾರತ ಮಾತೆಯ ವಿಗ್ರಹವನ್ನು ಮುಚ್ಚುವ ಪ್ರಕರಣವಿರಲಿ ಅಥವಾ ಹಿಂದೂಗಳ ನಂಬಿಕೆಗಳ ಮೇಲಿನ ಆಘಾತಗಳಿರಲಿ, ಇವುಗಳ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ. ಇದರೊಂದಿಗೆ ಚೆನ್ನೈನ ಶ್ರೀ ಕಪಾಳೀಶ್ವರ ದೇವಾಲಯದ ಮೂಲ ಸ್ಥಳದಲ್ಲಿ ನಿರ್ಮಿಸಲಾದ ಸ್ಯಾಂಥೋಮ್ ಚರ್ಚ್ ಆಗಿರಲಿ, ‘ಝೀ ಟಿವಿ’ಯ ‘ಗಾಡ್‌ಮ್ಯಾನ್ ವೆಬ್ ಸರಣಿ’ಯ ವಿವಾದವಿರಲಿ ಅಥವಾ ಕೊಯಮತ್ತೂರಿನ ೨ ದೇವಾಲಯಗಳ ಮುಂದೆ ಹಂದಿ ಮಾಂಸವನ್ನು ಎಸೆದ ಪ್ರಕರಣವಿರಲಿ, ಎಲ್ಲದರ ವಿರುದ್ಧ ‘ಹಿಂದೂ ಮಕ್ಕಲ ಕಚ್ಚಿ’ ಧ್ವನಿ ಎತ್ತಿದೆ.
ಆ. ಗೋರಕ್ಷಣೆ: ಶ್ರೀ. ಸಂಪತ ಅವರು ಭಾರತದಲ್ಲಿ ಎಲ್ಲೆಡೆ ಗೋಮಾಂಸ ನಿಷೇಧಿಸಬೇಕು ಎಂದು ಯಾವಾಗಲೂ ಧ್ವನಿ ಎತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಂದ ಗೋಮಾಂಸದ ಔತಣಕೂಟಗಳ ಸುರಿಮಳೆಯೇ ಇತ್ತು. ಆಗ ಅದಕ್ಕೆ ಪ್ರತಿಯಾಗಿ ಅವರು ಹಂದಿ ಮಾಂಸವನ್ನು ವಿತರಿಸುವ ಎಚ್ಚರಿಕೆ ನೀಡಿದ್ದರು.

ಇ. ಹಿಂದೂ ಸಂಘಟನೆ: ತಮಿಳುನಾಡಿನಲ್ಲಿ ಕೆಲವು ರಾಜಕೀಯ ಪಕ್ಷಗಳು ಆರ್ಯ-ಅನಾರ್ಯ ವಾದವನ್ನು ಸೃಷ್ಟಿಸಿ ಹಿಂದೂಗಳಲ್ಲಿ ಒಡಕು ಮೂಡಿಸಲು ಸತತವಾಗಿ ಪ್ರಯತ್ನಿಸುತ್ತಿವೆ. ಅದರ ವಿರುದ್ಧ ಶ್ರೀ. ಸಂಪತ ಜಾಗೃತಿ ಮೂಡಿಸುತ್ತಾರೆ. ತಮಿಳುನಾಡಿನಲ್ಲಿ ‘ತಮಿಳರು ಮತ್ತು ಹಿಂದೂಗಳು ಬೇರೆ ಬೇರೆ’ ಎಂಬ ತಪ್ಪು ಕಲ್ಪನೆಯನ್ನು ಹರಡುವ ಷಡ್ಯಂತ್ರ ನಡೆಯುತ್ತಿದೆ. ಅದರ ವಿರುದ್ಧ ಶ್ರೀ. ಸಂಪತ ಅವರು ಹಿಂದೂಗಳನ್ನು ಸಂಘಟಿಸುವ ಕಾರ್ಯವನ್ನು ಮಾಡುತ್ತಾರೆ. ಅಂತಹ ಹಿಂದೂ ವಿರೋಧಿ ವಾತಾವರಣದಲ್ಲಿ ಶ್ರೀ. ಸಂಪತ ಅವರು ಧರ್ಮ ರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಮಾತ್ರವಲ್ಲದೆ, ಶ್ರೀಲಂಕಾ, ಇಂಡೋನೇಷ್ಯಾ, ಸಿಂಗಾಪುರ ಮುಂತಾದ ದೇಶಗಳ ಹಿಂದೂಗಳಿಗೆ ಸಂಕಷ್ಟದ ಸಮಯದಲ್ಲಿ ಶ್ರೀ. ಅರ್ಜುನ ಸಂಪತ ಅವರು ಆಧಾರವಾಗಿದ್ದಾರೆ.

ಈ. ಮತಾಂತರಗೊಂಡಿರುವವರನ್ನು ಹಿಂದೂ ಧರ್ಮಕ್ಕೆ ಮರಳಿ ಕರೆತರುವ ಉಪಕ್ರಮ: ತಮಿಳುನಾಡಿನಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ. ತಮಿಳುನಾಡಿನ ಕನ್ಯಾಕುಮಾರಿ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಬಹುಸಂಖ್ಯಾತ ಕ್ರೈಸ್ತರಿದ್ದು, ಅಲ್ಲಿ ಚರ್ಚ್‌ನ ಆಡಳಿತ ನಡೆಯುತ್ತದೆ. ೨೦೧೫ ರಲ್ಲಿ ಅವರ ‘ಹಿಂದೂ ಮಕ್ಕಲ ಕಚ್ಚಿ’ ಪಕ್ಷವು ತಮಿಳುನಾಡಿನಲ್ಲಿ ಮೊದಲ ಬಾರಿಗೆ ‘ಘರವಾಪ್ಸಿ ಅಭಿಯಾನ’ವನ್ನು (ಮತಾಂತರಗೊಂಡವರನ್ನು ಸ್ವಧರ್ಮಕ್ಕೆ ಕರೆತರುವುದು) ನಡೆಸಿತು. ಅದರಲ್ಲಿ ೧೮ ದಲಿತರು ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮರುಪ್ರವೇಶಿಸಿದರು. ಇಲ್ಲಿಯವರೆಗೆ ಅವರು ೮ ಸಾವಿರಕ್ಕೂ ಹೆಚ್ಚು ಜನರನ್ನು ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಂದ ಹಿಂದೂ ಧರ್ಮಕ್ಕೆ ಮರಳಿ ತಂದಿದ್ದಾರೆ.
ಶ್ರೀ. ಸಂಪತ ಅವರ ‘ಹಿಂದೂ ಮಕ್ಕಲ ಕಚ್ಚಿ’ ಪಕ್ಷವು ಟ್ರಿಪ್ಲಿಕೇನ್ ದೇವಾಲಯದಲ್ಲಿ ೧೦೮ ಜನರ ಘರವಾಪ್ಸಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ತಡೆಯಲು ತಮಿಳುನಾಡು ಸರಕಾರವು ಒತ್ತಡ ಹೇರುವ ತಂತ್ರವನ್ನು ಬಳಸಿತು ಮತ್ತು ಅನೇಕ ಇಚ್ಛುಕರನ್ನು ಬಲವಂತವಾಗಿ ಹಿಂದಕ್ಕೆ ಕಳುಹಿಸಿತು ಹಾಗೂ ಪೊಲೀಸ್ ಬಂದೋಬಸ್ತ್ ಹಾಕಿ ಶ್ರೀ. ಸಂಪತ ಅವರನ್ನು ಚೆನ್ನೈನ ಅವರ ಮನೆಯಲ್ಲಿಯೇ ಬಂಧಿಸಿಟ್ಟಿತ್ತು. ಅದರ ನಂತರವೂ ಅವರು ಈ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಪ್ರಯತ್ನಿಸಿದರು.
೩. ‘ರಾಷ್ಟ್ರೀಯ ಏಕತಾ ಯಾತ್ರೆ’ಯ ತಮಿಳುನಾಡು ವಿಭಾಗದ ನೇತೃತ್ವ
ಡಿಸೆಂಬರ್ ೧೯೯೧ ರಿಂದ ಜನವರಿ ೧೯೯೨ ರವರೆಗೆ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ‘ರಾಷ್ಟ್ರೀಯ ಏಕತಾ ಯಾತ್ರೆ’ಯನ್ನು ಆಯೋಜಿಸಲಾಗಿತ್ತು. ಈ ಯಾತ್ರೆಯ ತಮಿಳುನಾಡು ವಿಭಾಗದ ನೇತೃತ್ವವನ್ನು ಶ್ರೀ. ಸಂಪತ ಅವರು ವಹಿಸಿದ್ದರು.
೪. ಶ್ರೀಲಂಕಾದ ತಮಿಳು ಭಾಷಿಕ ಹಿಂದೂಗಳ ಮೇಲಿನ ದೌರ್ಜನ್ಯಗಳಿಗೆ ವಿರೋಧ
‘ಶ್ರೀಲಂಕಾದ ತಮಿಳು ಭಾಷೆಯ ಜನರು ಹಿಂದೂಗಳಾಗಿದ್ದಾರೆ. ಅವರ ಮೇಲೆ ನಡೆಯುವ ದೌರ್ಜನ್ಯಗಳನ್ನು ಕೇವಲ ತಮಿಳು ಭಾಷೆಯ ಜನರ ಮೇಲೆ ನಡೆಯುವ ದೌರ್ಜನ್ಯಗಳೆಂದು ನೋಡಬಾರದು, ಬದಲಿಗೆ ಅವುಗಳನ್ನು ಶ್ರೀಲಂಕಾದ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯಗಳೆಂದು ನೋಡಬೇಕು’, ಎಂದು ಶ್ರೀ. ಸಂಪತ ಅವರು ಯಾವಾಗಲೂ ಭಾವಿಸಿದ್ದರು. ಅವರ ‘ಹಿಂದೂ ಮಕ್ಕಲ ಕಚ್ಚಿ’ ಪಕ್ಷವು ಈ ದೌರ್ಜನ್ಯಗಳನ್ನು ತೀವ್ರವಾಗಿ ವಿರೋಧಿಸಿತು.
೫. ಬಂಗಾಳದ ಮುರ್ಷಿದಾಬಾದ್‌ನ ಹಿಂದೂಗಳ ಮೇಲಿನ ದೌರ್ಜನ್ಯಗಳಿಗೆ ವಿರೋಧ
ಬಂಗಾಳದಲ್ಲಿ ಧರ್ಮಾಂಧರಿಂದ ವಕ್ಫ್ ವಿಧೇಯಕ ತಿದ್ದುಪಡಿ ಕಾಯ್ದೆಯ ವಿರುದ್ಧ ಆಂದೋಲನ ಮಾಡುವ ನೆಪದಲ್ಲಿ ಬಾಂಗ್ಲಾದೇಶಿ ಮತಾಂಧ ನುಸುಳುಕೊರರು ಮುರ್ಷಿದಾಬಾದ್ ಜಿಲ್ಲೆಯಲ್ಲಿ ೬ ಹಿಂದೂಗಳನ್ನು ಕೊಂದರು, ಹಾಗೂ ಅವರ ಆಸ್ತಿಯನ್ನು ಲೂಟಿ ಮಾಡಿದರು. ಈ ಗಲಭೆಯಲ್ಲಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಹ ಗಲಭೆಕೋರರಿಗೆ ಸಹಕರಿಸಿದರು. ಇದರ ವಿರುದ್ಧ ಕೇಂದ್ರದ ಭಾಜಪ ಸರಕಾರವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ‘ಹಿಂದೂ ಮಕ್ಕಲ ಕಚ್ಚಿ’ ಇತ್ತೀಚೆಗೆ ಒತ್ತಾಯಿಸಿದೆ.

|
Arjun Sampath on the covering of Bharat Mata statue in Kanyakumari and how Hindus fought back Arjun Sampath on the covering of Bharat Mata statue in Kanyakumari and how Hindus fought back. In what is becoming a routine affair, Christian Bishops run the district of Kanyakumari regardless of who is in power, he claims. Some of the diabolical methods of DMK also discussed. A must watch! (ಸೌಜನ್ಯ : PGURUS) |
೬. ಅರ್ಜುನ ಸಂಪತ ಅವರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಧರ್ಮಕಾರ್ಯದ ಮೇಲೆ ಸಕಾರಾತ್ಮಕ ಪರಿಣಾಮ
ತಮಿಳುನಾಡಿನ ಸಂತ-ಮಹಾತ್ಮರ ಆಶೀರ್ವಾದದಿಂದ ಹಿಂದೂ ಧರ್ಮ ಮತ್ತು ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಮಾಡುವ ಶಿವೋಪಾಸಕ ಶ್ರೀ. ಅರ್ಜುನ ಸಂಪತ ಅವರು ಪ್ರತಿದಿನ ಹಣೆಗೆ ಭಸ್ಮವನ್ನು ಹಚ್ಚಿಕೊಳ್ಳುತ್ತಾರೆ. ಅವರು ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಧರ್ಮಾಚರಣೆ ಮಾಡಿ ಹಿಂದೂ ಧರ್ಮ ರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದಾರೆ. ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಿಂದ ಅವರ ಮಾತಿನಲ್ಲಿ ಭಾವ ಮತ್ತು ಚೈತನ್ಯ ನಿರ್ಮಾಣವಾಗಿದೆ. ಅದರ ಪರಿಣಾಮ ಅವರ ಅನುಯಾಯಿಗಳ ಮೇಲೆ ಆಗಿ ಅವರು ಸಹ ಧರ್ಮಸೇವೆ ಮಾಡಲು ಮುಂದಾಗುತ್ತಾರೆ. ಶ್ರೀ. ಸಂಪತ ಅವರು ಗೋವಾದಲ್ಲಿ ನಡೆದ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕೆ ಹಾಜರಿದ್ದರು. ಅಧಿವೇಶನದ ನಂತರ ಅವರು ಸಾಧನೆಗೆ ಪ್ರಾರಂಭಿಸಲು ‘ಸ್ಕೈಪ್’ (ಗಣಕೀಕೃತ ವ್ಯವಸ್ಥೆಯ ಸತ್ಸಂಗ) ಸತ್ಸಂಗವನ್ನು ಕೋರಿದರು. ನಂತರ ಮೊದಲ ‘ಸ್ಕೈಪ್ ಸತ್ಸಂಗ’ ‘ಹಿಂದೂ ಮಕ್ಕಲ ಕಚ್ಚಿ’ಯ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಯಿತು. ಅವರ ಕಾರ್ಯಕ್ಕೆ ದೇವರ ಅಧಿಷ್ಠಾನವಿರುವುದರಿಂದ ಅವರಿಗೆ ವ್ಯಾಪಕ ಮಟ್ಟದಲ್ಲಿ ‘ಹಿಂದೂ ಸಂಘಟನೆ’ ಮತ್ತು ‘ಹಿಂದೂ ಜಾಗೃತಿ’ಯ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತಿದೆ.
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !