ಕಾಂಗ್ರೆಸ್ ಮುಖಂಡ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ ಗಾಂಧಿ ಜುಲೈ ಒಂದರಂದು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ‘ಹಿಂದೂಗಳನ್ನು ಹಿಂಸಕರು’ ಎಂದು ಹೇಳಿದರು. ಹೌದು ಹಿಂದೂಗಳು ಹಿಂಸಕರೆ; ಆದರೆ ಯಾವಾಗಿಂದ ಆದರು ? ಅವರು ಹಿಂಸಕರಾಗಲು ಕಾರಣವೇನು ? ಎಂಬುದರ ಬಗ್ಗೆ ವಿಚಾರ ಮಾಡುವಂತಹ ಒಂದು ವಿಷಯವನ್ನು ರಾಹುಲ ಗಾಂಧಿಗೆ ಕೇಳಬೇಕೆನಿಸುತ್ತದೆ.
ರಾಹುಲ ಗಾಂಧಿಗೆ ‘ಹಿಂಸಕರು’ ಶಬ್ದದ ವ್ಯಾಖ್ಯೆಯಾದರೂ ತಿಳಿದಿದೆಯೆ ? ತಿಳಿದಿದ್ದರೆ ಮೊದಲು ಅದರ ವ್ಯಾಖ್ಯೆಯನ್ನು ಹೇಳಬೇಕು. ಕೈಯಲ್ಲಿ ಸಂವಿಧಾನವನ್ನು ಹಿಡಿದು ಅಲೆದಾಡುವವರು ‘ಹಿಂಸಕ’ ಈ ಶಬ್ದದ ವ್ಯಾಖ್ಯೆ ಸಂವಿಧಾನದಲ್ಲಿದೆಯೇ ? ಎಂಬುದನ್ನಾದರೂ ಪರಿಶೀಲಿಸಿದ್ದಾರೆಯೇ ? ಈ ವಿಷಯದ ಮೇಲೆ ದೃಷ್ಟಿ ಹಾಯಿಸುವ ವಿಚಾರವನ್ನು ಇಲ್ಲಿ ಮಂಡಿಸುತ್ತಿದ್ದೇನೆ.
೧. ‘ಹಿಂಸೆ’ ಈ ಶಬ್ದದ ನಿಜವಾದ ಅರ್ಥ
‘ಹಿಂಸೆ’ ಈ ಶಬ್ದ ಸಂಸ್ಕೃತದಲ್ಲಿದೆ. ಅದರಲ್ಲಿನ ಒಂದು ಶ್ಲೋಕ ತುಂಬಾ ಪ್ರಚಲಿತವಿದೆ ಹಾಗೂ ಪ್ರಸ್ತುತ ಅದರ ಅವಶ್ಯಕತೆ ಅಧಿಕವಿದೆ. ‘ಅಹಿಂಸಾ ಪರಮೋಧರ್ಮಃ |’, ಎಂದು ಹೇಳುತ್ತಾ ಮತ್ತು ಅದನ್ನು ತಿಳಿದಿದ್ದರೂ, ಮುಂದೆ ‘ಹಿಂಸಾ ಧರ್ಮ ತಥೈವಚ |’ ಎಂದು ಹಿಂದುತ್ವದಲ್ಲಿ ಹೇಳಲಾಗಿದೆ. ಅಹಿಂಸೆಯು ಮಾನವನ ನಿಜವಾದ ಧರ್ಮವಾಗಿದ್ದರೂ, ಧರ್ಮ ಸಂಕಟದಲ್ಲಿರುವಾಗ ಅದರ ರಕ್ಷಣೆಗಾಗಿ ಕೈಯಲ್ಲಿ ಶಸ್ತ್ರ ಹಿಡಿದು ಹಿಂಸೆ ಮಾಡುವುದನ್ನೂ ಹಿಂದುತ್ವವು ನ್ಯಾಯ ಹಾಗೂ ಯೋಗ್ಯವೆಂದು ಪರಿಗಣಿಸಿದೆ.
‘ಹಿಂಸೆ’ ಈ ಶಬ್ದವನ್ನು ರಾಹುಲ ಗಾಂಧಿಯಲ್ಲ, ಹಲವಾರು ಶತಮಾನಗಳ ಹಿಂದೆ ಹಿಂದೂಗಳ ಧರ್ಮಗ್ರಂಥದಲ್ಲಿ ಬರೆಯ ಲಾಗಿದೆ. ಆದ್ದರಿಂದ ರಾಹುಲ ಗಾಂಧಿ ‘ಹಿಂಸೆ’ ಈ ಶಬ್ದದ ಒಳ್ಳೆಯ ಆದರೆ ಅರ್ಥವಾಗದಂತಹ ಅರ್ಥವನ್ನು ಕಂಡುಹಿಡಿದಿದ್ದಾರೆ.
೨. ರಾಹುಲ ಗಾಂಧಿಯ ಅಭಿಪ್ರಾಯದಲ್ಲಿ ಈ ಕೆಳಗಿನ ಘಟನೆಗಳು ಹಿಂಸೆಯಾಗಿದೆಯೆ ?
ಯಾವ ವಿಷಯಗಳಿಗೆ ರಾಹುಲ ಗಾಂಧಿ ‘ಹಿಂದೂಗಳಿಗೆ ಹಿಂಸಕ’ರೆಂಬ ಶಬ್ದ ಉಪಯೋಗಿದ್ದಾರೆ, ಆ ವಿಷಯಗಳು ಅವರಿಗೆ ಹಿಂಸಾತ್ಮಕವೆನಿಸುತ್ತದೆಯೇ ? ಈ ವಿಷಯದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ.
ಅ. ಹಿಂಸಾಚಾರಿ ಮೊಗಲರು ಹಿಂದೂಗಳ ಮೇಲೆ ಮುಗಿಬಿದ್ದಾಗ ಛತ್ರಪತಿ ಶಿವಾಜಿ ಮಹಾರಾಜರು ‘ಮೊಹಬ್ಬತಕೀ ದುಕಾನ್’ (ಪ್ರೇಮದ ಅಂಗಡಿ) ತೆರೆಯಲಿಲ್ಲ, ಅವರು ಕೈಯಲ್ಲಿ ಹರಿತವಾದ ಖಡ್ಗ ಹಿಡಿದು (ಹಿಂಸೆಯನ್ನು ಹಿಂಸೆಯಿಂದ) ವಿರೋಧಿಸಿದರು. ರಾಹುಲರ ಅಭಿಪ್ರಾಯದಲ್ಲಿ ಇದು ಹಿಂಸೆಯೇ ?
ಆ. ಆಂಗ್ಲರು ಭಾರತದ ಮೇಲೆ ೧೫೦ ವರ್ಷಗಳಷ್ಟು ಕಾಲ ಆಡಳಿತ ನಡೆಸಿದರು. ಅವರು ಭಾರತ ಮತ್ತು ಹಿಂದೂ ವಿರೋಧಿ ಅನೇಕ ಕಾನೂನು ಮಾಡಿದರು, ಭಾರತವನ್ನು ತುಂಡರಿಸಿದರು, ಇಂತಹ ಬ್ರಿಟೀಷÀರ ವಿರುದ್ಧ ಒಂದು ಕಾಲದಲ್ಲಿ ಕಾಂಗ್ರೆಸ್‌ನಲ್ಲಿದ್ದು ಅಹಿಂಸೆಗೆ ರೋಸಿ ಹೋಗಿ ನೇತಾಜಿ ಸುಭಾಷ್ಚಂದ್ರ ಬೋಸ್ ಇವರು ‘ಆಝಾದ್ ಹಿಂದ್ ಸೇನೆ’ಯನ್ನು ಸ್ಥಾಪನೆ ಮಾಡಿದರು. ಅನಂತರ ಅವರು ಬ್ರಿಟೀಷರಿಗೆ ಯುದ್ಧದ ಬೆದರಿಕೆ ನೀಡಿದರು. ಈ ಬೆದರಿಕೆ ಹಿಂಸೆಯಾಗುತ್ತದೆಯೇ ?
ಇ. ರಾವಣ ಸೀತಾಮಾತೆಯನ್ನು ಅಪಹರಣ ಮಾಡಿದನು, ಆಗ ಪ್ರಭು ಶ್ರೀರಾಮನು ಸುಮ್ಮನೆ ಕುಳಿತುಕೊಳ್ಳಲಿಲ್ಲ, ಅವರು ಧನುಷ್ಯಬಾಣ ಹಿಡಿದು ವಾನರರ ಜೊತೆಗೆ ಅವನ ಮೇಲೆ ಆಕ್ರಮಣ ಮಾಡಿದರು. ರಾಹುಲರಿಗೆ ಇದು ಕೂಡ ಹಿಂಸೆಯೆನಿಸುತ್ತದೆಯೇ ?
ಈ. ಕೌರವರು ಪಾಂಡವರಿಗೆ ಅನ್ಯಾಯ ಮಾಡಿದರು. ಇಂತಹ ಅನ್ಯಾಯದ ವಿರುದ್ಧ ಪಾಂಡವರು ಶ್ರೀಕೃಷ್ಣರ ಜೊತೆಗೂಡಿ ೧೮ ದಿನಗಳ ‘ಮಹಾಭಾರತ’ ಯುದ್ಧ ನಡೆಯಿತು. ಅನ್ಯಾಯದ ವಿರುದ್ಧ ಹೋರಾಡುವುದು ಕೂಡ ಹಿಂಸೆಯಾಗುತ್ತದೆಯೇ ?
ಉ. ಪಾಕಿಸ್ತಾನವು ಭಾರತದ ಮೇಲೆ ಒಂದರ ಹಿಂದೆ ಒಂದು ಉಗ್ರವಾದಿ ಆಕ್ರಮಣ ಮಾಡುತ್ತಿದೆ. ಹೀಗಿರುವಾಗ ಇಂದಿನ ಸರಕಾರ ಚರ್ಚೆಯ ಪಾರಿವಾಳವನ್ನು ಹಾರಿಸಲಿಲ್ಲ, ಭಾರತೀಯ ನಿರ್ಭಯ ಸೈನಿಕರು ‘ಸರ್ಜಿಕಲ್ ಸ್ಟ್ರೈಕ್’ ಮಾಡಿ ಅದಕ್ಕೆ ಪ್ರತ್ಯುತ್ತರ ನೀಡಿದರು. ಇದು ಕೂಡ ಹಿಂಸೆಯಾಗಿದೆಯೇ ?
ಇಂತಹ ಅದೆಷ್ಟೋ ಘಟನೆಗಳು ಹಿಂದೂ ಧರ್ಮ ಮತ್ತು ಭಾರತ ದೇಶದಲ್ಲಿ ಘಟಿಸುತ್ತವೆ. ಇಂತಹ ಘಟನೆಗಳಿಗೆ ರಾಹುಲ ಗಾಂಧಿ ಏನು ಹೇಳುತ್ತಾರೆ ? ಈ ಘಟನೆಗಳಿಗೆ ನಿಮ್ಮ ಶಬ್ದಕೋಶ ದಲ್ಲಿ ಯಾವ ಶಬ್ದಗಳಿವೆ ? ಎಂಬುದನ್ನು ಸ್ಪಷ್ಟಪಡಿಸಬೇಕು. ತಮ್ಮ ಮನೆಯಲ್ಲಿ ಒಂದು ಇಲಿ ಉಪಟಳ ನೀಡಿದರೆ ಅಥವಾ ಒಂದು ಸಣ್ಣ ಸೊಳ್ಳೆ ಕಚ್ಚಿದರೆ ಅದನ್ನು ಪ್ರೀತಿಸುತ್ತೇವೆಯೇ ? ಹಾಗಾದರೆ ಅದರ ವಿರುದ್ಧ ನಾವು ಮಾಡುವ ಕೃತಿಗೆ ರಾಹುಲ ಗಾಂಧಿಯ ಶಬ್ದಕೋಶದಲ್ಲಿ ಯಾವ ಶಬ್ದವಿದೆ ? ಭಯೋತ್ಪಾದಕ ಅಜಮಲ ಕಸಾಬ ಭಾರತದಲ್ಲಿ ಆಕ್ರಮಣ ಮಾಡುತ್ತಾನೆ, ಅವನಿಗೆ ಶಿಕ್ಷೆಯಾಗಬಾರದೆಂದು ನಿಮ್ಮವರೇ ಆದ ನಕಲಿ (ಅ)ಹಿಂಸಕರು ಅವನ ಪರವಾಗಿ ನಿಲ್ಲುತ್ತಾರೆ, ಇದು ಹಿಂಸೆಯಲ್ಲವೇ ?
೩. ಇತರ ಧರ್ಮದವರಿಗೆ ‘ಹಿಂಸಾಚಾರಿ’ ಎಂದು ಹೇಳುವ ಧೈರ್ಯ ತೋರಿಸುವಿರಾ ?
ನಿಮ್ಮ ಭಾಷೆಯಲ್ಲಿ ‘ಹಿಂಸೆ’ ಮತ್ತು ‘ಅಹಿಂಸೆ’ಗೆ ಏನೂ ಅರ್ಥವಿಲ್ಲ, ಈಗ ನೀವು ಸಮಸ್ತ ಹಿಂದೂ ಸಮೂಹವನ್ನು ‘ಹಿಂಸಾಚಾರಿ’, ಎಂದು ಹೇಳಿದ್ದೀರಿ. ನೀವು ಈ ದೇಶದಲ್ಲಿದ್ದೀರಿ, ಈ ದೇಶದ ಸಂಸದರಾಗಿದ್ದೀರಿ, ನೀವು ಸಂಸತ್ತಿನಲ್ಲಿ ಇಂತಹ ಅಯೋಗ್ಯ ಶಬ್ದಗಳನ್ನಾಡುತ್ತಿದ್ದೀರಿ, ಒಂದು ವೇಳೆ ಈ ದೇಶದ ಹಿಂದೂಗಳು ಹಿಂಸಕರಾಗಿರುತ್ತಿದ್ದರೆ, ನೀವು ಸಂಸತ್ತಿನಲ್ಲಿ ಹೀಗೆ ಮಾತನಾಡಲು ಸಾಧ್ಯವಿತ್ತೇ ? ಸ್ವಲ್ಪ ವಿಚಾರ ಮಾಡಿ; ಇತರ ಧರ್ಮದ ವಿಷಯದಲ್ಲಿ ಹೀಗೆ ಬಹಿರಂಗವಾಗಿ ಮಾತನಾಡಿ ತೋರಿಸುವಿರಾ ? ಇಲ್ಲ; ಏಕೆಂದರೆ ಹೀಗೆ ಮಾತನಾಡಿದರೆ ಪರಿಣಾಮ ಏನಾಗಬಹುದೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಆಗ ಇತರ ಧರ್ಮೀಯರು ನಿಮ್ಮನ್ನು ಏನು ಮಾಡುವರೋ, ಅದಕ್ಕೆ ನಿಮ್ಮ ಭಾಷೆಯಲ್ಲಿ ಏನೆನ್ನುತ್ತೀರಿ ? ರಾಜಸ್ಥಾನದಲ್ಲಿ ಕನೈಯಾಲಾಲರ ಹತ್ಯೆ ನಡೆಯಿತು, ಅದಕ್ಕೆ ನಿಮ್ಮ ಭಾಷೆಯಲ್ಲಿ ಯಾವ ಶಬ್ದವಿದೆ ? ಭಾಜಪದ ನುಪೂರ್ ಶರ್ಮಾ ಇವರಿಗೆ ರುಂಡ ಕತ್ತರಿಸುವ ಬೆದರಿಕೆ ಬಂದಿತ್ತು, ಅದಕ್ಕೆ ನೀವು ಅಹಿಂಸೆ ಎನ್ನುತ್ತೀರಾ ? ಹಾಗೆ ಬೆದರಿಕೆ ಹಾಕುವವರು ಯಾವ ಧರ್ಮದವರಾಗಿದ್ದರು ?
೪. ಹಿಂದೂಗಳು ಮತಪೆಟ್ಟಿಗೆಯ ಮೂಲಕ ಕಾಂಗ್ರೆಸ್ಸನ್ನು ಶಾಶ್ವತವಾಗಿ ಮನೆಯಲ್ಲಿ ಕೂರಿಸಿದರೆ…
ರಾಹುಲ ಗಾಂಧಿಯ ಮಾನಸಿಕತೆಯನ್ನು ನೋಡಿದರೆ, ಅವರಲ್ಲಿ ಹಿಂದೂಗಳ ಬಗ್ಗೆ ಎಷ್ಟು ದ್ವೇಷವಿದೆ ಎಂಬುದು ಅರಿವಾಗುತ್ತದೆ. ರಾಹುಲರಿಗೆ ‘ಹಿಂದೂ’ ಶಬ್ದದ ಅರ್ಥ ಮತ್ತು ಅದರ ವ್ಯಾಖ್ಯೆಯಾದರೂ ತಿಳಿದಿದೆಯೇ ? ಹಿಂದೂ ಶಬ್ದದ ವ್ಯಾಖ್ಯೆ – ‘ಹೀನಂ ದೂಷಯತಿ ಇತಿ ಹಿಂದುಃ |’ ಅಂದರೆ ‘ಹೀನ ಅಥವಾ ಕನಿಷ್ಠವಾಗಿರುವ ರಜ ಮತ್ತು ತಮ ಗುಣಗಳ ‘ದೂಷಯತಿ’ ಅಂದರೆ ನಾಶ ಮಾಡುವವನೇ ಹಿಂದೂ’’, ಇದು ‘ಹಿಂದೂ’ ಶಬ್ದದ ಉತ್ಪತ್ತಿ ಆಗಿದೆ. ರಾಹುಲ ಗಾಂಧಿ ತಮ್ಮ ಪ್ರತ್ಯೆಕತೆಯನ್ನು ತೋರಿಸಲಿಕ್ಕಾಗಿಯೇ ಇಂತಹ ಸರ್ಕಸ್ ಮಾಡಿದ್ದಾರೆ, ಎಂದು ಅನಿಸುತ್ತದೆ. ಇಂತಹ ಹೇಳಿಕೆಯನ್ನು ನೀಡಿ ಅವರು ದೇಶದ ಮತ್ತು ಆ ಮೂಲಕ ಭಾರತೀಯರನ್ನು ಅವಮಾನಿಸಿದ್ದಾರೆ. ರಾಹುಲಗಾಂಧಿ ಸಮಸ್ತ ಹಿಂದೂಗಳಲ್ಲಿ ಸಾರ್ವಜನಿಕವಾಗಿ ಕ್ಷಮಾಯಾಚನೆ ಮಾಡಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ ಹಿಂದೂಗಳು ಮತಪೆಟ್ಟಿಗೆಯ ಮೂಲಕ ನಿಮ್ಮನ್ನು ಮತ್ತು ಕಾಂಗ್ರೆಸ್ಸನ್ನು ಶಾಶ್ವತವಾಗಿ ಮನೆಯಲ್ಲಿ ಕೂರಿಸಿದರೆ ಆಶ್ಚರ್ಯವೆನಿಸಲಿಕ್ಕಿಲ್ಲ. ಆದ್ದರಿಂದ ಮುಂಬರುವ ೫ ವರ್ಷ ಸಂಸತ್ತಿನಲ್ಲಿ ಕುಳಿತುಕೊಳ್ಳುವ ಸದಸ್ಯತ್ವದ ಅರ್ಹತೆಯನ್ನು ಕಾಳಜಿಯಿಂದ ಉಳಿಸಿಕೊಳ್ಳಿ !
– ಶ್ರೀ. ಪ್ರಶಾಂತ ಹರಿಹರ, ಮಂಗಳೂರು. (೨.೭.೨೦೨೪)