ಕರ್ನಾಟಕದ ಸಿದ್ದರಾಮಯ್ಯ ಸರಕಾರವು ಮಾರ್ಚ್ ೭ ರಂದು ಬಜೆಟ್ ಮಂಡಿಸಿತು. ಈ ಬಜೆಟ್‌ನಲ್ಲಿ ೭.೫ ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಹೊಸ ಕೈಗಾರಿಕಾ ನೀತಿಯನ್ನು ಘೋಷಿಸಿತು. ಹಾಗೆಯೇ ೨೦ ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನೂ ನೀಡಿದೆ. ವಾಸ್ತವದಲ್ಲಿ, ಕಳೆದ ೭೦ ವರ್ಷಗಳಲ್ಲಿ ಕಾಂಗ್ರೆಸ್ಸಿಗೆ ಈ ಭರವಸೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ೬೦ ವರ್ಷಗಳಲ್ಲಿ ‘ಬಡತನ ನಿರ್ಮೂಲನೆ’ ಘೋಷಣೆ ಮಾಡಿತು; ಆದರೆ ದೇಶದ ಜನರು ಇನ್ನಷ್ಟು ಬಡವರಾದರು ಮತ್ತು ಕಾಂಗ್ರೆಸ್ ಪ್ರತಿನಿಧಿಗಳು ಶ್ರೀಮಂತರಾದರು. ಕರ್ನಾಟಕ ಸರಕಾರವು ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಮತ್ತು ವಿಶೇಷವಾಗಿ ಮುಸಲ್ಮಾನರಿಗೆ ಹಲವಾರು ದೊಡ್ಡ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ಮುಸಲ್ಮಾನರಿಗೆ ಒಟ್ಟು ೪ ಸಾವಿರದ ೭೦೦ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇಷ್ಟೆಲ್ಲಾ ನೀಡಿದ ನಂತರವೂ ಕಾಂಗ್ರೆಸ್ ಸರಕಾರದ ಸಚಿವ ಜಮೀರ ಅಹ್ಮದ ಖಾನ್ ‘ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು ಶೇ. ೧೪ ರಷ್ಟು ಮುಸಲ್ಮಾನರಿದ್ದಾರೆ, ಆದ್ದರಿಂದ ಮುಸಲ್ಮಾನರಿಗೆ ಕಡಿಮೆಪಕ್ಷ ೬೦ ಸಾವಿರ ಕೋಟಿ ರೂಪಾಯಿ ಸಿಗಬೇಕಿತ್ತು’ ಎಂದು ಹೇಳಿದ್ದಾರೆ.
ಈ ಬಜೆಟ್‌ನಲ್ಲಿ ಮುಸಲ್ಮಾನರ ಯೋಜನೆಗಳಿಗೆ ಹಣದ ವ್ಯವಸ್ಥೆ ಮಾಡಲಾಗಿದೆ. ಮುಸಲ್ಮಾನ ಹೆಣ್ಣುಮಕ್ಕಳಿಗಾಗಿ ೧೫ ಮಹಿಳಾ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು, ಇವುಗಳನ್ನು ವಕ್ಫ್ ಮಂಡಳಿಯ ಖಾಲಿ ಜಮೀನುಗಳಲ್ಲಿ ಸರಕಾರದಿಂದ ನಿರ್ಮಿಸಲಾಗುವುದು. ಇತರ ೧೬ ಮಹಿಳಾ ಕಾಲೇಜುಗಳನ್ನು ಪ್ರಾರಂಭಿಸುವ ಯೋಜನೆಯೂ ಇದೆ. ಇದರೊಂದಿಗೆ, ಅಲ್ಪಸಂಖ್ಯಾತ ಕುಟುಂಬಗಳಿಗೆ ವಿವಾಹಕ್ಕಾಗಿ ೫೦ ಸಾವಿರ ರೂಪಾಯಿ ಆರ್ಥಿಕ ಸಹಾಯವನ್ನು ಘೋಷಿಸಲಾಗಿದೆ; ಆದರೆ ಇದಕ್ಕೆ ಮದುವೆ ಸರಳ ರೀತಿಯಲ್ಲಿ ನಡೆಯಬೇಕು. ವಿಶೇಷವಾಗಿ, ಈ ಬಜೆಟ್‌ನಲ್ಲಿ ಇಮಾಮರ ವೇತನವನ್ನು ಹೆಚ್ಚಿಸಿ ೬ ಸಾವಿರ ರೂಪಾಯಿ ಮಾಡಲಾಗಿದೆ. ಇದರ ಹೊರತಾಗಿ ಜೈನ ಅರ್ಚಕರು ಮತ್ತು ಸಿಕ್ಖ್ ಗ್ರಂಥಿಗಳಿಗೆ ಕೂಡ ಅಷ್ಟು ವೇತನ ಸಿಗಲಿದೆ. ಸಹಾಯಕ ಗ್ರಂಥಿಗಳು ಮತ್ತು ಮಸೀದಿಯ ಮುಅಜ್ಜಿನರಿಗೆ ಪ್ರತಿ ತಿಂಗಳು ೫ ಸಾವಿರ ರೂಪಾಯಿ ಗೌರವಧನ ನೀಡಲಾಗುವುದು ಹಾಗೂ ಈ ಬಜೆಟ್‌ನಲ್ಲಿ ಬೆಂಗಳೂರಿನ ಹಜ್ ಭವನವನ್ನು ವಿಸ್ತರಿಸುವ ಘೋಷಣೆಯನ್ನೂ ಮಾಡಲಾಗಿದೆ. ಇಲ್ಲಿ ಹಜ್ ಯಾತ್ರಿಕರು ಮತ್ತು ಅವರ ಕುಟುಂಬಗಳಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು. ಅವರು ಮಾಡಿದ ಮತ್ತೊಂದು ದೊಡ್ಡ ಘೋμÀಣೆ ಎಂದರೆ ‘ಮುಖ್ಯಮಂತ್ರಿ ಅಲ್ಪಸಂಖ್ಯಾತ ವಸತಿ ಅಭಿವೃದ್ಧಿ ಕಾರ್ಯಕ್ರಮ’ ಪ್ರಾರಂಭಿಸಲಾಗುವುದು. ಇದರ ಅಡಿಯಲ್ಲಿ ೧ ಸಾವಿರ ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ. ಕರ್ನಾಟಕದಲ್ಲಿ ‘ಮೌಲಾನಾ ಆಜಾದ್ ಇಂಗ್ಲಿಷ್ ಶಾಲೆ’ಯ ೨೫೦ ಶಾಖೆಗಳನ್ನು ಪ್ರಾರಂಭಿಸುವ ಘೋಷಣೆಯನ್ನೂ ಮಾಡಲಾಗಿದೆ. ಈ ಶಾಲೆಗಳನ್ನು ಸರಕಾರಿ ನೀತಿಗಳ ಅಡಿಯಲ್ಲಿ ಪ್ರಾರಂಭಿಸಲಾಗುವುದು. ಅವುಗಳನ್ನು ‘ಮಾದರಿ ಶಾಲೆ’ಗಳಾಗಿ ಅಭಿವೃದ್ಧಿಪಡಿಸುವ ಯೋಜನೆ ಇದೆ. ಇದಕ್ಕಾಗಿ ಸರಕಾರವು ೫೦೦ ಕೋಟಿ ರೂಪಾಯಿಗಳನ್ನು ಒದಗಿಸಿದೆ. ವಕ್ಫ್ ಆಸ್ತಿಗಳ ದುರಸ್ತಿ ಮತ್ತು ನವೀಕರಣ, ಮೂಲಸೌಕರ್ಯಗಳನ್ನು ಒದಗಿಸುವುದು ಮತ್ತು ಮುಸಲ್ಮಾನರ ಸ್ಮಶಾನಗಳನ್ನು ರಕ್ಷಿಸಲು ೧೫೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ‘ಕರ್ನಾಟಕ ಸಾರ್ವಜನಿಕ ಪಾರದರ್ಶಕತೆ ಕಾಯಿದೆ ೧೯೯೯’ ಅನ್ನು ತಿದ್ದುಪಡಿ ಮಾಡಿ ಸರಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ. ೪ ರಷ್ಟು ಮೀಸಲಾತಿ ಯೋಜನೆ ರೂಪಿಸಲಾಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳನ್ನು ಹತ್ತಿರ ತರುವ ಪ್ರಯತ್ನವನ್ನು ಮತ್ತೆ ಪ್ರಾರಂಭಿಸಿದ್ದಾರೆ. ಈ ಪ್ರಸ್ತಾಪವನ್ನು ಭಾಜಪ ‘ತುಷ್ಟೀಕರಣದ ರಾಜಕಾರಣ’ ಎಂದು ವಿರೋಧಿಸಿದೆ, ಆದರೆ ಸರಕಾರವು ‘ಸಾಮಾಜಿಕವಾಗಿ ಹಿಂದುಳಿದವರಿಗೆ ನ್ಯಾಯ ಒದಗಿಸುವ ಪ್ರಯತ್ನ’ ಎಂದು ಹೇಳಿದೆ.
ಧರ್ಮದ ಆಧಾರದಲ್ಲಿ ಹಣದ ಬಳಕೆ !
ಯಾವುದೇ ಮಧ್ಯಮದಿಂದ ಮುಸಲ್ಮಾನರನ್ನು ಓಲೈಸುವ ಪ್ರಯತ್ನಗಳು ಕಾಂಗ್ರೆಸ್ಸಿನಿಂದ ಮೋಹನದಾಸ ಗಾಂಧಿಯವರ ಉದಯದಿಂದ ಪ್ರಾರಂಭವಾಗಿದೆ. ಅದು ಇಂದಿಗೂ ಹಾಗೆಯೇ ಇದೆ. ಎಲ್ಲಿಯವರೆಗೆ ಭಾರತವು ಕಾಂಗ್ರೆಸ್ಸಿನಿಂದ ಮುಕ್ತವಾಗುವು ದಿಲ್ಲವೋ, ಅಲ್ಲಿಯವರೆಗೆ, ಜಾತ್ಯತೀತ ಸಂವಿಧಾನವಿದ್ದರೂ, ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ, ಇದು ಶತಸಿದ್ಧವಾಗಿದೆ. ಕರ್ನಾಟಕದ ಜನಸಂಖ್ಯೆ ೬.೧ ಕೋಟಿಗೂ ಹೆಚ್ಚಿದ್ದು, ಅದರಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೧೨.೯೨ ರಷ್ಟಿದೆ. ಅವರನ್ನು ರಾಜ್ಯದಲ್ಲಿ ‘ಧಾರ್ಮಿಕ ಅಲ್ಪಸಂಖ್ಯಾತರು’ ಎಂದು ಪರಿಗಣಿಸಲಾಗುತ್ತದೆ. ೨೦೨೪ ರಲ್ಲಿ, ಕರ್ನಾಟಕ ಕಾಂಗ್ರೆಸ್ ಸರಕಾರವು ರಾಜ್ಯದ ಎಲ್ಲಾ ಮುಸಲ್ಮಾನರನ್ನು ಹಿಂದುಳಿದ ವರ್ಗಗಳೆಂದು ಪರಿಗಣಿಸಿ, ಸರಕಾರಿ ನಿಯಂತ್ರಣದಲ್ಲಿರುವ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗಗಳಲ್ಲಿ ಅವರಿಗೆ ಮೀಸಲಾತಿ ನೀಡುವ ನಿರ್ಧಾರ ತೆಗೆದುಕೊಂಡಿತ್ತು. ಜಾತ್ಯತೀತ ದೇಶದಲ್ಲಿ, ಧರ್ಮದ ಆಧಾರದಲ್ಲಿ ಸರಕಾರಿ ಖಜಾನೆಯಿಂದ ಒಂದೇ ಧರ್ಮದವರಿಗೆ ಹಣವನ್ನು ಪೋಲು ಮಾಡುವ ಕಾಂಗ್ರೆಸ್ ಯಾವಾಗಲೂ ಸಂವಿಧಾನವನ್ನು ಅವಮಾನಿಸುತ್ತಲೇ ಬಂದಿದೆ. ಆದರೂ ಹಿಂದೂಗಳು ಕಾಂಗ್ರೆಸ್‌ಗೆ ಮತ ಹಾಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇದು ಅವರಿಗೆ ಯಾವಾಗ ಅರ್ಥವಾಗುತ್ತದೆ ? ಮೂಲತಃ, ಜಗತ್ತಿನ ಯಾವುದೇ ಇಸ್ಲಾಮಿಕ್ ದೇಶದಲ್ಲಿ ಮುಸಲ್ಮಾನರನ್ನು ಹಿಂದುಳಿದವರೆಂದು ಪರಿಗಣಿಸಿ ಮೀಸಲಾತಿ ನೀಡಿಲ್ಲ; ಆದರೆ ಕಾಂಗ್ರೆಸ್ ಈ ಪವಾಡ ಮಾಡಿದೆ. ಕಾಂಗ್ರೆಸ್ ಸರಕಾರವು ದೇವಾಲಯಗಳ ನಿರ್ವಹಣೆ ಮತ್ತು ಜೀರ್ಣೋದ್ಧಾರಕ್ಕೆ ಹಣವನ್ನು ಒದಗಿಸದೆ ವಕ್ಫ್‌ಗೆ ಹಣವನ್ನು ಏಕೆ ಒದಗಿಸಿದೆ ? ಎಂದು ಕರ್ನಾಟಕದ ಹಿಂದೂಗಳು ಯಾವಾಗ ಈ ಪ್ರಶ್ನೆ ಕೇಳುತ್ತಾರೆ ? ಹಿಂದೂಗಳು ಏಕೆ ಮೌನವಾಗಿದ್ದಾರೆ ? ವಾಸ್ತವವಾಗಿ, ಈ ಜಾತ್ಯತೀತ ದೇಶದಲ್ಲಿ ಮುಸಲ್ಮಾನರಿಗೆ ಒಂದು ಪೈಸೆಯನ್ನೂ ಅವರು ಮುಸಲ್ಮಾನರು ಎಂಬ ಕಾರಣಕ್ಕೆ ನೀಡುವ ಅಗತ್ಯವಿಲ್ಲ. ಬಜೆಟ್‌ನ ಹಣವನ್ನು ‘ಧರ್ಮ’ ಎಂಬ ಮಾನದಂಡವನ್ನು ಹಾಕದೆ ವಿವಿಧ ಯೋಜನೆಗಳಿಗೆ ನೀಡಲಾಗುತ್ತದೆ. ಈ ರೀತಿ ಜನಸಂಖ್ಯೆಯ ಆಧಾರದ ಮೇಲೆ ಹಣವನ್ನು ಕೇಳುವ ಸಚಿವ ಜಮೀರ ಖಾನ್ ರಂತಹ ಪ್ರತಿನಿಧಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಜನಸಂಖ್ಯೆಯ ಆಧಾರದ ಮೇಲೆ ಮುಸಲ್ಮಾನರಿಗೆ ೬೦ ಸಾವಿರ ಕೋಟಿ ರೂಪಾಯಿ ನೀಡಬೇಕಾದರೆ, ಉಳಿದ ಹಣವನ್ನು ಕೇವಲ ಹಿಂದೂಗಳ ಕಲ್ಯಾಣಕ್ಕಾಗಿ ಏಕೆ ಖರ್ಚು ಮಾಡಬಾರದು ಎಂದು ಖಾನ್ ಏಕೆ ಕೇಳುವುದಿಲ್ಲ ?
ರಾಜಕೀಯ ದೃಷ್ಟಿಯಿಂದ ಕಾಂಗ್ರೆಸ್ಸಿನ ಅಂತ್ಯ ಯಾವಾಗ ?
ದೇಶದಲ್ಲಿ ಮೊದಲು ಮೊಘಲರ ಆಕ್ರಮಣವಾಯಿತು, ನಂತರ ಆಂಗ್ಲರು ಮತ್ತು ಈಗ ದೇಶವು ಸ್ವತಂತ್ರವಾದಾಗಿನಿಂದ ಕಾಂಗ್ರೆಸ್ ಪ್ರತಿನಿಧಿಗಳು ಅಧಿಕಾರದ ಮೂಲಕ ಹಿಂದೂಗಳನ್ನು ದುರ್ಬಲಗೊಳಿಸಿ ಮುಸಲ್ಮಾನರನ್ನು ಓಲೈಸುತ್ತಿದ್ದಾರೆ. ಇದು ಇತಿಹಾಸವಾಗಿದೆ. ಈ ಹಿಂದೆ ಕರ್ನಾಟಕದ ಜನರು ಕಾಂಗ್ರೆಸ್ಸಿನಿಂದ ಬೇಸತ್ತು ಭಾಜಪಕ್ಕೆ ಮತ ಹಾಕಿದ್ದರು; ಆದರೆ ಭಾಜಪ ಹಿಂದೂಗಳ ನಿರೀಕ್ಷೆಗಳನ್ನು ಪೂರೈಸಲಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಬಂದು ಹಿಂದೂಗಳಿಗೆ ಮತ್ತೆ ದುಃಖ ಮತ್ತು ತೀವ್ರ ನಿರಾಶೆ ಉಂಟಾಯಿತು. ಹಾಗೆ ನೋಡಿದರೆ, ಹಿಂದೂಗಳ ಕಲ್ಯಾಣವನ್ನು ಧೈರ್ಯದಿಂದ ಮಾಡುವ ಒಂದೂ ಪಕ್ಷ ದೇಶದಲ್ಲಿ ಉಳಿದಿಲ್ಲ. ಆದ್ದರಿಂದ ಕರ್ನಾಟಕದ ದೇವಸ್ಥಾನಗಳ ಟ್ರಸ್ಟಿಗಳು (ವಿಶ್ವಸ್ತ ಮಂಡಳಿಯವರು), ಮಠಗಳ ಮಠಾಧೀಶರು ಮತ್ತು ಭಕ್ತರು ಸಂಘಟಿತರಾಗಿ ಕಾಂಗ್ರೆಸ್ಸಿನ ಇಂತಹ ನೀತಿಗಳನ್ನು ತೀವ್ರವಾಗಿ ವಿರೋಧಿಸಬೇಕು ಮತ್ತು ಕಾಂಗ್ರೆಸ್ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರಗಳನ್ನು ರದ್ದುಗೊಳಿಸಲು ಸರಕಾರವನ್ನು ಒತ್ತಾಯಿಸಬೇಕು, ಇಲ್ಲದಿದ್ದರೆ ನಾಳೆ ಇದೇ ಕಾಂಗ್ರೆಸ್ ಸರಕಾರ ಹಿಂದೂಗಳ ಉಳಿದ ಆಸ್ತಿಯನ್ನು ಕಸಿದುಕೊಂಡು ಹಿಂದೂಗಳನ್ನು ಬೀದಿಗೆ ತರದೆ ಇರಲಾರದು. ‘ಭಾರತದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸಲ್ಮಾನರಿಗೆ ಇದೆ’ ಎಂದು ದೇಶದ ಅಂದಿನಪ್ರಧಾನಮಂತ್ರಿ ದಿವಂಗತ ಡಾ. ಮನಮೋಹನ್ ಸಿಂಗ್ ಹೇಳಿದ್ದರು. ಅದೇ ಆಲೋಚನೆಯಿಂದ ನಡೆಯುತ್ತಿರುವ ಕಾಂಗ್ರೆಸ್ ನಾಳೆ ಇಡೀ ದೇಶವನ್ನು ಇಸ್ಲಾಮೀಕರಣಗೊಳಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಈ ಪರಿಸ್ಥಿತಿ ಬರುವ ಮೊದಲೇ ಹಿಂದೂಗಳು ಕಾಂಗ್ರೆಸ್ಸಿನ ರಾಜಕೀಯ ಅಂತ್ಯ ಮಾಡುವುದು ಆವಶ್ಯಕವಾಗಿದೆ.