ಲೀಸೆಸ್ಟರ್ (ಇಂಗ್ಲೆಂಡ್) – ೨೦೨೨ ರಲ್ಲಿ ಇಂಗ್ಲೆಂಡ್ ನ ಲೀಸೆಸ್ಟರ್ ನಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ಮತ್ತು ಹಿಂದೂ ದೇವಾಲಯಗಳ ಮೇಲೆ ಆಕ್ರಮಣ ಮಾಡಲು ಜನರನ್ನು ಪ್ರಚೋದಿಸಿದ ಪ್ರಮುಖ ಆರೋಪಿ ಮಜಿದ್ ಫ್ರೀಮನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಜಿದ್ ಫ್ರೀಮನ್ ಒಬ್ಬ ಇಸ್ಲಾಮಿಕ್ ಕಟ್ಟರವಾದಿಯಾಗಿದ್ದಾನೆ. ಅವನ ಮೇಲೆ ಭಯೋತ್ಪಾದಕರನ್ನು ಪ್ರೊತ್ಸಾಹಿಸುವುದು ಮತ್ತು ಭಯೋತ್ಪಾದನೆ ಸಂಬಂಧಿತ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪ ಇದೆ.
ಮಜಿದ್ ಫ್ರೀಮನ್, ಅಕ್ಟೋಬರ್ ೭, ೨೦೨೩ ರಂದು ಇಸ್ರೇಲ್ ನ ಮೇಲೆ ಹಮಾಸ್ ನ ಭಯೋತ್ಪಾದಕ ದಾಳಿಯನ್ನು ಬೆಂಬಲಿಸಿದ್ದಾನೆ. ಹಾಗೂ ಗಾಜಾದ ಮೇಲೆ ಇಸ್ರೇಲ್ ನ ದಾಳಿಯನ್ನು ವಿರೋಧಿಸಿದ್ದಾನೆ. ಅವನು ಪ್ಯಾಲೆಸ್ತೀನ್ ಪರವಾಗಿರುವ ಶೌಕತ್ ಆದಮ್ ಇವನ ಬೆಂಬಲಿಗ ಎಂದೂ ಗುರುತಿಸಿಕೊಂಡಿದ್ದಾನೆ.