Vaishvik Hindu Rashtra Mahotsav : ಗೋವಾ: ಜೂನ್ 24 ರಂದು ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ ಪ್ರಾರಂಭ

ದೇಶ- ವಿದೇಶಗಳಿಂದ ನೂರಾರು ಹಿಂದುತ್ವನಿಷ್ಠರ ಆಗಮನ !

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಕಹಳೆ !

ಶ್ರೀ ರಾಮನಾಥ ದೇವಸ್ಥಾನದ ಪ್ರವೇಶದ್ವಾರದಲ್ಲಿ ನಿಲ್ಲಿಸಿರುವ ಕಮಾನು.

ರಾಮನಾಥಿ (ಗೋವಾ), ಜೂನ್ 23 (ವಾರ್ತೆ) – ಫೋಂಡಾದಲ್ಲಿರುವ ‘ಶ್ರೀ ರಾಮನಾಥ ದೇವಸ್ಥಾನ’ದಲ್ಲಿ ಜೂನ್ 24 ರಂದು ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ ಪ್ರಾರಂಭವಾಗಲಿದ್ದು, ಜೂನ್ 30 ರವರೆಗೆ ಈ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಭಾಗವಹಿಸಲು ದೇಶ-ವಿದೇಶಗಳ ವಿವಿಧ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮ ಸ್ಥಳವನ್ನು ತಲುಪಿದ್ದಾರೆ. 2012ರಿಂದ ‘ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ’ ಎಂದು ಪ್ರಾರಂಭವಾಗಿರುವ ಅಧಿವೇಶನದ ಈ ವರ್ಷ ತಪಪೂರ್ತಿ ಆಗಿದೆ. ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸುತ್ತಿರುವ ಕಾರಣ, ಈ ಅಧಿವೇಶನವನ್ನು `ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನ’ ಎಂದು ಮರುನಾಮಕರಣ ಮಾಡಲಾಗಿದೆ.

ಈ ಮಹೋತ್ಸವಕ್ಕಾಗಿ ದೇಶ- ವಿದೇಶಗಳಿಂದ 1,000 ಕ್ಕೂ ಹೆಚ್ಚು ಸಂಘಟನೆಗಳ 2,000ಕ್ಕೂ ಅಧಿಕ ಧರ್ಮಪ್ರೇಮಿಗಳನ್ನು ಆಹ್ವಾನಿಸಲಾಗಿದೆ. ಅಧಿವೇಶನದಲ್ಲಿ ಭಾಗವಹಿಸುವ ಧರ್ಮಪ್ರೇಮಿಗಳನ್ನು ಸ್ವಾಗತಿಸಲು ಶ್ರೀ ರಾಮನಾಥ ದೇವಸ್ಥಾನದ ಪ್ರವೇಶದ್ವಾರದಲ್ಲಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಭವ್ಯವಾದ ದ್ವಾರಬಾಗಿಲನ್ನು ನಿರ್ಮಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಆಕರ್ಷಕ ವ್ಯಾಸಪೀಠವನ್ನು ನಿರ್ಮಿಸಲಾಗಿದ್ದು, ಕಾರ್ಯಕ್ರಮದ ಸ್ಥಳದಲ್ಲಿ ಹಿಂದೂಗಳ ಧರ್ಮಾಭಿಮಾನವನ್ನು ಜಾಗೃತಗೊಳಿಸುವ, ಧರ್ಮಕಾರ್ಯಕ್ಕೆ ಪ್ರೇರೇಪಿಸುವ ಮತ್ತು ಧರ್ಮದ ಮೇಲಿನ ಆಘಾತಗಳ ಬಗ್ಗೆ ಅಂತರ್ಮುಖಗೊಳಿಸುವ ಪರಿಣಾಮಕಾರಿ ಫಲಕಗಳನ್ನು ಹಚ್ಚಲಾಗಿದೆ. ವೈದ್ಯರು, ನ್ಯಾಯವಾದಿಗಳು, ಉದ್ಯಮಿಗಳು, ಪತ್ರಕರ್ತರು ಮತ್ತು ವಿವಿಧ ಕ್ಷೇತ್ರಗಳ ಹಿಂದೂ ಧರ್ಮಾಭಿಮಾನಿಗಳು ಈ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಅನೇಕ ಸಂತ – ಮಹಾತ್ಮರ ವಂದನೀಯ ಉಪಸ್ಥಿತಿ ಈ ಕಾರ್ಯಕ್ರಮದಲ್ಲಿರಲಿದೆ. ಅಧಿವೇಶನದಲ್ಲಿ ಭಾಗವಹಿಸುವ ಗಣ್ಯರು ರಾಷ್ಟ್ರ, ಧರ್ಮ, ಸಂಸ್ಕೃತಿ, ಹಿಂದೂ ಧರ್ಮದ ಮೇಲಿನ ಆಘಾತ, ಹಿಂದೂಗಳ ಸಂಘಟನೆ ಮುಂತಾದ ವಿವಿಧ ವಿಷಯಗಳ ಕುರಿತು ಅವರ ಅಭಿಪ್ರಾಯಗಳನ್ನು ಮಂಡಿಸಲಿದ್ದು ಮುಂದಿನ ರಾಷ್ಟ್ರ ಮತ್ತು ಧರ್ಮಕಾರ್ಯದ ಕೃತಿಯ ರೂಪು-ರೇಶೆಗಳನ್ನು ನಿರ್ಧರಿಸಲಾಗುವುದು.

ಹಿಂದೂ ರಾಷ್ಟ್ರದ ಧ್ಯೇಯದಿಂದ ಪ್ರೇರಿತರಾಗಿ ದೇಶ-ವಿದೇಶಗಳ ಧರ್ಮಪ್ರೇಮಿಗಳ ಮನಸ್ಸು ಒಗ್ಗಟ್ಟಾಗಲಿದೆ !

ಹಿಂದೂ ರಾಷ್ಟ್ರದ ಸ್ಥಾಪನೆಯ ಏಕೈಕ ಧ್ಯೇಯದಿಂದ ಪ್ರೇರಿತರಾಗಿ, ದೇಶ- ವಿದೇಶಗಳ ಧರ್ಮಾಭಿಮಾನಿಗಳು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ ಪರಸ್ಪರ ಭೇಟಿಯಾಗುವ ಹಾಗೂ ವರ್ಷವಿಡೀ ಅವರವರ ಪ್ರದೇಶದಲ್ಲಿ ನಡೆಸಿರುವ ಧರ್ಮಕಾರ್ಯದ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಇದರಿಂದ ಕಾರ್ಯಕ್ರಮ ಸ್ಥಳಕ್ಕೆ ಬಂದಿರುವ ಎಲ್ಲರಲ್ಲಿಯೂ ಪರಸ್ಪರರನ್ನು ಭೇಟಿಯಾಗುವ ಉತ್ಸುಕತೆ ಕಂಡುಬರುತ್ತಿದೆ.