ಚಿತ್ರಕೂಟ (ಉತ್ತರ ಪ್ರದೇಶ)ದಲ್ಲಿ ಕೊರೋನಾ ಪೀಡಿತ ಡಾ. ಬಿಲಾಲ್ ಅಹಮದ್ ಇವರು ಮಾಸ್ಕ್ ಹಾಕದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದರು !

ಇಲ್ಲಿಯ ದ್ವಾರಕಾಪುರಿಯಲ್ಲಿ ವೈದ್ಯ ಬಿಲಾಲ್ ಅಹಮದ್ ಗೆ ಕೊರೋನಾ ಸೋಂಕು ತಗುಲಿತು. ಅದರ ನಂತರವೂ ಬಿಲಾಲ್ ಅಹಮದ್ ಚಿಕಿತ್ಸಾಲಯವನ್ನು ಮುಂದುವರೆಸಿದರು ಮತ್ತು ಮಾಸ್ಕ್ಅನ್ನು ಹಾಕದೆ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಅಷ್ಟೇ ಅಲ್ಲ, ಆಸ್ಪತ್ರೆಯ ಅದೇ ಕಟ್ಟಡದಲ್ಲಿ ನಡೆಯುತ್ತಿರುವ ಸಾಮೂಹಿಕ ನಮಾಜ್ ಪಠಣಕ್ಕೂ ಅವರು ಹಾಜರಿದ್ದರು.

ಕಾಶಿ ವಿಶ್ವನಾಥ ದೇವಸ್ಥಾನ ಕಕ್ಷಿದಾರ ಹರಿಹರ ಪಾಂಡೆಯ ಇವರಿಗೆ ಮತಾಂಧರಿಂದ ಜೀವಬೆದರಿಕೆ !

ಇಲ್ಲಿನ ಕಾಶಿ ವಿಶ್ವನಾಥ ದೇವಾಲಯದ ಮುಂಭಾಗದಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆ ಮತ್ತು ಉತ್ಖನನ ಮಾಡಲು ನ್ಯಾಯಾಲಯ ಆದೇಶಿಸಿದ ನಂತರ ದೇವಾಲಯದ ಕಕ್ಷಿದಾರ ಹರಿಹರ ಪಾಂಡ್ಯೆಯ ಇವರಿಗೆ ಯಾಸೀನ್ ಎಂಬ ಮತಾಂಧನು ಜೀವಬೆದರಿಕೆಯೊಡ್ಡಿದ್ದಾನೆ.

ಕಾಶಿ ವಿಶ್ವನಾಥ ಮತ್ತು ಜ್ಞಾನವಾಪಿ ಮಸೀದಿ ಪರಿಸರದಲ್ಲಿ ಉತ್ಖನನಕ್ಕೆ ನ್ಯಾಯಾಲಯದಿಂದ ಅನುಮತಿ !

ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪೀ ಮಸೀದಿ ಪ್ರಕರಣದಲ್ಲಿ ಸಮೀಕ್ಷೆ ನಡೆಸಲು ಪುರಾತತ್ವ ಇಲಾಖೆಗೆ ವಾರಣಾಸಿ ಶೀಘ್ರಗತಿ ನ್ಯಾಯಾಲಯವು ಅನುಮತಿ ನೀಡಿದೆ. ಸಮೀಕ್ಷೆಯ ಸಂಪೂರ್ಣ ವೆಚ್ಚವನ್ನು ಉತ್ತರ ಪ್ರದೇಶ ಸರಕಾರ ಭರಿಸಲಿದೆ ಮತ್ತು ಸಮೀಕ್ಷೆ ಪೂರ್ಣಗೊಂಡ ನಂತರ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯವು ಹೇಳಿದೆ.

ವಾಕ್ ಸ್ವಾತಂತ್ರ್ಯದಿಂದ ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಿಲ್ಲ ! – ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯಪೀಠ

ಸಂವಿಧಾನವು ವಾಕ್ ಸ್ವಾತಂತ್ರ್ಯವನ್ನು ನೀಡಿದ್ದರೂ, ಒಬ್ಬರು ಇತರ ಧರ್ಮಗಳ ವಿರುದ್ಧ ಮಾತನಾಡಬಹುದು ಮತ್ತು ಆ ಧರ್ಮಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಬಹುದು ಎಂದು ಅರ್ಥವಲ್ಲ ಎಂದು ಅಲಹಬಾದ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯಪೀಠವು ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾದ ಮಹಮ್ಮದ ನದೀಮ್ ಈ ಕಾರ್ಯಕರ್ತನ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

ಆಗ್ರಾದಲ್ಲಿ ಗೋಕಳ್ಳ ಸಾಗಾಟವನ್ನು ತಡೆಯಲು ಹೋದ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷರ ಮೇಲೆ ಮತಾಂಧರಿಂದ ಮಾರಣಾಂತಿಕ ಹಲ್ಲೆ !

ಇಲ್ಲಿಯ ರಾಯಭಾ ಪ್ರದೇಶದಲ್ಲಿ ಏಪ್ರಿಲ್ ೪ ರಂದು ರಾತ್ರಿ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷ ರೌನಕ ಠಾಕೂರ ಇವರು ಗೋ ಸಾಗಾಟವನ್ನು ತಡೆಯಲು ಹೋದಾಗ ಮತಾಂಧರಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಇದರಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮಿತ್ ಷಾ ಮತ್ತು ಯೋಗಿ ಆದಿತ್ಯನಾಥ ಅವರನ್ನು ಧಾರ್ಮಿಕ ಸ್ಥಳದಲ್ಲಿ ಕೊಲ್ಲುವ ಬೆದರಿಕೆ

ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕೊಲ್ಲುವ ಬೆದರಿಕೆಯ ಇಮೇಲ್ ಒಂದು ಮುಂಬಯಿನ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಚೇರಿಗೆ ಸಿಕ್ಕಿದೆ. ‘ಮುಂದಿನ ಕೆಲವೇ ದಿನಗಳಲ್ಲಿ ಅವರನ್ನು ಧಾರ್ಮಿಕ ಸ್ಥಳದ ಬಳಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹತ್ಯೆಗೈಯ್ಯಲಾಗುವುದು.

ಗೋಹತ್ಯೆಯ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಮತಾಂಧರಿಂದ ಕಲ್ಲು ತೂರಾಟ

ಉತ್ತರ ಪ್ರದೇಶದಲ್ಲಿ ಕಾನೂನಿನ ರಾಜ್ಯವಿದೆಯೇ ಅಥವಾ ಮತಾಂಧರ ರಾಜ್ಯವಿದೆಯೇ ? ಮತಾಂಧರಿಗೆ ಪೊಲೀಸರ ಮೇಲೆ ಕಲ್ಲು ಎಸೆಯುವ ಧೈರ್ಯವಾದರೂ ಹೇಗೆ ಬರುತ್ತದೆ ? ‘ಅಂತಹ ಸಮಯದಲ್ಲಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲು ಪೊಲೀಸರಿಗೆ ಏಕೆ ಆದೇಶಿಸಬಾರದು ?’ ಎಂಬ ಪ್ರಶ್ನೆ ಉದ್ಭವಿಸಿದರೆ, ಅದರಲ್ಲಿ ತಪ್ಪೇನಿದೆ ?

ಅಯೋಧ್ಯೆಯ ಹನುಮಾನಗಢಿಯಲ್ಲಿ ಇಟ್ಟಿಗೆಯಿಂದ ಜಜ್ಜಿ ಮಹಂತರ ಹತ್ಯೆ !

ಪ್ರಸಿದ್ಧ ಹನುಮಾನಗಢಿಯಲ್ಲಿನ ಮಹಂತರು ಮತ್ತು ನಾಗ ಸಾಧು ಕನ್ಹಯ್ಯ ದಾಸ ಅವರನ್ನು ಏಪ್ರಿಲ್ ೩ ರ ರಾತ್ರಿ ಅಪರಿಚಿತ ಹಲ್ಲೆಕೋರರು ಇಟ್ಟಿಗೆಯಿಂದ ತಲೆಯನ್ನು ಜಜ್ಜುವ ಮೂಲಕ ಹತ್ಯೆ ಮಾಡಿದ್ದಾರೆ. ಅವರ ಶವವು ಇಲ್ಲಿನ ಚರಣಪಾದುಕಾ ದೇವಸ್ಥಾನದ ಗೋಶಾಲೆಯಲ್ಲಿ ಪತ್ತೆಯಾಗಿದೆ.

ಗೋರಖಪುರ (ಉತ್ತರ ಪ್ರದೇಶ)ದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ

ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಲೇ ಇದೆ ! ರಾಜ್ಯದಲ್ಲಿ ಸಾಧು, ಸಂತ, ಮಹಂತ, ಹಿಂದುತ್ವನಷ್ಠರ ಹತ್ಯೆಯಾಗುವುದು ಹಾಗೂ ಅದು ಕೂಡಾ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕರ್ಮ ಭೂಮಿಯಲ್ಲಿ ಘಟಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಶ್ರೀಕೃಷ್ಣ ದೇವಾಲಯದ ಪ್ರಾಚೀನ ವಿಗ್ರಹಗಳನ್ನು ಕೆಂಪು ಕೋಟೆಯಲ್ಲಿರುವ ಮಸೀದಿಯ ಮೆಟ್ಟಿಲುಗಳ ಕೆಳಗೆ ಹೂಳಲಾಗಿದೆ !

ಇಂತಹ ಬೇಡಿಕೆಗಳನ್ನು ಏಕೆ ಮಾಡಬೇಕಾಗುತ್ತದೆ ? ಕೇಂದ್ರ ಸರಕಾರವೇ ಇದರತ್ತ ಗಮನ ಹರಿಸಿ ಹಿಂದೂಗಳ ಹೂತುಹಾಕಿರುವ ಗೌರವಶಾಲಿ ಪರಂಪರೆಯನ್ನು ಮರಳಿ ಪಡೆಯಲು ಪ್ರಯತ್ನಿಸಬೇಕು !