ಶ್ರೀಕೃಷ್ಣ ದೇವಾಲಯದ ಪ್ರಾಚೀನ ವಿಗ್ರಹಗಳನ್ನು ಕೆಂಪು ಕೋಟೆಯಲ್ಲಿರುವ ಮಸೀದಿಯ ಮೆಟ್ಟಿಲುಗಳ ಕೆಳಗೆ ಹೂಳಲಾಗಿದೆ !

ಶ್ರೀಕೃಷ್ಣ ಜನ್ಮಭೂಮಿಯ ವಿಮೋಚನೆಯ ದಾವೆ

ಪುರಾತತ್ವ ಇಲಾಖೆಯು ವಿಗ್ರಹಗಳನ್ನು ಹೊರತೆಗೆಯಬೇಕು ! – ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯ ಬೇಡಿಕೆ

ಇಂತಹ ಬೇಡಿಕೆಗಳನ್ನು ಏಕೆ ಮಾಡಬೇಕಾಗುತ್ತದೆ ? ಕೇಂದ್ರ ಸರಕಾರವೇ ಇದರತ್ತ ಗಮನ ಹರಿಸಿ ಹಿಂದೂಗಳ ಹೂತುಹಾಕಿರುವ ಗೌರವಶಾಲಿ ಪರಂಪರೆಯನ್ನು ಮರಳಿ ಪಡೆಯಲು ಪ್ರಯತ್ನಿಸಬೇಕು !

ಮಥುರಾ (ಉತ್ತರ ಪ್ರದೇಶ) – ಶ್ರೀಕೃಷ್ಣ ಜನ್ಮಭೂಮಿಯ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆಯು ನಡೆಯುತ್ತಿದೆ. ಇದರ ವಿಚಾರಣೆಯ ವೇಳೆ, ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಗ ಇವರು, ಮಥುರಾದ ಕಟರಾ ಕೇಶವದೇವ ಪ್ರದೇಶದಲ್ಲಿ ಓರಛಾದ ರಾಜ ವೀರಸಿಂಗ ಬುಂದೆಲಾ ಇವರು ನಿರ್ಮಿಸಿದ ಠಾಕೂರ ಕೇಶವದೇವ (ಭಗವಾನ ಶ್ರೀಕೃಷ್ಣ)ನ ಭವ್ಯ ದೇವಾಲಯದ ‘ಶ್ರೀವಿಗ್ರಹಗಳನ್ನು(ಮೂರ್ತಿಯು) ಆಗ್ರಾದ ಕೆಂಪು ಕೋಟೆಯಲ್ಲಿನ ದಿವಾನೆ-ಎ-ಖಾಸ ನಲ್ಲಿಯ ಸಣ್ಣ ಮಸೀದಿಯ ಮೆಟ್ಟಿಲುಗಳ ಅಡಿಯಲ್ಲಿ ಹೂಳಲಾಗಿದೆ. ಈ ಶ್ರೀವಿಗ್ರಹಗಳನ್ನು ಅಲ್ಲಿಂದ ಹೊರತೆಗೆಯಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಮುಂದಿನ ಆಲಿಕೆಯು ಏಪ್ರಿಲ್ ೧೯ ರಂದು ನಡೆಯಲಿದೆ.

ನ್ಯಾಯವಾದಿ ಸಿಂಗ ಇವರು ನ್ಯಾಯಾಲಯದಲ್ಲಿ, ಸಧ್ಯ ಕಟರಾ ಕೇಶವದೇವ ಟಿಲಾದಲ್ಲಿರುವ ಪ್ರಸ್ತುತ ಭಗವಾನ ಕೇಶವದೇವ ದೇವಸ್ಥಾನ ಮತ್ತು ಭಗವತ ಭವನದಲ್ಲಿರುವ ಬೃಹತ್ ದೇವಾಲಯವನ್ನು ಓರಛಾದ ರಾಜನು ೧೬೧೮ ರಲ್ಲಿ ಜಹಾಂಗೀರ್ ಬಾದಶಾಹನ ಆಳ್ವಿಕೆಯಲ್ಲಿ ನಿರ್ಮಿಸಿದ್ದಾರೆ. ಈ ದೇವಾಲಯವನ್ನು ೧೬೬೯ ರಲ್ಲಿ ಔರಂಗಜೇಬನು ನೆಲಸಮಗೊಳಿಸಿದನು ಮತ್ತು ಈದ್ಗಾ ಮಸೀದಿಯನ್ನು ಅದರ ಅವಶೇಷದಿಂದ ನಿರ್ಮಿಸಲಾಯಿತು. ಈ ಸಮಯದಲ್ಲಿ ದೇವಾಲಯದಲ್ಲಿದ್ದ ಭಗವಾನ ಕೇಶವದೇವ ಅವರ `ಶ್ರೀವಿಗ್ರಹ’ಗಳನ್ನು ಆಗ್ರಾದ ಕೆಂಪು ಕೋಟೆಯ ದಿವಾನೆ-ಎ-ಖಾಸ್‍ನಲ್ಲಿರುವ ಸಣ್ಣ ಮಸೀದಿಯ ಮೆಟ್ಟಿಲಿನಡಿಯಲ್ಲಿ ಹೂಳಲಾಯಿತು. ಇದು ಇಂದಿಗೂ ಲಕ್ಷಾಂತರ ಭಕ್ತರಿಗೆ ನೋವುಂಟು ಮಾಡಿದೆ. ಆದ್ದರಿಂದ ಪುರಾತತ್ವ ಇಲಾಖೆ ಅಥವಾ ಇತರ ತಜ್ಞರು ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿಕೊಂಡು ‘ಶ್ರೀವಿಗ್ರಹ’ಗಳನ್ನು ಹೊರಗೆ ತೆಗೆದು ಸಂರಕ್ಷಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.