ಗೋರಖಪುರ (ಉತ್ತರ ಪ್ರದೇಶ)ದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ

ಗೋರಖಪುರದಲ್ಲಿ ಕಳೆದ ೮ ದಿನಗಳಲ್ಲಿ ನಡೆದ ೭ ಹತ್ಯೆಗಳು

ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಲೇ ಇದೆ ! ರಾಜ್ಯದಲ್ಲಿ ಸಾಧು, ಸಂತ, ಮಹಂತ, ಹಿಂದುತ್ವನಷ್ಠರ ಹತ್ಯೆಯಾಗುವುದು ಹಾಗೂ ಅದು ಕೂಡಾ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕರ್ಮ ಭೂಮಿಯಲ್ಲಿ ಘಟಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಬ್ರಿಜೇಶ ಸಿಂಗ

ಗೋರಖಪುರ (ಉತ್ತರ ಪ್ರದೇಶ) – ಬಿಜೆಪಿ ಮುಖಂಡ ಮತ್ತು ಮಾಜಿ ಪಂಚಾಯತಿ ಅಧ್ಯಕ್ಷ ಬ್ರಿಜೇಶ ಸಿಂಗ ಅವರನ್ನು ಏಪ್ರಿಲ್ ೨ ರ ರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದ ಗೂಂಡಾಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಈವರೆಗೆ ಸುನಿಲ ಶ್ರೀವಾಸ್ತವ ಮತ್ತು ರಾಮಸಮುಜ ಅವರನ್ನು ಬಂಧಿಸಿದ್ದಾರೆ. ಕಳೆದ ೮ ದಿನಗಳಲ್ಲಿ ಗೋರಖಪುರದಲ್ಲಿ ೭ ಹತ್ಯೆಯ ಘಟನೆಗಳು ನಡೆದಿವೆ. ಎರಡು ದಿನಗಳ ಹಿಂದೆ ಸಿಂಗ ಇವರ ಪ್ರಾಪರ್ಟಿ ಡೀಲರ್ ಜೊತೆಗೆ ವಾದವಾಗಿತ್ತು. ‘ಅದಕ್ಕಾಗಿಯೇ ಈ ಕೊಲೆ ನಡೆದಿದೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.