ಅಯೋಧ್ಯೆಯ ಹನುಮಾನಗಢಿಯಲ್ಲಿ ಇಟ್ಟಿಗೆಯಿಂದ ಜಜ್ಜಿ ಮಹಂತರ ಹತ್ಯೆ !

  • ಉತ್ತರಪ್ರದೇಶದಲ್ಲಿ ಸಾಧುಗಳ, ಸಂತರ, ಮಹಂತರ, ಹಿಂದುತ್ವನಿಷ್ಠರ ಹತ್ಯೆಯ ಸರಣಿ ಮುಂದುವರಿಕೆ ! 
  • ಇದರಿಂದ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇತರ ರಾಜ್ಯಗಳ ತುಲನೆಯಲ್ಲಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ತೋರಿಸುತ್ತದೆ. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಾಧುಗಳು, ಸಂತರು, ಮಹಾಂತ್ ಮತ್ತು ಹಿಂದುತ್ವನಿಷ್ಠರನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !
ತನಿಖೆ ನಡೆಸುತ್ತಿರುವ ಪೊಲೀಸರು

ಅಯೋಧ್ಯೆ (ಉತ್ತರಪ್ರದೇಶ) – ಪ್ರಸಿದ್ಧ ಹನುಮಾನಗಢಿಯಲ್ಲಿನ ಮಹಂತರು ಮತ್ತು ನಾಗ ಸಾಧು ಕನ್ಹಯ್ಯ ದಾಸ ಅವರನ್ನು ಏಪ್ರಿಲ್ ೩ ರ ರಾತ್ರಿ ಅಪರಿಚಿತ ಹಲ್ಲೆಕೋರರು ಇಟ್ಟಿಗೆಯಿಂದ ತಲೆಯನ್ನು ಜಜ್ಜುವ ಮೂಲಕ ಹತ್ಯೆ ಮಾಡಿದ್ದಾರೆ. ಅವರ ಶವವು ಇಲ್ಲಿನ ಚರಣಪಾದುಕಾ ದೇವಸ್ಥಾನದ ಗೋಶಾಲೆಯಲ್ಲಿ ಪತ್ತೆಯಾಗಿದೆ. ಕನ್ಹಯ್ಯ ದಾಸ ಬಸಂತಿಯಾ ಪಟ್ಟಿಯ ಗುಲ್ಚಮನ್ ಬಾಗನಲ್ಲಿಯ ಮಹಂತರಾಗಿದ್ದರು. ಕೊಲೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈಯಕ್ತಿಕ ವಿವಾದದಿಂದಾಗಿ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.

ಮಹಂತ ಕನ್ಹಯ್ಯ ದಾಸ ಅವರ ಗುರುಬಂಧು ರಾಮಾನುಜನದಾಸ ಇವರು, ‘ಮಹಂತ ಕನ್ಹಯ್ಯ ದಾಸ ಅವರು ರಾತ್ರಿ ಊಟದ ನಂತರ ಗೋಶಾಲೆಯಲ್ಲಿ ಮಲಗಿರುವಾಗ ಹತ್ಯೆ ಮಾಡಲಾಯಿತು. ಗೋಲು ದಾಸ್ ಅಲಿಯಾಸ ಶಶಿಕಾಂತ ದಾಸ ಅವರೊಂದಿಗೆ ಜಮೀನು ಮತ್ತು ಮನೆಯ ಬಗ್ಗೆ ವಾದ ಇತ್ತು ಎಂದು ತಿಳಿಸಿದ್ದಾರೆ. ಪೊಲೀಸರು ಗೋಲು ದಾಸನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.