ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯು ರಸಾತಳಕ್ಕೆ ಇಳಿಯುತ್ತಾ ಹೋಗುತ್ತಿದೆ ! ರಾಜ್ಯದಲ್ಲಿ ಗೋಹತ್ಯೆಗೆ ನಿಷೇಧವಿರುವಾಗಲೂ ಈ ರೀತಿಯಲ್ಲಿ ಗೋ ಕಳ್ಳ ಸಾಗಣೆ ಆಗುತ್ತಿರುವುದಾದರೂ ಹೇಗೆ ? ಪೊಲೀಸರು ಕುರುಡರಾಗಿದ್ದಾರೆಯೇ ? ಗೋ ರಕ್ಷಕರಿಗೆ ಸಿಗುವ ಮಾಹಿತಿಯು ಪೊಲೀಸರಿಗೆ ಏಕೆ ಸಿಗುತ್ತಿಲ್ಲ ? ಅಥವಾ ‘ಪೊಲೀಸರು ಗೋಕಳ್ಳ ಸಾಗಾಟಗಾರರಿಂದ ಲಂಚ ತೆಗೆದುಕೊಳ್ಳುತ್ತಾರೆ’ ಎಂದು ಹಿಂದೂಗಳು ಅರ್ಥಮಾಡಿಕೊಳ್ಳಬೇಕೆ ?
ಆಗ್ರಾ (ಉತ್ತರ ಪ್ರದೇಶ) – ಇಲ್ಲಿಯ ರಾಯಭಾ ಪ್ರದೇಶದಲ್ಲಿ ಏಪ್ರಿಲ್ ೪ ರಂದು ರಾತ್ರಿ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷ ರೌನಕ ಠಾಕೂರ ಇವರು ಗೋ ಸಾಗಾಟವನ್ನು ತಡೆಯಲು ಹೋದಾಗ ಮತಾಂಧರಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಇದರಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಸ್ಥಾನದ್ಲ ನಂಬರ್ ಪ್ಲೇಟ್ ಹೊಂದಿರುವ ಕಂಟೇನರ್‌ನಲ್ಲಿ ಹಸುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯು ಬಂದಿತ್ತು, ಕಾರ್ಯಕರ್ತರೊಂದಿಗೆ ಟೋಲ್ ಪ್ಲಾಜಾದಲ್ಲಿ ವಾಹನವನ್ನು ನಿಲ್ಲಿಸುವ ಪ್ರಯತ್ನಗಳು ನಡೆದರೂ ವಾಹನದ ವೇಗವನ್ನು ಹೆಚ್ಚಿಸಲಾಯಿತು. ನಾನು ವಾಹನವನ್ನು ಬೆನ್ನಟ್ಟಿ ಕಿಟಕಿಯನ್ನು ಹಿಡಿದುಕೊಂಡೆ. ನಂತರ ವಾಹನದಲ್ಲಿದ್ದ ಮತಾಂಧರು ಕಬ್ಬಿಣದ ಸರಳುಗಳು ಮತ್ತು ಹರಿತವಾದ ಆಯುಧಗಳಿಂದ ದಾಳಿ ಮಾಡಿದರು. ಅವರು ಕಿಟಕಿ ತೆರೆದ ಕಾರಣ ನಾನು ಕೆಳಗೆ ಬಿದ್ದೆ. ನಂತರ ಮತಾಂಧರು ವಾಹನದೊಂದಿಗೆ ಓಡಿಹೋದರು. ಈ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಲಾಗಿದೆ. ಈ ಆರೋಪಿಗಳ ಹೆಸರು ಕಲ್ಲು, ಪಪ್ಪು ಮತ್ತು ಷರೀಫ್ ಎಂದಾಗಿದೆ.