ಅಮಿತ್ ಷಾ ಮತ್ತು ಯೋಗಿ ಆದಿತ್ಯನಾಥ ಅವರನ್ನು ಧಾರ್ಮಿಕ ಸ್ಥಳದಲ್ಲಿ ಕೊಲ್ಲುವ ಬೆದರಿಕೆ

ಇಲ್ಲಿಯವರೆಗೆ ದೇಶದಲ್ಲಿ ಸಾಧುಗಳು, ಸಂತರು, ಮಹಂತರು, ಹಿಂದುತ್ವನಿಷ್ಠರ ಹತ್ಯೆಗಳಾಗುತ್ತಿದ್ದವು. ಅದರಲ್ಲೂ ಹಿಂದುತ್ವನಿಷ್ಠ ಸಚಿವರನ್ನೂ ಗುರಿಯಾಗಿಸುವ ಬೆದರಿಕೆ ಹಾಕುವುದನ್ನು ನೋಡಿದರೆ ಸಾವಿರಾರು ಸಾಧುಗಳು, ಸಂತರು ಮಹಂತರು ಇವರೆಲ್ಲರನ್ನು ರಕ್ಷಿಸುವ ಜವಾಬ್ದಾರಿಯನ್ನು ಕೇಂದ್ರ ಸರಕಾರ ವಹಿಸಿಕೊಂಡು ಜಿಹಾದಿ ಭಯೋತ್ಪಾದನೆಯನ್ನು ಸರ್ವನಾಶ ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ನವ ದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕೊಲ್ಲುವ ಬೆದರಿಕೆಯ ಇಮೇಲ್ ಒಂದು ಮುಂಬಯಿನ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಚೇರಿಗೆ ಸಿಕ್ಕಿದೆ. ‘ಮುಂದಿನ ಕೆಲವೇ ದಿನಗಳಲ್ಲಿ ಅವರನ್ನು ಧಾರ್ಮಿಕ ಸ್ಥಳದ ಬಳಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹತ್ಯೆಗೈಯ್ಯಲಾಗುವುದು. ನಾವೂ ೧೧ ಆತ್ಮಾಹುತಿ ಬಾಂಬರ್‌ಗಳು ಇದ್ದೇವೆ’, ಎಂದು ಅದರಲ್ಲಿ ಹೇಳಿದೆ. ಇದರ ನಂತರ ರಕ್ಷಣಾ ಪಡೆಗಳು ಸತರ್ಕವಾಗಿವೆ.