ಗೋಹತ್ಯೆಯ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಮತಾಂಧರಿಂದ ಕಲ್ಲು ತೂರಾಟ

೬ ಪೊಲೀಸರಿಗೆ ಗಾಯ

ಉತ್ತರ ಪ್ರದೇಶದಲ್ಲಿ ಕಾನೂನಿನ ರಾಜ್ಯವಿದೆಯೇ ಅಥವಾ ಮತಾಂಧರ ರಾಜ್ಯವಿದೆಯೇ ? ಮತಾಂಧರಿಗೆ ಪೊಲೀಸರ ಮೇಲೆ ಕಲ್ಲು ಎಸೆಯುವ ಧೈರ್ಯವಾದರೂ ಹೇಗೆ ಬರುತ್ತದೆ ? ‘ಅಂತಹ ಸಮಯದಲ್ಲಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲು ಪೊಲೀಸರಿಗೆ ಏಕೆ ಆದೇಶಿಸಬಾರದು ?’ ಎಂಬ ಪ್ರಶ್ನೆ ಉದ್ಭವಿಸಿದರೆ, ಅದರಲ್ಲಿ ತಪ್ಪೇನಿದೆ ?

ಇಟಾವಾ (ಉತ್ತರ ಪ್ರದೇಶ) – ಇಲ್ಲಿನ ವಿಲ್ಲೋಚಿಯಾನ್ ಮೊಹಲ್ಲಾದಲ್ಲಿ ಗೋಹತ್ಯೆ ಪ್ರಕರಣದ ಆರೋಪಿ ಅನೀಸ್ ಉಪಾಖ್ಯ ಸಾಜನ್‍ನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಅನೀಸ್ ಮತ್ತು ಆತನ ಸಹಚರರು ಕಲ್ಲು ಎಸೆದರು. ಇದರಲ್ಲಿ ೬ ಪೊಲೀಸರು ಗಾಯಗೊಂಡಿದ್ದಾರೆ. ಇದರಲ್ಲಿ ಓರ್ವ ಮಹಿಳಾ ಪೊಲೀಸ್ ಅಧಿಕಾರಿ ಸೇರಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನೀಸ್ ಅವರ ೫ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.