ಅಫ್ಘಾನಿಸ್ತಾನದ ಕಂದಹಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ನಿಂದ ರಾಕೆಟ್ ದಾಳಿ

ತಾಲಿಬಾನನಿಂದ ಕಂದಹಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಕೆಟನಿಂದ ಆಕ್ರಮಣ ಮಾಡಲಾಗಿದೆ. ಒಟ್ಟು 3 ರಾಕೆಟ್‍ಗಳನ್ನು ಬಿಟ್ಟಿದ್ದು ಅದರಲ್ಲಿ ಒಂದು ವಿಮಾನ ನಿಲ್ದಾಣದಲ್ಲಿ ಹಾಗೂ 2 ರನ್ ವೇ ಮೇಲೆ ಬಿದ್ದಿವೆ.

ಅಫ್ಘಾನಿಸ್ತಾನದ ತಾಲಿಬಾನ್ ನಿಯಂತ್ರಿತ ಪ್ರದೇಶಕ್ಕೆ ಸ್ಥಳಾಂತರವಾಗುತ್ತಿರುವ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು!

ಪಾಕಿಸ್ತಾನದಲ್ಲಿನ ಜಿಹಾದಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಿಯಬಾ ಹಾಗೂ ಜೈಶ್-ಎ-ಮೊಹಮ್ಮದ್ ಇವು ತಮ್ಮ ನೆಲೆಯನ್ನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಸ್ಥಳಾಂತರಿಸಿವೆ, ಎಂದು ಅಫ್ಘಾನಿಸ್ತಾನ ಸರಕಾರವು ಭಾರತಕ್ಕೆ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರಲು ತಿಳಿಸಿದೆ.

ತಡವಾಗುವ ಮುಂಚೆ ನಮ್ಮನ್ನು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಹೊರತೆಗೆಯಿರಿ !

ಅಫಘಾನಿಸ್ತಾನದ ತಾಲಿಬಾನ್‍ಗಳಿಂದ ಭಯಭೀತರಾಗಿರುವ ಹಿಂದೂಗಳು ಮತ್ತು ಸಿಖ್ಖರು `ತಡವಾಗುವ ಮುಂಚೆ ನಮ್ಮನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯಿರಿ’ ಎಂದು ಕಳಕಳಿಯ ಮನವಿಯನ್ನು ಜಗತ್ತಿಗೆ ಮಾಡಿದ್ದಾರೆ.

ತಾಲಿಬಾನಿಯರು ಮೊದಲು ದಾನಿಶ್ ಸಿದ್ದಕಿಯ ಮೇಲೆ ಗುಂಡು ಹಾರಿಸಿದರು ನಂತರ ಆತ ಭಾರತೀಯನಾಗಿದ್ದಾನೆಂಬ ಕೋಪದಿಂದ ಆತನ ತಲೆಯನ್ನು ವಾಹನದಡಿಯಲ್ಲಿ ಹೊಸಕಿ ಹಾಕಿದರು ! – ಅಫ್ಘಾನ್ ಕಮಾಂಡರನು ನೀಡಿದ ಮಾಹಿತಿ

ಭಾರತದ ವಾರ್ತಾಛಾಯಾಚಿತ್ರಕಾರ ಹಾಗೂ ‘ಪುಲಿತ್ಜರ’ ಪ್ರಶಸ್ತಿ ವಿಜೇತ ದಾನಿಶ್ ಸಿದ್ದಕಿಯವರನ್ನು ಕೆಲವು ದಿನಗಳ ಹಿಂದೆ ಅಫಘಾನಿಸ್ತಾನದಲ್ಲಿ ಹತ್ಯೆ ಮಾಡಲಾಗಿತ್ತು. ಗುಂಡು ತಗಲಿದ್ದರಿಂದ ಆತ ಸಾವನ್ನಪ್ಪಿದನು ಎಂದು ಹೇಳಲಾಗುತ್ತದೆ.

‘ಭಾರತ ನಿರ್ಮಿಸಿದ ಕಟ್ಟಡಗಳನ್ನು ಕೆಡವಿಹಾಕಿ !’ – ಪಾಕಿಸ್ತಾನದ ಗುಪ್ತಚರ ಸಂಸ್ಥೆಯಿಂದ ತಾಲಿಬಾನ್‍ಗೆ ಸೂಚನೆ

೨೦೦೧ ರಲ್ಲಿ ಅಮೆರಿಕವು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅನ್ನು ಉರುಳಿಸಿದ ನಂತರ ಕಳೆದ ಎರಡು ದಶಕಗಳಲ್ಲಿ ಭಾರತ ಅಫ್ಘಾನಿಸ್ತಾನದಲ್ಲಿ ಹೆಚ್ಚು ಹೂಡಿಕೆ ಮಾಡಿದೆ. ಭಾರತವು ಅಫ್ಘಾನಿಸ್ತಾನದಲ್ಲಿ ೨೧೮ ಕಿ.ಮೀ ಉದ್ದದ ಡೆಲರಾಮನಿಂದ ಜರಾಂಜ್ ಸಲಮಾ ಅಣೆಕಟ್ಟುವರೆಗೆ ರಸ್ತೆಯನ್ನು ನಿರ್ಮಿಸಿದೆ.