‘ಭಾರತ ನಿರ್ಮಿಸಿದ ಕಟ್ಟಡಗಳನ್ನು ಕೆಡವಿಹಾಕಿ !’ – ಪಾಕಿಸ್ತಾನದ ಗುಪ್ತಚರ ಸಂಸ್ಥೆಯಿಂದ ತಾಲಿಬಾನ್‍ಗೆ ಸೂಚನೆ

ಪಾಕಿಸ್ತಾನವು ತಾಲಿಬಾನ್ ಅನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತದೆ, ಎಂಬುದು ವಿವಿಧ ಉದಾಹರಣೆಗಳಿಂದ ಸಾಬೀತಾಗಿದೆ. ಈ ಇಬ್ಬರ ವಿರುದ್ಧ ಭಾರತ ಆಕ್ರಮಣಕಾರಿ ನೀತಿಯನ್ನು ಅನುಸರಿಸುವುದು ಅನಿವಾರ್ಯವಾಗಿದೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ಯು ತಾಲಿಬಾನ್‍ಗೆ ಅಫ್ಘಾನಿಸ್ತಾನದಲ್ಲಿ ಭಾರತವು ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಸೂಚನೆ ನೀಡಿದೆ. ೨೦೦೧ ರಲ್ಲಿ ಅಮೆರಿಕವು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅನ್ನು ಉರುಳಿಸಿದ ನಂತರ ಕಳೆದ ಎರಡು ದಶಕಗಳಲ್ಲಿ ಭಾರತ ಅಫ್ಘಾನಿಸ್ತಾನದಲ್ಲಿ ಹೆಚ್ಚು ಹೂಡಿಕೆ ಮಾಡಿದೆ. ಭಾರತವು ಅಫ್ಘಾನಿಸ್ತಾನದಲ್ಲಿ ೨೧೮ ಕಿ.ಮೀ ಉದ್ದದ ಡೆಲರಾಮನಿಂದ ಜರಾಂಜ್ ಸಲಮಾ ಅಣೆಕಟ್ಟುವರೆಗೆ ರಸ್ತೆಯನ್ನು ನಿರ್ಮಿಸಿದೆ. ಅದೇರೀತಿ ಭಾರತವು ೨೦೧೫ ರಲ್ಲಿ ಅಫ್ಘಾನಿಸ್ತಾನ ಸಂಸತ್ತನ್ನು ಸಹ ನಿರ್ಮಿಸಿ ಕೊಟ್ಟಿದೆ.