ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರಗಳು

‘ಸಕ್ರಿಯ ಹಿಂದೂಗಳೇ, ಮಲಗಿರುವ ಹಿಂದೂಗಳನ್ನು ಜಾಗೃತಗೊಳಿಸುವುದರಲ್ಲಿ ಸಮಯ ವ್ಯರ್ಥ ಮಾಡಬೇಡಿ. ಈಗ ಜಾಗೃತ ಹಿಂದೂಗಳಿಗೆ ದಿಶೆ ನೀಡುವ ಕಾರ್ಯವನ್ನು ಮಾಡಿರಿ. ಆಗ ಮಾತ್ರ ನೀವು ಸಮೀಪಿಸುತ್ತಿರುವ ಆಪತ್ಕಾಲದಲ್ಲಿ ರಕ್ಷಿಸಲ್ಪಡುವಿರಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬಲ್ಲಿರಿ !’

ಅಧ್ಯಾತ್ಮ ಸಂಬಂಧಿತ ಗ್ರಂಥಗಳನ್ನು ಕೇವಲ ಪಾರಾಯಣವಷ್ಟೇ ಅಲ್ಲ; ಅದನ್ನು ಓದಿ ಕೃತಿಗೆ ತರುವುದು ಮಹತ್ವದ್ದು !

ಅನೇಕ ಜನರು ಅಧ್ಯಾತ್ಮಕ್ಕೆ ಸಂಬಂಧ ಪಟ್ಟ ಗ್ರಂಥಗಳನ್ನು ಓದುತ್ತಾರೆ. ಕೆಲವರು ಅವರ ದೊಡ್ಡಸ್ತಿಕೆಗೆ ಎಂದು ‘ನಾನು ಈ ಗ್ರಂಥವನ್ನು … ಇಷ್ಟು ಬಾರಿ ಓದಿದ್ದೇನೆ’, ಎಂದೂ ಹೇಳುತ್ತಾರೆ. ಪ್ರತ್ಯಕ್ಷದಲ್ಲಿ ಅಧ್ಯಾತ್ಮದಲ್ಲಿ ಓದಿದ್ದನ್ನು ಕೃತಿಯಲ್ಲಿ ತರುವುದಕ್ಕೆ ಮಹತ್ವ ಇದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಬುದ್ಧಿಪ್ರಾಮಾಣ್ಯವಾದಿ ಗಳ, ಬುದ್ಧಿಶಕ್ತಿಗೆ ಮೀರಿ ‘ಭಗವಂತ ಇಲ್ಲ’ ಎಂಬ ಹೇಳಿಕೆಯು ‘ವೈದ್ಯರು, ವಕೀಲರು, ಎಂದೆಲ್ಲ ಇರಲ್ಲ’, ಎಂದು ಬಾಲವಾಡಿಯ ಮಕ್ಕಳು ಹೇಳಿದಂತಿದೆ.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದೂ ರಾಷ್ಟ್ರದಲ್ಲಿ ಪೊಲೀಸ್ ಮತ್ತು ಸೈನ್ಯದಲ್ಲಿ ಮಾತ್ರವಲ್ಲ; ಆಡಳಿತದಲ್ಲಿ ಭರ್ತಿ ಮಾಡುವಾಗಲೂ ‘ರಾಷ್ಟ್ರ ಹಾಗೂ ಧರ್ಮದ ಬಗ್ಗೆ ಪ್ರೇಮ’ ಈ ಘಟಕವನ್ನು ಎಲ್ಲಕ್ಕಿಂತ ಮಹತ್ವದ ಘಟಕವೆಂದು ಪರಿಗಣಿಸಲಾಗುವುದು !’

ಶೀಘ್ರದಲ್ಲೇ ಆಗಲಿದೆ ಹಿಂದೂ ರಾಷ್ಟ್ರದ ಸ್ಥಾಪನೆ !

‘ಕಲಿಯುಗಾಂತರ್ಗತ ಕಲಿಯುಗವು ಈಗ ವೃದ್ಧ ವಾಗಿದೆ. ಅದು ನಾಶವಾಗಿ ಈಗ ಕಲಿಯುಗಾಂತರ್ಗತ ಸತ್ಯಯುಗವು ಬರಲಿದೆ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ !’

ಪಾಶ್ಚಾತ್ಯ ಮತ್ತು ಹಿಂದೂ ಸಂಸ್ಕೃತಿಯಲ್ಲಿನ ವ್ಯತ್ಯಾಸ !

ಪಾಶ್ಚಾತ್ಯ ಸಂಸ್ಕೃತಿಯು ಸ್ವೈಚ್ಛೆಗೆ ಪ್ರೋತ್ಸಾಹ ನೀಡುವ ವೈಯಕ್ತಿಕ ಸ್ವಾತಂತ್ರ್ಯವನ್ನು ಸಮರ್ಥಿಸುತ್ತಾ ದುಃಖಕ್ಕೆ ಆಮಂತ್ರಣ ನೀಡುತ್ತದೆ, ಆದರೆ ಹಿಂದೂ ಸಂಸ್ಕೃತಿಯು ಸ್ವ-ಇಚ್ಛೆಯನ್ನು ನಾಶ ಮಾಡಿ ಸತ್‌-ಚಿತ್‌-ಆನಂದ ಅವಸ್ಥೆ ಯನ್ನು ಹೇಗೆ ಪಡೆಯಬೇಕು, ಎಂಬುದನ್ನು ಕಲಿಸುತ್ತದೆ.’

ಜಗತ್ತಿನ ಎಲ್ಲಾ ಭಾಷೆಗಳ ಪೈಕಿ ಸಂಸ್ಕೃತದಲ್ಲಿ ಮಾತ್ರ ಎಲ್ಲ ಕಡೆಗಳಲ್ಲಿ ಉಚ್ಚಾರ ಸಮಾನವಾಗಿರುತ್ತದೆ !

ಅಹಂ ಇಟ್ಟುಕೊಳ್ಳದೇ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಸಹಭಾಗಿಯಾಗಿರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ವಿಜ್ಞಾನಕ್ಕೆ ಹೆಚ್ಚಿನಾಂಶ ಏನೂ ತಿಳಿದಿಲ್ಲದಿರುವ ಕಾರಣ ಯಾವುದಾದರೊಂದು ಸಿದ್ಧಾಂತವನ್ನು ಸಿದ್ಧಪಡಿಸಲು ನಿರಂತರ ಸಂಶೋಧನೆ ಮಾಡಬೇಕಾಗುತ್ತದೆ.