‘ಬರೆಯುವಾಗ ಅಕ್ಷರದ ರೂಪವು ಮಹತ್ವದ್ದಾಗಿರುವಂತೆಯೇ ಉಚ್ಚರಿಸುವಾಗ ಆ ಉಚ್ಚಾರಣೆಯು ಮಹತ್ವದ್ದಾಗಿರುತ್ತದೆ. ಜಗತ್ತಿನ ಎಲ್ಲಾ ಭಾಷೆಗಳ ಪೈಕಿ ಸಂಸ್ಕೃತದಲ್ಲಿ ಮಾತ್ರ ಇದಕ್ಕೆ ಮಹತ್ವ ನೀಡಲಾಗಿದೆ; ಆದ್ದರಿಂದ ಭಾರತದಲ್ಲಿ ಎಲ್ಲ ಕಡೆಗಳಲ್ಲಿಯೂ ವೇದಗಳ ಉಚ್ಚಾರಣೆಯು ಸಮಾನವೂ, ಪರಿಣಾಮಕಾರಿಯೂ ಆಗಿದೆ.’
ರಾಷ್ಟ್ರದ ವಿಕಾಸದ ಮೌಲ್ಯಮಾಪನ ಹೇಗೆ ಮಾಡಬೇಕು ?
‘ನಾಗರಿಕರ ಆಧ್ಯಾತ್ಮಿಕ ಉನ್ನತಿಯಿಂದ ರಾಷ್ಟ್ರದ ವಿಕಾಸದ ಮೌಲ್ಯಮಾಪನ ಮಾಡಬೇಕು. ಏಕೆಂದರೆ ಭೌತಿಕ ವಿಕಾಸವು ಎಷ್ಟೇ ಆದರೂ, ಆತ್ಮಿಕ (ಅಥವಾ ನೈತಿಕ) ವಿಕಾಸವಾಗದಿದ್ದರೆ ಆ ಭೌತಿಕ ವಿಕಾಸಕ್ಕೆ ಏನು ಅರ್ಥವಿದೆ ?’
ಯಜ್ಞದ ಮಹತ್ವ !
ಶರೀರದಲ್ಲಿ ಕೀಟಾಣುಗಳಿದ್ದರೆ, ಅವು ಔಷಧಿ ಸೇವನೆಯಿಂದ ನಾಶವಾಗುತ್ತವೆ. ಅದೇ ರೀತಿ ವಾತಾವರಣದಲ್ಲಿರುವ ನಕಾರಾತ್ಮಕ ರಜ-ತಮಗಳು, ಯಜ್ಞದಿಂದ ಉತ್ಪನ್ನವಾಗುವ ಸ್ಥೂಲ ಮತ್ತು ಸೂಕ್ಷ್ಮ ಧೂಮದಿಂದ ನಾಶವಾಗುತ್ತವೆ.
ಅಹಂ ಇಟ್ಟುಕೊಳ್ಳದೇ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಸಹಭಾಗಿಯಾಗಿರಿ !
ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡುವಾಗ ‘ನಾನು ಮಾಡುತ್ತೇನೆ’, ಎಂಬ ಅಹಂ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ; ಏಕೆಂದರೆ ಕಾಲಮಹಿಮೆಗನುಸಾರ, ಆ ಕಾರ್ಯವು ಆಗುವುದು ನಿಶ್ಚಿತ; ಆದರೆ ಯಾರು ಈ ಕಾರ್ಯದಲ್ಲಿ ನಿಸ್ವಾರ್ಥವಾಗಿ ತನು-ಮನ-ಧನದ ತ್ಯಾಗ ಮಾಡಿ ಸಹಭಾಗಿ ಯಾಗುವರೋ, ಅವರ ಸಾಧನೆಯಾಗಿ ಅವರು ಜನನ-ಮರಣ ಚಕ್ರದಿಂದ ಮುಕ್ತರಾಗುವರು.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.