ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಮಹತ್ವ !
ಈಶ್ವರನಲ್ಲಿ ಸ್ವಭಾವದೋಷ ಮತ್ತು ಅಹಂಗಳು ಇರುವುದಿಲ್ಲ. ಅವನಲ್ಲಿ ಏಕರೂಪವಾಗಬೇಕಾದರೆ ನಾವೂ ಅವುಗಳನ್ನು ನಿರ್ಮೂಲನೆ ಮಾಡುವುದು ಅವಶ್ಯಕವಾಗಿದೆ.
ಅಧ್ಯಾತ್ಮ ವಿಷಯದ ಬಗ್ಗೆ ಸಂಶೋಧನೆಯ ಮಹತ್ವ !
ವಿಜ್ಞಾನಕ್ಕೆ ಹೆಚ್ಚಿನಾಂಶ ಏನೂ ತಿಳಿದಿಲ್ಲದಿರುವ ಕಾರಣ ಯಾವುದಾದರೊಂದು ಸಿದ್ಧಾಂತವನ್ನು ಸಿದ್ಧಪಡಿಸಲು ನಿರಂತರ ಸಂಶೋಧನೆ ಮಾಡಬೇಕಾಗುತ್ತದೆ. ತದ್ವಿರುದ್ಧ ಅಧ್ಯಾತ್ಮದಲ್ಲಿ ಎಲ್ಲವೂ ತಿಳಿದಿರುವುದರಿಂದ ಹಾಗೆ ಮಾಡಬೇಕಾಗುವುದಿಲ್ಲ. ಆದರೆ ಇಂದಿನ ವೈಜ್ಞಾನಿಕಯುಗದ ಪೀಳಿಗೆಗೆ ಅಧ್ಯಾತ್ಮದ ಮೇಲೆ ವಿಶ್ವಾಸ ಬಂದು ಅವರು ಅಧ್ಯಾತ್ಮದೆಡೆಗೆ ತಿರುಗಬೇಕೆಂಬ ಕಾರಣಕ್ಕಾಗಿ ಅಧ್ಯಾತ್ಮದ ಕುರಿತು ಸಂಶೋಧನೆ ಮಾಡಬೇಕಾಗುತ್ತದೆ !
ಯಜ್ಞದ ಮಹತ್ವ !
‘ಶರೀರದಲ್ಲಿ ಕ್ರಿಮಿಗಳಿದ್ದರೆ, ಅವು ಔಷಧಿ ಸೇವನೆಯಿಂದ ನಾಶವಾಗುತ್ತವೆ. ಅದೇ ರೀತಿಯಲ್ಲಿ ವಾತಾವರಣದಲ್ಲಿರುವ ನಕಾರಾತ್ಮಕ ರಜ-ತಮಗಳು, ಯಜ್ಞದಿಂದ ಉತ್ಪನ್ನವಾಗುವ ಸ್ಥೂಲ ಮತ್ತು ಸೂಕ್ಷ್ಮ ಧೂಮದಿಂದ ನಾಶವಾಗುತ್ತವೆ.’ ವಿಜ್ಞಾನಕ್ಕೆ ಇದು ಯಾವಾಗ ತಿಳಿಯುವುದು ? ‘ಗಣಿತ ಮತ್ತು ಭೂಗೋಳ ಇವು ಬೇರೆ ಬೇರೆ ವಿಷಯ ಗಳಾಗಿವೆ. ಇವೆರಡೂ ವಿಷಯಗಳನ್ನು ಒಂದೇ ಭಾಷೆಯಲ್ಲಿ ತಿಳಿಸಲು ಆಗುವುದಿಲ್ಲ. ಹಾಗೆಯೇ ‘ವಿಜ್ಞಾನ ಮತ್ತು ಅಧ್ಯಾತ್ಮ ಇವುಗಳು ಸಹ ಬೇರೆ ಬೇರೆ ವಿಷಯಗಳಾಗಿವೆ’ ಎಂಬುದನ್ನು ವಿಜ್ಞಾನವು ತಿಳಿದುಕೊಳ್ಳಬೇಕು.’
ಅಧ್ಯಾತ್ಮವನ್ನು ಪರಿಚಯಿಸುವ ‘ಸನಾತನ ಪ್ರಭಾತ’ !
‘ಸನಾತನ ಪ್ರಭಾತ’ದಲ್ಲಿ ಶೇ. ೩೦ ರಷ್ಟು ಲೇಖನಗಳು ಸಾಧನೆಗೆ ಸಂಬಂಧಪಟ್ಟಿರುತ್ತವೆ; ಆದುದರಿಂದ ಓದುಗರಿಗೆ ಅಧ್ಯಾತ್ಮದ ಪರಿಚಯವಾಗುತ್ತದೆ ಮತ್ತು ಕೆಲವರು ಸಾಧನೆಯನ್ನು ಪ್ರಾರಂಭಿಸಿ ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತಾರೆ. ತದ್ವಿರುದ್ಧ ಹೆಚ್ಚಿನ ಬೇರೆ ನಿಯತಕಾಲಿಕೆಗಳಲ್ಲಿನ ಶೇ. ೧ ರಷ್ಟು ಲೇಖನವು ಕೂಡ ಸಾಧನೆಗೆ ಸಂಬಂಧಪಟ್ಟಿರುವುದಿಲ್ಲ. ಈ ಕಾರಣದಿಂದ ಓದುಗರಿಗೆ ನಿಜವಾದ ಅರ್ಥದಲ್ಲಿ ಲಾಭವಾಗುವುದಿಲ್ಲ.’
ವಿಜ್ಞಾನದ ಮಿತಿ !
‘ವಿಜ್ಞಾನವು ಅಧ್ಯಾತ್ಮದ ಸಿದ್ಧಾಂತಗಳ ವಿಷಯದಲ್ಲಿ ಏನಾದರೂ ಹೇಳುವುದು ಎಂದರೆ ಚಿಕ್ಕ ಮಕ್ಕಳು ದೊಡ್ಡವರ ವಿಷಯದಲ್ಲಿ ಏನಾದರೂ ಹೇಳಿದಂತಿದೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ