ಅಧ್ಯಾತ್ಮ ಸಂಬಂಧಿತ ಗ್ರಂಥಗಳನ್ನು ಕೇವಲ ಪಾರಾಯಣವಷ್ಟೇ ಅಲ್ಲ; ಅದನ್ನು ಓದಿ ಕೃತಿಗೆ ತರುವುದು ಮಹತ್ವದ್ದು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅನೇಕ ಜನರು ಅಧ್ಯಾತ್ಮಕ್ಕೆ ಸಂಬಂಧ ಪಟ್ಟ ಗ್ರಂಥಗಳನ್ನು ಓದುತ್ತಾರೆ. ಕೆಲವರು ಅವರ ದೊಡ್ಡಸ್ತಿಕೆಗೆ ಎಂದು ‘ನಾನು ಈ ಗ್ರಂಥವನ್ನು … ಇಷ್ಟು ಬಾರಿ ಓದಿದ್ದೇನೆ’, ಎಂದೂ ಹೇಳುತ್ತಾರೆ. ಪ್ರತ್ಯಕ್ಷದಲ್ಲಿ ಅಧ್ಯಾತ್ಮದಲ್ಲಿ ಓದಿದ್ದನ್ನು ಕೃತಿಯಲ್ಲಿ ತರುವುದಕ್ಕೆ ಮಹತ್ವ ಇದೆ, ಉದಾ. ಈಜುವುದು ಹೇಗೆ, ಇದರ ಬಗ್ಗೆ ಎಷ್ಟು ಸಲ ಮಾಹಿತಿ ಓದಿದರೂ, ಪ್ರತ್ಯಕ್ಷದಲ್ಲಿ ನೀರಿಗೆ ಇಳಿಯದೆ ಈಜುವುದು ಕಲಿಯಲು ಸಾಧ್ಯವಿಲ್ಲ. ಅದೇ ರೀತಿ ಅಧ್ಯಾತ್ಮವನ್ನು ಕೃತಿಗೆ ತಂದ ನಂತರವೇ ಅದು ನಿಜವಾಗಿ ಅಂತರಂಗಕ್ಕೆ ಇಳಿಯುತ್ತದೆ. ಆದ್ದರಿಂದ ಅದನ್ನು ಕೇವಲ ಪಠಣ ಅಥವಾ ಪಾರಾಯಣಕ್ಕೆ ಸೀಮಿತಗೊಳಿಸಬಾರದು.

– ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ (೨೮.೧.೨೦೨೪)