ಬಕ್ರೀದ್ ಗಾಗಿ ಕೊರೋನಾ ನಿಯಮದ ಸಡಿಲಿಕೆ, ಕೇರಳದ ಸರಕಾರದ ಬಳಿ ಉತ್ತರ ಕೋರಿದ ಸರ್ವೋಚ್ಚ ನ್ಯಾಯಾಲಯ !

ಬಕ್ರೀದ್ ಗಾಗಿ ಕೇರಳದ ಕಮ್ಯುನಿಸ್ಟ ಸರಕಾರವು ಕೊರೋನಾದ ನಿಯಗಳನ್ನು ಸಡಿಲಗೊಳಿಸಿದೆ. ಇದನ್ನು ಪ್ರಶ್ನಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (‘ಐ.ಎಮ್.ಎ.’ಯು) ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಆಲಿಕೆ ಮಾಡುವಾಗ ಈ ಬಗ್ಗೆ ಉತ್ತರಿಸುವಂತೆ ಸರಕಾರಕ್ಕೆ ಆದೇಶ ನೀಡಿದೆ.

ಕೇರಳದ ಮಾಕಪ್‍ನ ಯುವ ಶಾಖೆಯ ಕಾರ್ಯಕರ್ತನಿಂದ ೬ ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ

ರಾಜ್ಯದ ಇಡುಕಿ ಜಿಲ್ಲೆಯಲ್ಲಿನ ಕಮ್ಯುನಿಸ್ಟ ಪಕ್ಷದ ಡೆಮೊಕ್ರೆಟಿಕ ಯುಥ ಫೆಡರೆಶನ್ ಆಫ್ ಇಂಡಿಯಾ ಈ ಯುವ ಶಾಖೆಯ ೨೨ ವರ್ಷದ ಕಾರ್ಯಕರ್ತ ಅರ್ಜುನ ಇವನನ್ನು ೬ ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.

ಹೆಂಡತಿ ಮತ್ತು ಮಗನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವುದನ್ನು ವಿರೋಧಿಸಲು ಸಹಾಯ ಕೇಳಿದ ಕ್ರೈಸ್ತ ಕಾರ್ಯಕರ್ತನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ !

ರಾಜ್ಯದ ಆಡಳಿತಾರೂಢ ಮಾಕಪವು ತನ್ನ ಕ್ರೈಸ್ತ ಕಾರ್ಯಕರ್ತ ಪಿ.ಟಿ. ಗಿಲ್‍ಬರ್ಟ್ ಇವರನ್ನು ಪಕ್ಷದಿಂದ ಉಚ್ಚಾಟಿಸಿದೆ. ಆತ ತನ್ನ ಪತ್ನಿ ಮತ್ತು ಮಗನನ್ನು ಬಲವಂತವಾಗಿ ಇಸ್ಲಾಂನಲ್ಲಿ ಮತಾಂತರಿಸಿದ ಬಗ್ಗೆ ವಿರೋಧಿಸಿದ್ದರಿಂದ ಆತನನ್ನು ಪಕ್ಷದಿಂದ ತೆಗೆದುಹಾಕುವ ಕ್ರಮ ಕೈಗೊಳ್ಳಲಾಗಿದೆ. ಆತನು ಮತಾಂತರದ ವಿರುದ್ಧ ದೂರನ್ನು ದಾಖಲಿಸಿದ್ದನು.