ಬಕ್ರೀದ್ ಗಾಗಿ ಕೊರೋನಾ ನಿಯಮದ ಸಡಿಲಿಕೆ, ಕೇರಳದ ಸರಕಾರದ ಬಳಿ ಉತ್ತರ ಕೋರಿದ ಸರ್ವೋಚ್ಚ ನ್ಯಾಯಾಲಯ !

ಕೇರಳದಲ್ಲಿ ಕಮ್ಯುನಿಸ್ಟ ಸರಕಾರವು ಮುಸಲ್ಮಾನರನ್ನು ಸಂತುಷ್ಟಗೊಳಿಸಲು ಜನರ ಜೀವದೊಂದಿಗೆ ಚೆಲ್ಲಾಟವಾಡಿ ಕೊರೊನಾದ ನಿಯಮಗಳಲ್ಲಿ ಸಡಲಿಕೆ ನೀಡುತ್ತಿದೆ, ಇದು ಬಹಿರಂಗವಾಗಿದೆ. ಕುಂಭಮೇಳದಲ್ಲಿ ಹಿಂದೂಗಳಿಗೆ ಬೃಹತ್‍ಪ್ರಮಾಣದಲ್ಲಿ ಭಾಗವಹಿಸಲು ನೀಡಿದ್ದಕ್ಕಾಗಿ ಟೀಕಿಸುವ ಕಾಂಗ್ರೇಸ್, ರಾಷ್ಟ್ರವಾದಿ ಕಾಂಗ್ರೇಸ್, ಸಮಾಜವಾದಿ ಪಕ್ಷ ಇತ್ಯಾದಿ ರಾಜಕೀಯ ಪಕ್ಷಗಳು, ಅದೇರೀತಿ ಜಾತ್ಯತೀತವಾದಿ ಹಾಗೂ ಪ್ರಗತಿ(ಅಧೋಗತಿ)ಪರ ಸಂಘಟನೆಗಳು ಕೇವಲ ಕೇರಳ ಸರಕಾರದ ನಿರ್ಣಯದ ವಿರೋಧದ ಬಗ್ಗೆ ಮೌನವೇಕೆ, ಎಂದು ಅವರು ತಿಳಿಸಬೇಕು !

ನವದೆಹಲಿ – ಬಕ್ರೀದ್ ಗಾಗಿ ಕೇರಳದ ಕಮ್ಯುನಿಸ್ಟ ಸರಕಾರವು ಕೊರೋನಾದ ನಿಯಗಳನ್ನು ಸಡಿಲಗೊಳಿಸಿದೆ. ಇದನ್ನು ಪ್ರಶ್ನಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (‘ಐ.ಎಮ್.ಎ.’ಯು) ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಆಲಿಕೆ ಮಾಡುವಾಗ ಈ ಬಗ್ಗೆ ಉತ್ತರಿಸುವಂತೆ ಸರಕಾರಕ್ಕೆ ಆದೇಶ ನೀಡಿದೆ. ಈ ಬಗ್ಗೆ ನಾಳೆ, ಜುಲೈ ೨೦ ರಂದು ವಿಚಾರಣೆ ನಡೆಯಲಿದೆ. ಸರಕಾರದ ನಿರ್ಧಾರದ ಬಗ್ಗೆ ನ್ಯಾಯಾಲಯವು ಯವುದೇ ಅಭಿಪ್ರಾಯವನ್ನು ನೀಡಿಲ್ಲ. ‘ಬಕ್ರೀದ್ ಕಾಲದಲ್ಲಿ ಕೊರೇನಾದ ಪರಿಸ್ಥಿತಿ ಗಮನಕ್ಕೆ ತೆಗೆದುಕೊಂಡು ರಾಜ್ಯಸರಕಾರವು ನಿಯಮಗಳನ್ನು ಸಡಿಲಿಸಿದರೆ ಪರಿಸ್ಥಿತಿಯು ಇನ್ನೂ ಗಂಭೀರವಾಗಬಹುದು’, ಎಂದು ಐ.ಎಮ್.ಎ.ಯು ಹೇಳಿದೆ. ಕೇರಳ ಸರಕಾರವು ಬಕ್ರೀದ್ ಗಾಗಿ ಹೆಚ್ಚೆಂದರೆ ೪೦ ಜನರನ್ನು ಒಂದೇ ಸ್ಥಳದಲ್ಲಿ ಒಟ್ಟಾಗಲು ಅನುಮತಿ ನೀಡಿದೆ; ಆದರೆ ಈ ೪೦ ಜನರು ವ್ಯಾಕ್ಸಿನೇಶನ್‍ನ ಕಡಿಮೆ ಪಕ್ಷ ಒಂದು ಡೋಸ್ ತೆಗೆದುಕೊಂಡಿರುವುದನ್ನು ಕಡ್ಡಾಯಗೊಳಿಸಿದೆ.