ಜಗತ್ತನ್ನು ಕರೋನಾದ ಕಂದಕಕ್ಕೆ ತಳ್ಳಿರುವ ವುಹಾನ್‌ನಲ್ಲಿನ ಎಲ್ಲ ವಹಿವಾಟುಗಳು ಮೊದಲಿನಂತೆಯೇ ಮುಂದುವರೆದಿದೆ

ಜಗತ್ತನ್ನು ಕರೋನಾದ ಕಂದಕಕ್ಕೆ ತಳ್ಳಿರುವ ಚೀನಾದ ನಗರವಾದ ವುಹಾನ್‌ನಲ್ಲಿನ ಎಲ್ಲಾ ವಹಿವಾಟುಗಳು ಸಾಮಾನ್ಯ ಸ್ಥಿತಿಗೆ ಮರಳಿದೆ. ವುಹಾನ್‌ನಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ‘ನೈಟ್‌ಕ್ಲಬ್’ಗಳೂ ಸಹ ಆರಂಭವಾಗಿವೆ. ವಿಶೇಷವೆಂದರೆ ಇಲ್ಲಿ ಯಾವುದೇ ನಾಗರಿಕರು ‘ಮಾಸ್ಕ್’ ಧರಿಸುವುದಿಲ್ಲ ಮತ್ತು ಸಾಮಾಜಿಕ ಅಂತರವನ್ನೂ ಪಾಲಿಸುತ್ತಿಲ್ಲ.

ಯಾವುದನ್ನು ‘ತಾಜ್ ಮಹಲ್’ ಎಂದು ಕರೆಯುತ್ತಾರೆ ಅದು ಶಿವನ ದೇವಸ್ಥಾನವಾದ ‘ತೇಜೋಮಹಾಲಯ’ವಾಗಿದೆ ! – ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

ಇತ್ತೀಚಿನ ದಿನಗಳಲ್ಲಿ ನೀವು ಯಾವುದನ್ನು ‘ತಾಜ್ ಮಹಲ್’ ಎಂದೂ ಕರೆಯುತ್ತೀರಿ, ಅದರ ಹಿಂದಿನ ಹೆಸರು ‘ತೇಜೋಮಹಾಲಯ’ವಾಗಿದೆ. ಹಿಂದೆ ಅಲ್ಲಿ ಶಿವನ ದೇವಸ್ಥಾನವಿತ್ತು. ಅಲ್ಲಿ ಶಿವನನ್ನು ಸ್ಥಾಪಿಸಲಾಗಿತ್ತು. ಜೈಪುರದ ರಾಜಮನೆತನದವರಲ್ಲಿ ಇದರ ಸಂಪೂರ್ಣ ಇತಿಹಾಸವು ಸುರಕ್ಷಿತವಾಗಿದೆ.

ಮಥುರಾದಲ್ಲಿ ಶ್ರೀಕೃಷ್ಣಜನ್ಮಭೂಮಿಯ ಮುಕ್ತಿಗಾಗಿ ಆಂದೋಲನ ಮಾಡುತ್ತಿದ್ದ ‘ಹಿಂದೂ ಆರ್ಮಿ’ಯ ೨೨ ಕಾರ್ಯಕರ್ತರ ಬಂಧನ

ಹಿಂದೂ ಆರ್ಮಿ ಸಂಘಟನೆಯಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರೀಕೃಷ್ಣಜನ್ಮಭೂಮಿಯನ್ನು ಮುಕ್ತಗೊಳಿಸುವಂತೆ ಚಳುವಳಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಪ್ರಯುಕ್ತ ಸೆಪ್ಟೆಂಬರ್ ೨೧ ರಂದು ಶ್ರೀಕೃಷ್ಣಜನ್ಮಭೂಮಿಗೆ ಹೋಗಿ ಆಂದೋಲನವನ್ನು ಪ್ರಾರಂಭಿಸಲು ಕರೆ ನೀಡಲಾಗಿತ್ತು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಹಿಂದೂ ರಾಷ್ಟ್ರದಲ್ಲಿ (ಸನಾತನ ಧರ್ಮ ರಾಜ್ಯದಲ್ಲಿ) ನಿಯತಕಾಲಿಕೆಗಳು, ದೂರದರ್ಶನ ವಾಹಿನಿಗಳು, ಜಾಲತಾಣಗಳು ಇತ್ಯಾದಿಗಳನ್ನು ಕೇವಲ ಧರ್ಮಶಿಕ್ಷಣ ಮತ್ತು ಸಾಧನೆಗೆ ಮಾತ್ರ ಬಳಸಲಾಗುವುದು. ಇದರಿಂದ ಅಪರಾಧಿಗಳು ಇರುವುದಿಲ್ಲ ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿ ಇರುವುದರಿಂದ ಆನಂದದಿಂದ ಇರುವರು.

ಎಲ್ಲ ವಾಚಕರಿಗೆ, ಹಿತಚಿಂತಕರಿಗೆ ಹಾಗೂ ಧರ್ಮಪ್ರೇಮಿಗಳಿಗೆ ವಿನಂತಿ !

೧೮.೯.೨೦೨೦ ರಿಂದ ೧೬.೧೦.೨೦೨೦ ಈ ಕಾಲಾವಧಿಯಲ್ಲಿ ‘ಅಧಿಕ ಮಾಸ ಇದೆ. ‘ಅಧಿಕ ಮಾಸದಲ್ಲಿ ಮಂಗಲಕಾರ್ಯಗಳನ್ನು ಮಾಡದೇ ವಿಶೇಷ ವ್ರತಗಳು ಹಾಗೂ ಪುಣ್ಯಕರ ಕಾರ್ಯವನ್ನು ಮಾಡಬೇಕು, ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಈ ತಿಂಗಳಿನಲ್ಲಿ ದಾನ ನೀಡಿದರೆ ಅದರ ಹೆಚ್ಚು ಪಟ್ಟು ಫಲ ಸಿಗುತ್ತದೆ. ಆದ್ದರಿಂದ ಈ ಕಾಲದಲ್ಲಿ ವಸ್ತ್ರದಾನ, ಅನ್ನದಾನ ಹಾಗೂ ಜ್ಞಾನದಾನಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವವಿದೆ.

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಮಹತ್ವದ ಸೂಚನೆ ಆಕಾಶದಲ್ಲಿ ಸಿಡಿಲುಗಳ ಆರ್ಭಟವಿದ್ದರೆ, ಮುಂದಿನ ಎಚ್ಚರ ವಹಿಸಿ ಸುರಕ್ಷಿತವಿರಿ !

ಮಳೆಗಾಲದಲ್ಲಿ ಮಳೆಯ ಜೊತೆಗೆ ಗುಡುಗುಗಳ ಆರ್ಭಟವೂ ಇರುತ್ತದೆ. ಕೆಲವು ಸಲ ಇತರ ಋತುಗಳಲ್ಲಿಯೂ  ಆಕಾಶದಲ್ಲಿ  ಮಿಂಚುಗಳು  ಮಿಂಚುತ್ತವೆ. ಮಿಂಚಿನ ಪ್ರಕಾಶ ಮತ್ತು ಅದರ ಶಬ್ದ ಕೇಳಿಸುವುದು, ಇವುಗಳಲ್ಲಿ ೩೦ ಸೆಕೆಂಡುಗಳಿಗಿಂತ ಕಡಿಮೆ ಅಂತರವಿದ್ದರೆ, ಆ ಮಿಂಚು ಅಪಾಯಕಾರಿಯಾಗಿದೆ ಎಂದು ತಿಳಿದುಕೊಳ್ಳಬೇಕು. ಗುಡುಗುವ ಸಿಡಿಲು ಭೂಮಿಯ ಮೇಲೆ ಅಪ್ಪಳಿಸಿ ದೊಡ್ಡ ಪ್ರಮಾಣದಲ್ಲಿ ಜೀವಹಾನಿ ಮತ್ತು ಆರ್ಥಿಕ ಹಾನಿಯಾಗಬಹುದು.

ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರಿಗಾಗಿ ಮಹತ್ವದ ಸೂಚನೆ

ಸದ್ಯ ಭಾರತದಲ್ಲಿರುವ ಮಹಾನಗರಗಳಲ್ಲಿ ಹಾಗೆಯೇ ಇತರ ದೊಡ್ಡ ನಗರಗಳಲ್ಲಿ ಜನಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವ ರೋಗರುಜಿನಗಳು ಎಲ್ಲರ ಚಿಂತೆಯ ವಿಷಯವಾಗಿವೆ. ನಗರಗಳಲ್ಲಿರುವ ಅಪಾರ ಜನಜಂಗುಳಿ, ಸ್ವಚ್ಛತೆಯ ಅಭಾವ, ಹೆಚ್ಚುತ್ತಿರುವ ಮಾಲಿನ್ಯ, ರಜ-ತಮಗಳ ಅಧಿಕ ಪ್ರಾಬಲ್ಯ ಇತ್ಯಾದಿಗಳ ಕಾರಣಗಳಿಂದ ಅಲ್ಲಿನ ನಾಗರಿಕರು ಭಯ ಮತ್ತು ಅಸುರಕ್ಷತೆಯ ನೆರಳಿನಲ್ಲಿ ಬದುಕುತ್ತಿರುವುದು ಕಂಡುಬರುತ್ತದೆ.

ನಾವೀನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಆಧ್ಯಾತ್ಮಿಕ ತೊಂದರೆಗಳ ನಿವಾರಣೆ ಮಾಡುವ ಉಚ್ಚ ದೇವತೆಗಳ ಪೈಕಿ ಒಬ್ಬರೆಂದರೆ ದತ್ತಗುರುಗಳು. ಪ್ರಸ್ತುತ ಯಾರೂ ಶ್ರಾದ್ಧ-ಪಕ್ಷ ಇತ್ಯಾದಿ, ಹಾಗೆಯೇ ಸಾಧನೆಯನ್ನೂ ಮಾಡುವುದಿಲ್ಲ. ಆದ್ದರಿಂದ ಹೆಚ್ಚು- ಕಮ್ಮಿ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆಯಾಗುತ್ತದೆ. ದತ್ತನ ನಾಮಜಪದಿಂದ ನಿರ್ಮಾಣವಾಗುವ ಶಕ್ತಿಯಿಂದ ನಾಮಜಪ ಮಾಡುವವರ ಸುತ್ತಲೂ ಸಂರಕ್ಷಣಾ-ಕವಚವು ನಿರ್ಮಾಣವಾಗುತ್ತದೆ.

ಸಾಧಕರಿಗೆ ಸೂಚನೆ, ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಸದ್ಯ ಸಾರಿಗೆಗಾಗಿ ರೈಲ್ವೆ, ಟ್ರಕ್, ಟೆಂಪೋ, ರಿಕ್ಷಾಗಳಂತಹ ಇಂಧನದಿಂದ ಚಲಿಸುವ ವಾಹನಗಳನ್ನು ಬಳಸಲಾಗುತ್ತದೆ. ಸಂಭಾವ್ಯ ಆಪತ್ಕಾಲದಲ್ಲಿ ಇಂಧನವು ಲಭ್ಯವಿರಲಾರದು. ಆ ಸಮಯದಲ್ಲಿ ದೈನಂದಿನ ಆವಶ್ಯಕತೆಗಳನ್ನು ಪೂರೈಸಲು ಪ್ರಾಚೀನಕಾಲದಲ್ಲಿ ಬಳಸಲಾಗುತ್ತಿದ್ದ ಇಂಧನರಹಿತ ವಾಹನಗಳ (ಉದಾ. ಎತ್ತಿನಗಾಡಿ, ಕುದುರೆಗಾಡಿ) ಪರ್ಯಾಯವನ್ನು ಮಾಡಬೇಕಾಗುತ್ತದೆ. ಇವೆಲ್ಲ ಸಾಧನಗಳನ್ನು ಪಡೆದುಕೊಳ್ಳಲು, ಅದನ್ನು ಓಡಿಸುವುದು, ನಿರ್ವಹಣೆ, ದುರಸ್ತಿ, ಪ್ರಾಣಿಗಳನ್ನು ನೋಡಿಕೊಳ್ಳುವ ಕೌಶಲ್ಯವನ್ನು ಇಂದಿನಿಂದ ಕಲಿಯುವುದು ಆವಶ್ಯವಾಗಿದೆ.

ಸಾಧಕರಿಗೆ ಸೂಚನೆ ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಆಪತ್ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಮುಂತಾದ ಇಂಧನಗಳ ಕೊರತೆಯಾಗಬಹುದು. ಇನ್ನೂ ಮುಂದೆ ಈ ಇಂಧನಗಳೂ ಸಿಗಲಾರದು. ಆಗ ಇಂಧನದಿಂದ ನಡೆಯುವ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳು ನಿರುಪಯುಕ್ತವಾಗುವವು. ಇಂತಹ ಸಮಯದಲ್ಲಿ ಪ್ರಯಾಣ ಮಾಡುವುದು, ರೋಗಿಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದು, ಸಾಮಾನುಗಳನ್ನು ತರುವುದು ಮುಂತಾದವುಗಳಿಗೆ ಸಾರಿಗೆಯ ಪಾರಂಪಾರಿಕ ಸಾಧನಗಳನ್ನು (ಉದಾ. ಎತ್ತಿನಗಾಡಿ, ಕುದುರೆಗಾಡಿ ಇವುಗಳನ್ನು) ಉಪಯೋಗಿಸಬೇಕಾಗುವುದು.