ದೊಡ್ಡ ನಗರಗಳ ಅಸುರಕ್ಷಿತ ವಾತಾವರಣ, ಹಾಗೆಯೇ ನಗರಗಳಲ್ಲಿ ಹೆಚ್ಚುತ್ತಿರುವ ರಜ-ತಮದ ಪ್ರಾಬಲ್ಯ, ಈ ಕಾರಣಗಳಿಂದಾಗಿ ಕುಟುಂಬದವರೊಂದಿಗೆ ಗ್ರಾಮಗಳಿಗೆ ಅಥವಾ ತಾಲೂಕಿನ ಸ್ಥಳಗಳಿಗೆ ಸ್ಥಳಾಂತರವಾಗುವ ವಿಚಾರವನ್ನು ಮಾಡಿರಿ ಮತ್ತು ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಿರಿ !
ಸದ್ಯ ಭಾರತದಲ್ಲಿರುವ ಮಹಾನಗರಗಳಲ್ಲಿ ಹಾಗೆಯೇ ಇತರ ದೊಡ್ಡ ನಗರಗಳಲ್ಲಿ ಜನಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವ ರೋಗರುಜಿನಗಳು ಎಲ್ಲರ ಚಿಂತೆಯ ವಿಷಯವಾಗಿವೆ. ನಗರಗಳಲ್ಲಿರುವ ಅಪಾರ ಜನಜಂಗುಳಿ, ಸ್ವಚ್ಛತೆಯ ಅಭಾವ, ಹೆಚ್ಚುತ್ತಿರುವ ಮಾಲಿನ್ಯ, ರಜ-ತಮಗಳ ಅಧಿಕ ಪ್ರಾಬಲ್ಯ ಇತ್ಯಾದಿಗಳ ಕಾರಣಗಳಿಂದ ಅಲ್ಲಿನ ನಾಗರಿಕರು ಭಯ ಮತ್ತು ಅಸುರಕ್ಷತೆಯ ನೆರಳಿನಲ್ಲಿ ಬದುಕುತ್ತಿರುವುದು ಕಂಡುಬರುತ್ತದೆ. ಯುದ್ಧಜನ್ಯ ಪರಿಸ್ಥಿತಿ, ಗಲಭೆಗಳು, ಸುನಾಮಿ, ರೋಗ ರುಜಿನ ಇತ್ಯಾದಿ ವಿಪತ್ತುಗಳ ಸಮಯದಲ್ಲಿ ಈ ನಗರಗಳು ಸಂಕಟಕ್ಕೆ ಒಳಗಾಗುವ ಸಾಧ್ಯತೆಗಳು ಗ್ರಾಮಗಳ ತುಲನೆಯಲ್ಲಿ ಅಧಿಕವಿರುತ್ತದೆ. ಆದುದರಿಂದ ಅಲ್ಲಿ ವಾಸಿಸುವುದು ಅತ್ಯಂತ ಅಪಾಯಕಾರಿ ಆಗಬಹುದು.
೧. ಗ್ರಾಮ ಅಥವಾ ತಾಲೂಕಿನ ಸ್ಥಳಗಳು ನಗರಗಳ ವಾತಾವರಣದ ತುಲನೆಯಲ್ಲಿ ಸುರಕ್ಷಿತ
ಮಹಾನಗರಗಳ ತುಲನೆಯಲ್ಲಿ ಗ್ರಾಮ(ಹಳ್ಳಿ)ಗಳು ಹಾಗೂ ತಾಲೂಕುಗಳ ಸ್ಥಳಗಳಲ್ಲಿ ಶುದ್ಧ ಗಾಳಿ, ನೈಸರ್ಗಿಕ ಸಂಪನ್ಮೂಲಗಳು (ಸೂರ್ಯನ ಬೆಳಕು, ಗಿಡ ಮರ ಇತ್ಯಾದಿ) ಯಥೇಚ್ಛವಾಗಿರುತ್ತವೆ, ಮಾಲಿನ್ಯದ ಪ್ರಮಾಣ ಕಡಿಮೆಯಿರುವುದರಿಂದ ವಾತಾವರಣ ಸುರಕ್ಷಿತ ಮತ್ತು ಆರೋಗ್ಯಕರವಾಗಿರುತ್ತದೆ, ಹಾಗೆಯೇ ಅಲ್ಲಿಯ ಜೀವನಶೈಲಿ ಸ್ವಾವಲಂಬಿಯಾಗಿರುತ್ತದೆ. ಗ್ರಾಮಗಳಲ್ಲಿ ಜೀವನಾವಶ್ಯಕ ವಸ್ತುಗಳು (ನೀರು, ಕಾಯಿಪಲ್ಲೆ, ಹಣ್ಣು ಇತ್ಯಾದಿ) ಸಹಜವಾಗಿ ಮತ್ತು ಹೇರಳವಾಗಿ ದೊರೆಯುತ್ತವೆ. ಸ್ವಂತದ ಗದ್ದೆ, ಹೊ ಇದ್ದರೆ ಅದನ್ನು ಸಾಗುವಳಿ ಮಾಡಿ ಸ್ವಂತದ ಉದರನಿರ್ವಹಣೆಯನ್ನೂ ಮಾಡಿಕೊಳ್ಳಬಹುದು.
೨. ಮಹಾನಗರಗಳಿಗೆ ಸ್ಥಳಾಂತರವಾದ ಸಾಧಕರು ಕುಟುಂಬ ಸಹಿತ ಗ್ರಾಮ ಅಥವಾ ತಾಲೂಕು ಸ್ಥಳಗಳಲ್ಲಿ ನೆಲೆಸುವ ವಿಚಾರ ಮಾಡಿ ಅಲ್ಲಿನ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು
ಹಿಂದೆ ಗ್ರಾಮಗಳಲ್ಲಿ ವಾಸಿಸುವ ಕೆಲವು ಸಾಧಕರು ಶಿಕ್ಷಣ, ನೌಕರಿ, ಉದ್ಯೋಗ ಇತ್ಯಾದಿಗಳ ನಿಮಿತ್ತದಿಂದ ಮಹಾನಗರಗಳು, ಹಾಗೆಯೇ ಇತರ ದೊಡ್ಡ ನಗರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಆಪತ್ಕಾಲದಲ್ಲಿ ಈ ನಗರಗಳಿಗೆ ಆಗುವ ಅಪಾರ ಹಾನಿಯನ್ನು ಗಮನದಲ್ಲಿರಿಸಿಕೊಂಡು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರು ಕುಟುಂಬದವರೊಂದಿಗೆ ಗ್ರಾಮಗಳಿಗೆ ಅಥವಾ ತಾಲೂಕಿನ ಸ್ಥಳಗಳಿಗೆ ವಾಸಿಸಲು ಹೋಗುವ ವಿಚಾರವನ್ನು ಮಾಡಬೇಕು. ಸುರಕ್ಷಿತ ಸ್ಥಳಗಳಲ್ಲಿ ‘ಫಾರ್ಮ ಹೌಸ್ (ತೋಟದಲ್ಲಿನ ಮನೆ) ಇದ್ದರೆ ಅದನ್ನೂ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಊರು ಅಸುರಕ್ಷಿತವಾಗಿದ್ದರೆ, ಹಾಗೆಯೇ ಅಲ್ಲಿ ವಾಸಿಸುವ ವ್ಯವಸ್ಥೆಯಾಗದಿದ್ದರೆ ಸುರಕ್ಷಿತವಿರುವ ಪರ್ಯಾಯ ಹಳ್ಳಿ ಅಥವಾ ತಾಲೂಕಿನ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.
೩. ಮುಂಬರುವ ಆಪತ್ಕಾಲದಲ್ಲಿ ವಾಸಿಸಲು ಗ್ರಾಮ ಮತ್ತು ಮನೆಯನ್ನು ಆಯ್ಕೆ ಮಾಡುವಾಗ ಮುಂದಿನ ಮಹತ್ವದ ನಿಯಮಗಳನ್ನು ಗಮನದಲ್ಲಿ ತೆಗೆದುಕೊಳ್ಳಬೇಕು.
೩ ಅ. ಗ್ರಾಮ ಅಥವಾ ತಾಲೂಕನ್ನು ಆಯ್ಕೆ ಮಾಡುವಾಗ ತೆಗೆದು ಕೊಳ್ಳಬೇಕಾದ ಎಚ್ಚರಿಕೆ (ಸೂಕ್ಷ್ಮ ಅವಲೋಕನ ಮಾಡುವುದು)
೧. ಆಯ್ಕೆ ಮಾಡಲಿರುವ ಗ್ರಾಮ ಅಥವಾ ತಾಲೂಕುಗಳು ಮಹಾನಗರ ಮತ್ತು ದೊಡ್ಡ ನಗರಗಳಿಗೆ ತುಂಬಾ ಹತ್ತಿರವಿರಬಾರದು.
೨. ‘ಅಕ್ಕಪಕ್ಕದ ಗ್ರಾಮಗಳು ಸುರಕ್ಷಿತವಿದೆಯೇ ? ಎಂದು ನೋಡಬೇಕು.
೩. ಗ್ರಾಮವು ನೆರೆಪೀಡಿತ, ಜ್ವಾಲಾಮುಖಿ, ಹಾಗೆಯೇ ಭೂಕಂಪ ಪೀಡಿತ ಪ್ರದೇಶದಲ್ಲಿ ಇರಬಾರದು. ಆಣೆಕಟ್ಟಿನ ಹೆಚ್ಚುವರಿ ನೀರನ್ನು ಹೊರಗೆ ಬಿಟ್ಟಾಗ ಎದುರಾಗುವ ಅಪಾಯದ ಪ್ರದೇಶದ ಗ್ರಾಮದ ಆಯ್ಕೆ ಮಾಡಬಾರದು.
೪. ಸಮುದ್ರ, ಹಾಗೆಯೇ ನದಿಗಳ ದಡದ ಅಕ್ಕಪಕ್ಕದಲ್ಲಿರುವ ಊರುಗಳ ಬದಲಾಗಿ ಪರ್ಯಾಯ ಊರನ್ನು ಆಯ್ಕೆ ಮಾಡಿಕೊಳ್ಳಲು ಪ್ರಾಮುಖ್ಯತೆಯನ್ನು ನೀಡಬೇಕು. ಇದರ ಕಾರಣವೇನೆಂದರೆ ಸಮುದ್ರದ ಅಲೆಗಳು, ಅಲ್ಲದೇ ನದಿಗೆ ಬರುವ ನೆರೆಯಿಂದ ನೀರಿನ ಮಟ್ಟ ಹೆಚ್ಚಾಗುತ್ತದೆ. ಈ ನೀರಿನಿಂದ ದಡದ ಆಸುಪಾಸಿನ ಊರುಗಳು ನೀರಿನಲ್ಲಿ ಮುಳುಗಬಹುದು. ಇದನ್ನು ತಡೆಯಲು ನೀರಿನ ಮೇಲ್ಮಟ್ಟಕ್ಕಿಂತ ೪ ಮೀಟರ ಎತ್ತರದ ಭೂಮಿಯ ಮಟ್ಟ (ಗ್ರೌಂಡ ಲೆವಲ್) ಇರುವ ಊರನ್ನು ಆಯ್ಕೆ ಮಾಡಿಕೊಳ್ಳಬೇಕು.
೫. ಕಲ್ಲಿದ್ದಲು ಗಣಿಯಿರುವ ಪ್ರದೇಶಗಳಲ್ಲಿ ಗಣಿಯ ಕೆಳಗೆ ಬೆಂಕಿಯಿರುತ್ತದೆ. ಬೆಂಕಿಯ ಕಾರಣದಿಂದ ಕಲ್ಲಿದ್ದಲು ಸುಟ್ಟು ಬೂದಿ ನಿರ್ಮಾಣವಾಗುತ್ತದೆ ಮತ್ತು ಭೂಮಿಯಲ್ಲಿ ಟೊಳ್ಳು ನಿರ್ಮಾಣವಾಗಿ ಅದು ಕುಸಿಯುತ್ತದೆ. ಆದುದರಿಂದ ಇಂತಹ ಪ್ರದೇಶ ಗಳಲ್ಲಿರುವ ಊರುಗಳನ್ನು ಆಯ್ಕೆ ಮಾಡಿಕೊಳ್ಳಬಾರದು.
೬. ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ, ಉದ್ಯೋಗಗಳ ಸ್ಥಳಗಳಲ್ಲಿ (ಇಂಡಸ್ಟ್ರಿಯಲ್ ಪ್ಲಾಂಟ್) ಮತ್ತು ಸಿಲಿಂಡರನ ಗೋದಾಮುಗಳಲ್ಲಿ ತಯಾರಾಗುವ ಅಥವಾ ಉಪಯೋಗಿಸುವ ಜ್ವಲನಶೀಲ ಪದಾರ್ಥಗಳ ಸ್ಫೋಟವಾಗಿ ಅಕ್ಕಪಕ್ಕದ ಪರಿಸರಕ್ಕೆ ದೊಡ್ಡ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಅಕ್ಕಪಕ್ಕದ ಪರಿಸರದಲ್ಲಿ ಇಂತಹ ಕೈಗಾರಿಕಾ ಘಟಕಗಳು ಅಥವಾ ಉದ್ಯೋಗಗಳು ಇರಬಾರದು.
೭. ಆಪತ್ಕಾಲದಲ್ಲಿಯೂ ಗ್ರಾಮದಲ್ಲಿ ನೀರಿನ ಯಥೇಚ್ಛ ಸಂಗ್ರಹ, ಹಾಗೆಯೇ ಜೀವನೋಪಯೋಗಿ ಸಾಮಾಗ್ರಿಗಳ (ನೀರು, ತರಕಾರಿ, ಹಣ್ಣುಹಂಪಲು ಇತ್ಯಾದಿ) ಲಭ್ಯತೆ ಇರಬೇಕು.
೮. ಅನೇಕ ಗ್ರಾಮಗಳಲ್ಲಿ ‘ಮೊಬೈಲ್ ನೆಟ್ವರ್ಕ್ ಇಲ್ಲದಿರುವುದರಿಂದ ಇತರರನ್ನು ಸಂಪರ್ಕಿಸುವುದು ಕಠಿಣವಾಗುತ್ತದೆ. ಆದುದರಿಂದ ‘ಗ್ರಾಮದಲ್ಲಿ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆಯೇ ?, ಎಂಬುದನ್ನು ನೋಡಬೇಕು.
೯. ಗ್ರಾಮದ ವಾತಾವರಣವು ಸಾಧನೆ, ಹಾಗೆಯೇ ವೈಯಕ್ತಿಕ ಜೀವನಕ್ಕಾಗಿ ಅನುಕೂಲವಾಗಿರಬೇಕು. ತಮ್ಮ ಗ್ರಾಮದಲ್ಲಿ ಮನೆಯಿದೆ, ಆದರೆ ಅಲ್ಲಿ ವಾಸಿಸಲು ಯೋಗ್ಯವಾದಂತಹ ವ್ಯವಸ್ಥೆ ಇದ್ದರೆ ಅಲ್ಲಿಯೇ ವಾಸಿಸಬಹುದು. ಹಳ್ಳಿಯಲ್ಲಿರುವ ಮನೆಯಲ್ಲಿ ಸಾಧನೆಗೆ ಪೂರಕ ವಾತಾವರಣ ಇಲ್ಲದಿದ್ದರೆ ಪರ್ಯಾಯ ಸ್ಥಳದ ವಿಚಾರವನ್ನು ಮಾಡಬೇಕು.
೩ ಆ. ಮನೆಯ ವಿಷಯದಲ್ಲಿ ಮುಂದಿನ ಚಿಕ್ಕ ಚಿಕ್ಕ ವಿಷಯಗಳನ್ನು ಪರಿಶೀಲಿಸುವುದು ಆವಶ್ಯಕವಾಗಿದೆ !
೧. ಮನೆಯು ಹಿಂದೂಬಹುಸಂಖ್ಯಾತ ಪ್ರದೇಶದಲ್ಲಿರಬೇಕು.
೨. ಕೊಳೆಗೇರಿ ಪ್ರದೇಶಗಳಲ್ಲಿರುವ ಅನಧಿಕೃತ ಕಟ್ಟಡಗಳು, ದಟ್ಟಣೆಯ ವಸತಿ ಪ್ರದೇಶ ಹಾಗೆಯೇ ತುಂಬಾ ಅಸ್ವಚ್ಛತೆಯ ಕಾರಣದಿಂದ ರೋಗರುಜಿನಗಳೂ ಬೇಗನೆ ಹರಡುತ್ತವೆ, ಸಿಲಿಂಡರ್ ಸ್ಫೋಟ, ‘ಶಾರ್ಟ ಸರ್ಕಿಟ್ ಇತ್ಯಾದಿಗಳಿಂದ ಬೆಂಕಿ ತಗಲುವಂತಹ ದುರ್ಘಟನೆಗಳು ಘಟಿಸುತ್ತವೆ. ಆದುದರಿಂದ ಮನೆಯ ಆಸುಪಾಸು ೧-೨ ಕಿ.ಮೀ. ದೂರದವರೆಗೆ ಕೊಳೆಗೇರಿ ಪ್ರದೇಶ ಇರಬಾರದು.
೩. ಅಕ್ಕಪಕ್ಕದಲ್ಲಿ ಸಾಧಕರು, ಹಾಗೆಯೇ ನಮಗೆ ಸಹಾಯ ಮಾಡಬಹುದಾದಂತಹ ಜನರು ವಾಸಿಸುತ್ತಿದ್ದರೆ ಉತ್ತಮ !
೪. ‘ಧರ್ಮಪ್ರಸಾರ ಮಾಡುವುದು, ವನೌಷಧಗಳ ಗಿಡ ನೆಡುವುದು ಇತ್ಯಾದಿ ಸೇವೆಗಳನ್ನು ಅಲ್ಲಿ ಮಾಡಬಹುದೇ ? ಎಂದು ವಿಚಾರ ಮಾಡಬೇಕು.
೩ ಇ. ‘ಮೇಲಿನ ಎಲ್ಲ ನಿಯಮಗಳು ಅನ್ವಯವಾಗುವಂತಹ ಗ್ರಾಮ ಅಥವಾ ತಾಲೂಕಿನ ಸ್ಥಳ ದೊರಕಿದರೆ ಉತ್ತಮ ! : ರಜ-ತಮ ಪ್ರಧಾನ ಗ್ರಾಮ ಅಥವಾ ತಾಲೂಕುಗಳಿಗಿಂತ ಸಾತ್ತ್ವಿಕ ಗ್ರಾಮ ಅಥವಾ ತಾಲೂಕುಗಳ ರಕ್ಷಣೆಯಾಗಲಿದೆ. ಆದುದರಿಂದ ಆಶ್ರಯವನ್ನು ಆಯ್ಕೆ ಮಾಡುವಾಗ ಸಾತ್ತ್ವಿಕತೆಯ, ಹಾಗೆಯೇ ಮೇಲಿನ ಇತರ ನಿಯಮಗಳು ಅನ್ವಯವಾಗುತ್ತವೆಯೇ ? ಎಂದು ನೋಡಬೇಕು. ‘ಮೇಲಿನ ಎಲ್ಲ ನಿಯಮಗಳು ಅನ್ವಯವಾಗುವಂತಹ ಗ್ರಾಮ ಮತ್ತು ಮನೆಯನ್ನು ಪಡೆಯಲು ಪ್ರಯತ್ನಿಸಬೇಕು. ಹಾಗೆ ಸಾಧ್ಯವಿಲ್ಲದಿದ್ದರೆ ಸಾಧ್ಯವಾದಷ್ಟು ನಿಯಮಗಳು ಅನ್ವಯವಾಗುವಂತಹ ಗ್ರಾಮ ಮತ್ತು ಮನೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಆಪತ್ಕಾಲದ ಪೂರ್ವಸಿದ್ಧತೆಯೆಂದು ತಮ್ಮ ಗ್ರಾಮದಲ್ಲಿರುವ ಮನೆಯಲ್ಲಿ ಮುಂದೆ ನೀಡಿದ ವ್ಯವಸ್ಥೆಗಳನ್ನು ಮಾಡಿಟ್ಟುಕೊಳ್ಳಿರಿ !
ತಮ್ಮ ಗ್ರಾಮದಲ್ಲಿರುವ ಮನೆಯನ್ನು ದುರಸ್ತಿಗೊಳಿಸಿ ಅದನ್ನು ವಾಸಕ್ಕೆ ಯೋಗ್ಯ ಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಮೇಲಿನ ನಿಯಮ ಗಳಿಗನುಸಾರ ಗ್ರಾಮ ಅಥವಾ ತಾಲೂಕಿನ ಸ್ಥಳವನ್ನು ಆಯ್ಕೆ ಮಾಡಬೇಕಾಗಿದ್ದರೆ, ಅದನ್ನು ಆದಷ್ಟು ಬೇಗನೆ ಆಯ್ಕೆ ಮಾಡಿಕೊಂಡು ಅಲ್ಲಿ ವಾಸಿಸಲು ಯೋಗ್ಯ ಎಲ್ಲ ವ್ಯವಸ್ಥೆಗಳನ್ನು ಮಾಡಿಟ್ಟುಕೊಳ್ಳಬೇಕು. ಮನೆಯಲ್ಲಿ ಸೌರಶಕ್ತಿಯ ಉಪಕರಣಗಳನ್ನು ಖರೀದಿಸಿ ಇಟ್ಟುಕೊಳ್ಳಬಹುದು. ಅಲ್ಲಿ ಮೊದಲೇ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದರೆ ಆಪತ್ಕಾಲ ಪ್ರಾರಂಭವಾದೊಡನೆ, ದೊಡ್ಡ ನಗರಗಳನ್ನು ಬಿಟ್ಟು ಗ್ರಾಮಕ್ಕೆ ಬಂದು ಆಶ್ರಯವನ್ನು ಪಡೆದುಕೊಂಡು ತಮ್ಮ ಪ್ರಾಣರಕ್ಷಣೆಯನ್ನು ಮಾಡಿಕೊಳ್ಳುವುದು ಸೂಕ್ತವಾಗಿದೆ.
ಸಾಧಕರು ಗ್ರಾಮ ಅಥವಾ ತಾಲೂಕಿನ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಹಾಗೂ ಅಲ್ಲಿಗೆ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿನ ನಿರ್ಣಯವನ್ನು ಸ್ವಂತ ಮನಸ್ಸಿನಿಂದ ಮಾಡದೇ ಅದಕ್ಕಾಗಿ ಸ್ಥಳೀಯ ಜವಾಬ್ದಾರ ಸಾಧಕರ ಮಾರ್ಗದರ್ಶನವನ್ನು ಪಡೆದು ಕೊಳ್ಳಬೇಕು.
ದೊಡ್ಡ ನಗರಗಳಿಗಿಂತ ಹೆಚ್ಚು ಸುರಕ್ಷಿತವಾಗಿರುವ ಗ್ರಾಮಗಳಿಗೆ ಸ್ಥಳಾಂತರವಾಗುವ ವಿಚಾರ ಮಾಡುವುದು ಒಂದು ರೀತಿಯಲ್ಲಿ ಸಂಕಟ ಕಾಲದ ಸಿದ್ಧತೆಯೇ ಆಗಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿರಿ.
ಸಾಧಕರಿಗೆ ಸೂಚನೆ
ದೊಡ್ಡ ನಗರಗಳಿಂದ ಗ್ರಾಮಗಳಿಗೆ ಸ್ಥಳಾಂತರವಾಗುವ ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಧಕರಿಗೆ ಏನಾದರೂ ಅಂಶಗಳನ್ನು ಸೂಚಿಸುವುದಿದ್ದರೆ ಅವರು ಕೆಳಗೆ ನೀಡಿರುವ ಸಂಗಣಕೀಯ ವಿಳಾಸಕ್ಕೆ ಅಥವಾ ಅಂಚೆ ವಿಳಾಸಕ್ಕೆ ಕಳುಹಿಸಬೇಕೆಂದು ವಿನಂತಿ. ಮೇಲೆ ತಿಳಿಸಿದ ವಿಷಯಕ್ಕನುಸಾರ ಸುರಕ್ಷಿತವಿರುವ ಗ್ರಾಮ ತಿಳಿದಿದ್ದರೆ ಅದರ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಕಳುಹಿಸಬೇಕು.
ಸಂಗಣಕೀಯ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್- 403401