ನಾವೀನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪ್ರಯೋಗ 

ಸನಾತನ ನಿರ್ಮಿತ ದತ್ತನ ಚಿತ್ರ
ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷೆಯನ್ನು ಮಾಡುತ್ತಿರುವ ಶ್ರೀ. ಆಶಿಷ ಸಾವಂತ

‘ಸಮಾಜದಲ್ಲಿ ಅನೇಕರಿಗೆ ಕೆಟ್ಟ ಶಕ್ತಿಗಳ (ಆಧ್ಯಾತ್ಮಿಕ) ತೊಂದರೆ ಇರುತ್ತದೆ. ಕೆಟ್ಟ ಶಕ್ತಿಗಳಿಂದಾಗಿ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ, ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳ ತೊಂದರೆಯಿಂದಾಗಿ ಸಾಧಕರ ಸಾಧನೆಯಲ್ಲಿ ಅಡಚಣೆಗಳೂ ಬರುತ್ತವೆ; ಆದರೆ ದುರ್ದೈವದಿಂದ ಅನೇಕ ಜನರಿಗೆ ಈ ತೊಂದರೆಗಳ ಬಗ್ಗೆ ತಿಳಿದಿರುವುದಿಲ್ಲ. ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ನಾಮಜಪ-ಸಾಧನೆ ಮಾಡುವುದೇ ಪರಿಣಾಮಕಾರಿ ಉಪಾಯವಾಗಿದೆ. ಆಧ್ಯಾತ್ಮಿಕ ತೊಂದರೆಗಳ ನಿವಾರಣೆ ಮಾಡುವ ಉಚ್ಚ ದೇವತೆಗಳ ಪೈಕಿ ಒಬ್ಬರೆಂದರೆ ದತ್ತಗುರುಗಳು. ಪ್ರಸ್ತುತ ಯಾರೂ ಶ್ರಾದ್ಧ-ಪಕ್ಷ ಇತ್ಯಾದಿ, ಹಾಗೆಯೇ ಸಾಧನೆಯನ್ನೂ ಮಾಡುವುದಿಲ್ಲ. ಆದ್ದರಿಂದ ಹೆಚ್ಚು-ಕಮ್ಮಿ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆಯಾಗುತ್ತದೆ. ದತ್ತನ ನಾಮಜಪದಿಂದ ನಿರ್ಮಾಣವಾಗುವ ಶಕ್ತಿಯಿಂದ ನಾಮಜಪ ಮಾಡುವವರ ಸುತ್ತಲೂ ಸಂರಕ್ಷಣಾ-ಕವಚವು ನಿರ್ಮಾಣವಾಗುತ್ತದೆ. ದತ್ತನ ನಾಮಜಪದಿಂದಾಗಿ ಅತೃಪ್ತ ಪೂರ್ವಜರಿಗೆ ಗತಿ ಸಿಗುತ್ತದೆ. ಆದ್ದರಿಂದ ಅವರಿಂದ ವ್ಯಕ್ತಿಗಾಗುವ ತೊಂದರೆಯ ಪ್ರಮಾಣವು ಕಡಿಮೆಯಾಗುತ್ತದೆ.

ಯಾವುದೇ ವಿಷಯವನ್ನು ಕಾಲಾನುಸಾರ ಮಾಡಿದರೆ ಅದರಿಂದ ಹೆಚ್ಚು ಲಾಭವಾಗುತ್ತದೆ. ‘ಕಾಲಾನುಸಾರ ಸದ್ಯ ದೇವತೆಗಳ ತಾರಕ ಮತ್ತು ಮಾರಕ ತತ್ತ್ವಗಳು ಯಾವ ವಿಧದ ನಾಮಜಪಗಳಿಂದ ಹೆಚ್ಚು ಸಿಗಬಹುದು, ಎಂದು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಅಭ್ಯಾಸ ಮಾಡಿ ದೇವತೆಗಳ ನಾಮಜಪವನ್ನು ಧ್ವನಿಮುದ್ರಣ (ರೆಕಾರ್ಡಿಂಗ್) ಮಾಡಲಾಗಿದೆ. ಇದಕ್ಕಾಗಿ ಸನಾತನದ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕಿ ಕು. ತೇಜಲ ಪಾತ್ರೀಕರ (ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ) ಇವರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನಕ್ಕನುಸಾರ ಅನೇಕ ಪ್ರಯೋಗಗಳನ್ನು ಮಾಡಿದರು. ಅವುಗಳಿಂದ ಈ ನಾಮಜಪವು ಸಿದ್ಧವಾಗಿದೆ. ವ್ಯಕ್ತಿಯ ಮೇಲಾಗುವ ದತ್ತನ ‘ತಾರಕ ಮತ್ತು ‘ಮಾರಕ ನಾಮಜಪಗಳ ಪರಿಣಾಮವನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಒಂದು ಪ್ರಯೋಗವನ್ನು ಮಾಡಲಾಯಿತು. ಈ ಪ್ರಯೋಗಕ್ಕಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಪ್ರಯೋಗದ ಸ್ವರೂಪ, ಮಾಡಿದ ಅಳತೆಗಳ ನೋಂದಣಿ ಮತ್ತು ಅವುಗಳ ವಿವರಣೆಯನ್ನು ಕೆಳಗೆ ಕೊಡಲಾಗಿದೆ.

ದತ್ತನ ತಾರಕ ಮತ್ತು ಮಾರಕ ನಾಮಜಪಗಳಿಂದ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಮೇಲಾದ ಪರಿಣಾಮ

೧. ಪ್ರಯೋಗದ ಸ್ವರೂಪ

ಈ ಪ್ರಯೋಗದಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ (ಟಿಪ್ಪಣಿ) ಇರುವ ಒಬ್ಬ ಸಾಧಕಿ ಮತ್ತು ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಒಬ್ಬ ಸಾಧಕರು ಪಾಲ್ಗೊಂಡಿದ್ದರು. ಈ ಪ್ರಯೋಗದಲ್ಲಿ ಮುಂದಿನ ರೀತಿ ಯಲ್ಲಿ ಒಟ್ಟು ೬ ಪ್ರಯೋಗಗಳನ್ನು ಮಾಡಲಾಯಿತು.

ಟಿಪ್ಪಣಿ – ಆಧ್ಯಾತ್ಮಿಕ ತೊಂದರೆ : ಆಧ್ಯಾತ್ಮಿಕ ತೊಂದರೆ ಇರುವುದು, ಎಂದರೆ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಇರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿರುವುದೆಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ. ೪೯ ರಷ್ಟಿರುವುದು, ಎಂದರೆ ಮಧ್ಯಮ ತೊಂದರೆ ಮತ್ತು ಶೇ. ೩೦ ಕ್ಕಿಂತ ಕಡಿಮೆ ಇರುವುದೆಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದು ಎಂದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಮುಂತಾದ ಆಧ್ಯಾತ್ಮಿಕ ಸ್ತರದ ಕಾರಣಗಳಿಂದಾಗಿ ಆಗುತ್ತದೆ. ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ತಿಳಿಯುವ ಸಾಧಕರು ಆಧ್ಯಾತ್ಮಿಕ ತೊಂದರೆಗಳನ್ನು ಗುರುತಿಸಬಲ್ಲರು.

೧ ಅ. ತಾರಕ ನಾಮಜಪದ ೩ ಪ್ರಯೋಗಗಳು : ಪ್ರಯೋಗದಲ್ಲಿನ ಸಾಧಕರಿಗೆ ದತ್ತನ ತಾರಕ ನಾಮಜಪವನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಸ್ವರಗಳಲ್ಲಿ ಪ್ರತಿಯೊಂದನ್ನು ೧ ಗಂಟೆ ಕಾಲ ಕೇಳಿಸಲಾಯಿತು.

೧ ಆ. ಮಾರಕ ನಾಮಜಪದ ೩ ಪ್ರಯೋಗಗಳು : ಪ್ರಯೋಗದಲ್ಲಿನ ಸಾಧಕರಿಗೆ ದತ್ತನ ಮಾರಕ ನಾಮಜಪವನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಸ್ವರದಲ್ಲಿ ಪ್ರತಿಯೊಂದನ್ನು ೧ ಗಂಟೆ ಕಾಲ ಕೇಳಿಸಲಾಯಿತು. ಪ್ರತಿಯೊಂದು ಪ್ರಯೋಗದ ಮೊದಲು ಮತ್ತು ಪ್ರಯೋಗದ ನಂತರ ಸಾಧಕನ ‘ಯು.ಎ.ಎಸ್, ಉಪಕರಣದ ಮೂಲಕ ಮಾಡಿದ ಅಳತೆಗಳ ನೋಂದಣಿಯನ್ನು ಮಾಡಲಾಯಿತು. ಇಲ್ಲಿ ಮಾಡಲಾದ ಅಳತೆಗಳ ಎಲ್ಲ ನೋಂದಣಿಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

೨. ಮಾಡಿದ ಅಳತೆಗಳ ನೋಂದಣಿ ಮತ್ತು ಅವುಗಳ ವಿವೇಚನೆ

೨ ಅ. ನಕಾರಾತ್ಮಕ ಊರ್ಜೆಯ ವಿಷಯದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ – ದತ್ತನ ತಾರಕ ಮತ್ತು ಮಾರಕ ನಾಮಜಪಗಳನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಸ್ವರದಲ್ಲಿ ಕೇಳಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಲ್ಲಿನ ನಕಾರಾತ್ಮಕ ಊರ್ಜೆಯು ತುಂಬಾ ಕಡಿಮೆ ಅಥವಾ ಇಲ್ಲದಂತಾಗುವುದು : ಪ್ರಯೋಗದ ಮೊದಲು ಇಬ್ಬರೂ ಸಾಧಕರಲ್ಲಿ ‘ಇನ್ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ನಕಾರಾತ್ಮಕ ಊರ್ಜೆಯು ತುಂಬಾ ಪ್ರಮಾಣದಲ್ಲಿತ್ತು. ಅವರ ಪ್ರಭಾವಳಿಯು ಸುಮಾರು ೬ ರಿಂದ ೮ ಮೀಟರ್‌ನಷ್ಟಿತ್ತು. ಪ್ರಯೋಗದ ನಂತರ ಅವರಲ್ಲಿನ ‘ಇನ್ಫ್ರಾರೆಡ್ ಈ ನಕಾರಾತ್ಮಕ ಊರ್ಜೆಯು ಬಹಳ ಕಡಿಮೆ ಅಥವಾ ಇಲ್ಲದಂತಾಯಿತು (ಟಿಪ್ಪಣಿ ೧ ರಿಂದ ೩ ನೋಡಿರಿ.) ಮತ್ತು ಅವರಲ್ಲಿನ ‘ಅಲ್ಟ್ರಾವೈಲೆಟ್ ನಕಾರಾತ್ಮಕ ಊರ್ಜೆಯು ಇಲ್ಲದಂತಾಯಿತು.

ಟಿಪ್ಪಣಿ ೧ – ಮಧ್ಯಮ ಸ್ವರದಲ್ಲಿನ ತಾರಕ ನಾಮಜಪದ ಪ್ರಯೋಗದ ನಂತರ ಸಾಧಕಿಯಲ್ಲಿ ಕಡಿಮೆ ಪ್ರಮಾಣದಲ್ಲಿ ‘ಇನ್ಫ್ರಾರೆಡ್ ನಕಾರಾತ್ಮಕ ಊರ್ಜೆಯು ಇತ್ತು; ಆದರೆ ಅದರ ಪ್ರಭಾವಳಿಯು ಇರಲಿಲ್ಲ. ಅವಳ ವಿಷಯದಲ್ಲಿ ಸ್ಕ್ಯಾನರ್ ೯೦ ಅಂಶಗಳ ಕೋನವನ್ನು ನಿರ್ಮಿಸಿತು. ಸ್ಕ್ಯಾನರ್ ೧೮೦ ಅಂಶದ ಕೋನ ಮಾಡಿದರೆ ಮಾತ್ರ ಪ್ರಭಾವಳಿಯನ್ನು ಅಳೆಯಲು ಬರುತ್ತದೆ.

ಟಿಪ್ಪಣೆ ೨ – ಸಣ್ಣ ಧ್ವನಿಯಲ್ಲಿನ ಮಾರಕ ನಾಮಜಪದ ಪ್ರಯೋಗದ ನಂತರ ಸಾಧಕನಲ್ಲಿನ ‘ಇನ್ಫ್ರಾರೆಡ್  ನಕಾರಾತ್ಮಕ ಊರ್ಜೆಯು ಬಹಳ ಕಡಿಮೆಯಾಯಿತು. ಅದರ ಪ್ರಭಾವಳಿಯು ೦.೯೧ ಮೀಟರ್ ನಷ್ಟಿತ್ತು.

ಟಿಪ್ಪಣಿ ೩ – ದೊಡ್ಡ ಸ್ವರದಲ್ಲಿನ ಮಾರಕ ನಾಮಜಪದ ಪ್ರಯೋಗದ ನಂತರ ಸಾಧಕನಲ್ಲಿ ಕಡಿಮೆ ಪ್ರಮಾಣದಲ್ಲಿ ‘ಇನ್ಫ್ರಾರೆಡ್ ನಕಾರಾತ್ಮಕ ಊರ್ಜೆಯು ಇತ್ತು; ಆದರೆ ಅದರ ಪ್ರಭಾವಳಿಯು ಇರಲಿಲ್ಲ. ಅವನ ವಿಷಯದಲ್ಲಿನ ಸ್ಕ್ಯಾನರ್ ೯೦ ಅಂಶದ ಕೋನವನ್ನು ನಿರ್ಮಿಸಿತು.

೨ ಆ. ಸಕಾರಾತ್ಮಕ ಊರ್ಜೆಯ ವಿಷಯದಲ್ಲಿ ಮಾಡಿದ ಅಳತೆಗಳ ನೋಂದಣಿಯ ವಿವೇಚನೆ : ಎಲ್ಲ ವ್ಯಕ್ತಿಗಳು, ವಾಸ್ತು ಅಥವಾ ವಸ್ತು ಇವುಗಳಲ್ಲಿ ಸಕಾರಾತ್ಮಕ ಊರ್ಜೆಯು ಇದ್ದೇ ಇರುತ್ತದೆ ಎಂದೇನಿಲ್ಲ.

೨ ಆ ೧. ದತ್ತನ ತಾರಕ ನಾಮಜಪವನ್ನು ಕೇಳಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಗುವುದು

ಕೋಷ್ಟಕದಿಂದ ಕೆಳಗಿನ ಅಂಶಗಳು ಗಮನಕ್ಕೆ ಬರುತ್ತವೆ.

೧. ಸಾಧಕಿಗೆ ಮಧ್ಯಮ ಧ್ವನಿಯಲ್ಲಿನ ತಾರಕ ನಾಮಜಪವನ್ನು ಕೇಳಿದಾಗ ಅತ್ಯಧಿಕ ಲಾಭವಾಯಿತು.

೨. ಸಾಧಕನಿಗೆ ಸಣ್ಣ ಧ್ವನಿಯಲ್ಲಿನ ತಾರಕ ನಾಮಜಪವನ್ನು ಕೇಳಿದಾಗ ಅತ್ಯಧಿಕ ಲಾಭವಾಯಿತು.

೨ ಆ ೨. ದತ್ತನ ಮಾರಕ ನಾಮಜಪವನ್ನು ಕೇಳಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು

ಮೇಲಿನ ಕೋಷ್ಟಕದಿಂದ, ಇಬ್ಬರೂ ಸಾಧಕರಿಗೆ ಸಣ್ಣ, ಮಧ್ಯಮ ಮತ್ತು ದೊಡ್ಡ ಧ್ವನಿಯಲ್ಲಿನ ನಾಮಜಪದಿಂದ ಉತ್ತರೋತ್ತರ ಹೆಚ್ಚು ಲಾಭವಾಯಿತೆಂದು ಗಮನಕ್ಕೆ ಬರುತ್ತದೆ.

ಮೇಲಿನ ಎಲ್ಲ ಅಂಶಗಳ ತುಲನಾತ್ಮಕ ಅಧ್ಯಯನದಿಂದ, ಇಬ್ಬರೂ ಸಾಧಕರಿಗೆ ಮಾರಕ ನಾಮಜಪದ ತುಲನೆಯಲ್ಲಿ ತಾರಕ ನಾಮಜಪದಿಂದ ಹೆಚ್ಚು ಲಾಭವಾಯಿತೆಂದು ಗಮನಕ್ಕೆ ಬರುತ್ತದೆ.

೨. ಇ. ಒಟ್ಟು ಪ್ರಭಾವಳಿಯ (ಟಿಪ್ಪಣಿ) ವಿಷಯದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ : ಸಾಮಾನ್ಯ ವ್ಯಕ್ತಿ ಅಥವಾ ವಸ್ತುಗಳ ಒಟ್ಟು ಪ್ರಭಾವಳಿಯು ಸಾಮಾನ್ಯವಾಗಿ ೧ ಮೀಟರ್ ಇರುತ್ತದೆ.

ಟಿಪ್ಪಣಿ – ಒಟ್ಟು ಪ್ರಭಾವಳಿ (ಔರಾ) : ವ್ಯಕ್ತಿಯ ವಿಷಯದಲ್ಲಿ ಅವರ ಲಾಲಾರಸ (ಜೊಲ್ಲು), ಹಾಗೆಯೇ ವಸ್ತುವಿನ ವಿಷಯದಲ್ಲಿ ಅದರ ಮೇಲಿನ ಧೂಳಿನ ಕಣ ಅಥವಾ ಅದರ ಸ್ವಲ್ಪ ಭಾಗ ಇವುಗಳ ‘ಮಾದರಿ ಎಂದು ಉಪಯೋಗಿಸಿ ಆ ವ್ಯಕ್ತಿಯ ಅಥವಾ ವಸ್ತುವಿನ ‘ಒಟ್ಟು ಪ್ರಭಾವಳಿಯನ್ನು ಅಳೆಯುತ್ತಾರೆ.

೨ ಇ ೧. ದತ್ತನ ತಾರಕ ನಾಮಜಪವನ್ನು ಕೇಳಿದ ಬಳಿಕ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಒಟ್ಟು ಪ್ರಭಾವಲಯ ಕಡಿಮೆಯಾಗುವುದು.

೨ ಇ ೨. ದತ್ತನ ಮಾರಕ ನಾಮಜಪವನ್ನು ಕೇಳಿದ ಬಳಿಕ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಒಟ್ಟು ಪ್ರಭಾವಲಯ ಕಡಿಮೆಯಾಗುವುದು.

೨ ಇ ೩. ದತ್ತನ ತಾರಕ ಮತ್ತು ಮಾರಕ ನಾಮಜಪವನ್ನು ಕೇಳಿದ ಬಳಿಕ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಒಟ್ಟು ಪ್ರಭಾವಲಯ ಸ್ವಲ್ಪ ಕಡಿಮೆಯಾಗಿದ್ದರೂ, ಅದು ಗುಣಾತ್ಮಕದೃಷ್ಟಿಯಿಂದ ಚೆನ್ನಾಗಿರುವುದು (ಸಕಾರಾತ್ಮಕ) : ಪ್ರಾರಂಭದಲ್ಲಿ (ತಾರಕ ಮತ್ತು ಮಾರಕ ನಾಮಜಪವನ್ನು ಕೇಳುವ ಮೊದಲು) ಇಬ್ಬರೂ ಸಾಧಕರ ಒಟ್ಟು ಪ್ರಭಾವಲಯದಲ್ಲಿ ಸಕಾರಾತ್ಮಕ ಸ್ಪಂದನಗಳಿಗಿಂತ ನಕಾರಾತ್ಮಕ ಸ್ಪಂದನಗಳ ಪ್ರಮಾಣ ಬಹಳ ಅಧಿಕವಿತ್ತು. ತಾರಕ ಮತ್ತು ಮಾರಕ ನಾಮಜಪ ವನ್ನು ಕೇಳಿದ ಬಳಿಕ ಇಬ್ಬರೂ ಸಾಧಕರ ಒಟ್ಟು ಪ್ರಭಾವಲಯದಲ್ಲಿ ನಕಾರಾತ್ಮಕ ಸ್ಪಂದನಗಳು ನಗಣ್ಯ ಇದ್ದು ಸಕಾರಾತ್ಮಕ ಸ್ಪಂದನಗಳ ಪ್ರಮಾಣವು ಬಹಳ ಹೆಚ್ಚಾಗಿತ್ತು. ಇದರಿಂದ ಅವರ ಒಟ್ಟು ಪ್ರಭಾವಲಯ ಮೊದಲಿನ ತುಲನೆಯಲ್ಲಿ ಸ್ವಲ್ಪ ಕಡಿಮೆಯಾಗಿದ್ದರೂ, ಇದರಿಂದ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿದ್ದುದ ರಿಂದ ಅದು ಗುಣಾತ್ಮಕದೃಷ್ಟಿಯಿಂದ ಚೆನ್ನಾಗಿದೆ.(ಸಕಾರಾತ್ಮಕ). ಮೇಲಿನ ಎಲ್ಲ ಅಂಶಗಳ ವಿಷಯದ ಅಧ್ಯಾತ್ಮಶಾಸ್ತ್ರದ ವಿಶ್ಲೇಷಣೆ ‘ಅಂಶ ೩ ರಲ್ಲಿ ನೀಡಲಾಗಿದೆ.

೩. ಅಳತೆ ಮಾಡಿರುವ ನೋಂದಣಿಯ ಅಧ್ಯಾತ್ಮಶಾಸ್ತ್ರದ ವಿಶ್ಲೇಷಣೆ.

೩ ಅ. ದೇವತೆಯ ‘ತಾರಕ ಮತ್ತು ‘ಮಾರಕ ನಾಮಜಪಗಳ ಮಹತ್ವ : ದೇವತೆಯ ತಾರಕ ಮತ್ತು ಮಾರಕ ಹೀಗೆ ಎರಡು ರೂಪಗಳಿರುತ್ತವೆ. ಭಕ್ತನಿಗೆ ಆಶೀರ್ವಾದ ನೀಡುವ ದೇವತೆಯ ರೂಪವೆಂದರೆ ತಾರಕ ರೂಪ, ಉದಾ. ಆಶೀರ್ವಾದ ನೀಡುವ ಮುದ್ರೆಯ ಶ್ರೀಕೃಷ್ಣ, ಅಸುರರ ಸಂಹಾರ ಮಾಡುವ ದೇವತೆಯ ರೂಪವೆಂದರೆ ಮಾರಕ ರೂಪ, ಉದಾ. ಶಿಶುಪಾಲನ ಮೇಲೆ ಸುದರ್ಶನಚಕ್ರ ಬಿಡುವ ಶ್ರೀಕೃಷ್ಣ. ದೇವತೆಯ ತಾರಕ ಅಥವಾ ಮಾರಕ ರೂಪಕ್ಕೆ ಸಂಬಂಧಿಸಿದ ನಾಮಜಪವೆಂದರೆ ತಾರಕ ಅಥವಾ ಮಾರಕ ನಾಮಜಪವಾಗಿದೆ. ದೇವತೆಯ ಬಗ್ಗೆ ಸಾತ್ತ್ವಿಕ ಭಾವ ನಿರ್ಮಾಣವಾಗಲು, ಅಲ್ಲದೇ ಚೈತನ್ಯ, ಆನಂದ ಮತ್ತು ಶಾಂತಿಯ ಅನುಭೂತಿ ಶೀಘ್ರವಾಗಿ ಆಗಲು ಮತ್ತು ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ದೇವತೆಯ ತಾರಕ ರೂಪದ ನಾಮಜಪ ಆವಶ್ಯಕವಿರುತ್ತದೆ. ದೇವತೆಯಿಂದ ಶಕ್ತಿ ಮತ್ತು ಚೈತನ್ಯ ಗ್ರಹಣವಾಗಲು ಮತ್ತು ಕೆಟ್ಟ ಶಕ್ತಿಗಳ ನಾಶವಾಗಲು ದೇವತೆಯ ಮಾರಕ ರೂಪದ ನಾಮಜಪ ಅವಶ್ಯಕವಿರುತ್ತದೆ.

೩ ಆ. ದತ್ತನ ತಾರಕ ಮತ್ತು ಮಾರಕ ನಾಮಜಪದಿಂದ ಪ್ರಕ್ಷೇಪಿತಗೊಂಡ ಚೈತನ್ಯದಿಂದ ಪರೀಕ್ಷಣೆಗೊಳಪಡಿಸಿದ ಇಬ್ಬರೂ ಸಾಧಕರಿಗೆ ಆಧ್ಯಾತ್ಮಿಕ ಲಾಭವಾಗುವುದು : ಪರೀಕ್ಷಣೆಗೊಳಪಡಿಸಿದ ಇಬ್ಬರೂ ಸಾಧಕರಿಗೆ ಕೆಟ್ಟ ಶಕ್ತಿಯ ಮತ್ತು ಪೂರ್ವಜರ ತೊಂದರೆಯಿದೆ. ಪ್ರಯೋಗದ ಪ್ರಾರಂಭದಲ್ಲಿ ಇಬ್ಬರೂ ಸಾಧಕರಲ್ಲಿ ‘ಇನ್ಫ್ರಾರೆಡ್ ಹಾಗೂ ‘ಅಲ್ಟ್ರಾವೈಲೆಟ್ ಈ ಎರಡೂ ರೀತಿಯ ನಕಾರಾತ್ಮಕ ಶಕ್ತಿ ಬಹಳ ಪ್ರಮಾಣದಲ್ಲಿ ಕಂಡು ಬಂದಿತು. (‘ಇನ್ಫ್ರಾರೆಡ್ ಈ ನಕಾರಾತ್ಮಕ ಶಕ್ತಿಯು ವ್ಯಕ್ತಿಯ ಸುತ್ತಲಿನ ಕಪ್ಪು ಆವರಣವನ್ನು ಸೂಚಿಸುತ್ತಿದ್ದರೆ, ‘ಅಲ್ಟ್ರಾವೈಲೆಟ್ ಈ ನಕಾರಾತ್ಮಕ ಶಕ್ತಿಯು ವ್ಯಕ್ತಿಯ ದೇಹದಲ್ಲಿ ಕೆಟ್ಟ ಶಕ್ತಿಗಳು ಸಂಗ್ರಹಿಸಿದ ತೊಂದರೆದಾಯಕ ಶಕ್ತಿಯನ್ನು ಸೂಚಿಸುತ್ತದೆ) ಸಾಧಕರಲ್ಲಿ ಸಕಾರಾತ್ಮಕ ಶಕ್ತಿಯೂ ಇತ್ತು. ದತ್ತನ ತಾರಕ ಮತ್ತು ಮಾರಕ ನಾಮಜಪದಿಂದ ಪ್ರಕ್ಷೇಪಿತಗೊಂಡ  ಚೈತನ್ಯವನ್ನು ಸಾಧಕರು ಅವರ ಕ್ಷಮತೆಯನುಸಾರ ಗ್ರಹಿಸಿದ್ದರಿಂದ, ಅವರಲ್ಲಿರುವ ನಕಾರಾತ್ಮ ಶಕ್ತಿಯು ಬಹಳ ಕಡಿಮೆ ಅಥವಾ ಸಂಪೂರ್ಣವಾಗಿ ಇಲ್ಲವಾಯಿತು ಮತ್ತು ಅವರ ಸಕಾರಾತ್ಮಕ ಶಕ್ತಿಯಲ್ಲಿ ಬಹಳ ಹೆಚ್ಚಳವಾಯಿತು.

೩ ಇ. ದತ್ತನ ಮಾರಕ ನಾಮಜಪದ ತುಲನೆಯಲ್ಲಿ ತಾರಕ ನಾಮಜಪ ಇಬ್ಬರೂ ಸಾಧಕರ ಮೇಲೆ ಅಧಿಕ ಸಕಾರಾತ್ಮಕ ಪರಿಣಾಮ ಬೀರುವುದು : ವ್ಯಕ್ತಿಯು ತನ್ನ ಪ್ರಕೃತಿಯನುಸಾರ ದೇವತೆಯ ತಾರಕ ಅಥವಾ ಮಾರಕ ನಾಮಜಪವನ್ನು ಮಾಡಿದರೆ ಅವನಿಗೆ ದೇವತೆಯ ತತ್ತ್ವಗಳ ಅಧಿಕ ಲಾಭವಾಗುತ್ತದೆ. ‘ತಾರಕ ಅಥವಾ ‘ಮಾರಕ ಪ್ರಕೃತಿಯಿರುವ ಸಾಧಕರಲ್ಲಿ ಅವರ ಪ್ರಕೃತಿಗೆ ಅನುರೂಪವಾಗಿರುವ ಲಕ್ಷಣಗಳು ಕಂಡು ಬರುತ್ತವೆ. ಉದಾ: ತಾರಕ ಪ್ರಕೃತಿಯ ಸಾಧಕರಲ್ಲಿ ಭಾವಪೂರ್ಣ ಮತ್ತು ಸಣ್ಣ ಧ್ವನಿಯಲ್ಲಿ ನಾಮಜಪ ಮಾಡುವುದು, ನೀಡಿರುವ ಸೇವೆಯನ್ನು ಏಕಾಗ್ರತೆಯಿಂದ ಭಾವಪೂರ್ಣವಾಗಿ ಮಾಡುತ್ತಿರುವುದು ಇತ್ಯಾದಿ ಲಕ್ಷಣಗಳು ಕಂಡು ಬರುತ್ತವೆ. ಹಾಗೆಯೇ ಮಾರಕ ಪ್ರಕೃತಿಯ ಸಾಧಕರಲ್ಲಿ ಆವೇಶದಿಂದ (ಕ್ಷಾತ್ರಭಾವದಿಂದ) ನಾಮಜಪ ಮಾಡುವುದು, ಸಮಷ್ಟಿಯಲ್ಲಿ (ಎಲ್ಲರೆದುರಿಗೆ) ಕ್ಷಾತ್ರವೃತ್ತಿಯಿಂದ ಮಾತನಾಡುವುದು ಅಥವಾ ಮಾರ್ಗದರ್ಶನ ಮಾಡುವುದು ಇತ್ಯಾದಿ ಲಕ್ಷಣಗಳು ಕಂಡು ಬರುತ್ತವೆ. ಪರೀಕ್ಷಣೆಯ ಸಾಧಕರಿಗೆ ದತ್ತನ ಮಾರಕ ನಾಮಜಪದ ತುಲನೆಯಲ್ಲಿ ತಾರಕ ನಾಮಜಪದಿಂದ ಅಧಿಕ ಲಾಭವಾಗುವುದು. ಇದು ಅವರಿಗೆ ಅವರ ಪ್ರಕೃತಿಗನುಸಾರ ಲಾಭವಾಗಿರುವುದರ ದ್ಯೋತಕವಾಗಿದೆ.

೩ ಈ. ಸಾಧಕಿಗೆ ಮಧ್ಯಮ ಧ್ವನಿಯಲ್ಲಿ ತಾರಕ ನಾಮಜಪವನ್ನು ಕೇಳಿದಾಗ ಅತ್ಯಧಿಕ ಲಾಭವಾಗಿದ್ದರೆ, ಸಾಧಕನಿಗೆ ಸಣ್ಣ ಧ್ವನಿಯಲ್ಲಿ ತಾರಕ ನಾಮಜಪವನ್ನು ಕೇಳಿದ್ದರಿಂದ ಅತ್ಯಧಿಕ ಲಾಭವಾಗುವುದು : ಸಣ್ಣ ಧ್ವನಿಯಲ್ಲಿರುವ ನಾಮಜಪ ಸತ್ವಪ್ರಧಾನ, ಮಧ್ಯಮ ಧ್ವನಿಯಲ್ಲಿರುವ ನಾಮಜಪ ಸತ್ವ-ರಜಪ್ರಧಾನ, ಹಾಗೆಯೇ ದೊಡ್ಡ ಧ್ವನಿಯಲ್ಲಿರುವ ನಾಮಜಪ ರಜ-ಸತ್ವಪ್ರಧಾನವಾಗಿದೆ. ಪರೀಕ್ಷಣೆಗೆ ಒಳಪಡಿಸಿದ ಇಬ್ಬರೂ ಸಾಧಕರಿಗೆ ಅವರ ಪ್ರಕೃತಿ ಮತ್ತು ಅವರ ಅವಶ್ಯಕತೆಯನುಸಾರ ಆಯಾ ಧ್ವನಿಯಲ್ಲಿರುವ ನಾಮಜಪದಿಂದ ಅವರಿಗೆ ಅಧಿಕ ಲಾಭವಾಯಿತು.

೩ ಉ. ಮಾರಕ ನಾಮಜಪದ  ಪ್ರಯೋಗದಲ್ಲಿ ಪರೀಕ್ಷಣೆಗೆ ಒಳಪಟ್ಟ ಇಬ್ಬರೂ ಸಾಧಕರಿಗೆ ದೊಡ್ಡ ಧ್ವನಿಯಲ್ಲಿರುವ ನಾಮಜಪದಿಂದ ಅಧಿಕ ಲಾಭವಾಗುವುದು : ದೇವತೆಯ ಮಾರಕ ನಾಮಜಪದಿಂದ ದೇವತೆಯ ಶಕ್ತಿಯ ಸ್ಪಂದನಗಳು ಸಿಗುತ್ತವೆ. ವ್ಯಕ್ತಿಗೆ ಇದ್ದ ಕೆಟ್ಟ ಶಕ್ತಿಯ ತೊಂದರೆಯ ನಿವಾರಣೆಗಾಗಿ ಅವನು ಮಾರಕ ನಾಮಜಪವನ್ನು ದೊಡ್ಡ ಧ್ವನಿಯಲ್ಲಿ ಕೇಳುವುದು ಲಾಭದಾಯಕವಾಗಿರುತ್ತದೆ. ದೊಡ್ಡ ಧ್ವನಿಯಲ್ಲಿ ನಾಮಜಪವನ್ನು ಮಾಡುವುದರಿಂದ ದೇವತೆಯ ಶಕ್ತಿಯ ಸ್ಪಂದನಗಳು ವ್ಯಕ್ತಿಗೆ ಸಿಗುವುದರಿಂದ ಅವನಲ್ಲಿರುವ ನಕಾರಾತ್ಮಕ ಸ್ಪಂದನಗಳು ಅಲ್ಪಾವಧಿಯಲ್ಲಿ ಕಡಿಮೆಯಾಗುತ್ತದೆ ಅಥವಾ ನಾಶವಾಗುತ್ತವೆ, ಹಾಗೆಯೇ ಅವನಲ್ಲಿರುವ ಸಕಾರಾತ್ಮಕ ಸ್ಪಂದನಗಳಲ್ಲಿ ಹೆಚ್ಚಳವಾಗುತ್ತವೆ. ಪರೀಕ್ಷಣೆಗೆ ಒಳಪಟ್ಟ ಸಾಧಕರಿಗೆ ಕೇಳಿಸಿದ ದತ್ತನ ಮಾರಕ ನಾಮಜಪದ ಪ್ರಯೋಗದ ಸಂದರ್ಭದಲ್ಲಿ ಇದರ ಅನುಭವವು ಕಂಡು ಬಂದಿತು. ಅವರಿಗೆ ಸಣ್ಣ, ಮಧ್ಯಮ ಮತ್ತು ದೊಡ್ಡ ಧ್ವನಿಯಲ್ಲಿ ಮಾರಕ ನಾಮಜಪವನ್ನು ಕೇಳಿಸಿದ್ದರಿಂದ ಮುಂದುವರಿದಂತೆ ಅಧಿಕ ಲಾಭವಾಯಿತು; ಆದರೆ ಅದು ದೊಡ್ಡ  ಧ್ವನಿಯ ನಾಮಜಪದಿಂದ ಅತ್ಯಧಿಕವಾಯಿತು.

೩ ಊ. ತಾರಕ ಮತ್ತು ಮಾರಕ ನಾಮಜಪವನ್ನು ಕೇಳಿದ ಬಳಿಕ ಪರೀಕ್ಷಣೆಗೆ ಒಳಪಟ್ಟ ಇಬ್ಬರೂ ಸಾಧಕರ ಒಟ್ಟು ಪ್ರಭಾವಲಯ ಸ್ವಲ್ಪ ಕಡಿಮೆಯಾಗಿದ್ದರೂ, ಅದು ಗುಣಾತ್ಮಕದೃಷ್ಟಿಯಿಂದ ಚೆನ್ನಾಗಿರುವುದು (ಸಕಾರಾತ್ಮಕ ಇರುವುದು) : ಪ್ರಯೋಗದ ಮೊದಲು ಇಬ್ಬರೂ ಸಾಧಕರ ಒಟ್ಟು ಪ್ರಭಾವಲಯ ಸುಮಾರು ೯ ರಿಂದ ೧೦ ಮೀಟರ್‌ಗಳಷ್ಟು ಇತ್ತು; ಅಂದರೆ ಸಾಮಾನ್ಯ ವ್ಯಕ್ತಿಯ ತುಲನೆಯಲ್ಲಿ ಬಹಳ ಅಧಿಕವಿತ್ತು. ಅವರ ಒಟ್ಟು ಪ್ರಭಾವಲಯದಲ್ಲಿ ಸಕಾರಾತ್ಮಕ ಸ್ಪಂದನಗಳಿಗಿಂತ ನಕಾರಾತ್ಮಕ ಸ್ಪಂದನಗಳು ಬಹಳ ಅಧಿಕ ಪ್ರಮಾಣದಲ್ಲಿದ್ದರಿಂದ ಅವರಿಂದ ವಾತಾವರಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತ ಗೊಳ್ಳುವ ಪ್ರಮಾಣ ಅಧಿಕವಿತ್ತು. ಪ್ರಯೋಗದ ಬಳಿಕ ಅವರ ಒಟ್ಟು ಪ್ರಭಾವಲಯ ಸುಮಾರು ೭ ರಿಂದ ೮ ಮೀಟರ್‌ಗಳಷ್ಟು ಆಯಿತು; ಅಂದರೆ ಅದು ಸುಮಾರು ೨ ಮೀಟರ್‌ಗಳಷ್ಟು ಕಡಿಮೆಯಾಯಿತು. ಇದರ ಕಾರಣವೆಂದರೆ, ಪ್ರಯೋಗದ ಬಳಿಕ ಅವರಲ್ಲಿರುವ ನಕಾರಾತ್ಮಕ ಸ್ಪಂದನಗಳು  ಅತೀ ಕಡಿಮೆ ಅಥವಾ ಸಂಪೂರ್ಣ ಇಲ್ಲದಂತಾಗಿ, ಅವರಲ್ಲಿರುವ ಸಕಾರಾತ್ಮಕ ಸ್ಪಂದನಗಳಲ್ಲಿ ಬಹಳಷ್ಟು ಹೆಚ್ಚಳವಾಯಿತು. ಇದರಿಂದ ಅವರ ಒಟ್ಟು ಪ್ರಭಾವಲಯದಿಂದ ವಾತಾವರಣದಲ್ಲಿ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತಗೊಂಡವು. ಇದರಿಂದ ಪ್ರಯೋಗದ ಬಳಿಕ ಅವರ ಒಟ್ಟು ಪ್ರಭಾವಲಯ ೨ ಮೀಟರ್‌ಗಳಷ್ಟು ಕಡಿಮೆಯಾಗಿದ್ದರೂ, ಅದು ಗುಣಾತ್ಮಕ ದೃಷ್ಟಿಯಿಂದ ಚೆನ್ನಾಗಿ (ಸಕಾರಾತ್ಮಕ) ಇದೆ.

೪. ಪರಾತ್ಪರ ಗುರು ಡಾ. ಆಠವಲೆಯವರ ನಾಮಜಪದ ಹಿಂದಿರುವ ಸಂಕಲ್ಪ.

ಜಗತ್ತಿನಾದ್ಯಂತವಿರುವ ಸಾಧಕರ ಆಧ್ಯಾತ್ಮಿಕ ತೊಂದರೆ ಬೇಗನೆ ದೂರವಾಗಬೇಕು, ಹಾಗೆಯೇ ಅವರಿಗೆ ದೇವತೆಯ ತತ್ತ್ವಗಳಿಂದ ಆದಷ್ಟು ಹೆಚ್ಚೆಚ್ಚು ಲಾಭವಾಗಬೇಕು, ಎಂದು ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ನಾಮಜಪಗಳ ನಿರ್ಮಾಣವನ್ನು ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅವರ ಪರೋಕ್ಷ ಸಂಕಲ್ಪವೇ ಕಾರ್ಯನಿರತವಾಗಿರುವುದರಿಂದ ಈ ನಾಮಜಪಕ್ಕನುಸಾರ ಸಾಧಕರು ನಾಮಜಪವನ್ನು ಮಾಡಿದರೆ ಅವರ ತೊಂದರೆ ದೂರಗೊಳ್ಳಲು, ಹಾಗೆಯೇ ಅವರಿಗೆ ದೇವತೆಗಳ ತತ್ತ್ವಗಳ ಲಾಭವಾಗಲು ಖಂಡಿತ ವಾಗಿಯೂ ಸಹಾಯವಾಗುವುದು. – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೬.೯.೨೦೨೦)

ವಿ-ಅಂಚೆ ವಿಳಾಸ :  [email protected]

ವಾಚಕರಿಗೆ ಸೂಚನೆ : ಸ್ಥಳದ ಅಭಾವದಿಂದಾಗಿ ಈ ಲೇಖನದಲ್ಲಿನ (‘ಯು.ಎ.ಎಸ್.) ಉಪಕರಣದ ಪರಿಚಯ, ‘ಉಪಕರಣದಲ್ಲಿನ ಘಟಕ ಮತ್ತು ಅವುಗಳ ವಿವರಣೆ, ‘ಘಟಕದ ಪ್ರಭಾವಳಿಯನ್ನು ಅಳೆಯುವುದು, ಪರೀಕ್ಷಣೆಯ ಪದ್ಧತಿ ಮತ್ತು ‘ಪ್ರಯೋಗದಲ್ಲಿ ಸಾಮ್ಯತೆ ಬರಲು ತೆಗೆದುಕೊಂಡ ದಕ್ಷತೆ ಈ ಸಾಮಾನ್ಯ ಅಂಶಗಳನ್ನು ಸನಾತನ ಸಂಸ್ಥೆಯ https://bit.ly/UASResearch ಈ ಲಿಂಕ್‌ನಲ್ಲಿ ಕೊಡಲಾಗಿದೆ. ಈ ಲಿಂಕ್‌ನಲ್ಲಿನ ಕೆಲವು ಅಕ್ಷರಗಳು (Capital) ಇವೆ.