ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಜಯಂತ ಆಠವಲೆ

‘ನೌಕರಿ ಮಾಡಬೇಕೆಂದು ಇಚ್ಛಿಸುವವರು ಇತರರಲ್ಲಿ ನೌಕರಿ ಮಾಡುವ ಬದಲು ದೇವರದ್ದು ಮಾಡಬೇಕು. ನೌಕರಿ ಮಾಡಿದ್ದಕ್ಕೆ ಅಲ್ಪಸ್ವಲ್ಪ ಪಡೆಯುವ ಬದಲು ದೇವರು ಎಲ್ಲವನ್ನೂ ಕೊಡುತ್ತಾನೆ!

‘ವಿಜ್ಞಾನವು ವಿವಿಧ ಯಂತ್ರಗಳನ್ನು ಕಂಡುಹಿಡಿದು ಮನುಷ್ಯನ ಸಮಯ ಉಳಿಸಿತು; ಆದರೆ ‘ಆ ಸಮಯದ ಸದುಪಯೋಗ ಹೇಗೆ ಮಾಡಬೇಕು, ಎಂಬುದನ್ನು ಕಲಿಸದಿರುವುದರಿಂದ ಮನುಷ್ಯನು ಪರಾಕಾಷ್ಠೆಯ ಅಧೋಗತಿಗೆ ತಲುಪಿದ್ದಾನೆ !

‘ಎಲ್ಲಿ ಯಂತ್ರಗಳ ಮೂಲಕ ಸಂಶೋಧನೆಯನ್ನು ಮಾಡಿ ಫಲಿತಾಂಶಗಳನ್ನು ಹೇಳುವ ವಿಜ್ಞಾನಿಗಳು ಮತ್ತು ಎಲ್ಲಿ ಯಂತ್ರಗಳಿಲ್ಲದೆ ಮತ್ತು ಸಂಶೋಧನೆಯಿಲ್ಲದೆ ಲಕ್ಷಾಂತರ ವರ್ಷಗಳ ಹಿಂದೆ ಅಂತಿಮ ಸತ್ಯವನ್ನು ಹೇಳಿದ ಋಷಿಗಳು !

‘ಹಿಂದೂ ರಾಷ್ಟ್ರದಲ್ಲಿ (ಸನಾತನ ಧರ್ಮ ರಾಜ್ಯದಲ್ಲಿ) ನಿಯತಕಾಲಿಕೆಗಳು, ದೂರದರ್ಶನ ವಾಹಿನಿಗಳು, ಜಾಲತಾಣಗಳು ಇತ್ಯಾದಿಗಳನ್ನು ಕೇವಲ ಧರ್ಮಶಿಕ್ಷಣ ಮತ್ತು ಸಾಧನೆಗೆ ಮಾತ್ರ ಬಳಸಲಾಗುವುದು. ಇದರಿಂದ ಅಪರಾಧಿಗಳು ಇರುವುದಿಲ್ಲ ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿ ಇರುವುದರಿಂದ ಆನಂದದಿಂದ ಇರುವರು.

‘ಹಿಂದೆ ಲಂಚ ತೆಗೆದುಕೊಳ್ಳುವವರನ್ನು ಹುಡುಕಬೇಕಾಗಿತ್ತು. ಈಗ ಲಂಚ ತೆಗೆದುಕೊಳ್ಳದವರನ್ನು ಹುಡುಕಬೇಕಾಗುತ್ತಿದೆ !

ಹಿಂದೂ ಧರ್ಮದಲ್ಲಿ ಹೇಳಿದಂತಹ ಆಳವಾದ ಜ್ಞಾನವು ಇತರ ಒಂದಾದರೂ ಪಂಥದಲ್ಲಿ ಇದೆಯೇ ? ವಿಜ್ಞಾನಕ್ಕಾದರೂ ಇದರ ಅರಿವಿದೆಯೇ ? – (ಪರಾತ್ಪರ ಗುರು) ಡಾ. ಆಠವಲೆ