ಲಖಿಸರಾಯ(ಬಿಹಾರ)ದಲ್ಲಿ ನಕ್ಸಲರಿಂದ ಅಪಹರಣಕ್ಕೊಳಗಾದ ಶೃಂಗಿಋಷಿ ಧಾಮ್‌ನ ಅರ್ಚಕರ ಹತ್ಯೆ

ಇಲ್ಲಿಂದ ಅಪಹರಿಸಲಾಗಿದ್ದ ಓರ್ವ ಆರ್ಚಕರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ಆರ್ಚಕರ ಹೆಸರು ನೀರಜ ಝಾ ಎಂದಾಗಿದೆ. ನೀರಜ ಝಾ ಇವರು ಅಗಸ್ಟ್ ೨೨ ರಂದು ಪೂಜೆ ಮಾಡುತ್ತಿರುವಾಗಲೇ ನಕ್ಸಲರು ಅವರನ್ನು ಅಪಹರಿಸಿದರು. ನಂತರ ನಕ್ಸಲರು ನೀರಜ ಝಾ ಇವರ ಕುಟುಂಬದವರಲ್ಲಿ ೧ ಕೋಟಿ ರೂಪಾಯಿಗಳ ಒತ್ತೆ ಹಣವನ್ನು ಕೇಳಿದರು.

ಗಣೇಶೋತ್ಸವದ ಕಾಲಾವಧಿಯಲ್ಲಿ ವಿವಿಧ ಮಾಧ್ಯಮಗಳಿಂದ ಆಗುತ್ತಿರುವ ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟುವಲ್ಲಿ ಹಿಂದೂ ಜನಜಾಗೃತಿ ಸಮಿತಿಗೆ ದೊರೆತ ಯಶಸ್ಸು

ಗಣೇಶೋತ್ಸವದ ಕಾಲದಲ್ಲಿ ವಿವಿಧ ಮಾಧ್ಯಮಗಳಿಂದಾಗುವ ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟುವಲ್ಲಿ ಹಿಂದೂ ಜನಜಾಗೃತಿ ಸಮಿತಿಗೆ ಯಶಸ್ಸು ಸಿಕ್ಕಿದೆ. ಫ್ಲಿಪ್‌ಕಾರ್ಟ್, ಮ್ಯಾಕ್‌ಡೊನಾಲ್ಡ್ , ಹಾಗೂ ಮಧ್ಯಪ್ರದೇಶ ಸೈಬರ ಪೊಲೀಸರು ಚಿತ್ರಗಳ ಮಾಧ್ಯಮದಿಂದ ಮಾಡಿದ ಶ್ರೀ ಗಣೇಶನ ವಿಡಂಬನೆಯನ್ನು ಹಿಂದೂಗಳು ಸಂಘಟಿತರಾಗಿ ಕಾನೂನು ಮಾರ್ಗದಿಂದ ವಿರೋಧಿಸಿ ತಡೆಗಟ್ಟಿದರು.

ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಡಾ. ಉದಯ ಧುರಿಯವರಿಂದ ಮುಂಬಯಿ ಪೊಲೀಸ್ ಆಯುಕ್ತರಲ್ಲಿ ದೂರು !

`AstaGuru’ ಈ ಸಂಸ್ಥೆಯು ಹಿಂದೂದ್ವೇಷಿ ಚಿತ್ರಕಾರ ಎಮ್.ಎಫ್. ಹುಸೇನ ಇವರು ವಿಕೃತವಾಗಿ ಬಿಡಿಸಿದ ಶ್ರೀ ಗಣೇಶ ಮತ್ತು ಭಗವಾನ ಶಿವನ ಚಿತ್ರಗಳನ್ನು ಗಣೇಶೋತ್ಸವದ ಕಾಲದಲ್ಲಿ ಆನ್‌ಲೈನ್‌ದಲ್ಲಿ ಮಾರಾಟಕ್ಕೆ ಇಟ್ಟಿತ್ತು. `AstaGuru’ ಈ ಹರಾಜು ಮಾಡುವ ಸಂಸ್ಥೆಯು 29 ಮತ್ತು 30 ಆಗಸ್ಟ್ 2020 ರಲ್ಲಿ ‘ಆನ್‌ಲೈನ್’ ಮೂಲಕ ಈ ಚಿತ್ರಗಳನ್ನು ಹರಾಜು ಮಾಡಲು ಆಯೋಜನೆ ಮಾಡಿತ್ತು. ಆದರೆ ಇದು ವರೆಗೂ ಈ ಚಿತ್ರಗಳ ಮಾರಾಟ ಮಾಡಲಾಗುತ್ತಿದೆ.

ಕನ್ನಡ ಹಾಗೂ ಹಿಂದಿ ಸನಾತನ ಪಂಚಾಂಗ ಆಪ್ ಪ್ರತಿಯೊಂದು ೧೦ ಲಕ್ಷಕ್ಕೂ ಹೆಚ್ಚು ಜನರಿಂದ ‘ಡೌನ್‌ಲೋಡ್’ !

‘ಸನಾತನ ಸಂಸ್ಥೆಯ ವತಿಯಿಂದ ಪ್ರತೀವರ್ಷ ವಾರ್ಷಿಕ ‘ಸನಾತನ ಪಂಚಾಂಗ’ (ದಿನದರ್ಶಿಕೆ) ಪ್ರಕಾಶಿಸಲಾಗುತ್ತದೆ. ಅಲ್ಪಾವಧಿಯಲ್ಲೇ ಈ ಪಂಚಾಗವು ಜನಪ್ರಿಯವಾಗಿದೆ. ಈ ಪಂಚಾಂಗ ಅಂದರೆ ಸಾಧನೆ ಹಾಗೂ ಧರ್ಮಶಿಕ್ಷಣ ವಿಷಯಗಳಿಂದ ಪರಿಪೂರ್ಣವಾಗಿದೆ. ‘ಪಂಚಾಂಗವಲ್ಲ, ಹಿಂದುತ್ವದ ಸರ್ವಾಂಗ !’ ಎಂದು ಇದರ ಘೋಷವಾಕ್ಯವಾಗಿದೆ.

ನಗದು ಬಿಕ್ಕಟ್ಟಿನಿಂದಾಗಿ ತಿರುಪತಿ ದೇವಸ್ಥಾನವು ೧೨ ಸಾವಿರ ಕೋಟಿ ರೂಪಾಯಿಗಳನ್ನು ಅಡವಿಟ್ಟು ತಿಂಗಳ ಬಡ್ಡಿ ತೆಗೆದುಕೊಳ್ಳುವುದು

ತಿರುಮಲ ತಿರುಪತಿಯಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊರೋನಾದ ಸಂಕಟದಿಂದಾಗಿ ಭಕ್ತರಿಂದ ನಗದು ರೂಪದ ಅರ್ಪಣೆಗಳಲ್ಲಿ ತೀವ್ರ ಇಳಿಕೆಯಾದುದರಿಂದ ತಿರುಮಲ ತಿರುಪತಿ ದೇವಸ್ಥಾನವು ಆಗಸ್ಟ್ ೨೮ ರಂದು ನಡೆದ ಸಭೆಯಲ್ಲಿ ೧೨ ಸಾವಿರ ಕೋಟಿ ರೂಪಾಯಿಗಳ ನಗದನ್ನು ಅಡವಿಟ್ಟು ಬಡ್ಡಿಯನ್ನು ತಿಂಗಳ ಸ್ವರೂಪದಲ್ಲಿ ರೂಪಾಂತರಿತಗೊಳಿಸುವ ನಿರ್ಣಯವನ್ನು ತೆಗೆದುಕೊಂಡಿತು.

ಅರುಣಾಚಲ ಪ್ರದೇಶ ಹಾಗೂ ಭೂತಾನ್ ಗಡಿಭಾಗದಲ್ಲಿನ ಹಳ್ಳಿಗಳನ್ನು ಖಾಲಿ ಮಾಡುತ್ತಿರುವ ಚೀನಾ !

ಚೀನಾವು ಭಾರತದೊಂದಿಗಿನ ಘರ್ಷಣೆಯ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶ ಹಾಗೂ ಭೂತಾನ ಗಡಿ ಭಾಗದ ಟಿಬೆಟಿ ನಾಗರಿಕರನ್ನು ಸ್ಥಳಾಂತರಿಸಲು ಆರಂಭಿಸಿದೆ. ಚೀನಾ ಸರಕಾರದ ದಿನಪತ್ರಿಕೆಯಾಗಿರುವ ‘ಗ್ಲೋಬಲ್ ಟೈಮ್ಸ್’ ನೀಡಿದ ವರದಿಗನುಸಾರ, ‘ಚೀನಾ ಭಾರತ ಹಾಗೂ ಭೂತಾನ ಗಡಿಭಾಗದ ಹತ್ತಿರವಿರುವ ೯೩ ಗ್ರಾಮಗಳಲ್ಲಿನ ಜನರನ್ನು ಗಡಿಯಿಂದ ದೂರವಿರುವ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.