ಯಾವುದನ್ನು ‘ತಾಜ್ ಮಹಲ್’ ಎಂದು ಕರೆಯುತ್ತಾರೆ ಅದು ಶಿವನ ದೇವಸ್ಥಾನವಾದ ‘ತೇಜೋಮಹಾಲಯ’ವಾಗಿದೆ ! – ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

ತಪ್ಪು ಇತಿಹಾಸವನ್ನು ಬದಲಾಯಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥರಲ್ಲಿ ಆಗ್ರಹ

  • ಅನೇಕ ಇತಿಹಾಸಕಾರರು ಇದನ್ನೇ ಹೇಳುತ್ತಿದ್ದಾರೆ ಮತ್ತು ಈಗ ಶಂಕರಾಚಾರ್ಯರು ಇದನ್ನು ಹೇಳಿದ್ದಾರೆ ಮತ್ತು ಅದರಲ್ಲಿ ಬದಲಾವಣೆ ಕೋರಿದ್ದಾರೆ. ಇದನ್ನು ನೋಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾಜ್‌ಮಹಲ್ ಅನ್ನು ಹಿಂದಿನ ಶಿವನ ದೇವಸ್ಥಾನವನ್ನಾಗಿ ಮಾಡಿ ಅದನ್ನು ‘ತೇಜೋಮಹಾಲಯ’ ಎಂದು ಘೋಷಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

  • ಹಿಂದೂಗಳ ಧರ್ಮಗುರು ಶಂಕರಾಚಾರ್ಯರಿಗೆ ಈ ರೀತಿಯಲ್ಲಿ ಆಗ್ರಹಿಸುವ ಪ್ರಮೇಯ ಬಂದಿರುವುದು, ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಈ ವಿಷಯದಲ್ಲಿ ಸರ್ಕಾರವು ನಿಜವಾದ ಇತಿಹಾಸವನ್ನು ಬೆಳಕಿಗೆ ತರಬೇಕೆಂದು ಹಿಂದೂಗಳು ಆಗ್ರಹಿಸುವುದು ಅವಶ್ಯಕವಿದೆ !

ಪುರಿ (ಒಡಿಶಾ) – ಇತ್ತೀಚಿನ ದಿನಗಳಲ್ಲಿ ನೀವು ಯಾವುದನ್ನು ‘ತಾಜ್ ಮಹಲ್’ ಎಂದೂ ಕರೆಯುತ್ತೀರಿ, ಅದರ ಹಿಂದಿನ ಹೆಸರು ‘ತೇಜೋಮಹಾಲಯ’ವಾಗಿದೆ. ಹಿಂದೆ ಅಲ್ಲಿ ಶಿವನ ದೇವಸ್ಥಾನವಿತ್ತು. ಅಲ್ಲಿ ಶಿವನನ್ನು ಸ್ಥಾಪಿಸಲಾಗಿತ್ತು. ಜೈಪುರದ ರಾಜಮನೆತನದವರಲ್ಲಿ ಇದರ ಸಂಪೂರ್ಣ ಇತಿಹಾಸವು ಸುರಕ್ಷಿತವಾಗಿದೆ. ಪ್ರಾಚೀನ ಕಾಲದಲ್ಲಿ ವಿದೇಶಿ ಯಾತ್ರಿಕರು ಏನು ಬರಿದಿಟ್ಟಿದ್ದಾರೆಯೋ ಆ ಬರಹಗಳಲ್ಲಿಯೂ ಇದನ್ನು ‘ತೇಜೋಮಹಾಲಯ’ ಎಂದೂ ಉಲ್ಲೇಖಿಸಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಇತಿಹಾಸದ ಬಗ್ಗೆ ಗಮನ ಹರಿಸಬೇಕು ಮತ್ತು ಅದರ ಆಧಾರದಲ್ಲಿ ಏನು ತಪ್ಪು ಪ್ರಚಾರ ಮಾಡಲಗುತ್ತಿದೆ ಅದನ್ನು ಆದಷ್ಟು ಬೇಗ ನಿಲ್ಲಿಸಬೇಕು ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿಯವರು ಹೇಳಿದರು. ಈ ನಿಟ್ಟಿನಲ್ಲಿ ವಿಡಿಯೋವನ್ನು ಗೋವರ್ಧನ ಪೀಠದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು ಅದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಟ್ಯಾಗ್ (ಸಂಬಂಧಪಟ್ಟ ವ್ಯಕ್ತಿಗೆ ತಿಳಿಸುವ ಉದ್ದೇಶದಿಂದ ಟ್ಯಾಗ್ ಮಾಡಲಾಗುತ್ತದೆ.) ಮಾಡಿದ್ದಾರೆ.

ಇದಕ್ಕೂ ಮೊದಲು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯರಾದ ಶಂಕರಾಚಾರ್ಯ ವಾಸುದೇವನಂದ ಸರಸ್ವತಿ ಅವರು ‘ಆಗ್ರಾ’ದ ಹಿಂದಿನ ಹೆಸರು ’ಅಗ್ರವಾನ್’ ಎಂದಿತ್ತು. ಆದ್ದರಿಂದ ಪುನಃ ಆ ಹೆಸರನ್ನು ನೀಡಬೇಕು ಎಂದು ಹೇಳಿದ್ದರು.