ಮಥುರಾದಲ್ಲಿ ಶ್ರೀಕೃಷ್ಣಜನ್ಮಭೂಮಿಯ ಮುಕ್ತಿಗಾಗಿ ಆಂದೋಲನ ಮಾಡುತ್ತಿದ್ದ ‘ಹಿಂದೂ ಆರ್ಮಿ’ಯ ೨೨ ಕಾರ್ಯಕರ್ತರ ಬಂಧನ

ಇಂತಹ ಆಂದೋಲನಗಳನ್ನು ಏಕೆ ಮಾಡಬೇಕಾಗುತ್ತದೆ ? ಕೇಂದ್ರ ಸರ್ಕಾರವು ಮೊಘಲರ ಕಾಲದಿಂದಲೂ ಮತಾಂಧರ ನಿಯಂತ್ರಣದಲ್ಲಿದ್ದ ಕಾಶಿ ಮತ್ತು ಮಥುರಾದ ದೇವಸ್ಥಾನಗಳನ್ನು ಮುಕ್ತಗೊಳಿಸಿ ಅದರ ಗತವೈಭವವನ್ನು ಮರಳಿ ನೀಡಬೇಕು !

ಹಿಂದೂ ಆರ್ಮಿಯ ಮುಖ್ಯಸ್ಥ ಮನೀಶ ಯಾದವ್

ಮಥುರಾ (ಉತ್ತರ ಪ್ರದೇಶ) – ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯಲ್ಲಿ ಆಂದೋಲನ ನಡೆಸಲು ಪ್ರಯತ್ನಿಸುತ್ತಿದ್ದ ಹಿಂದೂ ಆರ್ಮಿ ಸಂಘಟನೆಯ ೨೨ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

೧. ಹಿಂದೂ ಆರ್ಮಿ ಸಂಘಟನೆಯಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರೀಕೃಷ್ಣಜನ್ಮಭೂಮಿಯನ್ನು ಮುಕ್ತಗೊಳಿಸುವಂತೆ ಚಳುವಳಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಪ್ರಯುಕ್ತ ಸೆಪ್ಟೆಂಬರ್ ೨೧ ರಂದು ಶ್ರೀಕೃಷ್ಣಜನ್ಮಭೂಮಿಗೆ ಹೋಗಿ ಆಂದೋಲನವನ್ನು ಪ್ರಾರಂಭಿಸಲು ಕರೆ ನೀಡಲಾಗಿತ್ತು. ಈ ಬಗ್ಗೆ ಪೊಲೀಸರಲ್ಲಿಯೂ ಅನುಮತಿ ಪಡೆಯಲಾಗಿತ್ತು; ಆದರೆ ಪೊಲೀಸರು ಅದನ್ನು ನಿರಾಕರಿಸಿದ್ದರು. ಆದರೂ ಸೆಪ್ಟೆಂಬರ್ ೨೧ ರಂದು ಹಿಂದೂ ಆರ್ಮಿಯ ಕಾರ್ಯಕರ್ತರು ಇಲ್ಲಿ ಆಂದೋಲನವನ್ನು ಮಾಡುವವರಿದ್ದರು; ಆದರೆ ಪೊಲೀಸರು ಹಿಂದಿನ ದಿನ ರಾತ್ರಿಯೇ ಅವರನ್ನು ಬಂಧಿಸಿದರು.

೨. ಪೊಲೀಸ್ ಅಧೀಕ್ಷಕ ಉದಯ ಶಂಕರ ಇವರು ಇದರ ಬಗ್ಗೆ ಮಾತನಾಡುತ್ತಾ, ಸೆಪ್ಟೆಂಬರ್ ೨೦ ರ ಸಂಜೆ ಹಿಂದೂ ಆರ್ಮಿಯ ಕಾರ್ಯಕರ್ತರು ದೇವಸ್ಥಾನದ ಬಳಿ ಒಟ್ಟಾಗಲು ಆರಂಭಿಸಿದ್ದರು. ಅವರಿಂದ ಅಕ್ಷೇಪಾರ್ಹ ಕೃತ್ಯವಾಗಬಹುದೆಂಬ ಅನುಮಾನದ ಮೇಲೆ ಕಲಂ ೧೫೧ ರ ಅಡಿಯಲ್ಲಿ ಅವರೆಲ್ಲರನ್ನು ಬಂಧಿಸಲಾಗಿದೆ. ಈಗ ಈ ಪ್ರದೇಶದಲ್ಲಿ ೧೪೪ ಸೆಕ್ಷನ್ ಜಾರಿಗೊಳಿಸಲಾಗಿದೆ, ಎಂದರು.

ಶ್ರೀಕೃಷ್ಣಜನ್ಮಸ್ಥಳದಲ್ಲಿರುವ ಇಸ್ಲಾಮಿಕ್ ಕಟ್ಟಡವನ್ನು ತೆಗೆದುಹಾಕಿ ! – ಹಿಂದೂ ಆರ್ಮಿ

‘ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಇಸ್ಲಾಮಿಕ್ ಕಟ್ಟಡವನ್ನು ತೆಗೆದುಹಾಕಿ ಇಡೀ ಭೂಮಿಯನ್ನು ಶ್ರೀಕೃಷ್ಣಜನ್ಮಭೂಮಿಗೆ ನೀಡಬೇಕು’ ಎಂದು ಹಿಂದೂ ಆರ್ಮಿಯ ಮುಖ್ಯಸ್ಥ ಮನೀಶ ಯಾದವ್ ಹಾಗೂ ಲಕ್ಷ್ಮಣಪುರಿ ನಗರಾಧ್ಯಕ್ಷ ಅಸ್ಕಾರನ್ ಸಿಂಗ್ ಒತ್ತಾಯಿಸಿದ್ದಾರೆ.