ಜಗತ್ತನ್ನು ಕರೋನಾದ ಕಂದಕಕ್ಕೆ ತಳ್ಳಿರುವ ವುಹಾನ್‌ನಲ್ಲಿನ ಎಲ್ಲ ವಹಿವಾಟುಗಳು ಮೊದಲಿನಂತೆಯೇ ಮುಂದುವರೆದಿದೆ

ಚೀನಾದ ಈ ಕುತಂತ್ರದ ವಿರುದ್ಧ ಎಲ್ಲ ದೇಶಗಳನ್ನು ಒಂದುಗೂಡಿಸಿ ಅವುಗಳನ್ನು ಚೀನಾ ವಿರುದ್ಧ ಕ್ರಮ ಕೈಗೊಳ್ಳಲು ಭಾರತವು ಮುಂದಾಳತ್ವ ವಹಿಸಬೇಕು !

ಬೀಜಿಂಗ್ (ಚೀನಾ) – ಜಗತ್ತನ್ನು ಕರೋನಾದ ಕಂದಕಕ್ಕೆ ತಳ್ಳಿರುವ ಚೀನಾದ ನಗರವಾದ ವುಹಾನ್‌ನಲ್ಲಿನ ಎಲ್ಲಾ ವಹಿವಾಟುಗಳು ಸಾಮಾನ್ಯ ಸ್ಥಿತಿಗೆ ಮರಳಿದೆ. ವುಹಾನ್‌ನಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ‘ನೈಟ್‌ಕ್ಲಬ್’ಗಳೂ ಸಹ ಆರಂಭವಾಗಿವೆ. ವಿಶೇಷವೆಂದರೆ ಇಲ್ಲಿ ಯಾವುದೇ ನಾಗರಿಕರು ‘ಮಾಸ್ಕ್’ ಧರಿಸುವುದಿಲ್ಲ ಮತ್ತು ಸಾಮಾಜಿಕ ಅಂತರವನ್ನೂ ಪಾಲಿಸುತ್ತಿಲ್ಲ. ವುಹಾನ್‌ನ ಯಾವ ಮಾಂಸಾಹಾರಿ ಆಹಾರ ಮಾರುಕಟ್ಟೆಯಿಂದ ಕೊರೋನಾ ಹುಟ್ಟಿಕೊಂಡಿತ್ತು ಅದೂ ಸಹ ಈಗಾಗಲೇ ಸಾಮಾನ್ಯ ಸ್ಥಿತಿಗೆ ಮರಳಿದೆ.

ಕಳೆದ ಕೆಲವು ದಿನಗಳಿಂದ ಚೀನಾದಲ್ಲಿ ಕರೋನಾ ಸೋಂಕು ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ೩೩ ದಿನಗಳಲ್ಲಿ ವುಹಾನ್‌ನಲ್ಲಿ ಯಾವುದೇ ಕರೋನಾದ ರೋಗಿ ಪತ್ತೆಯಾಗಿಲ್ಲ ಎಂದು ಚೀನಾ ಸರ್ಕಾರ ಹೇಳಿಕೊಂಡಿದೆ.