ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಭೂತಕಾಲ ಮತ್ತು ಭವಿಷ್ಯ ಕಾಲಕ್ಕೆ ಏನು ಬೆಲೆಯಿಲ್ಲ. ಯಾರು ಭೂತಕಾಲ ಮತ್ತು ಭವಿಷ್ಯಕಾಲದ ವಿಚಾರವನ್ನು ಮಾಡುತ್ತಾರೆ, ಅಧ್ಯಯನ ಮಾಡುತ್ತಾರೆಯೋ, ಅವರು ಸಾಧನೆಯ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತಾರೆ. ಜೀವನ ನಾಶವಾಗಿ ಹೋಗುತ್ತದೆ. ಸಾಧನೆಗಾಗಿ ಒಂದೊಂದು ನಿಮಿಷ ಮಹತ್ವದ್ದಾಗಿರುತ್ತದೆ.

ಆಪತ್ಕಾಲದ ಬಗ್ಗೆ ಸಾಧಕರಲ್ಲಿ ಮೂಡಿದ ಪ್ರಶ್ನೆಗಳು ಮತ್ತು ಅವುಗಳಿಗೆ ಯೋಗ್ಯ ದೃಷ್ಟಿಕೋನದ ಬಗ್ಗೆ ಬೆಳಗಾವಿಯ ಶ್ರೀ. ಮಂದಾರ ಜೋಶಿಯವರ ಚಿಂತನೆ !

ಕಳೆದ ಅನೇಕ ವರ್ಷ ನಗರಗಳಲ್ಲಿ ರಜ-ತಮಪ್ರಧಾನ ವಾತಾವರಣದಲ್ಲಿದ್ದು ನಮ್ಮ ವ್ಯಷ್ಟಿ ಸಾಧನೆ ಚೆನ್ನಾಗಿ ಆಗಿಲ್ಲ. ಪ್ರಲೋಭನೆ ಮತ್ತು ಆಕರ್ಷಣೆಗಳಲ್ಲಿ ಸಿಲುಕಿ ನಮ್ಮ ಮನಸ್ಸು ಮತ್ತು ಬುದ್ಧಿಯ ಮೇಲೆ ಸತತವಾಗಿ ಕಪ್ಪು ಆವರಣವು ಬರುತ್ತಿದೆ. ಹಳ್ಳಿಗಳ ವಾತಾವರಣವು ಸಾತ್ತ್ವಿಕವಾಗಿರುವುದರಿಂದ ಅಲ್ಲಿ ಉತ್ತಮ ರೀತಿಯಲ್ಲಿ ವ್ಯಷ್ಟಿ ಸಾಧನೆಯಾಗುವುದು.

ಗುರುಗಳು ಒಮ್ಮೆ ಸಾಧಕನ ಕೈಹಿಡಿದರೆ, ಅವರು ಅದನ್ನು ಜನ್ಮಜನ್ಮಾಂತರಗಳವರೆಗೆ ಬಿಡುವುದಿಲ್ಲ !

ವಿವಿಧ ನಾಡಿಪಟ್ಟಿಗಳ (ನಾಡಿಭವಿಷ್ಯದ) ಮಾಧ್ಯಮಗಳಿಂದ ಮಹರ್ಷಿಗಳು ಹೇಳಿದಂತೆ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಶ್ರೀವಿಷ್ಣುವಿನ ಅಂಶಾವತಾರವಾಗಿದ್ದಾರೆ. ಇಂತಹ ಮಹಾನ ಗುರುಗಳು ಸನಾತನದ ಸಾಧಕರಿಗೆ ಲಭಿಸಿರುವಾಗ ‘ನಮ್ಮ ಉದ್ಧಾರವಾಗುವುದೋ ಇಲ್ಲವೋ’, ಎಂಬ ಕಾಳಜಿಯನ್ನು ಸಾಧಕರು ಏಕೆ ಮಾಡಬೇಕು ?

ಶ್ರೀ ಗಣೇಶ ಜಯಂತಿ (೧೫.೨.೨೦೨೧)

ಯಾವ ದಿನ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಯ ಮೇಲೆ ಬಂದವೋ, ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ, ಆ ದಿನವು ಮಾಘ ಶುಕ್ಲ ಚತುರ್ಥಿಯಾಗಿತ್ತು. ಅಂದಿನಿಂದ ಗಣಪತಿ ಮತ್ತು ಚತುರ್ಥಿಯ ಸಂಬಂಧವನ್ನು ಜೋಡಿಸಲಾಯಿತು.

ಗುರುಗಳ ಕಾರ್ಯವು ನಿಶ್ಚಿತವಾಗಿರುತ್ತದೆ, ಸಾಧಕರ ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರಿಗೆ ಮಾರ್ಗದರ್ಶನವನ್ನು ಮಾಡುವ ಗುರುಗಳು ಭೇಟಿಯಾಗುತ್ತಾರೆ !

ಪರಾತ್ಪರ ಗುರುಗಳು ಶೇ. ೯೫ ಮಟ್ಟಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟದಲ್ಲಿದ್ದು, ಅವರ ಅನಂತ ಕಾರ್ಯಗಲ್ಲಿ ‘ಸಂತರನ್ನು ನಿರ್ಮಾಣ’ ಮಾಡುವುದೂ ಒಂದಾಗಿದೆ; ಆದುದರಿಂದ ಸನಾತನದಲ್ಲಿ ೩ ಡಿಸೆಂಬರ್ ೨೦೨೦ರ ವರೆಗೆ ೧೧೦ ಸಾಧಕರು ಸಂತರಾಗಿದ್ದಾರೆ ಮತ್ತು ೧ ಸಾವಿರ ೩೫೩ ಸಾಧಕರು ಸಂತರಾಗುವ ಮಾರ್ಗದಲ್ಲಿದ್ದಾರೆ.’

ಸಾಧಕರೇ, ಹಿಂದೂ ರಾಷ್ಟ್ರದ ಮುಂಬರುವ ಪೀಳಿಗೆಯನ್ನು ತಯಾರಿಸಲು ನಿಮ್ಮ ಮಕ್ಕಳ ಸಾಧಕತ್ವದ ಕಡೆಗೆ ಗಮನಕೊಟ್ಟು ಅವರ ಸಾಧನೆಗೆ ಸಹಾಯ ಮಾಡಿರಿ !

ಸಾಧಕರು ತಮ್ಮ ಮಕ್ಕಳಿಗೆ ಸಾತ್ತ್ವಿಕ ಮತ್ತು ಸರಳತೆಯ (ಸಿಂಪಲ್) ಅಭ್ಯಾಸವನ್ನು ಮಾಡಿಸಿರುತ್ತಾರೆ. ಹೊರಗಿನ ಗಂಡು ಮಕ್ಕಳ ಅಥವಾ ಹೆಣ್ಣುಮಕ್ಕಳನ್ನು ನೋಡಿ ಮಕ್ಕಳಿಗೆ ‘ಜೀನ್ಸ್, ಟಿ-ಶರ್ಟ್; ‘ಲೋ ವೆಸ್ಟ್ (ಸೊಂಟದ ಕೆಳಗೆ ಬರುವ), ತೊಡೆಯ ಮೇಲೆ ಹರಿದ, ಬಣ್ಣಹೋದ ಪ್ಯಾಂಟ್ ಇತ್ಯಾದಿ ಬಟ್ಟೆಗಳನ್ನು ಧರಿಸಬೇಕೆಂದು ಅನಿಸುತ್ತದೆ.

ಕಷ್ಟಜೀವಿ, ಸಹನೆ, ಸದಾ ಸಕಾರಾತ್ಮಕರಿದ್ದು ತೀವ್ರ ಪ್ರಾರಬ್ಧವನ್ನು ಧೈರ್ಯದಿಂದ ಎದುರಿಸುವ ಬೆಳಗಾವಿಯ ಶ್ರೀಮತಿ ಸುಮಂಗಲಾ ಮಟ್ಟಿಕಲ್ಲಿ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು

ಕಮಲಕ್ಕ ತುಂಬಾ ಪ್ರೇಮಮಯೀ ಆಗಿದ್ದಾರೆ. ಅವರು ತಮ್ಮವರು ಮತ್ತು ಪರರು ಎನ್ನುವ ಭೇದಭಾವ ಮಾಡುವುದಿಲ್ಲ. ಅವರು ಎಲ್ಲರನ್ನೂ ಸಮಾನವಾಗಿ ಪ್ರೇಮಿಸುತ್ತಾರೆ. ಅವರ ಈ ಗುಣದಿಂದಾಗಿಯೇ ಅವರು ಎಲ್ಲರಿಗೂ ಬೇಕಾದವರಾಗಿದ್ದಾರೆ ಹಾಗೂ ಅವರ ಬಗ್ಗೆ ಆಧಾರವೆನಿಸುತ್ತದೆ.

ನ್ಯಾಯವಾದಿಗಳೇ, ಜೀವನದಲ್ಲಿ ಬರುವ ಒತ್ತಡಗಳ ಪ್ರಸಂಗಗಳನ್ನು ಎದುರಿಸಲು ಸಾಧನೆಯನ್ನು ಮಾಡಿರಿ !

ಅನೇಕ  ಬಾರಿ ಕಂಡು ಬರುವುದೇನೆಂದರೆ, ಕಕ್ಷಿದಾರರು ನ್ಯಾಯವಾದಿಗಳ ಕಡೆಗೆ ಎಲ್ಲ ಕಾಗದಪತ್ರಗಳನ್ನು ನೀಡಿದ್ದರೂ ನ್ಯಾಯವಾದಿಗಳು ಕಕ್ಷಿದಾರರ ಬದಿಯನ್ನು ಮಂಡಿಸಲು ಕಡಿಮೆ ಬೀಳುತ್ತಾರೆ ಅಥವಾ ಉದ್ದೇಶಪೂರ್ವಕವಾಗಿ ವೈಯಕ್ತಿಕ ಸ್ವಾರ್ಥಕ್ಕಾಗಿ ಕಕ್ಷಿದಾರರ ಪಕ್ಷವನ್ನು ದುರ್ಬಲಗೊಳಿಸುತ್ತಾರೆ.

ಹೊರಗಿನ ಬೇಕರಿಯಲ್ಲಿ ತಯಾರಿಸಿದ ಮತ್ತು ಆಶ್ರಮದ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳ ಬಗ್ಗೆ ಮಾಡಿದ ಪ್ರಯೋಗದಲ್ಲಿ ಭಾಗವಹಿಸಿದ ಸಾಧಕರಿಗೆ ಅರಿವಾದ ಅಂಶಗಳು

ಯಾವುದಾದರೊಂದು ಪದಾರ್ಥವನ್ನು ತಯಾರಿಸುವಾಗ ಅದರಲ್ಲಿ ಉಪಯೋಗಿಸಿದ ಸಾಮಗ್ರಿಗಳು, ಪದಾರ್ಥಗಳನ್ನು ತಯಾರಿಸುವ ಸ್ಥಳ (ಉದಾ. ಬಿಸ್ಕೇಟ್‌ಗಳನ್ನು ತಯಾರಿಸುವ ಬೇಕರಿ), ಅಲ್ಲಿಯ ವಾತಾವರಣ, ಪದಾರ್ಥಗಳನ್ನು ತಯಾರಿಸುವ ವ್ಯಕ್ತಿ ಮುಂತಾದ ಅನೇಕ ವಿಷಯಗಳ ಮೇಲೆ ಪದಾರ್ಥಗಳ ಸಾತ್ತ್ವಿಕತೆಯು ಅವಲಂಬಿಸಿರುತ್ತದೆ.

ಸಾಧಕನ ನಾಡಿಪಟ್ಟಿಯಲ್ಲಿದ್ದ ಮೃತ್ಯುವಿನ ಭವಿಷ್ಯವು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಬದಲಾಗುವುದು !

‘ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ಅದೆಷ್ಟು ಸಾಧಕರ ಸಂದರ್ಭದಲ್ಲಿಯೂ ಹೀಗಾಗಿರಬಹುದು’, ಎಂಬುದರ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ. ಅನೇಕ ಸಾಧಕರಿಗೆ ಅವರು ಮೃತ್ಯುವಿನ ದವಡೆಯಿಂದ ಬದುಕಿಸಿರುವ ಅನುಭೂತಿಗಳೂ ಬಂದಿವೆ.