ಆಹಾರ ಮತ್ತು ಆಚಾರಗಳ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಬೆಳಗ್ಗೆ ಚಹಾದೊಂದಿಗೆ ಬಿಸ್ಕೇಟ್‌ಗಳನ್ನು ತಿನ್ನಲು ಹೆಚ್ಚಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಹೊರಗಡೆಯ ಬೇಕರಿಯಲ್ಲಿ ತಯಾರಿಸಿದ ಮತ್ತು ಸನಾತನದ ರಾಮನಾಥಿ ಆಶ್ರಮದ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳ ವಿಷಯದಲ್ಲಿ ಒಂದು ಪ್ರಯೋಗವನ್ನು ಮಾಡಲಾಯಿತು. ಮೊದಲನೇಯ ಪ್ರಯೋಗದಲ್ಲಿ ಸಾಧಕರಿಗೆ ಹೊರಗಡೆಯ ‘ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳನ್ನು (ಪ್ರತಿಯೊಬ್ಬರಿಗೂ ೨ ಬಿಸ್ಕೇಟ್‌ಗಳನ್ನು) ತಿನ್ನಲು ಕೊಡಲಾಯಿತು ಮತ್ತು ಎರಡನೇಯ ಪ್ರಯೋಗದಲ್ಲಿ ಅವರಿಗೆ ಸನಾತನದ ಆಶ್ರಮದಲ್ಲಿ ‘ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳನ್ನು (ಪ್ರತಿಯೊಬ್ಬರಿಗೆ ೨ ಬಿಸ್ಕೇಟ್‌ಗಳನ್ನು) ತಿನ್ನಲು ಕೊಡಲಾಯಿತು. ಈ ಎರಡೂ ಪ್ರಯೋಗಗಳಲ್ಲಿ ಸಾಧಕರಿಗೆ ಅರಿವಾದ ಅಂಶಗಳನ್ನು ಮುಂದೆ ಕೊಡಲಾಗಿದೆ. (ಭಾಗ ೧)
ಪ್ರಯೋಗದ ನಿಷ್ಕರ್ಷ
ಯಾವುದಾದರೊಂದು ಪದಾರ್ಥವನ್ನು ತಯಾರಿಸುವಾಗ ಅದರಲ್ಲಿ ಉಪಯೋಗಿಸಿದ ಸಾಮಗ್ರಿಗಳು, ಪದಾರ್ಥಗಳನ್ನು ತಯಾರಿಸುವ ಸ್ಥಳ (ಉದಾ. ಬಿಸ್ಕೇಟ್‌ಗಳನ್ನು ತಯಾರಿಸುವ ಬೇಕರಿ), ಅಲ್ಲಿಯ ವಾತಾವರಣ, ಪದಾರ್ಥಗಳನ್ನು ತಯಾರಿಸುವ ವ್ಯಕ್ತಿ ಮುಂತಾದ ಅನೇಕ ವಿಷಯಗಳ ಮೇಲೆ ಪದಾರ್ಥಗಳ ಸಾತ್ತ್ವಿಕತೆಯು ಅವಲಂಬಿಸಿರುತ್ತದೆ. ಇವೆಲ್ಲ ಘಟಕಗಳು ಎಷ್ಟು ಸಾತ್ತ್ವಿಕವಾಗಿರುತ್ತವೆಯೋ, ಅಷ್ಟು ಆ ಪದಾರ್ಥವು ಸಾತ್ತ್ವಿಕವಾಗಿ ರುತ್ತದೆ. ಆಶ್ರಮದ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳು ಸಾತ್ತ್ವಿಕವಾಗಿರುವುದರಿಂದ ಅವುಗಳನ್ನು ತಿಂದ ಮೇಲೆ ಸಾಧಕರಿಗೆ ಒಳ್ಳೆಯ ಅನುಭೂತಿಗಳು ಬಂದವು. – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೨.೧೨.೨೦೨೦)
ಈ-ಮೇಲ್ : [email protected]
ಆಧುನಿಕ ಆಹಾರಗಳ ದುಷ್ಟಪರಿಣಾಮಗಳಿಂದ ಪಾರಾಗಲು ಮನೆಯಲ್ಲಿ ತಯಾರಿಸಿದ ಭಾರತೀಯ ಆಹಾರಪದಾರ್ಥಗಳನ್ನು ಸೇವಿಸಿ !
‘ಸದ್ಯ ಆಧುನಿಕ ಜಗತ್ತಿನಲ್ಲಿ ಆಹಾರದ ಬಗ್ಗೆ ಧರ್ಮಶಾಸ್ತ್ರವು ಹೇಳಿದ ನಿಯಮಗಳನ್ನು ಪಾಲಿಸದಿರುವುದರಿಂದ ಎಷ್ಟು ಹಾನಿ ಆಗುತ್ತದೆಯೋ, ಅದಕ್ಕಿಂತಲೂ ಹೆಚ್ಚು ಹಾನಿ ಆಧುನಿಕ ಪದ್ಧತಿಯ ಆಹಾರವನ್ನು ತಿನ್ನುವುದರಿಂದ ಆಗುತ್ತಿದೆ. ಮನೆಯಲ್ಲಿ ಗೃಹಿಣಿಯರು ತಯಾರಿಸಿದ ಭೋಜನ ಅಥವಾ ಅಲ್ಪಾಹಾರವನ್ನು ಸೇವಿಸುವುದರಿಂದ ನಾವು ದೂರ ಹೋಗುತ್ತಿದ್ದೇವೆ. ಪಾವ್-ಕೇಕ್, ಬಿಸ್ಕೇಟ್‌ಗಳು, ‘ಸಾಸ್ ಮತ್ತು ‘ಜ್ಯಾಮ್ ಬಂದಿವೆ. ಕೃತಕ ತಂಪು ಪಾನೀಯಗಳಿರಲಿ; ಪಿಝ್ಝಾ, ಬರ್ಗರ್ ಇವುಗಳಂತಹ ‘ಫಾಸ್ಟ್ ಫುಡ್ಗಳಿರಲಿ ಅಥವಾ ‘ಕುರಕುರೆಳಂತಹ ‘ಜಂಕ್ ಫುಡ್ಗಳಿರಲಿ, (ಜಂಕ್ ಅಂದರೆ ಬಿಸಾಡುವ) ಅವುಗಳ ಅನೇಕ ದುಷ್ಪರಿಣಾಮಗಳು ಸದ್ಯದ ಪೀಳಿಗೆಯ ಮೇಲೆ ಕಂಡು ಬರುತ್ತವೆ. ಅವುಗಳಿಂದ ಸ್ಥೂಲಕಾಯ, ಜೀರ್ಣಾಂಗವ್ಯೂಹ ಮತ್ತು ಶ್ವಸನಾಂಗವ್ಯೂಹದ ರೋಗಗಳಂತಹ ಅನೇಕ ಶಾರೀರಿಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪದಾರ್ಥಗಳನ್ನು ಸೇವಿಸುವುದರಿಂದಾಗುವ ಅತಿ ದೊಡ್ಡ ಹಾನಿಯೆಂದರೆ, ತ್ರಾಸದಾಯಕ ಶಕ್ತಿಗಳನ್ನು ಆಕರ್ಷಿಸುವ ಈ ತಮೋಗುಣಿ ಪದಾರ್ಥಗಳನ್ನು ಸತತವಾಗಿ ಸೇವಿಸುವ ವ್ಯಕ್ತಿಯು ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಬಲಿಯಾಗುತ್ತಾನೆ. ಆಧುನಿಕ ಆಹಾರದ ಶಾರೀರಿಕ ದುಷ್ಪರಿಣಾಮಗಳನ್ನು ಕೇವಲ ಈ ಜನ್ಮದಲ್ಲಿ ಮಾತ್ರ ಭೋಗಿಸಬೇಕಾಗುತ್ತದೆ; ಆದರೆ ಅವುಗಳಿಂದಾಗುವ ಕೆಟ್ಟ ಶಕ್ತಿಗಳ ತೊಂದರೆಗಳು ಮಾತ್ರ ಜನ್ಮಜನ್ಮಾಂತರಗಳವರೆಗೂ ನಮ್ಮ ಬೆನ್ನು ಬಿಡುವುದಿಲ್ಲ.
ಎಲ್ಲರೂ ಮನೆಯಲ್ಲಿ ತಯಾರಿಸಿದ ಭಾರತೀಯ ಆಹಾರಪದಾರ್ಥಗಳನ್ನು ತಿನ್ನಬೇಕು. ಅವು ತಾಜಾ, ಪಚನಕ್ಕೆ ಹಗುರ ಮತ್ತು ಪೌಷ್ಟಿಕವಾಗಿರುತ್ತವೆ. ಆದ್ದರಿಂದ ಆಹಾರದಲ್ಲಿನ ನೈಸರ್ಗಿಕ ತತ್ತ್ವಗಳು ಮತ್ತು ಜೀವನಸತ್ತ್ವಗಳು ನಾಶವಾಗುವುದಿಲ್ಲ, ಹಾಗೆಯೇ ಆ ಪದಾರ್ಥಗಳನ್ನು ತಿನ್ನುವುದರಿಂದ ಮಾನಸಿಕ ಸ್ವಾಸ್ಥ್ಯವೂ ಚೆನ್ನಾಗಿರಲು ಸಹಾಯವಾಗುತ್ತದೆ.
(ಈ ವಿಷಯದ ಶಾಸ್ತ್ರೀಯ ಕಾರಣಮೀಮಾಂಸೆಯನ್ನು ಸನಾತನ ನಿರ್ಮಿತ ‘ಆಧುನಿಕ ಆಹಾರದ ಹಾನಿಗಳು ಈ ಗ್ರಂಥದಲ್ಲಿ ಕೊಡಲಾಗಿದೆ.)