ಆಪತ್ಕಾಲದ ಬಗ್ಗೆ ಸಾಧಕರಲ್ಲಿ ಮೂಡಿದ ಪ್ರಶ್ನೆಗಳು ಮತ್ತು ಅವುಗಳಿಗೆ ಯೋಗ್ಯ ದೃಷ್ಟಿಕೋನದ ಬಗ್ಗೆ ಬೆಳಗಾವಿಯ ಶ್ರೀ. ಮಂದಾರ ಜೋಶಿಯವರ ಚಿಂತನೆ !

ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ, ಸಂಪೂರ್ಣ ಶರಣಾಗತ ಭಾವದಿಂದ ಕೃತಜ್ಞತೆಗಳು !

ಶ್ರೀ. ಮಂದಾರ ಜೋಶಿ

ಪರಾತ್ಪರ ಗುರುದೇವರೇ, ‘ಮುಂಬರುವ ಆಪತ್ಕಾಲಕ್ಕಾಗಿ ಸಾಧಕರು ನಗರ ಮತ್ತು ಮಹಾನಗರಗಳನ್ನು (ದೊಡ್ಡ ಊರುಗಳನ್ನು) ಬಿಟ್ಟು ಚಿಕ್ಕ ಗ್ರಾಮಗಳಿಗೆ (ಚಿಕ್ಕ ಊರುಗಳಿಗೆ) ಸ್ಥಳಾಂತರವಾಗುವ ವಿಚಾರ ಮಾಡಬೇಕು !’ ಎಂಬ ಆಶಯದ ಲೇಖನವನ್ನು ‘ಸಾಪ್ತಾಹಿಕ ಸನಾತನ ಪ್ರಭಾತ’ದಲ್ಲಿ ಓದಿದೆನು. ಅನಂತರ ಕುಟುಂಬದವರು ಮತ್ತು ಸಾಧಕರೊಂದಿಗೆ ಚರ್ಚೆಯನ್ನು ಮಾಡಿದಾಗ ‘ಎಲ್ಲರ ಮನಸ್ಸಿನಲ್ಲಿ ವಿವಿಧ ಪ್ರಶ್ನೆಗಳ ಕೋಲಾಹಲವೆದ್ದಿದೆ’, ಎಂದು ಅರಿವಾಯಿತು. ಭಗವಂತನಿಗೆ ಶರಣಾಗಿ ಆ ವಿಚಾರಗಳ ಕುರಿತು ಚಿಂತನೆಯನ್ನು ಮಾಡಿದಾಗ ಭಗವಂತನು ಮುಂದಿನ ದೃಷ್ಟಿಕೋನಗಳನ್ನು ನೀಡಿದ್ದಾನೆ. ಅವುಗಳನ್ನು ತಮ್ಮ ಚರಣಗಳಲ್ಲಿ ಅರ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ.

‘ಪರಾತ್ಪರ ಗುರುದೇವರೇ, ‘ಜಗನ್ನಿಯಂತ್ರಕ ಭಗವಂತನು (ತಾವು) ಸೂಚಿಸಿದ ವಿಚಾರಗಳನ್ನು ಮೊದಲ ಬಾರಿಗೆ ಮಂಡಿಸುತ್ತಿರುವುದರಿಂದ ಬರವಣಿಗೆಯಲ್ಲಿ ತಪ್ಪು, ಕಠೋರತೆ, ಅತಿಶಯೋಕ್ತಿ ಅಥವಾ ಅಹಂನ ಅರಿವಾದರೆ ತಾವು ಈ ಜೀವಕ್ಕೆ ಅದರ ಅರಿವು ಮಾಡಿಕೊಡಬೇಕು. ‘ಬರವಣಿಗೆಯು ನಿರ್ದಿಷ್ಟವಾಗಿ ಹೇಗಿರಬೇಕು ?’, ಎಂಬುದನ್ನು ಈ ಪಾಮರನಿಗೆ ಕಲಿಯಲು ಸಾಧ್ಯವಾಗಲಿ’, ಇದೇ ನಿಮ್ಮ ಚರಣಗಳಲ್ಲಿ ಶರಣಾಗತಿಯಿಂದ ಪ್ರಾರ್ಥನೆ !’

ಸಾಧಕರೊಂದಿಗೆ ಮಾತನಾಡುವಾಗ ಬಂದಿರುವ ವಿವಿಧ ಪ್ರಶ್ನೆಗಳು ಮತ್ತು ಅವುಗಳ ಕುರಿತು ಭಗವಂತನು ಸೂಚಿಸಿದ  ದೃಷ್ಟಿಕೋನಗಳನ್ನು ಮುಂದೆ ಕೊಡಲಾಗಿದೆ.  (ಭಾಗ ೧)

೧. ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗಲು ಭಗವಂತನು ಆಪತ್ಕಾಲವನ್ನು ಮುಂದೆ ಹಾಕಿದ್ದಾನೆ ಮತ್ತು ಭಗವಂತನೊಂದಿಗೆ ಏಕರೂಪವಾಗಲುಗುರ್ವಾಜ್ಞೆಯ ಪಾಲನೆ ಮಾಡುವುದು ಆವಶ್ಯಕವಾಗಿದೆ

ಪ್ರಶ್ನೆ : ಕಳೆದ ಅನೇಕ ವರ್ಷಗಳಿಂದ ಇದನ್ನೇ (ಆಪತ್ಕಾಲವು ಬರಲಿದೆ) ಕೇಳುತ್ತಿದ್ದೇವೆ; ಆದರೆ ಏನೂ ಆಗಲಿಲ್ಲ. ಹಾಗಾದರೆ ಬೇರೆ ಕಡೆಗೆ ಏಕೆ ಹೋಗಬೇಕು ? ಹಾಗೆಯೇ ನಮಗೆ ಏನೆಲ್ಲ ಬೇಕಿತ್ತೊ, ಅದೆಲ್ಲವನ್ನೂ ದೇವರು ನಮಗೆ ನೀಡಿದ್ದಾನೆ. ಈಗ ಏನು ಆಗಬೇಕಾಗಿದೆಯೋ, ಅದು ಇಲ್ಲಿಯೇ ಆಗಲಿ.

ದೃಷ್ಟಿಕೋನ : ಈಶ್ವರೀ ಆಯೋಜನೆಗನುಸಾರ ಆಪತ್ಕಾಲವು ೧೯೯೯ ರಲ್ಲಿ ಬರುವುದಿತ್ತು; ಆದರೆ ಆಗ ‘ಹಿಂದೂ ರಾಷ್ಟ್ರ’ವನ್ನು ನಡೆಸುವ ಕ್ಷಮತೆಯಿರುವ ಸಾಧಕರು ಸಿದ್ಧರಾಗಿರಲಿಲ್ಲ. ‘ಸಾಧಕರು ಸಿದ್ಧರಾಗಿ ಅವರ ಆಧ್ಯಾತ್ಮಿಕ ಪ್ರಗತಿಯಾಗಲು ಭಗವಂತನು (ಪರಾತ್ಪರ ಗುರು ಡಾಕ್ಟರರು) ಈ ಕಾಲಾವಧಿಯನ್ನು ನಿಧಾನವಾಗಿ ಹೆಚ್ಚಿಸಿ ೨೦ ವರ್ಷಗಳ ಕಾಲ ಮುಂದೂಡಿದ್ದಾನೆ’, ಎಂಬ ಅರಿವು ನಮಲ್ಲಿ ಇದೆಯೇ ? ಈಗ ಕಾಲಮಹಾತ್ಮೆಗನುಸಾರ ಅದು ಆಗುವುದು ಆವಶ್ಯಕವಾಗಿದೆ. ನಾವು ನಮ್ಮ ಮನಸ್ಸಿನ ಸಿದ್ಧತೆಯನ್ನು ಮಾಡಿಕೊಂಡು ‘ಗುರುಗಳು ಹೇಳಿದಂತೆ ಕೃತಿಗಳನ್ನು ಮಾಡುವುದು’, ನಮ್ಮ ಸಾಧನೆಯ ದೃಷ್ಟಿಯಿಂದ ಅತ್ಯಾವಶ್ಯಕವಾಗಿದೆ. ನಮ್ಮ ಸಾಧನೆಯಾಗಲು ಭಗವಂತನು ನಮ್ಮನ್ನು ತನ್ನ ಕೃಪಾಛತ್ರದಲ್ಲಿ ಕಳೆದ ಅನೇಕ ವರ್ಷಗಳಿಂದ ಇಟ್ಟುಕೊಂಡಿದ್ದಾನೆ. ‘ನಮ್ಮಿಂದ ಯಾವ ಕಾರ್ಯವನ್ನು ಅವನಿಗೆ ಮಾಡಿಸಿಕೊಳ್ಳುವುದಿದೆ ?’, ಎಂಬುದು ನಮಗೆ ಗೊತ್ತಿಲ್ಲ. ಆದುದರಿಂದ ‘ಏನಾಗಬೇಕಿದೆಯೋ, ಅದು ಇಲ್ಲಿಯೇ ಆಗಲಿ’, ಎಂದು ಹೇಳುವುದೆಂದರೆ ನಾವು ದೇವರ ಕಾರ್ಯದಲ್ಲಿ ಅಡಚಣೆಗಳನ್ನು ಸೃಷ್ಟಿಸಿದಂತೆ ಆಗುವುದು. ಕೊನೆಗೆ ಭಗವಂತನೊಂದಿಗೆ ಏಕರೂಪವಾಗಬೇಕಾಗಿದ್ದರೆ, ಗುರ್ವಾಜ್ಞೆಯ ಪಾಲನೆ ಮಾಡಲೇ ಬೇಕು.

೨. ‘ರಾಷ್ಟ್ರ ಮತ್ತು ಧರ್ಮಕ್ಕಾಗಿ ಸರ್ವಸ್ವದ ತ್ಯಾಗವನ್ನು ಮಾಡುವ ಮಾನಸಿಕ ಸಿದ್ಧತೆಯಾಗುವುದು’ ಇದು ಮಾನಸಿಕ ಸ್ತರದಲ್ಲಿ ವ್ಯಷ್ಟಿ ಸಾಧನೆಯ ಅಂತರ್ಗತ ಹೋರಾಟದ ವೃತ್ತಿಯಾಗಿದೆ

ಪ್ರಶ್ನೆ : ಕುಟುಂಬದಲ್ಲಿ ಇತರರಿಗೆ ಆಪತ್ಕಾಲದ ಗಾಂಭೀರ್ಯತೆ ಇಲ್ಲ. ಅವರು ಬರಲು ಸಿದ್ಧರಿಲ್ಲ. ಹಾಗಾದರೆ ನಾವೇನು ಮಾಡಬೇಕು ?

ದೃಷ್ಟಿಕೋನ : ಕುಟುಂಬದ ಇತರ ಸದಸ್ಯರು ಸಾಧನೆಯನ್ನು ಮಾಡದಿದ್ದರೆ, ಅವರಿಗೆ ಇದು ಮನವರಿಕೆಯಾಗುವುದೇ ಇಲ್ಲ; ಆದರೆ ಪ್ರಶ್ನೆಯೆಂದರೆ, ನಮಗೆ ಇದು ಮನವರಿಕೆಯಾಗಿದೆಯೇ ? ನಮ್ಮ ಮನಸ್ಸಿನ ಸಿದ್ಧತೆಯಾಗಿದೆಯೇ ? ಸದ್ಯ ಎಲ್ಲ ಸಾಧಕರ ಸ್ಥಿತಿಯು ಅರ್ಜುನನಂತಾಗಿದೆ. ನಾವು ಮಾಯೆಯಲ್ಲಿ ಸಿಲುಕಿದ್ದೇವೆ. ನಮ್ಮೆಲ್ಲರಲ್ಲಿ ‘ರಾಷ್ಟ್ರ ಮತ್ತು ಧರ್ಮಕ್ಕಾಗಿ ಮಾನಸಿಕ ಸ್ತರದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡುವ ಸಿದ್ಧತೆ ಆಗಿದೆಯೇ ?’, ಎಂಬುದರ ಪರೀಕ್ಷಣೆಯಾಗುವುದು ಆವಶ್ಯಕವಾಗಿದೆ. ‘ಈ ಸಿದ್ಧತೆಯಾಗುವುದು’, ಇದುವೇ ಮಾನಸಿಕ ಸ್ತರದಲ್ಲಿ ವ್ಯಷ್ಟಿ ಸಾಧನೆಯ ಅಂತರ್ಗತ ಹೋರಾಡುವ ವೃತ್ತಿಯ ಭಾಗವಾಗಿದೆ. ‘ಭಗವಂತನು (ಪರಾತ್ಪರ ಗುರುದೇವರು) ತುಂಬಾ ದಯಾಳು ಆಗಿದ್ದಾನೆ. ಇಂದು ನಮ್ಮ ಕುಟುಂಬದವರು ತಯಾರಾಗದೇ ಇದ್ದರೂ, ನಮ್ಮ ಮನಸ್ಸಿನ ಸಿದ್ಧತೆಯಾಗಿ ಶರಣಾಗತಿ ಹೆಚ್ಚಾಯಿತೆಂದರೆ, ಅಂದರೆ ಸಾಧನೆ ಹೆಚ್ಚಾಯಿತೆಂದರೆ, ಕುಟುಂಬದವರಿಗೆ ಆ ರೀತಿ ಬುದ್ಧಿಯನ್ನು ನೀಡಿ ಭಗವಂತನು ಅವರನ್ನು ನಮ್ಮೊಂದಿಗೆ ಕರೆತರುವನು’ ಎಂಬ ನಂಬಿಕೆ  ಇರಲಿ.

‘ವ್ಯಕ್ತಿಗತ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಮಾಡಿ ನೋಡಿರಿ. ಅದರಲ್ಲಿ ಹೆಚ್ಚು ಆನಂದವಿದೆ !’- (ಪರಾತ್ಪರ ಗುರು) ಡಾ. ಆಠವಲೆ, ದೈನಿಕ ‘ಸನಾತನ ಪ್ರಭಾತ’, ೨೩.೯.೨೦೨೦)

೩. ನಗರಗಳನ್ನು ಬಿಟ್ಟು ಗ್ರಾಮಗಳ ಕಡೆಗೆ ಹೋಗುವುದರಿಂದ ಆಗುವ ವಿವಿಧ ಲಾಭಗಳನ್ನು ಗಮನದಲ್ಲಿಡುವುದು ಆವಶ್ಯಕ !

ಪ್ರಶ್ನೆ : ನಮಗೆ ನಮ್ಮ ವ್ಯವಸಾಯ ಅಥವಾ ನೌಕರಿ ಇದೆ. ಆದ್ದರಿಂದ ಕುಟುಂಬದವರ ಹೊಟ್ಟೆಬಟ್ಟೆಯ ಬಗ್ಗೆ ಯಾವುದೇ ಪ್ರಶ್ನೆ ಇಲ್ಲ. ಈಗ ಚಿಕ್ಕ ಊರುಗಳಿಗೆ ಸ್ಥಳಾಂತರವಾದರೆ ಇದು ಸಾಧ್ಯವಾಗುವುದೇ ? ಬಂಡವಾಳ, ನಗದು ಹಣ ಮತ್ತು ಆಭರಣ ಇವುಗಳನ್ನು ಏನು ಮಾಡಬೇಕು ? ಅವುಗಳನ್ನು ಎಲ್ಲಿಡಬೇಕು ?

ದೃಷ್ಟಿಕೋನ : ಪ.ಪೂ ಭಕ್ತರಾಜ ಮಹಾರಾಜರ ಒಂದು ಭಜನೆಯಲ್ಲಿ, ‘ಯಾವನು ನಿನ್ನನ್ನು ಹುಟ್ಟಿಸಿದ್ದಾನೆ, ಅವನು ನಿನ್ನನ್ನು ಸಾಯಲು ಬಿಡುವನೇ ?’ ಎಂದು ಹೇಳಿದ್ದಾರೆ. ಯಾವ ಭಗವಂತನು ಈ ಕಾಲದಲ್ಲಿ ಸಾಧನೆಯನ್ನು ಮಾಡಲು ನಮ್ಮೆಲ್ಲರಿಗೂ ಜನ್ಮವನ್ನು ನೀಡಿದ್ದಾನೆಯೋ ಮತ್ತು ಅವನ ಕೃಪಾಛತ್ರದಲ್ಲಿ ಇಟ್ಟುಕೊಂಡಿದ್ದಾನೆಯೋ, ಅವನು ಆಪತ್ಕಾಲದಲ್ಲಿ ನಮ್ಮನ್ನು ಬಿಡುವನೇನು ? ವಾಸ್ತವದಲ್ಲಿ ಆಹಾರ, ವಸ್ತ್ರ ಮತ್ತು ಆಶ್ರಯ ಇವು ಮಾನವನ ಮೂರು ಪ್ರಮುಖ ಆವಶ್ಯಕತೆಗಳಾಗಿವೆ. ಗ್ರಾಮಗಳಿಗೆ ಹೋದರೆ ಅಲ್ಲಿ ನಾವು ಹೊಲದಲ್ಲಿ ಬೆಳೆಯನ್ನು ಬೆಳೆಯುವುದು, ತರಕಾರಿಗಳನ್ನು ಬೆಳೆಸುವುದು, ಔಷಧಿ ವನಸ್ಪತಿಗಳನ್ನು ಬೆಳೆಸುವುದು ಮತ್ತು ಗೋಪಾಲನೆ ಮಾಡಬೇಕಿದೆ. ಇದರಿಂದ ಮೇಲಿನ ಪ್ರಶ್ನೆಗೆ ನಿಖರವಾಗಿ ಉತ್ತರ ಸಿಗುವುದು.

೩ ಅ. ಸರ್ಕಸ್ಸಿನಲ್ಲಿ ಜೋಕಾಲಿಯ ಮೇಲೆ ನೇತಾಡುವ ಹುಡುಗಿಯ ಉದಾಹರಣೆಯಂತೆ ‘ನಾವು ಮಾಯೆಯ ಜೋಕಾಲಿಯ ಕೈಗಳನ್ನು ಬಿಟ್ಟಾಗ ಭಗವಂತನು ನಮ್ಮನ್ನು ಹೇಗೆ ಹಿಡಿಯುತ್ತಾನೆ ?’, ಎಂಬ ಅನುಭೂತಿಯನ್ನು ಪಡೆಯುವ ಸಮಯವು ಈಗ ಬಂದಿದೆ : ಪರಾತ್ಪರ ಗುರು ಡಾಕ್ಟರರು ‘ಸಾಧನೆ’ಯ ಬಗ್ಗೆ ಹೇಳುವಾಗ ಸರ್ಕಸ್ಸಿನಲ್ಲಿ ಜೋಕಾಲಿಯಲ್ಲಿ ನೇತಾಡುವ ಹುಡುಗಿಯ ಒಂದು ಉದಾಹರಣೆಯನ್ನು ಹೇಳಿದ್ದಾರೆ. ಅದರಲ್ಲಿ ಆ ಹುಡುಗಿ ಎಂದರೆ ನಾವಾಗಿದ್ದೇವೆ. ಯಾವ ಜೋಕಾಲಿಯನ್ನು ಅವಳು ಹಿಡಿದಿರುವಳೋ, ಅದು ಎಂದರೆ ಮೋಹಜಾಲವಾಗಿದೆ (ಮಾಯೆ) ಮತ್ತು ಇನ್ನೊಂದು ಜೋಕಾಲಿಯ ಮೇಲೆ ಆ ಭಗವಂತನಿದ್ದಾನೆ. ಈಗ ಎಲ್ಲಿಯವರೆಗೆ ನಾವು ಮಾಯೆಯ ಜೋಕಾಲಿಯಿಂದ ಕೈಗಳನ್ನು ಬಿಡುವುದಿಲ್ಲವೋ, ಅಲ್ಲಿಯವರೆಗೆ ಇನ್ನೊಂದೆಡೆ ಇರುವ ಭಗವಂತನು ನಮ್ಮನ್ನು ಹೇಗೆ ಹಿಡಿಯುವನು ? ‘ನಾವು ಕೈಗಳನ್ನು ಬಿಟ್ಟಾಗ ನಮ್ಮನ್ನು ಭಗವಂತನು ಹೇಗೆ ಹಿಡಿಯುತ್ತಾನೆ ?’, ಎಂಬ ಅನುಭೂತಿಯನ್ನು ಪಡೆಯುವ ಸಮಯವು ಈಗ ಬಂದಿದೆ.

೩ ಆ. ‘ನಾವು ಸ್ವತಃ ಗಳಿಸಿದ ಹಣದ ಮೇಲೆ ಜೀವಿಸುತ್ತಿದ್ದೇವೆ’, ಇದು ನಿಜವಾಗಿರದೇ ‘ಆ ಹಣವು ನಮಗೆ ದೇವರ ಕೃಪೆಯಿಂದ ಪ್ರಾಪ್ತವಾಗಿದೆ’, ಇದನ್ನು ಗಮನದಲ್ಲಿಡುವುದು ಆವಶ್ಯಕ : ಚಿಕ್ಕಂದಿನಿಂದಲೇ ನಮಗೆ ಏನು ಕಲಿಸುತ್ತಾರೆ ? ಸಂಕಟದ ಸಮಯದಲ್ಲಿ ನಮ್ಮ ಬಂಧು-ಬಾಂಧವರು, ನೆಂಟರು, ಮಿತ್ರರು ಯಾರು ಸಹಾಯಕ್ಕೆ ಬರುವುದಿಲ್ಲ. ಸಹಾಯಕ್ಕೆ ಬರುವುದು ಕೇವಲ ಹಣ ! ‘ನಾವೂ ಸಹ ಸ್ವಲ್ಪ ಪ್ರಮಾಣದಲ್ಲಿ ಹಾಗೇ ಆಗಿದ್ದೇವೆ’. ಕಳೆದ ಅನೇಕ ವರ್ಷಗಳಿಂದ ನಾವು ಸಾಧನೆಯನ್ನು ಮಾಡುತ್ತಿದ್ದೇವೆ; ಆದರೆ ಧನದ ಆಸಕ್ತಿ ಇನ್ನೂ ಹೋಗಿಲ್ಲ. ಅದನ್ನು ದೂರಗೊಳಿಸಲು ಈ ಪ್ರಯತ್ನವಾಗಿದೆ. ನಾವು ‘ಸ್ವತಃಗಳಿಸಿದ ಹಣದಿಂದ ಬದುಕುತ್ತಿದ್ದೇವೆ’, ಎಂದು ಹೇಳುತ್ತೇವೆ; ಆದರೆ ಅದು ನಿಜವಾಗಿದೆ ಏನು ? ಪ.ಪೂ. ಭಕ್ತರಾಜ ಮಹಾರಾಜರು ಒಂದು ಭಜನೆಯಲ್ಲಿ ಮುಂದಿನಂತೆ ಹೇಳಿದ್ದಾರೆ,

ನಾನು ನಿನಗೆ ಧನವನ್ನು ಅರ್ಪಿಸಿದೆ |

ಅದು ಯಾರ ದಯೆಯಿಂದ ಪ್ರಾಪ್ತವಾಗಿತ್ತು |

ಅದು ಇಂದಿಗೂ ನನಗೆ ಏಕೆ ತಿಳಿಯಲಿಲ್ಲ |

ಎಲ್ಲವೂ ನಿನ್ನದೇ ಆಗಿರುವಾಗ

ನಾನು ನಿನಗೆ ಏನು ಅರ್ಪಿಸಲಿ  ||

೩ ಇ. ನಮ್ಮ ರಕ್ಷಣೆಯಾಗಲು ನಾವು ದ್ರೌಪದಿಯಂತೆ ಭಗವಂತನಿಗೆ ಸಂಪೂರ್ಣ ಶರಣಾಗೋಣ ! : ದ್ರೌಪದಿಯು ತನ್ನ ವಸ್ತ್ರಹರಣದ ಸಮಯದಲ್ಲಿ ಎಲ್ಲ ಅತಿರಥಿ, ಮಹಾರಥಿಗಳಲ್ಲಿ, ಹಾಗೆಯೇ ತನ್ನ ಪರಾಕ್ರಮಿ ಪತಿಗಳ ಬಳಿ ರಕ್ಷಣೆಗಾಗಿ ಯಾಚಿಸಿದಳು; ಆದರೆ ಅವಳಿಗೆ ಯಾರೂ ಸಹಾಯ ಮಾಡಲಿಲ್ಲ. ಅನಂತರ ಅವಳು ಭಗವಾನ ಶ್ರೀಕೃಷ್ಣನಿಗೆ ಮೊರೆಯಿಟ್ಟಳು, ಆದರೂ ಶ್ರೀಕೃಷ್ಣನು ಬರಲಿಲ್ಲ; ಏಕೆಂದರೆ ಅವಳು ತನ್ನ ಲಜ್ಜೆಯ ರಕ್ಷಣೆಗಾಗಿ ತನ್ನ ಸೀರೆಯ ಸೆರಗನ್ನು ಕೈಗಳಿಂದ ಹಿಡಿದಿಟ್ಟುಕೊಂಡಿದ್ದಳು. ಯಾವಾಗ ಅವಳು ಎರಡೂ ಕೈಗಳನ್ನು ಮೇಲಕ್ಕೆತ್ತಿ ಶ್ರೀಕೃಷ್ಣನಿಗೆ ಮೊರೆಯಿಟ್ಟಳೋ, ಆಗ ಭಗವಂತನು ಅವಳ ರಕ್ಷಣೆಗಾಗಿ ಧಾವಿಸಿ ಬಂದನು, ಹಾಗೆಯೇ ನಾವೂ ಭಗವಂತನಿಗೆ (ಪರಾತ್ಪರ ಗುರುದೇವರಿಗೆ) ಸಂಪೂರ್ಣ ಶರಣಾಗೋಣ !

೩ ಈ. ಭಗವಾನ ಶ್ರೀಕೃಷ್ಣನೂ, ‘ನನ್ನ ಭಕ್ತರ ನಾಶವಾಗಲಾರದು ಮತ್ತು ಯಾರು ನನಗೆ ಅನನ್ಯಭಾವದಿಂದ ಶರಣು ಬರುವರೋ, ಅವರ ಯೋಗಕ್ಷೇಮವನ್ನು ನಾನು ವಹಿಸುವೆನು !’ ಎಂದು ವಚನ ನೀಡಿದ್ದಾನೆ. ಹಾಗಾದರೆ ಈಗ ‘ಭಗವಂತನು ನಮ್ಮ ಯೋಗಕ್ಷೇಮವನ್ನು ಹೇಗೆ ವಹಿಸುವನು ?’, ಎಂಬುದರ ಅನುಭೂತಿಯನ್ನು ಪಡೆಯೋಣ.

೩ ಉ. ನಮ್ಮಿಂದಾದ ತಪ್ಪುಗಳಿಂದ ತಟ್ಟಿದ ಪಾಪಗಳ ಪರಿಮಾರ್ಜನೆಯಾಗಲು ಪ್ರಾಯಶ್ಚಿತ್ತವೆಂದು ಒಂದು ವೇಳೆ ಸಾಧಕರಿಗೆ ವಿಲಾಸಿ ಮತ್ತು ಭೋಗವಾದಿ ಜೀವನದಿಂದ ದೂರದ ಹಳ್ಳಿಗಳಲ್ಲಿ ಇರಬೇಕಾಗಿ ಬಂದಿರುವುದು ಮತ್ತು ಶ್ರೀರಾಮ ಮತ್ತು ಪಾಂಡವರಂತೆ ಸಾಧಕರಿಗೆ ಕೆಲವು ವರ್ಷಗಳ ಕಾಲ ವನವಾಸದಲ್ಲಿದ್ದಂತೆ ಇರಬೇಕಾಗುವುದು :

ನಾವು ಕೆಲವು ವರ್ಷಗಳಿಂದ ಪ್ರತ್ಯಕ್ಷ ಭಗವಂತನ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದೇವೆ. ‘ಸಾಧನೆಯಲ್ಲಿ ಶೀಘ್ರ ಪ್ರಗತಿ ಮಾಡಿಕೊಳ್ಳಲು ಮತ್ತು ನಮ್ಮಿಂದಾಗುವ ತಪ್ಪುಗಳ ಪಾಪಕ್ಷಾಲನೆಯಾಗಲು ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಆವಶ್ಯಕವಾಗಿದೆ’, ಎಂಬ ಬೋಧನೆಯನ್ನು ಪರಾತ್ಪರ ಗುರುದೇವರು ನಮಗೆ ನೀಡಿದ್ದಾರೆ; ಆದರೆ ನಾವು ನಮ್ಮ ತಪ್ಪುಗಳಿಂದಾಗುವ ಪಾಪಗಳ ತುಲನೆಯಲ್ಲಿ ಪ್ರಾಯಶ್ಚಿತ್ತವನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡೆವು ಅಥವಾ ತೆಗೆದುಕೊಳ್ಳಲೇ ಇಲ್ಲ. ಆದ್ದರಿಂದ ಈ ಎಲ್ಲ ಪಾಪಗಳ ಒಂದು ಗುಡ್ಡವೇ ನಿರ್ಮಾಣವಾಗಿದೆ. ಪಾಪಕ್ಷಾಲನೆಯಾಗಲು ಹಳ್ಳಿಗಳಲ್ಲಿದ್ದು, ಅಂದರೆ ವಿಲಾಸಿ ಮತ್ತು ಭೋಗವಾದಿ ಜೀವನದಿಂದ ದೂರವಿದ್ದು ಭೋಗವನ್ನು ಭೋಗಿಸಿ ಮುಗಿಸಬೇಕಾಗಿದೆ. ಪ್ರಾಯಶಃ ಇದು ವಿಧಿಲಿಖಿತವೇ ಆಗಿರಬೇಕು. ಶ್ರೀರಾಮಾವತಾರದಲ್ಲಿ ಪ್ರತ್ಯಕ್ಷ ಭಗವಂತನು ೧೪ ವರ್ಷಗಳ ಕಾಲವನವಾಸದಲ್ಲಿದ್ದನು. ನಂತರ ಶ್ರಿಕೃಷ್ಣಾವತಾರದಲ್ಲಿ ತನ್ನ ಎಲ್ಲರಿಗಿಂತ ಹತ್ತಿರದ ಭಕ್ತರಿಗೆ, ಅಂದರೆ ಪಾಂಡವರಿಗೆ ೧೩ ವರ್ಷ ವನವಾಸದಲ್ಲಿರಬೇಕಾಗಿ ಬಂದು ಭೋಗವನ್ನು ಭೋಗಿಸಬೇಕಾಯಿತು ಮತ್ತು ಈಗ ಸಾಧಕರಿಗೆ ಅದನ್ನು ಭೋಗಿಸಬೇಕಾಗಿದೆ. ಅದು ಕೇವಲ ೩-೪ ವರ್ಷಗಳು, ಅಂದರೆ ಮೊದಲು ಪ್ರತ್ಯಕ್ಷ ಭಗವಂತ, ನಂತರ ಅವನ ಹತ್ತಿರದ ಭಕ್ತರು ಮತ್ತು ಈಗ ಸಾಧಕರು ! ಹೇಗಿದೆ ನೋಡಿ ಈ ಲೀಲೆ ! ಶ್ರೀರಾಮ ಮತ್ತು ಪಾಂಡವರಿಗೆ ತಮ್ಮೆಲ್ಲ ಸಂಪತ್ತನ್ನು ತ್ಯಜಿಸಿ ಮೈಮೇಲಿನ ವಸ್ತ್ರ ಗಳೊಂದಿಗೆ ವನವಾಸಕ್ಕೆ ಹೋಗಬೇಕಾಯಿತು. ಪರಾತ್ಪರ ಗುರು ದೇವರು ನಮ್ಮ ಕುಟುಂಬದವರೊಂದಿಗೆ ಮತ್ತು ಸಂಪತ್ತು ಬೇಕಿದ್ದರೆ ಅದರೊಂದಿಗೆ ಗ್ರಾಮಗಳಿಗೆ (ಚಿಕ್ಕ ಊರುಗಳಿಗೆ) ಹೋಗಲು ಹೇಳುತ್ತಿದ್ದಾರೆ. ಪ್ರಾಯಶ್ಚಿತ್ತವನ್ನು ಇನ್ನು ಎಷ್ಟು ಸುಲಭ ಮಾಡಿಕೊಡಬೇಕು ?

೩ ಊ. ಹಳ್ಳಿಗಳ ಸಾತ್ತ್ವಿಕ ವಾತಾವರಣದಲ್ಲಿ ವ್ಯಷ್ಟಿ ಸಾಧನೆಯು ಚೆನ್ನಾಗಿ ಆಗುವುದು : ಕಳೆದ ಅನೇಕ ವರ್ಷ ನಗರಗಳಲ್ಲಿ ರಜ-ತಮಪ್ರಧಾನ ವಾತಾವರಣದಲ್ಲಿದ್ದು ನಮ್ಮ ವ್ಯಷ್ಟಿ ಸಾಧನೆ ಚೆನ್ನಾಗಿ ಆಗಿಲ್ಲ. ಪ್ರಲೋಭನೆ ಮತ್ತು ಆಕರ್ಷಣೆಗಳಲ್ಲಿ ಸಿಲುಕಿ ನಮ್ಮ ಮನಸ್ಸು ಮತ್ತು ಬುದ್ಧಿಯ ಮೇಲೆ ಸತತವಾಗಿ ಕಪ್ಪು ಆವರಣವು ಬರುತ್ತಿದೆ. ಹಳ್ಳಿಗಳ ವಾತಾವರಣವು ಸಾತ್ತ್ವಿಕವಾಗಿರುವುದರಿಂದ ಅಲ್ಲಿ ಉತ್ತಮ ರೀತಿಯಲ್ಲಿ ವ್ಯಷ್ಟಿ ಸಾಧನೆಯಾಗುವುದು. ‘ಸಂಪತ್ಕಾಲದಲ್ಲಿ ನಮಗೆ ಭಗವಂತನ ನೆನಪು ಎಷ್ಟಾಯಿತು ? ಈಗಲೂ ಎಷ್ಟಾಗುತ್ತಿದೆ ?’, ಎಂದು ಚಿಂತನೆ ಮಾಡಿದರೆ ‘ಆಪತ್ಕಾಲದಲ್ಲಿ ಎಲ್ಲಿ ನಾಲ್ಕೂ ಕಡೆಗೆ ಆಕ್ರಂದನವೇ ಇರುವಾಗ ಅಲ್ಲಿ ಭಗವಂತನ ಸ್ಮರಣೆ ಎಷ್ಟು ಬಾರಿ ಆಗಬಹುದು ?’, ಎಂಬ ಅಭ್ಯಾಸವನ್ನು ನಾವೆಲ್ಲರೂ ಮಾಡೋಣ.

೩ ಎ. ನಮ್ಮ ಮಕ್ಕಳಲ್ಲಿ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಜಾಗೃತಗೊಳಿಸಲು, ಹಾಗೆಯೇ ಮುಂಬರುವ ಆಪತ್ಕಾಲದಲ್ಲಿ ಅವರ ರಕ್ಷಣೆಯಾಗಲು ಅವರನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗುವುದು ಆವಶ್ಯಕವಾಗಿದೆ : ಸಾಧಕರೇ, ಇದಾಯಿತು ಕಳೆದ ಕೆಲವು ವರ್ಷಗಳಿಂದ ಸಾಧನಾನಿರತರಾಗಿರುವವರ ಬಗೆಗಿನ ಚಿಂತನೆ. ಈಗ ಹಿಂದೂ ರಾಷ್ಟ್ರವನ್ನು ನಡೆಸುವ ಮುಂದಿನ ಪೀಳಿಗೆಯ ವಿಚಾರವನ್ನು ಮಾಡೋಣ. ಸಾಧಕರೇ, ನಾವು ಭಗವಂತನಿಂದ ಏನೆಲ್ಲ ಕಲಿತೆವೋ, ಅದನ್ನು ಮುಂದಿನ ಪೀಳಿಗೆಗೆ ಕಲಿಸುವುದು ನಮ್ಮ ಜವಾಬ್ದಾರಿಯಾಗಿದೆ; ಆದರೆ ಎಷ್ಟು ಜನ ಸಾಧಕರು ತಮ್ಮ ಮಕ್ಕಳಲ್ಲಿ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಜಾಗೃತ ಮಾಡಿದ್ದಾರೆ ? ನಾವು ಮಾಯೆಯ ಆಕರ್ಷಣೆ ಮತ್ತು ಪ್ರಲೋಭನೆಯ ಭೋಗದಲ್ಲಿ ಮಗ್ನರಾಗಿದ್ದೆವು ಮತ್ತು ಮುಂದಿನ ಪೀಳಿಗೆಯನ್ನು ಅದರಲ್ಲಿ ಮಗ್ನಗೊಳಿಸಿದೆವು . ಭಗವಂತನಿಗೆ ತನ್ನ ಭಕ್ತರ  ಇಂತಹ ಸ್ಥಿತಿಯು ಹೇಗೆ ಇಷ್ಟವಾಗುವುದು ? ಆದ್ದರಿಂದ ಈ ಪೀಳಿಗೆಯ ಮೇಲೆ ಈ ಸಂಸ್ಕಾರಗಳಾಗಲು ಪ್ರತ್ಯಕ್ಷದಲ್ಲಿ ಜೀವನ ವನ್ನು ಜೀವಿಸಲು, ಹಾಗೆಯೇ ಮುಂಬರುವ ಆಪತ್ಕಾಲದಲ್ಲಿ ಅವರ ರಕ್ಷಣೆಯಾಗಲು ಅವರನ್ನು ಹಳ್ಳಿಗಳಿಗೆ (ಚಿಕ್ಕ ಊರುಗಳಿಗೆ) ಕರೆದುಕೊಂಡು ಹೋಗುವುದು ಆವಶ್ಯಕವಾಗಿದೆ. ಇನ್ನೊಂದೆಂದರೆ ಆಪತ್ಕಾಲದಲ್ಲಿ ವಿಶೇಷವಾಗಿ ಸ್ತ್ರೀಯರ ಮೇಲೆ ಅನೇಕ ದೌರ್ಜನ್ಯಗಳಾಗಬಹುದು. (ಹೀಗೆ ಇತಿಹಾಸವೇ ಇದೆ.) ಆದ್ದರಿಂದ ಅವರ ರಕ್ಷಣೆಗಾಗಿ ಇದು ಆವಶ್ಯಕವಾಗಿದೆ; ಏಕೆಂದರೆ ಶುದ್ಧ ಬೀಜಾ ಪೋಟಿ, ಫಳೆ ರಸಾಳ ಗೊಮಟಿ | ಎಂಬ ಸಂತವಚನವೇ ಇದೆ. (ಅರ್ಥ: ಶುದ್ಧ ಬೀಜಗಳಿದ್ದರೆ ಒಳ್ಳೆಯ ಫಲಗಳು ಸಿಗುತ್ತವೆ)

– ಶ್ರೀ. ಮಂದಾರ ವಿಜಯ ಜೋಶಿ, ಬೆಳಗಾವಿ, ಕರ್ನಾಟಕ. (೨೫.೯.೨೦೨೦)   (ಮುಂದುವರಿಯುವುದು)